ಕ್ಯಾಮೆರಾ (Camera) ಪ್ರಿಯರಿಗೆ ನಿಮಗಿಷ್ಟವಾದ ಬ್ರ್ಯಾಂಡ್ (Brand) ಯಾವುದು ಅಂದರೆ ಅಲ್ಲಿ ಮೂರು ಮತ್ತೊಂದು ಹೆಸರು ಬರುತ್ತದೆ. ಅದರಲ್ಲಿ ಒಂದು ಸೋನಿ (Sony). ಸೋನಿ ಕಂಪನಿ ಕ್ಯಾಮೆರಾ ಪ್ರಿಯರಿಗೆ ಒಂದೊಳ್ಳೆ ಸುದ್ದಿ (Good News) ನೀಡಿದ್ದು, ಹೊಸದೊಂದು ಕ್ಯಾಮೆರಾ ಬಿಡುಗಡೆ ಮಾಡಿದೆ. ಹೌದು ಭಾರತದಲ್ಲಿ ಸೋನಿ ಕಂಪನಿ ILME-FR7 ಎಂಬ ಅತ್ಯದ್ಭುತವಾದ ಕ್ಯಾಮೆರಾವನ್ನು ಬಿಡುಗಡೆ (Release) ಮಾಡಿದೆ.
ವಿಶ್ವದ ಮೊದಲ PTZ ಕ್ಯಾಮೆರಾ
ವಿಶ್ವದಲೇ ಮೊದಲ PTZ ಕ್ಯಾಮೆರಾ ಇದಾಗಿದ್ದು, E-ಮೌಂಟ್ ಪರಸ್ಪರ ಬದಲಾಯಿಸಬಹುದಾದ ಲೆನ್ಸ್ ವ್ಯವಸ್ಥೆಯನ್ನು ಹೊಂದಿದೆ. ಮತ್ತು ಈ ಕ್ಯಾಮೆರಾ ಇಲ್ಯುಮಿನೇಟೆಡ್ 35mm ಫುಲ್ ಫ್ರೇಮ್ CMOS ಇಮೇಜ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಹಾಗಾದರೆ ಸೋನಿ ಕಂಪನಿ ಬಿಡುಗಡೆ ಮಾಡಿರುವ ಹೊಸ ಕ್ಯಾಮೆರಾ ಹೇಗಿದೆ, ಏನೆಲ್ಲಾ ಹೆಚ್ಚಿನ ವೈಶಿಷ್ಟ್ಯತೆಗಳಿವೆ ಎಂಬುದನ್ನು ಇಲ್ಲಿ ನೋಡೋಣ.
ಸೋನಿ ILME-FR7 ಸಿನಿಮಾ ಕ್ಯಾಮೆರಾ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
* 10.3-ಮೆಗಾಪಿಕ್ಸೆಲ್
ಸೋನಿ ILME-FR7 10.3-ಮೆಗಾಪಿಕ್ಸೆಲ್‌ಗಳು ಮತ್ತು ಅಗಲವಾದ 15+ ಸ್ಟಾಪ್ ಡೈನಾಮಿಕ್ ರೇಂಜ್ ಅಕ್ಷಾಂಶದೊಂದಿಗೆ ಬ್ಯಾಕ್-ಇಲ್ಯುಮಿನೇಟೆಡ್ 35mm ಪೂರ್ಣ-ಫ್ರೇಮ್ CMOS ಇಮೇಜ್ ಸೆನ್ಸಾರ್ Exmor R ಅನ್ನು ಪಡೆಯುತ್ತದೆ. ಆದರಿಂದ ಈ ಕ್ಯಾಮೆರಾದಲ್ಲಿ ಪ್ಯಾನ್/ಟಿಲ್ಟ್/ಜೂಮ್ ಫಂಕ್ಷನ್ ಅನ್ನು ದೂರದಿಂದಲೇ ನಿರ್ವಹಿಸಬಹುದಾಗಿದೆ.
ಜೊತೆಗೆ ಇದು ಸಿನಿ EI ಮೋಡ್‌ನೊಂದಿಗೆ ಡ್ಯುಯಲ್ ಬೇಸ್ ಸ್ಥಳೀಯ ISO ಅನ್ನು ಸಹ ಹೊಂದಿದೆ-ಬೇಸ್ ಸೆನ್ಸಿಟಿವಿಟಿಯನ್ನು ISO 800 ಅಥವಾ ISO 12800 ಗೆ ಹೊಂದಿಸಲು ಈ ಕ್ಯಾಮೆರಾ ಅನುವು ಮಾಡಿಕೊಡುತ್ತದೆ.
* ರಿಮೋಟ್ ಕಂಟ್ರೋಲರ್
ರೆಸಲ್ಯೂಶನ್‌ಗೆ ಧಕ್ಕೆಯಾಗದಂತೆ ಪ್ರತಿ ಸೆಕೆಂಡಿಗೆ 120 ಫ್ರೇಮ್‌ಗಳಲ್ಲಿ 4K ನಲ್ಲಿ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಕ್ಯಾಮೆರಾ ಹೊಂದಿದೆ. ಟ್ಯಾಬ್ಲೆಟ್ ಅಥವಾ ವೆಬ್ ಬ್ರೌಸರ್‌ನಿಂದ ಕ್ಯಾಮೆರಾದ ಸುಲಭ ಕಾರ್ಯಾಚರಣೆ ಸೌಲಭ್ಯ ಇದೆ. ಮತ್ತು ಸೋನಿಯ ಈ ಕ್ಯಾಮೆರಾ ಸೋನಿಯ RM-IP500 ರಿಮೋಟ್ ಕಂಟ್ರೋಲರ್‌ಗೆ ಸೆಟ್ ಆಗಲಿದೆ.
ಇದರಲ್ಲಿರುವ ಪ್ಯಾನ್ ಮತ್ತು ಟಿಲ್ಟ್ ಚಲನೆಗಳು ಕೂಡ ಬದಲಾಗಲಿವೆ. ವೇರಿಯಬಲ್ ಪ್ಯಾನ್ ಮತ್ತು ಟಿಲ್ಟ್ ವೇಗವು ಸೆಕೆಂಡಿಗೆ 0.02 ಡಿಗ್ರಿಗಳಿಂದ ಸೆಕೆಂಡಿಗೆ 60 ಡಿಗ್ರಿಗಳವರೆಗೆ.
ಇದು -170° ರಿಂದ +170° ವರೆಗಿನ ಪ್ಯಾನ್ ಕೋನ ಶ್ರೇಣಿ ಮತ್ತು -30° ರಿಂದ +195° ವರೆಗಿನ ಟಿಲ್ಟ್ ಕೋನ ಶ್ರೇಣಿಯನ್ನು ಹೊಂದಿದೆ. ಇದರೊಂದಿಗೆ ಈ ಕ್ಯಾಮೆರಾ ಡೈರೆಕ್ಷನ್, ಜೂಮ್, ಫೋಕಸ್ ಸೇರಿದಂತೆ 100ಕ್ಕೂ ಹೆಚ್ಚು ಕ್ಯಾಮೆರಾ ಪ್ಲೇ ಪ್ರಿವ್ಯೂಗಳನ್ನು ಬೆಂಬಲಿಸಲಿದೆ
ಇದನ್ನೂ ಓದಿ:Sony Party Speaker: ಭಾರತದ ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಬರಲಿದೆ ಸೋನಿ ಪಾರ್ಟಿ ಸ್ಪೀಕರ್!
* ಡ್ಯುಯಲ್ ಮೀಡಿಯಾ ಸ್ಲಾಟ್
I/O ಮತ್ತು ಮೀಡಿಯಾ ಪ್ರಕಾರಗಳಿಗೆ, CFexpress ಟೈಪ್ A ಮತ್ತು SDXC ಮೆಮೊರಿ ಕಾರ್ಡ್‌ಗಳನ್ನು ಬೆಂಬಲಿಸುವ ಡ್ಯುಯಲ್ ಮೀಡಿಯಾ ಸ್ಲಾಟ್‌ಗಳನ್ನು ಕ್ಯಾಮೆರಾ ನೀಡುತ್ತದೆ ಮತ್ತು HDMI ಟೈಪ್ A ಮತ್ತು 12G-SDI ಕನೆಕ್ಟರ್‌ಗಳು, LAN ಮತ್ತು AUDIO IN (XLR ಟೈಪ್ 5-ಪಿನ್) ಕನೆಕ್ಟರ್‌ಗಳನ್ನು ನೀಡಲಾಗಿದೆ. ಇವುಗಳ ಜೊತೆಗೆ RTSP, SRT, ಮತ್ತು NDI |HX 10 ಸ್ಟ್ರೀಮಿಂಗ್ ಪ್ರೋಟೋಕಾಲ್‌ಗಳಿಗೆ ಬೆಂಬಲಿಸುವ ಅವಕಾಶ ಕಲ್ಪಿಸಲಾಗಿದೆ.
ಭಾರತದಲ್ಲಿ ಸೋನಿ ILME-FR7 ಬೆಲೆ ಮತ್ತು ಲಭ್ಯತೆ
ಸೋನಿ ಇಂಡಿಯಾ ಭಾರತದಲ್ಲಿ ಜನವರಿ 31, 2023 ರಿಂದ ಕ್ಯಾಮೆರಾ ಲಭ್ಯವಾಗುತ್ತಿದೆ. ಪ್ರಸ್ತುತ ಈ ಕ್ಯಾಮೆರಾದ ಬೆಲೆ ಬಗ್ಗೆ ಯಾವುದೇ ಮಾಹಿತಿ ಇನ್ನು ಕೂಡ ಬಹಿರಂಗವಾಗಿಲ್ಲ. ವಿನಂತಿಯ ಮೇರೆಗೆ ಮಾತ್ರ ಲಭ್ಯವಿದ್ದು, ಆಸಕ್ತ ಗ್ರಾಹಕರು ಹೆಚ್ಚಿನ ವಿವರಕ್ಕಾಗಿ ಸೋನಿ ಇಂಡಿಯಾವನ್ನು ಸಂಪರ್ಕಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ