ನೂತನ ‘ಐಫೋನ್​ 11‘ ಮೊಬೈಲ್​ ಹೇಗಿದೆ ಗೊತ್ತಾ..?

Harshith AS | news18
Updated:March 30, 2019, 6:28 PM IST
ನೂತನ ‘ಐಫೋನ್​ 11‘ ಮೊಬೈಲ್​ ಹೇಗಿದೆ ಗೊತ್ತಾ..?
ಐಫೋನ್​ 11
Harshith AS | news18
Updated: March 30, 2019, 6:28 PM IST
ವಿಶ್ವದಾದ್ಯಂತ ತನ್ನದೇ ಆದ ಸ್ಥಾನವನ್ನು ಗಿಟ್ಟಿಸಿದ ಆ್ಯಪಲ್​ ಸಂಸ್ಥೆ, ಇದೀಗ ಹೊಸದಾದ ಮೊಬೈಲ್​ ಒಂದನ್ನು ಪರಿಚಯಿಸಲು ಮುಂದಾಗಿದೆ. ಗ್ರಾಹರಿಗಾಗಿ ಬಹಳ ನಿರೀಕ್ಷೆ ಮಟ್ಟದಲ್ಲಿ ತಯಾರಾಗುತ್ತಿರುವ ನೂತನ ‘ಐಫೋನ್​ 11‘ ಮೊಬೈಲ್​ ಫೋನ್​ ಮಾರುಕಟ್ಟೆಯಲ್ಲಿ ಇತಿಹಾಸ ನಿರ್ಮಿಸುದರಲ್ಲಿ ಯಾವುದೇ ಸಂಶಯವಿಲ್ಲ.

ಆ್ಯಪಲ್​ ಸಂಸ್ಥೆ  ಬಿಡುಗೊಳಿಸುತ್ತಿರುವ ನೂತನ ‘ಐಫೋನ್​11‘ ಹೇಗಿರಲಿದೆ ಎಂಬ ಸಂಶಯ ಗ್ರಾಹಕರ ಮನಸಲ್ಲಿ ಮೂಡುತ್ತಿದ್ದಾಗ, ಸಾಮಾಜಿಕ ಜಾಲತಾಣದಲ್ಲಿ ‘ಐಫೋನ್​ 11‘ ಮೊಬೈಲ್​​ನ​ ಫೋಟೋವೊಂದು ಹೊರಬಿದ್ದಿದೆ.

ಇದನ್ನೂ ಓದಿ: ರಾಜ್ಯ ಚುನಾವಣಾ ರಣರಂಗಕ್ಕೆ ರಾಹುಲ್​ ಗಾಂಧಿ; ನಾಳೆ ಮೈತ್ರಿ ಪಕ್ಷಗಳ ಬೃಹತ್​ ಸಮಾವೇಶ

ಗ್ರಾಹಕರ  ಕುತೂಹಲತೆಗೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಐಫೋನ್​ 11‘ ಮೊಬೈಲ್​ನಲ್ಲಿ ತ್ರಿವಳಿ ಕ್ಯಾಮೆರಾ ಮೇಲ್ನೊಟಕ್ಕೆ ಎದ್ದುಕಾಣುತ್ತಿದ್ದು, ಇದರ ಬೆಲೆಯ ಕುರಿತು ಮತ್ತಷ್ಟು ಸಂದೇಶಗಳು ಹರಿದಾಡುತ್ತಿದೆ.

ಟ್ವಿಟ್ಟರ್​ನಲ್ಲಿ ಪ್ರಕಟವಾದ ಐಫೋನ್​ 11 ಮೊಬೈಲ್​ ಡ್ಯುಯೆಲ್​ ಫ್ಲಾಶ್​ ಲೈಟ್​​ ಅನ್ನು ಹೊಂದಿದೆ. ಅಧಿಕೃತವಾಗಿ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿರುವ ಐಫೋನ್​11 ಚಿತ್ರವೆಂದು ಆ್ಯಪಲ್​ ಕಂಪೆನಿ ದೃಢೀಕರಿಲ್ಲವಾದರೂ, ಸ್ಲಾಶ್​ ಲೀಕ್ಸ್​ ಪ್ರಕಾರ ಸೋರಿಕೆಯಾದ ಈ ಚಿತ್ರ ಐಫೋನ್​ XR ಆಗಿರಬಹುದು ಎಂದು ಹೇಳಿದೆ.

First published:March 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ