• Home
  • »
  • News
  • »
  • tech
  • »
  • ಡಾಕ್ಟರ್‌ ಕೈ ಬರಹ ದೇವರಿಗೇ ಪ್ರೀತಿ ಅಂತೀರಾ? ಹಾಗಿದ್ರೆ ಅದನ್ನೂ ಓದೋಕೆ ಬಂದಿದ್ಯಂತೆ ಗೂಗಲ್ ಆ್ಯಪ್!

ಡಾಕ್ಟರ್‌ ಕೈ ಬರಹ ದೇವರಿಗೇ ಪ್ರೀತಿ ಅಂತೀರಾ? ಹಾಗಿದ್ರೆ ಅದನ್ನೂ ಓದೋಕೆ ಬಂದಿದ್ಯಂತೆ ಗೂಗಲ್ ಆ್ಯಪ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೈದ್ಯರು ಬರೆಯುವಂತಹ ಅಕ್ಷರಗಳು ಯಾರಿಗೂ ಅರ್ಥಾಗೊಲ್ಲ, ಅದಕ್ಕಾಗಿ ಕೆಲವೊಂದು ರಾಜ್ಯದ ಸರ್ಕಾರ ಡಾಕ್ಟರುಗಳಿಗೆ ನಿಯಮಗಳನ್ನೂ ತಂದಿತ್ತು. ಆದರೆ ಅದು ಯಾವುದೇ  ಪ್ರಯೋಜನವಾಗಲಿಲ್ಲ. ಇದೀ ಗೂಗಲ್ ಇದಕ್ಕೆ ಪರಿಹಾರ ಹುಡುಕುವ ಸಲುವಾಗಿ ಹೊಸ ಫೀಚರ್​ ಅನ್ನು ಬಿಡುಗಡೆ ಮಾಡಿದೆ.

  • Share this:

    ಸಾಮಾನ್ಯವಾಗಿ ಮಾನವರಿಗೆ ದೇಹದಲ್ಲಿ ಏನೇ ಆರೋಗ್ಯದಲ್ಲಿ (Health) ತೊಂದರೆ ಕಾಣಿಸಿಕೊಂಡರು ಮೊದಲು ಹೋಗುವುದು ವೈದ್ಯರ ಬಳಿಗೆ. ಆದರೆ ಕೆಲವೊಂದು ಡಾಕ್ಟರ್​ಗಳು ಕೇವಲ ಚೀಟಿಯಲ್ಲಿ ಬರೆದು ಮೆಡಿಕಲ್​ನಲ್ಲಿ ಔಷಧಿಯನ್ನು (Medicine) ಖರೀದಿಸಲು ಹೇಳುತ್ತಾರೆ. ಡಾಕ್ಟರುಗಳು (Doctors) ಬರೆಯುವ ಚೀಟಿ ಹೇಗಿರುತ್ತೆ ಅಂತ ಎಲ್ಲರಿಗೂ ಗೊತ್ತು. ಅದನ್ನು ಯಾರಪ್ಪಅ ಓದೋದು ಎಂದು ಹೇಳಿದವರು ಕೂಡ ಎಷ್ಟೋ ಜನರಿದ್ದಾರೆ. ಆದರೆ ಈ ಎಲ್ಲ ಮಾತಿಗೆ ಕಡಿವಾಣ ಹಾಕಲು ಗೂಗಲ್ ಹೊಸ ಯೋಜನೆಯನ್ನು ತರುತ್ತಿದೆ. ಅದೇನಪ್ಪ ಅಂದ್ರೆ ಇನ್ಮುಂದೆ ವೈದ್ಯರು ಬರೆದಂತಹ ಔಷಧಿಯ ಚೀಟಿಯನ್ನು ಗೂಗಲ್ (Google)​ ಹೇಳುತ್ತದೆ. ಅಂತದ್ದೊಂದು ಫೀಚರ್​ ಕೆಲವೇ ದಿನದಲ್ಲಿ ಗೂಗಲ್​ನಲ್ಲಿ ಬರಲಿದೆ ಎಂದು ವರದಿಯಾಗಿದೆ.


    ಹೌದು, ವೈದ್ಯರು ಬರೆಯುವಂತಹ ಅಕ್ಷರಗಳು ಯಾರಿಗೂ ಅರ್ಥಾಗೊಲ್ಲ, ಅದಕ್ಕಾಗಿ ಕೆಲವೊಂದು ರಾಜ್ಯದ ಸರ್ಕಾರ ಡಾಕ್ಟರುಗಳಿಗೆ ನಿಯಮಗಳನ್ನೂ ತಂದಿತ್ತು. ಆದರೆ ಅದು ಯಾವುದೇ  ಪ್ರಯೋಜನವಾಗಲಿಲ್ಲ. ಇದೀ ಗೂಗಲ್ ಇದಕ್ಕೆ ಪರಿಹಾರ ಹುಡುಕುವ ಸಲುವಾಗಿ ಹೊಸ ಫೀಚರ್​ ಅನ್ನು ಬಿಡುಗಡೆ ಮಾಡಿದೆ. ಇನ್ನುಮುಂದೆ ವೈದ್ಯರು ಬರೆದಂತಹ ಔಷಧಿಯ ಚೀಟಿಯ ಪ್ರಿಸ್ಕಿಪ್ಷನ್ ಅನ್ನು ಗೂಗಲ್​ ಲೆನ್ಸ್​ ಮೂಲಕ ತಿಳ್ಕೊಳ್ಳಬಹುದಾಗಿದೆ.


    ಗೂಗಲ್​ನಿಂದ ಮಹತ್ವದ ಘೋಷಣೆ


    2022ರ ವರ್ಷಾಂತ್ಯದಲ್ಲಿ ಸುಂದರ್​ ಪಿಚೈ ಅವರ ನೇತೃತ್ವದಲ್ಲಿ ಗೂಗಲ್​ ಫಾರ್​ ಇಂಡಿಯಾ ಎಂಬ ಈವೆಂಟ್​ ನಡಯುತ್ತಿದೆ. ಈ ಈವೆಂಟ್​ನಲ್ಲಿ ಹಲವಾರು ಯೋಜನೆಗಳ ಗೂಗಲ್​ ಸಂಸ್ಥೆ ಯೋಜನೆ ನಡೆಸುತ್ತಿದೆ. ಇದೀಗ ಈ ಯೋಜನೆಯಲ್ಲಿ ಹೊಸ ಉಪಕರನವನ್ನು ಪರಿಚಯಿಸುವುದಾಗಿ ತಿಳಿಸಿದ್ದಾರೆ.


    ಇದನ್ನೂ ಓದಿ: ವಾಟ್ಸಪ್​ನಲ್ಲಿ ಬಂದಿದೆ ನೋಡಿ ಹೊಸ ಫೀಚರ್​! ಇನ್ಮುಂದೆ ತಪ್ಪಿ ಮೆಸೇಜ್​ ಮಾಡಿದ್ರೂ ಟೆನ್ಷನ್​ ಮಾಡ್ಬೇಕಾಗಿಲ್ಲ


    ಇದು ವೈದ್ಯರು ಬರೆದಂತಹ ಬರಹಗಳನ್ನು ಅರ್ಥೈಸುವಂತಹ ಉಪಕರವಾಗಿರಲಿದೆ ಎಂದು ಹೇಳಿದ್ದಾರೆ. ಈವರೆಗೆ ಡಾಕ್ಟರ್​ ಏನಾದರೂ ಬರೆದರೆ ಅದನ್ನು ಮೆಡಿಕಲ್​ಗೆ ಕೊಂಡು ಹೋಗಿ ತೋರಿಸಬೇಕಿತ್ತು. ಆದರೆ ಇನ್ಮುಂದೆ ಇದನ್ನು ಗೂಗಲ್​ನಲ್ಲಿ ನೋಡಿ ಅರ್ಥ ಮಾಡಿಕೊಳ್ಳಬಹುದೆಂದು ಕಂಪನಿ ತಿಳಿಸಿದೆ.


    ಏನಿದು ಫೀಚರ್​?


    ಹೊಸ ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆಯ ಮಾದರಿ ಬಗ್ಗೆ ಗೂಗಲ್‌ ಘೋಷಣೆ ಮಾಡಿದ್ದು, ಇದು ಕೈಬರಹದ ಪ್ರಿಸ್ಕ್ರಿಪ್ಷನ್‌ಗಳಲ್ಲಿ ಔಷಧಿಗಳನ್ನು ಗುರುತಿಸಲು ಮತ್ತು ಹೈಲೈಟ್ ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಹೊಸ ಫೀಚರ್ಸ್‌ ಕೈಬರಹದ ವೈದ್ಯಕೀಯ ದಾಖಲೆಗಳನ್ನು ಬಳಕೆದಾರರಿಗೆ ಅರ್ಥವಾಗುವಂತೆ ಸಹಾಯಕ ತಂತ್ರಜ್ಞಾನವಾಗಿ ಇದು ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ.


    ಯಾವ ರೀತಿ ಕಾರ್ಯನಿರ್ವಹಿಸುತ್ತದೆ?


    ಬಳಕೆದಾರರು ತಮ್ಮ ಫೋನ್‌ನ ಕ್ಯಾಮೆರಾವನ್ನು ಬಳಸಿಕೊಂಡೇ ವೈದ್ಯರ ಕೈಬರಹವನ್ನು ಓದಬಹುದಾಗಿದೆ. ಇದಕ್ಕೆ ಗೂಗಲ್​ನಲ್ಲಿ ಸ್ಕ್ಯಾನ್ ಆಯ್ಕೆ ನೀಡಲಾಗಿದ್ದು, ಗೂಗಲ್‌ನ ಹೊಸ ಉಪಕರಣವು AI ಮತ್ತು ML ಅನ್ನು ಬಳಕೆ ಮಾಡಿಕೊಂಡು ರೀಡ್ ಮಾಡುತ್ತದೆ. ಹಾಗೆಯೇ ಸ್ಕ್ಯಾನ್ ಮಾಡಿದ ದಾಖಲೆಗಳಲ್ಲಿ ಪಟ್ಟಿ ಮಾಡಲಾದ ಎಲ್ಲಾ ಔಷಧಿಗಳ ಮಾಹಿತಿ, ನಿರ್ದೇಶನಗಳು, ಆ ಔಷಧಿಯಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ನಿಖರ ಮಾಹಿತಿಯನ್ನು ಇದು ತನ್ನ ಬಳಕೆದಾರರಿಗೆ ಸ್ಪಷ್ಟ ಮಾಹಿತಿಯನ್ನು ನೀಡುತ್ತದೆ.


    ಸ್ಪೀಕರ್ ಆಯ್ಕೆ ಕೂಡ ಇದೆ


    ಇಷ್ಟೆಲ್ಲಾ ಆಯ್ಕೆಗಳನ್ನು ಒಳಗೊಂಡ ಈ ಫೀಚರ್​ ವಾಯ್ಸ್​ ಮೂಲಕವೂ ಮಾಹಿತಿಯನ್ನು ನೀಡುತ್ತದೆ. ಇದರಿಂದ ಬಳಕೆದಾರರು ಸ್ಕ್ಯಾನ್ ಮಾಡಿ ನೋಡುವ ಸಂದರ್ಭದಲ್ಲಿ ಅದನ್ನು ಯಾವ ರೀತಿ ಮೆಡಿಕಲ್​ನಲ್ಲಿ ಉಚ್ಛಾರ ಮಾಡಬೇಕೆಮದು ತಿಳಿದಿರುವುದಿಲ್ಲ ಅದಕ್ಕಾಗಿ ಈ ಆಯ್ಕೆಯನ್ನು ನೀಡಿದ್ದಾರೆ.


    ಯಾವಾಗದಿಂದ ಲಭ್ಯ?


    ಈ ಬಗ್ಗೆ ಗೂಗಲ್​ ಯಾವುದೇ ರೀತಿಯಲ್ಲು ಸ್ಪಷ್ಟನೆಯನ್ನು ನೀಡಿಲ್ಲ. ಆದರೆ ಈವೆಂಟ್​ನಲ್ಲಿ ಮಾತ್ರ ಇದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ. ಈ ಟೆಕ್ನಾಲಜಿ ಬಗ್ಗೆ ಇನ್ನೂ ಹಲವು ಕೆಲಸಗಳು ಬಾಕಿ ಇದೆ, ಅದನ್ನೆಲ್ಲಾ ಮುಗಿಸಿ ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಕಂಪನಿ ತಿಳಿಸಿದೆ.

    Published by:Prajwal B
    First published: