• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • IPhone Price: ಪಾಕಿಸ್ತಾನದಲ್ಲಿ ಐಫೋನ್​ ಖರೀದಿಸೋ ಬೆಲೆಯಲ್ಲಿ ನಮ್ಮ ದೇಶದಲ್ಲಿ ಕಾರನ್ನೇ ಖರೀದಿಸ್ಬಹುದಂತೆ! ಅಷ್ಟಕ್ಕೂ ಬೆಲೆ ಎಷ್ಟು ಗೊತ್ತಾ?

IPhone Price: ಪಾಕಿಸ್ತಾನದಲ್ಲಿ ಐಫೋನ್​ ಖರೀದಿಸೋ ಬೆಲೆಯಲ್ಲಿ ನಮ್ಮ ದೇಶದಲ್ಲಿ ಕಾರನ್ನೇ ಖರೀದಿಸ್ಬಹುದಂತೆ! ಅಷ್ಟಕ್ಕೂ ಬೆಲೆ ಎಷ್ಟು ಗೊತ್ತಾ?

ಐಫೋನ್​ 14 ಪ್ರೋ ಮ್ಯಾಕ್ಸ್​

ಐಫೋನ್​ 14 ಪ್ರೋ ಮ್ಯಾಕ್ಸ್​

iPhone 14 Pro Max: ಆ್ಯಪಲ್ ಐಫೋನ್ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಒಂದು ಮೊಬೈಲ್ ಬ್ರಾಂಡ್ ಆಗಿದೆ. ಆದರೆ ಪಾಕಿಸ್ತಾನದಲ್ಲಿ ಇದರ ಬೆಲೆ ದುವಾರಿಯಂತೆ. ಈ ದೇಶದಲ್ಲಿ ಐಫೋನ್​ ಖರೀದಿಸೋ ಹಣದಲ್ಲಿ ಭಾರತದಲ್ಲಿ ಒಂದು ಕಾರನ್ನೇ ಖರೀದಿಸ್ಬಹುದಂತೆ.

 • Trending Desk
 • 3-MIN READ
 • Last Updated :
 • New Delhi, India
 • Share this:

ಪ್ರಸ್ತುತ ಪಾಕಿಸ್ತಾನದಲ್ಲಿ ಆ್ಯಪಲ್​ ಐಫೋನ್ 14 ಪ್ರೋ ಮ್ಯಾಕ್ಸ್ ಬೆಲೆಯು ಭಾರತದಲ್ಲಿ SUV ಗಿಂತ ಹೆಚ್ಚು ವೆಚ್ಚವಾಗುತ್ತದೆ. ಹೌದು ಇದು ನಿಜ. ಪಾಕಿಸ್ತಾನದಲ್ಲಿ ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಬೆಲೆ ತುಂಬಾ ಹೆಚ್ಚಾಗಿದೆ. ಆ್ಯಪಲ್ ಐಫೋನ್ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಒಂದು ಮೊಬೈಲ್ ಬ್ರಾಂಡ್ ಆಗಿದೆ. ಆ್ಯಪಲ್ ಅನೇಕ ದೇಶಗಳಲ್ಲಿ ತಮ್ಮ ಹಿಂದಿನ ಉತ್ಪನ್ನಗಳಿಗೆ ಹೋಲುವ ಹೆಚ್ಚಿನ ಹೊಸ ಮಾದರಿಗಳ ಬೆಲೆಗಳನ್ನು ಇಟ್ಟುಕೊಂಡಿದ್ದರೂ ಸಹ ಕೆಲವು ರಾಷ್ಟ್ರಗಳು ಪ್ರಮುಖ ಆರ್ಥಿಕ ಬಿಕ್ಕಟ್ಟುಗಳನ್ನು ಅನುಭವಿಸಿವೆ. ಇದರಿಂದಾಗಿ ಆ್ಯಪಲ್ ಐಫೋನ್ ಬೆಲೆಗಳಲ್ಲಿ ಪ್ರಮುಖ ಏರಿಳಿತಗಳು ಕಂಡುಬಂದಿವೆ.


ಅಂತಹ ಒಂದು ದೇಶ ಪಾಕಿಸ್ತಾನ, ಅಲ್ಲಿ ಹೊಸ ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಭಾರತದಲ್ಲಿನ ಎಸ್‍ಯುವಿಗಿಂತ ಹೆಚ್ಚು ದುಬಾರಿಯಾಗಿದೆ.


ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಡೈನಾಮಿಕ್ ಐಲ್ಯಾಂಡ್ ಅನ್ನು ಒಳಗೊಂಡಿರುವ ಮೊದಲ 'ನಾಚ್‌ಲೆಸ್' ಐಫೋನ್ ಆಗಿದೆ. ಇದು ಅದರ ಹಿಂದಿನ ಆ್ಯಪಲ್ ಐಫೋನ್ 13 ಪ್ರೋ ಮ್ಯಾಕ್ಸ್‌ಗೆ ಹೋಲುತ್ತದೆ.


ಇದನ್ನೂ ಓದಿ: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!


ದುಬಾರಿ ಐಫೋನ್ ಮಾಡೆಲ್ ಯಾವುದು?


ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಬ್ರ್ಯಾಂಡ್‌ನ ಪೋರ್ಟ್‌ಫೋಲಿಯೊದಲ್ಲಿ ಅತ್ಯಂತ ದುಬಾರಿ ಆ್ಯಪಲ್ ಐಫೋನ್ ಮಾದರಿಯಾಗಿದೆ. 1TB ಸಂಗ್ರಹಣೆಯೊಂದಿಗೆ ಆಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಕಳೆದ ವರ್ಷ ಪಾದಾರ್ಪಣೆ ಮಾಡಿದ ಪ್ರಮುಖ ಆ್ಯಪಲ್ ಐಫೋನ್ 14 ಸರಣಿಯ ಲೈನ್ ವೇರಿಯಂಟ್‍ನ ಟಾಪ್ ಉತ್ಪನ್ನ ಆಗಿದೆ.


ಭಾರತದಲ್ಲಿ ಐಫೋನ್​ 14 ಪ್ರೋ ಮ್ಯಾಕ್ಸ್​ ಬೆಲೆ


ಈಗ ಭಾರತದಲ್ಲಿ ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಬೆಲೆ ರೂ 1,39,900 ರಿಂದ ಪ್ರಾರಂಭವಾಗುತ್ತದೆ ಮತ್ತು ಲೈನ್ ಮಾಡೆಲ್ ಟಾಪ್ ರೂ 1,89,900 ಗಳಿಗೆ ಲಭ್ಯವಿದೆ. ಜೊತೆಗೆ ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳೊಂದಿಗೆ ಈ ಬೆಲೆಗಳನ್ನು ಇನ್ನೂ ಕಡಿಮೆ ಮಾಡಬಹುದಾಗಿದೆ.


ಐಫೋನ್​ 14 ಪ್ರೋ ಮ್ಯಾಕ್ಸ್​


ಪಾಕಿಸ್ತಾನದಲ್ಲಿ ಐಫೋನ್​ 14 ಪ್ರೋ ಮ್ಯಾಕ್ಸ್​ ಬೆಲೆ


ಆದರೆ, ಈಗ ಪಾಕಿಸ್ತಾನದಲ್ಲಿ ಆ್ಯಪಲ್ ಐಫೋನ್ 14 ಪ್ರೊ ಮ್ಯಾಕ್ಸ್ ನ ಬೆಲೆಯು ನಿಮಗೆ ಎಷ್ಟು ಅಂತ ಗೊತ್ತೇ? ಪ್ರಸ್ತುತ ಪಾಕಿಸ್ತಾನದಲ್ಲಿ ಇದರ ಬೆಲೆ ಕೇಳಿದರೆ ನಿಮಗೆ ಖಂಡಿತ ಶಾಕ್ ಆಗುತ್ತದೆ. ಏಕೆಂದರೆ ಈಗ ಪಾಕಿಸ್ತಾನದಲ್ಲಿ ಹೊಸ ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ 1TB ವೇರಿಯಂಟ್ ಬೆಲೆ 7.21 ಲಕ್ಷ ರೂ.


ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಡೈನಾಮಿಕ್ ಐಲ್ಯಾಂಡ್ ಅನ್ನು ಒಳಗೊಂಡಿರುವ ಮೊದಲ 'ನಾಚ್‌ಲೆಸ್' ಐಫೋನ್ ಆಗಿದೆ. ಇದು ಅದರ ಹಿಂದಿನ ಆ್ಯಪಲ್ ಐಫೋನ್ 13 ಪ್ರೋ ಮ್ಯಾಕ್ಸ್‌ಗೆ ಹೋಲುವುದಲ್ಲದೇ ಹಿಂದಿಗಿಂತಲೂ ಹೆಚ್ಚು ಆಕರ್ಷಕವಾಗಿದೆ.


ಒಂದು ಐಫೋನ್​​ ಬೆಲೆ ಎಸ್​ಯುವಿ ಕಾರಿಗೆ ಸಮ


ಇದು ಗಮನಿಸಬೇಕಾದ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ 7.21 ಲಕ್ಷ ರೂಪಾಯಿ ಬೆಲೆಯ ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಬೆಲೆಯು ರೆನಾಲ್ಟ್ ಕೈಗರ್ 5-ಸೀಟರ್ ಎಸ್​​ಯುವಿಗಿಂತ ಹೆಚ್ಚು ದುಬಾರಿಯಾಗಿದೆ. ಭಾರತದಲ್ಲಿ ರೆನಾಲ್ಟ್ ಕೈಗರ್ 5-ಸೀಟರ್ ಎಸ್ ಯು ವಿ 6.50 ಲಕ್ಷ ರೂಪಾಯಿಗಳ (ಎಕ್ಸ್ ಶೋ ರೂಂ) ಬೆಲೆ ಹೊಂದಿದೆ.
ಇದರರ್ಥ ಭಾರತದಲ್ಲಿ ಯೋಗ್ಯವಾದ ಎಸ್​ಯುವಿ ಪಾಕಿಸ್ತಾನದಲ್ಲಿ ದೊರೆಯುವ ಒಂದು ಉತ್ತಮವಾದ ಆ್ಯಪಲ್ ಐಫೋನ್​​ಗಿಂತ ಸುಮಾರು 70,000 ರೂಪಾಯಿಗಳಷ್ಟು ಅಗ್ಗವಾಗಿದೆ. ಇದು ಪಾಕಿಸ್ತಾನದ ಪರಿಸ್ಥಿತಿಯನ್ನು ತೋರಿಸುತ್ತದೆ.


ಐಫೋನ್​ 14 ಪ್ರೋ ಮ್ಯಾಕ್ಸ್​ ಫೀಚರ್ಸ್

top videos


  ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ A16 ಬಯೋನಿಕ್ ಚಿಪ್‌ನಿಂದ ನಡೆಸಲ್ಪಡುವ ಮೊದಲ ಮಾಡೆಲ್ ಆಗಿದೆ ಮತ್ತು ಇದು 48MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಆ್ಯಪಲ್ ಐಫೋನ್ 14 ಪ್ರೊ ಮ್ಯಾಕ್ಸ್ ಸುಂದರವಾದ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ -ಡೀಪ್ ಪರ್ಪಲ್, ಗೋಲ್ಡ್, ಸಿಲ್ವರ್ ಮತ್ತು ಸ್ಪೇಸ್ ಬ್ಲ್ಯಾಕ್. ಗ್ರಾಹಕರು ತಮಗೆ ಇಷ್ಟವಾದ ಬಣ್ಣದ ಐಫೋನ್ ಅನ್ನು ಆಯ್ಕೆ ಮಾಡಬಹುದು.

  First published: