• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Amazon: 10 ಸಾವಿರಕ್ಕೂ ಹೆಚ್ಚು Facebook ಗ್ರೂಪ್ ಅಡ್ಮಿನ್ ಗಳ ವಿರುದ್ಧ ಮೊಕದ್ದಮೆ ಹೂಡಿದ ಅಮೆಜಾನ್! ಕಾರಣ ಏನು ಗೊತ್ತಾ?

Amazon: 10 ಸಾವಿರಕ್ಕೂ ಹೆಚ್ಚು Facebook ಗ್ರೂಪ್ ಅಡ್ಮಿನ್ ಗಳ ವಿರುದ್ಧ ಮೊಕದ್ದಮೆ ಹೂಡಿದ ಅಮೆಜಾನ್! ಕಾರಣ ಏನು ಗೊತ್ತಾ?

ಅಮೆಜಾನ್

ಅಮೆಜಾನ್

ಅಮೆಜಾನ್ ಮಂಗಳವಾರ 10,000ಕ್ಕೂ ಹೆಚ್ಚು ಫೇಸ್‌ಬುಕ್ ಗ್ರೂಪ್ ಗಳ ನಿರ್ವಾಹಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ, ಅವರು ಹಣ ಅಥವಾ ಉಚಿತ ಉತ್ಪನ್ನಗಳಿಗೆ ಬದಲಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ನಲ್ಲಿ ನಕಲಿ ವಿಮರ್ಶೆಗಳನ್ನು ಬರೆಯಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ನಾವು ಯಾವುದೇ ವಸ್ತುವನ್ನು ಈ ಇ-ಕಾಮರ್ಸ್ ವೆಬ್‌ಸೈಟ್ ಗಳಲ್ಲಿ (E Commerce Website ಹೋಗಿ ಆನ್‌ಲೈನ್ ನಲ್ಲಿ ಕೊಂಡು ಕೊಳ್ಳುವಾಗ ಮೊದಲು ಆ ವಸ್ತುವನ್ನು ಈ ಮೊದಲೇ ಖರೀದಿ ಮಾಡಿದಂತಹ ವ್ಯಕ್ತಿಗಳು ಬರೆದಿರುವಂತಹ ವಿಮರ್ಶೆ ಎಂದರೆ ರಿವೀವ್ ಗಳನ್ನು (Review) ಒಮ್ಮೆ ಓದಿಕೊಂಡು ಮುಂದುವರೆಯುತ್ತೇವೆ. ಬಹುತೇಕರು ಆನ್‌ಲೈನ್ ನಲ್ಲಿ (Online) ಯಾವುದಾದರೂ ಒಂದು ವಸ್ತುವನ್ನು ಕೊಂಡು ಕೊಳ್ಳುವಾಗ ಇದೇ ರೀತಿಯಲ್ಲಿ ವಿಮರ್ಶೆಗಳನ್ನು ಓದಿಕೊಂಡು ತಮಗೆ ಅವಶ್ಯಕವಿರುವ ವಸ್ತುಗಳನ್ನು ಖರೀದಿ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಕೆಲವೊಮ್ಮೆ ಈ ವಿಮರ್ಶೆಗಳನ್ನು ಸಹ ನಕಲಿ ಸಾಮಾಜಿಕ ಮಾಧ್ಯಮಗಳ (Social Media) ಖಾತೆಗಳನ್ನು ಮಾಡಿಕೊಂಡು ಬರೆಯುತ್ತಿದ್ದಾರೆ ಎಂಬ ಸುದ್ದಿ ಸಹ ಬಲವಾಗಿ ಹರಿದಾಡುತ್ತಿವೆ.


ಫೇಸ್‌ಬುಕ್ ಗ್ರೂಪ್ ಗಳ ಅಡ್ಮಿನ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಂಡ ಅಮೆಜಾನ್
ಈ ಸುದ್ದಿ ಅದಕ್ಕೆ ಸಂಬಂಧಿಸಿದ್ದೇ ಆಗಿದೆ ಎಂದು ಹೇಳಿದರೆ ಸುಳ್ಳಲ್ಲ. ಅಮೆಜಾನ್ ಮಂಗಳವಾರ 10,000ಕ್ಕೂ ಹೆಚ್ಚು ಫೇಸ್‌ಬುಕ್ ಗ್ರೂಪ್ ಗಳ ನಿರ್ವಾಹಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ, ಅವರು ಹಣ ಅಥವಾ ಉಚಿತ ಉತ್ಪನ್ನಗಳಿಗೆ ಬದಲಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ನಲ್ಲಿ ನಕಲಿ ವಿಮರ್ಶೆಗಳನ್ನು ಬರೆಯಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.


ತನ್ನ ಕಾನೂನು ಕ್ರಮದಲ್ಲಿ ಈಗಾಗಲೇ ಪತ್ತೆಯಾದ ಮಾಹಿತಿಯನ್ನು ತೆಗೆದು ಹಾಕುವುದಾಗಿ ಮತ್ತು ಇಂತಹ ನಕಲಿ ವಿಮರ್ಶೆಗಳನ್ನು ಬರೆಯುವ ಜನರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಮತ್ತು ಇನ್ನೂ ಪತ್ತೆಯಾಗದ ವಂಚಕರನ್ನು ನಿಯೋಜಿಸಿದ್ದರ ಹಿಂದೆ ಇರುವ ದುಷ್ಟ ಜನರನ್ನು ಪತ್ತೆ ಹಚ್ಚಬೇಕು ಎಂದು ಈ ಇ-ಕಾಮರ್ಸ್ ದೈತ್ಯ ಹೇಳಿದೆ.


ಇದಕ್ಕೆ ಕಾರಣವೇನು?
ಈ ಗ್ರೂಪ್ ಗಳು ಯುಎಸ್, ಯುಕೆ, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್ ಮತ್ತು ಜಪಾನ್ ರಾಷ್ಟ್ರಗಳಲ್ಲಿನ ಅಮೆಜಾನ್ ನ ಮಳಿಗೆಗಳಲ್ಲಿ ದಾರಿ ತಪ್ಪಿಸುವ ವಿಮರ್ಶೆಗಳಾಗಿವೆ. "ನಮ್ಮ ತಂಡಗಳು ಲಕ್ಷಾಂತರ ಅನುಮಾನಾಸ್ಪದ ವಿಮರ್ಶೆಗಳನ್ನು ಗ್ರಾಹಕರು ನೋಡುವ ಮೊದಲು ತೆಗೆದು ಹಾಕಿದೆ ಮತ್ತು ಈ ಮೊಕದ್ದಮೆಯು ಸಾಮಾಜಿಕ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಅಪರಾಧಿಗಳನ್ನು ಪತ್ತೆ ಹಚ್ಚಲು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ" ಎಂದು ಅಮೆಜಾನ್ ನ ಸೆಲ್ಲಿಂಗ್ ಪಾರ್ಟ್ನರ್ ಸರ್ವೀಸಸ್ ನ ಉಪಾಧ್ಯಕ್ಷರಾದ ಧರ್ಮೇಶ್ ಮೆಹ್ತಾ ಅವರು ಹೇಳಿದ್ದಾರೆ.


ಇದನ್ನೂ ಓದಿ: GST Hike: ಸಣ್ಣಪುಟ್ಟ ಅಂಗಡಿಗಳ ಸರಕು ಸಾಮಾಗ್ರಿ ಮೇಲೆ ಜಿಎಸ್‍ಟಿ ಹೇರಲ್ಲ, ಕೇರಳ ಸರ್ಕಾರ ಘೋಷಣೆ


ಇಂತಹ ನಕಲಿ ಗುಂಪುಗಳ ಹಿಂದಿರುವ ವಂಚಕರು ಕಾರ್ ಸ್ಟೀರಿಯೊಗಳು ಮತ್ತು ಕ್ಯಾಮೆರಾ ಟ್ರೈಪಾಡ್ ಗಳು ಸೇರಿದಂತೆ ನೂರಾರು ಉತ್ಪನ್ನಗಳಿಗೆ ನಕಲಿ ವಿಮರ್ಶೆಗಳನ್ನು ಹಾಕುವ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಮೆಜಾನ್ ಕೇಳಿದೆ.


10,000ಕ್ಕೂ ಹೆಚ್ಚು ನಕಲಿ ವಿಮರ್ಶೆ ಗುಂಪುಗಳನ್ನು ಮೆಟಾಗೆ ವರದಿ ಮಾಡಿದ ಅಮೆಜಾನ್ 
ಈ ಮೊಕದ್ದಮೆಯಲ್ಲಿ ಗುರುತಿಸಲಾದ ಗುಂಪುಗಳಲ್ಲಿ ಒಂದು "ಅಮೆಜಾನ್ ಪ್ರಾಡಕ್ಟ್ ರಿವ್ಯೂ" ಆಗಿದ್ದು, ಇದು ಈ ವರ್ಷದ ಆರಂಭದಲ್ಲಿ ಮೆಟಾ ಅವರು ಈ ಗುಂಪನ್ನು ತೆಗೆದು ಹಾಕುವವರೆಗೆ 43,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು. ಗುಂಪಿನ ನಿರ್ವಾಹಕರು ತಮ್ಮ ಚಟುವಟಿಕೆಯನ್ನು ಮರೆ ಮಾಚಲು ಮತ್ತು ಫೇಸ್‌ಬುಕ್ ನ ಪತ್ತೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಅಮೆಜಾನ್ ನ ತನಿಖೆಗಳು ಬಹಿರಂಗಪಡಿಸಿವೆ.


ಕಂಪನಿಯು ನಕಲಿ ವಿಮರ್ಶೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ ಮತ್ತು ನಕಲಿ ವಿಮರ್ಶೆಗಳು ಸೇರಿದಂತೆ ವಂಚನೆ ಮತ್ತು ದುರುಪಯೋಗದಿಂದ ತನ್ನ ವ್ಯಾಪಾರವನ್ನು ರಕ್ಷಿಸಲು ವಿಶ್ವದಾದ್ಯಂತ 12,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. 2020ರಿಂದ, ಅಮೆಜಾನ್ 10,000ಕ್ಕೂ ಹೆಚ್ಚು ನಕಲಿ ವಿಮರ್ಶೆ ಗುಂಪುಗಳನ್ನು ಮೆಟಾಗೆ ವರದಿ ಮಾಡಿದೆ.


ಇದನ್ನೂ ಓದಿ:  Hotel Service Charge: ಹೋಟೆಲ್ ಸೇವಾ ಶುಲ್ಕ ವಿವಾದಕ್ಕೆ ಮತ್ತೊಂದು ಟ್ವಿಸ್ಟ್! ಆದೇಶಕ್ಕೆ ತಡೆ ನೀಡಿದ್ದೇಕೆ ದೆಹಲಿ ಕೋರ್ಟ್?


ಇವುಗಳಲ್ಲಿ, ಮೆಟಾ ನೀತಿ ಉಲ್ಲಂಘನೆಗಾಗಿ ಅರ್ಧಕ್ಕಿಂತ ಹೆಚ್ಚು ಗುಂಪುಗಳನ್ನು ತೆಗೆದು ಹಾಕಿದೆ ಮತ್ತು ಇತರರ ತನಿಖೆಯನ್ನು ಮುಂದುವರಿಸಿದೆ. "ನಕಲಿ ವಿಮರ್ಶೆಗಳನ್ನು ಮಧ್ಯಸ್ಥಿಕೆ ವಹಿಸುವ ದುಷ್ಟ ವ್ಯವಹಾರವು ಉದ್ಯಮದಾದ್ಯಂತದ ಸಮಸ್ಯೆಯಾಗಿ ಉಳಿದಿದೆ" ಎಂದು ಕಂಪನಿ ಹೇಳಿದೆ.

Published by:Ashwini Prabhu
First published: