Android 12ರ ಹೆಸರು ಸ್ನೋ ಕೋನ್​​​.. ಗೂಗಲ್ OSಗೆ ಸಿಹಿ ತಿಂಡಿಯ ನಾಮಕರಣ ಏಕೆ?

ಆ್ಯಂಡ್ರಾಯ್ಡ್ ಎಂಜಿನಿಯರಿಂಗ್‍ನ ಗೂಗಲ್ ಉಪಾಧ್ಯಕ್ಷ ಡೇವ್ ಬರ್ಕ್ ,  ಟ್ವಿಟ್ಟರ್‌ನಲ್ಲಿ ಆ್ಯಂಡ್ರಾಯ್ಡ್ 12ಕ್ಕೆ ಸಿಹಿ ತಿಂಡಿಯ ಹೆಸರನ್ನು ಘೋಷಿಸಿದ್ದಾರೆ. ಆ ಮೂಲಕ ಮತ್ತೆ ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಸಿಹಿ ತಿಂಡಿಯ ಹೆಸರನ್ನು ಇಡುವ ಪರಿಪಾಠವನ್ನು ಮುಂದುವರೆಸಿದಂತಾಗಿದೆ. 

ಗ್ರಾಫಿಕ್​ ಚಿತ್ರ

ಗ್ರಾಫಿಕ್​ ಚಿತ್ರ

  • Share this:
    ಗೂಗಲ್‍ನ ಹೊಸ ಆಪರೇಟಿಂಗ್ ಸಿಸ್ಟಮ್ , ಆ್ಯಂಡ್ರಾಯ್ಡ್ 12(Android 12) ಗೂಗಲ್ ಆಪರೇಟಿಂಗ್ ಸಿಸ್ಟಮ್ ಆವೃತ್ತಿಗಳಿಗೆ ಸಿಹಿ ತಿಂಡಿಗಳ ಹೆಸರನ್ನು ಇಡುವ ಸಂಪ್ರದಾಯವನ್ನು ಮರಳಿ ತಂದಿದೆ. ಆ್ಯಂಡ್ರಾಯ್ಡ್ ಎಂಜಿನಿಯರಿಂಗ್‍ನ ಗೂಗಲ್ ಉಪಾಧ್ಯಕ್ಷ ಡೇವ್ ಬರ್ಕ್ , ಟ್ವಿಟ್ಟರ್‌ನಲ್ಲಿ ಆ್ಯಂಡ್ರಾಯ್ಡ್12ಗೆ ಸಿಹಿ ತಿಂಡಿಯ ಹೆಸರನ್ನು ಘೋಷಿಸಿದ್ದಾರೆ. ಆ ಮೂಲಕ , ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಆ್ಯಂಡ್ರಾಯ್ಡ್ ಆವೃತ್ತಿಗೆ ಸಿಹಿ ತಿಂಡಿಯ ಹೆಸರನ್ನು ಇಟ್ಟಂತಾಗಿದೆ.

    2019 ರಲ್ಲಿ ಆ್ಯಂಡ್ರಾಯ್ಡ್ 10 ರ ಬಳಿಕ ಗೂಗಲ್ ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಸಿಹಿ ತಿಂಡಿಯ ಹೆಸರನ್ನು ಇಡುವ ಸಂಪ್ರದಾಯವನ್ನು ನಿಲ್ಲಿಸಿತ್ತು. ಸಿಹಿ ತಿಂಡಿಯ ಹೆಸರನ್ನು ಪಡೆದಿದ್ದ ಕೊನೆಯ ಆ್ಯಂಡ್ರಾಯ್ಡ್ ಆವೃತ್ತಿ ಎಂದರೆ ಅದು ಆ್ಯಂಡ್ರಾಯ್ಡ್ 9. ಅದಕ್ಕೆ ‘ಪೈ’ ಎಂದು ನಾಮಕರಣ ಮಾಡಲಾಗಿತ್ತು. ಅದಕ್ಕೂ ಮೊದಲಿನ ಆವೃತ್ತಿಗಳಿಗೆ ಕಪ್ ಕೇಕ್ , ಡೋನಟ್ , ಹನಿಕೋಂಬ್ , ಕಿಟ್‍ಕ್ಯಾಟ್, ಓರಿಯೋ ಇತ್ಯಾದಿ ಹೆಸರುಗಳನ್ನು ಕೂಡ ಇಡಲಾಗಿತ್ತು.

    ಗಮನ ಸೆಳೆದ ಸಿಹಿಯಾದ ಹೆಸರು
    ಒಂದು ತಿಂಗಳ ಪರೀಕ್ಷಾ ಹಂತದ ಬಳಿಕ, ಆ್ಯಂಡ್ರಾಯ್ಡ್ 12 ನ್ನು , ಅಕ್ಟೋಬರ್ 4 ರಂದು ಬಿಡುಗಡೆ ಮಾಡಲಾಯಿತು. ಈ ಆವೃತ್ತಿಗೆ ಇಡಲಾಗಿದ್ದ “ಸ್ನೋ ಕೋನ್ “ ಎಂಬ ಹೆಸರು ಫೆಬ್ರವರಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಆದರೆ ಗೂಗಲ್ ಆ್ಯಂಡ್ರಾಯ್ಡ್ 10 ರಿಂದ ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಸಿಹಿ ತಿಂಡಿಯ ಹೆಸರನ್ನು ಇಡುವ ಪರಿಪಾಠವನ್ನು ಕೈ ಬಿಟ್ಟಿದ್ದರಿಂದ ಈ ಹೆಸರು ಹೆಚ್ಚು ಗಮನವನ್ನು ಸೆಳೆಯುವುದು ಸಾಧ್ಯವಾಗಲಿಲ್ಲ. ಈ ಮೊದಲಿನ ಎರಡು ಆ್ಯಂಡ್ರಾಯ್ಡ್ ಆವೃತ್ತಿಗಳಾದ ಆ್ಯಂಡ್ರಾಯ್ಡ್ 10 ಮತ್ತು ಆ್ಯಂಡ್ರಾಯ್ಡ್ 11 ಕ್ಕೆ ಯಾವುದೇ ಹೆಸರನ್ನು ನಾವು ನೋಡದಿದ್ದರೂ, ಅವು ಆಂತರಿಕ ಸಂಕೇತ ನಾಮಗಳನ್ನು ಹೊಂದಿದ್ದವು. ಉದಾಹರಣೆಗೆ, ಆ್ಯಂಡ್ರಾಯ್ಡ್ 11 ಅನ್ನು ರೆಡ್ ವೆಲ್ವೆಟ್ ಕೇಕ್ ಇಂಟರ್ನಲ್ ಮತ್ತು ಆ್ಯಂಡ್ರಾಯ್ಡ್ 10 ಅನ್ನು ಕ್ವೀನ್ ಕೇಕ್ ಎಂದು ಕರೆಯಲಾಗುತ್ತಿತ್ತು.

    ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್‍ಗಳು ನವೀಕರಣ ಆಗಬೇಕಿದೆ

    ಆ್ಯಂಡ್ರಾಯ್ಡ್ 12 ಓಪನ್ ಸೋರ್ಸ್ ಪ್ರೋಜೆಕ್ಟ್ (AOSP) ನ್ನು ಗೂಗಲ್ ಬಿಡುಗಡೆ ಮಾಡಿದೆ. ಗೂಗಲ್‍ನ ಓಪನ್ ಸೋರ್ಸ್ ಪ್ರೋಜೆಕ್ಟ್ ಬಿಡುಗಡೆ ಮಾಡಿದ ಕೂಡಲೇ, ಒಪ್ಪೋ, ಒನ್ ಪ್ಲಸ್ ಮತ್ತು ರೀಯಲ್ ಮೀ ಸೇರಿದಂತೆ ತಯಾರಕರು ತಮ್ಮ ಆ್ಯಂಡ್ರಾಯ್ಡ್ 12 ಆಧರಿತ ಕಸ್ಟಮ್ ಸ್ಕಿನ್‍ಗಳ ಬಿಡುಗಡೆಯನ್ನು ಖಚಿತ ಪಡಿಸಿದ್ದಾರೆ. ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್‍ಗಳು ಇನ್ನೂ ನವೀಕರಣವನ್ನು ಸ್ವೀಕರಿಸುವುದು ಬಾಕಿ.

    ಇದನ್ನೂ ಓದಿ: ನಿಮ್ಮ ಒಂದೊಳ್ಳೆ ಫೋಟೋದ Background ಬದಲಿಸಲು ಈ ಸಿಂಪಲ್ & ಫ್ರೀ ವೆಬ್​​ಸೈಟನ್ನು ಬಳಸಿ ನೋಡಿ

    ಆ್ಯಂಡ್ರಾಯ್ಡ್ 12 , ಹೊಸ ಮತ್ತು ಮರು ವಿನ್ಯಾಸಗೊಳಿಸಲಾದ ಆ್ಯಂಡ್ರಾಯ್ಡ್ ಯುಐ ಯನ್ನು ಹೊಂದಿದ್ದು, “ಮೆಟಿರಿಯಲ್ ಯು” ವಿನ್ಯಾಸ ಭಾಷೆಯನ್ನು ಒಳಗೊಂಡಿದೆ. ಅಷ್ಟು ಮಾತ್ರವಲ್ಲ, ಅಂತರ್‍ನಿರ್ಮಿತ ಮೈಕ್ರೋಫೋನ್ ಅಥವಾ ಸ್ಮಾರ್ಟ್ ಫೋನ್‍ನ ಕ್ಯಾಮರಾ ಬಳಕೆಯಲ್ಲಿ ಇದ್ದಾಗ, ಅದನ್ನು ಬಳಸುತ್ತಿರುವವರನ್ನು ಎಚ್ಚರಿಸಲು ಆನ್ - ಸ್ಕ್ರೀನ್ ಸೂಚಕಗಳಂತಹ ಹೊಸ ಗೌಪ್ಯತೆ ಆಯ್ಕೆಗಳನ್ನು ಆ್ಯಂಡ್ರಾಯ್ಡ್ 12 ಹೊಂದಿದೆ. ಬಳಕೆದಾರರು , ಜಾಹಿರಾತು ಟ್ರ್ಯಾಕಿಂಗ್‍ನಿಂದ ಹೊರಗುಳಿಯಲು ಬಯಸಿದರೆ, ಅದಕ್ಕೆ ಅನುವು ಮಾಡಿಕೊಡುವ ಒಂದು ಆಯ್ಕೆ ಕೂಡ ಇದರಲ್ಲಿ ಇದೆ. ಈ ಫೀಚರನ್ನು ವರ್ಷಾಂತ್ಯದಲ್ಲಿ ಆರಂಭಿಸಲಾಗುವುದು. ಆ್ಯಂಡ್ರಾಯ್ಡ್ 13 ಕ್ಕೆ ಈಗಾಗಲೇ ಇಟಾಲಿಯನ್ ಸಿಹಿ ತಿನಿಸು ತಿರಮಿಸು ಎಂಬ ಹೆಸರನ್ನು ಇಡಲಾಗಿದೆ ಎನ್ನಲಾಗುತ್ತದೆ.
    First published: