ಸ್ಮಾರ್ಟ್ಫೋನ್ಗಳು (Smartphones) ಇಂದಿನ ದಿನದಲ್ಲಿ ವ್ಯಾಪಕವಾಗಿ ಬೆಳವಣಿಗೆಯಾಗತ್ತಿದೆ. ಇದಕ್ಕೆ ಕಾರಣ ಇದರ ಫೀಚರ್ಸ್ಗಳು ಅಂತಾನೇ ಹೇಳ್ಬಹುದು. ಹೆಚ್ಚಿನ ಜನರು ಸ್ಮಾರ್ಟ್ಫೋನ್ಗಳನ್ನು ಖರೀದಿಸುವಾಗ ಅದರ ಫೀಚರ್ಸ್ಗಳನ್ನು ನೋಡಿಕೊಂಡು ಖರೀದಿ ಮಾಡ್ತಾರೆ. ಆದರೆ ಮೊಬೈಲ್ಗಳನ್ನು (Mobile) ಖರೀದಿಸುವಾಗ ಅದರ ಫೀಚರ್ಸ್ ಜೊತೆಗೆ ಬೆಲೆಯನ್ನು ಅಂದಾಜಿಸಬೇಕು. ಆದರೆ ಕೆಲವೊಬ್ಬರಿಗೆ ಇತ್ತೀಚಿನ ಸ್ಮಾರ್ಟ್ಫೋನ್ಗಳಲ್ಲಿರುವ ಕೆಲವೊಂದು ಫೀಚರ್ಸ್ಗಳ ಬಗ್ಗೆ ಮಾಹಿತಿಯೇ ಗೊತ್ತಿರಲ್ಲ. ಇದರಿಂದ ನಮಗೇನು ಪ್ರಯೋಜನ ಅಂದುಕೊಂಡಿರುತ್ತಾರೆ. ಆದರೆ ಕೆಲವು ಫೀಚರ್ಸ್ಗಳು ಬಳಕೆದಾರರಿಗೆ ಗೊತ್ತಿಲ್ಲದ ಹಾಗೆಯೇ ಹಿಂಬದಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಅದೇ ರೀತಿ ಮೊಬೈಲ್, ಸ್ಮಾರ್ಟ್‌ವಾಚ್‌ಗಳಲ್ಲಿ ಬರುವಂತಹ ಐಪಿ ರೇಟಿಂಗ್ (IP Rating) ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.
ಸಾಮಾನ್ಯವಾಗಿ ಇತ್ತೀಚಿನ ಸ್ಮಾರ್ಟ್‌ಫೋನ್, ಸ್ಮಾರ್ಟ್ವಾಚ್ಗಳೆಲ್ಲವೂ ಐಪಿ ರೇಟಿಂಗ್ನಂತಹ ಫೀಚರ್ಸ್ಗಳನ್ನು ಒಳಗೊಂಡಿದೆ. ಆದರೆ ಹೀಗಂದ್ರೆ ಏನು?,ಇದರ ಪ್ರಯೋಜನಗಳೇನು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಇದಕ್ಕೆಲ್ಲಾ ಉತ್ತರ ಸಿಗ್ಬೇಕಾದ್ರೆ ಈ ಲೇಖನವನ್ನೊಮ್ಮೆ ಓದಿ.
ಐಪಿ ರೇಟಿಂಗ್ ಎಂದರೇನು?
ಐಪಿ ರೇಟಿಂಗ್ ಎಂದರೆ ಸಂಕ್ಷಿಪ್ತವಾಗಿ ಇನ್‌ಗ್ರೆಸ್ ಪ್ರೊಟೆಕ್ಷನ್ ರೇಟಿಂಗ್ ಎಂದು ಹೆಸರಿಸಲಾಗಿದೆ. ಅಂದರೆ ನಿಮ್ಮ ಡಿವೈಸ್ ಅನ್ನು ಧೂಳು, ನೀರು ಮತ್ತು ಇತರೆ ವಸ್ತುಗಳಿಂದ ರಕ್ಷಣೆಯನ್ನು ನೀಡುತ್ತದೆ. ನಿಮ್ಮ ಮೊಬೈಲ್ ಹೊಂದಿರುವ ಐಪಿ ರೇಟಿಂಗ್ ಆಧಾರದ ಮೇಲೆ ನಿಮ್ಮ ಮೊಬೈಲ್‌ನ ರಕ್ಷಣೆ ಯಾವ ಪ್ರಮಾಣದಲ್ಲಿ ಅನ್ನೋದನ್ನು ಅರಿತುಹೊಳ್ಳಬಹುದಾಗಿದೆ. ಹೆಚ್ಚಿನ ಅಂಕಿ ಸಂಖ್ಯೆಯ ಐಪಿ ರೇಟಿಂಗ್ ಹೊಂದಿದ್ದಷ್ಟು ನಿಮ್ಮ ಫೋನ್ ಡಿವೈಸ್ ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ.
ಇದನ್ನೂ ಓದಿ: ಬಂದೇ ಬಿಡ್ತು ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಬೈಕ್! ವಿನ್ಯಾಸ ನೋಡಿದ್ರೆ ಖರೀದಿಸೋದು ಗ್ಯಾರಂಟಿ
ಸ್ಮಾರ್ಟ್‌ಫೋನ್ ಅನ್ನು ಹೇಗೆ ರಕ್ಷಿಸುತ್ತದೆ?
ಸ್ಮಾರ್ಟ್‌ಫೋನ್‌ನಲ್ಲಿ ಐಪಿ ರೇಟಿಂಗ್ ಮೊದಲ ಅಂಕಿಯು 0 ರಿಂದ 6 ರವರೆಗೆ ಇರುತ್ತದೆ. ಇದು ನಿಮ್ಮ ಡಿವೈಸ್ ಅನ್ನು ಘನ ವಸ್ತುಗಳ ವಿರುದ್ಧ ರಕ್ಷಣೆ ಮಾಡುವ ಮಟ್ಟವನ್ನು ಸೂಚಿಸುತ್ತದೆ. ಎರಡನೇ ಅಂಕಿಯು 0 ರಿಂದ 9 ರವರೆಗೆ ಇರಲಿದ್ದು, ನೀರಿನ ವಿರುದ್ದ ಹೊಂದಿರುವ ಸೆಕ್ಯುರ್ ಲೆವೆಲ್ ಅನ್ನು ಸೂಚಿಸಲಿದೆ. ಅಂದರೆ ನಿಮ್ಮ ಫೋನ್ IP67 ರೇಟಿಂಗ್ ಹೊಂದಿದೆ ಎಂದರೆ ಹೆಚ್ಚಿನ ಧೂಳು ಮತ್ತು ನೀರಿನಲ್ಲಿ ಒಂದು ಮೀಟರ್‌ವರೆಗೆ 30 ನಿಮಿಷಗಳ ಕಾಲ ಇದ್ದರೂ ಪ್ರೊಟೆಕ್ಷನ್ ನೀಡುತ್ತದೆ.
IP ರೇಟಿಂಗ್‌ಗಳ ವಿಧಗಳು ಯಾವುವು?
ನಿಮ್ಮ ಡಿವೈಸ್‌ಗಳನ್ನು ಧೂಳು ಮತ್ತು ನೀರಿನಿಂದ ರಕ್ಷಿಸಬಲ್ಲ ಐಪಿ ರೇಟಿಂಗ್‌ಗಳು ತಮ್ಮ ಸ್ಮಾರ್ಟ್ಫೋನ್ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ರೀತಿಯಲ್ಲಿ ವಿಭಾಗಿಸಲಾಗಿದೆ. ಒಂದೊಂದು ಐಪಿ ರೇಟಿಂಗ್ ಕೂಡ ವಿಭಿನ್ನ ಮಟ್ಟದ ರಕ್ಷಣೆಯನ್ನು ಒದಗಿಸಲಿದೆ. ಪ್ರಸ್ತುತ ನೀವು ತಿಳಿದುಕೊಳ್ಳಬೇಕಾದ ವಿವಿಧ ಐಪಿ ರೇಟಿಂಗ್‌ಗಳ ವಿವರಗಳನ್ನು ಕೆಳಗಿನ ಹಂತಗಳಲ್ಲಿ ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ