ಮೆಟಾ (Meta) ಒಡೆತನದಲ್ಲಿರುವಂತಹ ವಾಟ್ಸಪ್ 2022ರಲ್ಲಿ ಬಹಳಷ್ಟು ಅಪ್ಡೇಟ್ (Update)ಗಳನ್ನು ಮಾಡಿದ್ದು. ಇವೆಲ್ಲಾ ಅಪ್ಡೇಟ್ಸ್ ಬಳಕೆದಾರರಿಗೆ ಬೇರೆ ಬೇರೆ ರೀತಿಯಲ್ಲಿ ಸಹಾಯವಾಗಲಿದೆ. ವಾಟ್ಸಪ್ (Whatsapp) ಮೆಸೇಜಿಂಗ್ ಅಪ್ಲಿಕೇಶನ್ (Messaging Application)ನಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿಕೊಂಡು ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ. ವಾಟ್ಸಪ್ನ ಮುಖ್ಯ ಉದ್ದೇಶವೇ ಬಳಕೆದಾರರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ತನ್ನ ಅಪ್ಲಿಕೇಶನ್ ಅನ್ನು ಇನ್ನಷ್ಟು ಸುಧಾರಿಸುವುದು. ಅದೇ ರೀತಿ ವಾಟ್ಸಪ್ ಈ ಬಾರಿ ಸಾಕಷ್ಟು ವಿಧಾನದಲ್ಲಿ ತನ್ನ ಅಪ್ಲಿಕೇಶನ್ ಅನ್ನುಸುಧಾರಿಸಿ ಇನ್ನಷ್ಟು ಗ್ರಾಹಕರನ್ನು ಆಕರ್ಷಿದೆ. ವಾಟ್ಸಪ್ನಲ್ಲಿ ಇನ್ನಷ್ಟು ಅಪ್ಡೇಟ್ಸ್ಗಳು ಬರಲಿದ್ದು ಇದು 2023ರಲ್ಲಿ ಬಿಡುಗಡೆಯಾಗಲಿದೆ ಎಮದು ಕಂಪನಿ ವರದಿಯಲ್ಲಿ ತಿಳಿಸಿದೆ.
ವಾಟ್ಸಪ್ ಈ ವರ್ಷ ಬಹಳಷ್ಟು ಫೀಚರ್ಸ್ಗಳನ್ನು ಬಿಡುಗಡೆ ಮಾಡಿ ತನ್ನ ಬಳಕೆದಾರರನ್ನು ಅಚ್ಛರಿ ಉಂಟುಮಾಡಿತ್ತು. ಇನ್ನೂ ಹಲವಾರು ಫೀಚರ್ಸ್ಗಳು ಬಾಕಿ ಉಳಿದಿವೆ, ಅದನ್ನೆಲ್ಲಾ 2023ರಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದೆ. ಮುಂದಿನ ವರ್ಷದಲ್ಲಿ ಬಳಕೆದಾರರು ವಾಟ್ಸಪ್ನಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುವ ಸಾಧ್ಯತೆಗಳಿವೆ. ಇದರಿಂದ ಬಳಕೆದಾರರಲ್ಲಿ ಇನ್ನಷ್ಟು ನಿರೀಕ್ಷೆ ಹುಟ್ಟುಹಾಕುವ ಸಾಧ್ಯತೆ ಇದೆ. ಹಾಗಿದ್ರೆ 2023ರಲ್ಲಿ ವಾಟ್ಸಪ್ನಲ್ಲಿ ಬಿಡುಗಡೆಯಾಗುವಂತಹ ಆ ಅದ್ಭುತ ಫೀಚರ್ಸ್ಗಳ ಪಟ್ಟಿ ಇಲ್ಲಿದೆ.
ಶೆಡ್ಯೂಲಿಂಗ್ ಮೆಸೇಜಸ್
ವಾಟ್ಸಪ್ 2023ರಲ್ಲಿ ಬಿಡುಗಡೆ ಮಾಡುವಂತಹ ಪ್ರಮುಖ ಫೀಚರ್ಸ್ಗಳಲ್ಲಿ ಶೆಡ್ಯೂಲಿಂಗ್ ಮೆಸೇಜಸ್ ಫೀಚರ್ ಕೂಡ ಒಂದು. ಇದು ಬಹಳ ವಿಶೇಷವಾದ ಅಪ್ಡೇಟ್ ಎಂದು ಹೇಳ್ಬಹುದು. ಯಾಕೆಂದರೆ ಈ ಮೂಲಕ ಯಾವುದೇ ಅಗತ್ಯ ಮೆಸೇಜ್ಗಳನ್ನು ಶೆಡ್ಯೂಲ್ ಮಾಡಿಡಬಹುದು. ಇದರಲ್ಲಿ ಸಮಯ ಮತ್ತು ದಿನವನ್ನು ಆ್ಯಡ್ ಮಾಡುವ ಮೂಲಕ ಶೆಡ್ಯೂಲ್ ಮಾಡಬಹುದಾಗಿದೆ. ಇದು ಹೆಚ್ಚಾಗಿ ಕೆಲಸದ ವಿಷಯಗಳನ್ನು ಶೇರ್ ಮಾಡುವಾಗ ಬಹಳಷ್ಟು ಸಹಕಾರಿಯಾಗುತ್ತದೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್: ಈ ವಸ್ತುಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಲಭ್ಯ!
ಎಡಿಟ್ ಮೆಸೇಜ್
ಈ ಮೆಸೇಜ್ ಅನ್ನು ಎಡಿಟ್ ಮಾಡುವಂತಹ ಫೀಚರ್ ಮೇಲೆ ವಾಟ್ಸಪ್ ಬಹಳ ದಿನಗಳಿಂದ ಕೆಲಸಮಾಡುತ್ತಿದೆ. ಆದರೆ ಇದು ಮುಂದಿನ ವರ್ಷದಲ್ಲಿ ಬರುವುದಂತು ಖಚಿತ. ಈ ಎಡಿಟ್ ಮೆಸೇಜ್ ಫೀಚರ್ ಮೂಲಕ ಬಳಕೆದಾರರು ಇನ್ನೊಬ್ಬರಿಗೆ ಏನಾದರೂ ಮೆಸೇಜ್ ಕಳುಹಿಸಿದಾಗ ಅದರಲ್ಲೇನಾದರೂ ತಪ್ಪಾಗಿದ್ದರೆ ಅದನ್ನು ರೀ ಎಡಿಟ್ ಮಾಡುವಂತಹ ಅವಕಾಶವನ್ನು ನೀಡುತ್ತದೆ.
ಅನ್ಸೆಂಡ್ ಮೆಸೇಜ್
ಇದುವರೆಗೆ ಈ ಫೀಚರ್ ಕೇವಲ ಇನ್ಸ್ಟಾಗ್ರಾಂನಲ್ಲಿ ನಾವೆಲ್ಲರೂ ನೋಡಿರುತ್ತೇವೆ. ಈ ಮೂಲಕ ಯಾರಿಗಾದರೂ ನಾವು ತಪ್ಪಿ ಮೆಸೇಜ್ ಕಳುಹಿಸಿದಾಗ ಅದನ್ನು ಡಿಲೀಟ್ ಮಾಡಿದರೆ ಅವರೆಗೆ ತಿಳಿಯುತ್ತದೆ. ಆದರೆ ಅನ್ಸೆಂಡ್ ಫೀಚರ್ ಮೂಲಕ ಅವರಿಗೆ ನಾವು ಮೆಸೇಜ್ ಕಳುಹಿಸಿದ್ದೇವೆ ಎಂದೇ ತಿಳಿಯುವುದಿಲ್ಲ. ಈ ಫೀಚರ್ಸ್ ಕೂಡ ಮುಂದಿನ ವರ್ಷ ವಾಟ್ಸಪ್ ಬಳಕೆದಾರರಿಗೆ ಲಭ್ಯವಾಗಲಿದೆ.
ವ್ಯಾನಿಶ್ ಮೋಡ್
ಇದು ಕೂಡ ವಾಟ್ಸಪ್ನಲ್ಲಿ ಮುಂದಿನ ವರ್ಷದಲ್ಲಿ ಬರಲಿರುವ ಪ್ರಮುಖ ಫೀಚರ್ ಆಗಿದೆ. ಇದು ವಾಟ್ಸಪ್ನಲ್ಲಿ ಚ್ಯಾಟ್ ಮಾಡಿದಾಗ ಆ ಚ್ಯಾಟ್ನಿಂದ ಹಿಂದೆ ಬಂದಾಗ ನೀವು ಮಾಡಿದಂತಹ ಮೆಸೇಜ್ಗಳು ಆಟೋಮೆಟಿಕ್ ಆಗಿ ಡಿಲೀಟ್ ಆಗುವಂತೆ ಮಾಡುತ್ತದೆ. ಇದೀಗ ಈ ಫೀಚರ್ ಇನ್ಸ್ಟಾಗ್ರಾಂನಲ್ಲಿ ಲಭ್ಯವಿದೆ.
ಕಾಲ್ ರೆಕಾರ್ಡಿಂಗ್
ಈ ಫೀಚರ್ ಇದುವರೆಗೆ ಕೇವಲ ನಾರ್ಮಲ್ ಕಾಲ್ಗಳಲ್ಲಿ ಮಾತ್ರ ಇತ್ತು. ಆದರೆ ಇನ್ನು ಮುಂದಿನ ವರ್ಷದಿಂದ ವಾಟ್ಸಪ್ ಕಾಲ್ಗಳನ್ನು ರೆಕಾರ್ಡ್ ಮಾಡುವಂತಹ ಅವಕಾಶವಿರುತ್ತದೆ. ಈ ಫೀಚರ್ 2023ರಿಂದ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ