• Home
  • »
  • News
  • »
  • tech
  • »
  • Tech Tips: ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಲೈಕ್, ವೀವ್ಸ್ ಬರಬೇಕಾ? ಈ ಟೈಮ್​ನಲ್ಲಿ ಪೋಸ್ಟ್ ಹಾಕಿ

Tech Tips: ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಲೈಕ್, ವೀವ್ಸ್ ಬರಬೇಕಾ? ಈ ಟೈಮ್​ನಲ್ಲಿ ಪೋಸ್ಟ್ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಇನ್​​ಸ್ಟಾಗ್ರಾಮ್​ನಲ್ಲಿ ಎಷ್ಟು ಒಳ್ಳೆ ವಿಡಿಯೋ, ಫೊಟೋ ಶೇರ್ ಮಾಡಿದ್ರೂ ಲೈಕ್ಸ್, ವೀವ್ಸ್ ಬರ್ತಿಲ್ವಾ? ಹಾಗಿದ್ರೆ ನೀವು ಈ ಟಿಪ್ಸ್ ಫಾಲೋ ಮಾಡಲೇಬೇಕು.

  • Share this:

    ಕೆಲವರು ತಮ್ಮ ಇನ್​ಸ್ಟಾಗ್ರಾಮ್​​ಖಾತೆಯಲ್ಲಿ (Instagram Account) ಫೋಟೋ, ವಿಡಿಯೋ (Video) ಎಷ್ಟೇ ಹಾಕಿದರೂ ಅದಕ್ಕೆ ಲೈಕ್ಸ್, ಕಮೆಂಟ್ (Like, Comment) ಬರುವುದೇ ಇಲ್ಲ. ನಮ್ಮ ಪೋಸ್ಟ್​ಗೆ ಹೆಚ್ಚು (Post) ಲೈಕ್ಸ್, ವೀವ್ಸ್, ಕಮೆಂಟ್ ಬರಬೇಕು ಅಂತ ಎನೇನೋ ಮಾಡುತ್ತೇವೆ. ಅದರೂ ಲೈಕ್ಸ್, ವಿವ್ಸ್, ಕಾಮೆಂಟ್ ಬರುವುದಿಲ್ಲ. ಹಾಗಂತ ನೀವು ಹೆಚ್ಚೇನು ಯೋಚಿಸಬೇಡಿ. ಇಲ್ಲಿದೆ ನೋಡಿ ಮ್ಯಾಜಿಕ್ ಟ್ರಿಕ್ಸ್. ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವನ್ನು (Social Media) ಬಳಸುತ್ತಿರುವ ಜನರ ಸಂಖ್ಯೆ ಕೋಟಿಗಟ್ಟಲೆ ಇದೆ. ಮೆಟಾ ಒಡೆತನದ ಫೇಸ್​ಬುಕ್, ವಾಟ್ಸ್​ಆ್ಯಪ್ (WhatsApp) ಮತ್ತು ಇನ್​ಸ್ಟಾಗ್ರಾಮ್ ಟಾಪ್ 3 ಸೋಷಿಯಲ್ ಮೀಡಿಯಾ ಆ್ಯಪ್ ಎಂದು ಆಗಿಬಿಟ್ಟಿದೆ. ವಿಶ್ವದಲ್ಲಿ ಈಗ ವಾಟ್ಸ್​ಆ್ಯಪ್ ಬಿಟ್ಟರೆ ಹೆಚ್ಚಿನ ಜನರು ಉಪಯೋಗಿಸುವುದೆ ಇನ್​ಸ್ಟಾಗ್ರಾಮ್. ಟಿಕ್​ಟಾಕ್ (Tiktok) ಬ್ಯಾನ್  ಆದ ಬಳಿಕ ಭಾರತದಲ್ಲಿಇನ್ ಸ್ಟಾಗ್ರಾಮ್  ಹೆಚ್ಚು ಪಾಪ್ಯುಲರ್ ಪಡೆದುಕೊಂಡಿತು.


    ಎಲ್ಲೆಲ್ಲೂ ರಿಲ್ಸ್ ನ ಹವಾ


    ಇದರಲ್ಲಿರುವ ರೀಲ್ಸ್‌ ಆಯ್ಕೆಗೆ ಜನರು ಮನಸೋತು ವಿಧ ವಿಧವಾದ ವಿಡಿಯೋಗಳನ್ನು ಮಾಡಿಕ್ಕೋಳ್ಳುತ್ತಿದ್ದಾರೆ. ಟಿಕ್‌ಟಾಕ್‌ ಬಳಿಕ ಈಗ ಹೆಚ್ಚಿನ ಜನರು ಇನ್‌ಸ್ಟಾಗ್ರಾಮ್‌ ರೀಲ್ಸ್​ಗೆ ಅಂಟಿಕೊಂಡು ಬಿಟ್ಟಿದ್ದಾರೆ. ಅದಲ್ಲದೇ ಅವುಗಳಿಗೆ ಲೈಕ್ಸ್, ವೀವ್ಸ್, ಬರುವುದಿಲ್ಲವೆಂದು ಎನೇನೋ ಮಾಡಿಕೊಂಡದ್ದು ಇದೆ. ಇನ್‌ಸ್ಟಾಗ್ರಾಮ್‌  ತನ್ನ ರೀಲ್ಸ್‌ನಲ್ಲಿ ಹಲವು ಆಕರ್ಷಕ ಫೀಚರ್​ಗಳನ್ನು ಕೂಡ ಪರಿಚಯಿಸುತ್ತಾ ಬರುತ್ತಿದೆ.


    ಆದರೆ, ಕೆಲವರು ತಮ್ಮ ಇನ್​ಸ್ಟಾದಲ್ಲಿ ಫೋಟೋ, ವಿಡಿಯೋ ಎಷ್ಟೇ ಹಾಕಿದರೂ ಅದಕ್ಕೆ ಲೈಕ್ಸ್, ಕಮೆಂಟ್ ಬರುವುದೇ ಇಲ್ಲ. ಹಾಗಾದರೆ ನಿಮ್ಮ ಪೋಸ್ಟ್​ಗೆ ಹೆಚ್ಚು ಲೈಕ್ಸ್, ವೀವ್ಸ್, ಕಮೆಂಟ್ ಬರಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಟಿಪ್ಸ್.


    Do you know what time you post photos and reels on Instagram to get more likes and views
    ರಿಲ್ಸ್ ನ ಹವಾ


     ನಿಮ್ಮಲ್ಲಿ ಫೇಸ್ಬುಕ್  ಖಾತೆಇದೆಯೇ


    ನಿಮ್ಮಲ್ಲಿ ಫೇಸ್ಬುಕ್  ಖಾತೆ ಇದ್ದರೆ ಮೊದಲು ಇನ್‌ಸ್ಟಾಗ್ರಾಂಗೆ ಲಿಂಕ್ ಮಾಡಿಕೊಳ್ಳಿ. ಯಾಕೆಂದರೆ ನೀವು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಚಿತ್ರಗಳು, ವಿಡಿಯೋಗಳಲ್ಲದೆ, ನಿಮ್ಮ ಸ್ಟೋರಿಗಳನ್ನು ಫೇಸ್​ಬುಕ್​ನಲ್ಲಿ ಕೂಡ ಶೇರ್ ಮಾಡಿಕೊಳ್ಳಬಹುದಾದ ಹೊಸ ಫೀಚರ್ ಬಂದು ನಿಂತಿದೆ. ಫೇಸ್​ಬುಕ್ ತಾಣದಲ್ಲಿರುವ ಯಾವುದೇ ಸ್ನೇಹಿತರು ಇನ್​ಸ್ಟಾಗ್ರಾಮ್ ನಲ್ಲಿ ಲೊಗ್ ಇನ್ ಆದಾಗ ನಿಮಗೂ ನೋಟಿಫಿಕೇಶನ್ ಬರುತ್ತಾ ಇರುತ್ತದೆ.


    ಹೀಗಾಗಿ ಅವರ ಬಳಿ ನಿಮ್ಮನ್ನು ಫಾಲೋ ಮಾಡುವಂತೆ ಕೂಡ ಹೇಳಬಹುದು. ಈಗ ಇನ್​ಸ್ಟಾಗ್ರಾಮ್ ಸಾಕಷ್ಟು ಅಪ್ಡೇಟ್ ಆಗಿದ್ದು, ನೀವು ಯಾವುದೇ ಫೋಟೋ, ವಿಡಿಯೋ ಹಂಚಿಕೊಂಡರೆ ಫೇಸ್​ಬುಕ್​ನಲ್ಲಿ ಅಟೋಮೆಟಿಕ್ ಶೇರ್ ಆಗುವಂತಹ ಆಯ್ಕೆ ಬಂದಿದೆ.


    ಇದನ್ನೂ ಓದಿ: TATA Binge: ಟಾಟಾದಿಂದ OTT ಲವರ್ಸ್‌ಗೆ ಭರ್ಜರಿ ಸಿಹಿಸುದ್ದಿ, ಇನ್ಮುಂದೆ ಲೈಫ್ ಇನ್ನಷ್ಟು ಜಿಂಗಾಲಾಲ!


    ಇನ್ನು ಇನ್​ಸ್ಟಾಗ್ರಾಮ್​ನಲ್ಲಿ ನೀವು ಯಾವುದೇ ವಿಡಿಯೋ, ಫೋಟೋ, ರಿಲ್ಸ್ ಗಳನ್ನು  ಶೇರ್ ಮಾಡುವಾಗ ಸರಿಯಾದ ಸಮಯಕ್ಕೆ ನೋಡಿ ಮಾಡಿ. ಒಂದೇ ಬಾರಿಗೆ 2, 3 ವಿಡಿಯೋ ಶೇರ್ ಮಾಡಿದರೆ ಲೈಕ್ಸ್, ಕಮೆಂಟ್ ಹಾಗೂ ಹೆಚ್ಚು ರೀಚ್ ಕೂಡ ಆಗುವುದಿಲ್ಲ. ಈ ಬಗ್ಗೆ ವೆಬ್ ತಾಣ ಗಿಜ್​ಬಾಟ್ ವರದಿ ಮಾಡಿದ್ದಾರೆ.  ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳಲು ಯಾವುದು ಸರಿಯಾದ ಸಮಯ ಎಂದು ಗಿಜ್​ಬಾಟ್ ವರದಿ ಮಾಡಿದೆ.


    Do you know what time you post photos and reels on Instagram to get more likes and views
    ಸಾಂದರ್ಭಿಕ ಚಿತ್ರ


    ಈ ಗಂಟೆಗೆ ನೀವು ರೆಡಿಯಾರ್ಗಿಬೇಕು


    ಇವರು ಹೇಳಿರುವ ಪ್ರಕಾರ ಸೋಮವಾರ ಮಧ್ಯಾಹ್ನ 3:30, ಸಂಜೆ 7:30 ಹಾಗೂ ಬೆಳಗ್ಗೆ 7:30 ಉತ್ತಮ ಸಮಯವಂತೆ. ಅದೆರೀತಿ ಮಂಗಳವಾರ ಫೋಟೋ ಅಥವಾ ರೀಲ್ಸ್ ಹಂಚಿಕೊಳ್ಳುವ ಪ್ಲಾನ್​ನಲ್ಲಿದ್ದರೆ ನೀವು 11:30 am, 1:30 am, 6:30 am. ಬುಧವಾರ- 4:30 pm, 5:30 pm, 8:30 am, ಗುರುವಾರ- 6:30 pm, 9:30 am, 4:30 am (ಮುಂದಿನ ದಿನ), ಶುಕ್ರವಾರ- 2:30 pm, 10:30 pm, 12:30 am (ಮುಂದಿನ ದಿನ), ಶನಿವಾರ- 8:30 pm, 4:30 am (ಮುಂದಿನ ದಿನ), 5:30 am (ಮುಂದಿನ ದಿನ), ಭಾನುವಾರ- 4:30 pm, 5:30 pm, 1:30 am (ಮುಂದಿನ ದಿನ). ಈ ಸಮಯವನ್ನು ಪಾಲಿಸಿದರೆ ನೀವು ಖಂಡಿತ ಉತ್ತಮ ಲೈಕ್, ವಿವ್ಸ್ ಗಳನ್ನು ಪಡೆಯುವುದಂತು ಪಕ್ಕಾ.


    ಇದನ್ನೂ ಓದಿ: Mobile Bomb: ಮಕ್ಕಳ ಕೈಯಲ್ಲಿ ಬಾಂಬುಗಳಿವೆ! ಪೋಷಕರೇ ಎಚ್ಚರ ಎಚ್ಚರ


    ಒಂದೇ ರೀತಿಯ ಫೋಟೋವನ್ನು ಪುನಃ ಪೋಸ್ಟ್ ಮಾಡಬೇಡಿ. ಒಂದು ಪೋಟೊ ಚೆನ್ನಾಗಿದೆ ಎಂದು ಫೋಟೋವನ್ನೇ ಹತ್ತು ಬಾರಿ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಬೇಡಿ. ಗಮನ ಸೆಳೆಯುವಂತಹ ಕೆಲವೊಂದು ಗುಣಮಟ್ಟದ ಚಿತ್ರಗಳನ್ನು ಮಾತ್ರ ಶೇರ್ ಮಾಡಿ. ದಿನಕ್ಕೆ ಹೆಚ್ಚೆಂದರೆ 2 ರಿಂದ 3 ಫೋಟೋಗಳನ್ನು ಶೇರ್ ಮಾಡುವುದು ಉತ್ತಮ.

    Published by:Harshith AS
    First published: