Tech Tips: ನಿಮ್ಮ ಆಧಾರ್, ಪ್ಯಾನ್, ಡ್ರೈವಿಂಗ್ ಲೈಸೆನ್ಸ್ ಹಾಳಾಗದಂತೆ ಕಾಪಾಡಿಕೊಳ್ಳಲು ಹೀಗೆ ಮಾಡಿ

ಆಧಾರ್ ಕಾರ್ಡ್​ ಮತ್ತು ಪ್ಯಾನ್​ ಕಾರ್ಡ್​

ಆಧಾರ್ ಕಾರ್ಡ್​ ಮತ್ತು ಪ್ಯಾನ್​ ಕಾರ್ಡ್​

ಕೆಲವೊಂದು ಬಾರಿ ನಮ್ಮ ಅಗತ್ಯ ದಾಖಲೆಗಳನ್ನು ಪರ್ಸ್ ನಲ್ಲಿ ಅಥವಾ ಬ್ಯಾಗ್​ನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಕೆಲವೊಮ್ಮೆ ಹಾಗೆ ಇಟ್ಟುಕೊಳ್ಳಲು ಮರೆತರೆ ಇನ್ನೊಂದು ರೀತಿಯಲ್ಲಿ ನೀವು ಇವುಗಳನ್ನು ಜೋಪಾನ ಮಾಡಿಕೊಂಡು ನಿಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳಬಹುದು. ಹೇಗೆ ಎಂಬುದನ್ನು ತಿಳಿಬೇಕಾದರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
  • Share this:

    ಯಾವುದೇ ಒಬ್ಬ ವ್ಯಕ್ತಿ ತನ್ನ ದ್ವಿಚಕ್ರ ವಾಹನ ಅಥವಾ ಕಾರಿನಲ್ಲಿ ಕುಳಿತು ಮನೆಯಿಂದ ಆಚೆ ಕಾಲಿಟ್ಟರೆ, ಮೊದಲು ಅವರು ತಮ್ಮ ಜೇಬಿನಲ್ಲಿ ಪರ್ಸ್ ಇದೆಯೋ ಇಲ್ಲವೋ ಅಂತ ಮುಟ್ಟಿಕೊಂಡು ನೋಡುತ್ತಾರೆ. ಏಕೆಂದರೆ ಅದರಲ್ಲಿ ಇಟ್ಟಿರುವ ಡ್ರೈವಿಂಗ್ ಲೈಸೆನ್ಸ್ (Driving License) ತುಂಬಾನೇ ಮುಖ್ಯವಾಗಿರುತ್ತದೆ. ಹೊರಗಡೆ ಹೋದಾಗ ನಮ್ಮ ವಾಹನ ತಡೆದು ನಿಲ್ಲಿಸಿ ಟ್ರಾಫಿಕ್ ಪೊಲೀಸರು (Traffic Police) ವಾಹನದ ದಾಖಲೆಗಳನ್ನು ಪರಿಶೀಲಿಸಿದರೆ, ನೋಡುವುದೇ ಡ್ರೈವಿಂಗ್ ಲೈಸೆನ್ಸ್ ಅಂತ ಹೇಳಬಹುದು. ಅಲ್ಲದೆ ಈಗ ನಮಗೆ ಆಧಾರ್ ಕಾರ್ಡ್ (Adhar Card) ಮತ್ತು ಪ್ಯಾನ್ ಕಾರ್ಡ್ ಸಹ ತುಂಬಾನೇ ಮುಖ್ಯವಾದ ದಾಖಲೆಗಳು ಆಗಿವೆ ಅಂತ ಹೇಳಬಹುದು.


    ಎಲ್ಲದರ ಒಂದೊಂದು ಪ್ರತಿಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಕೆಲವೊಮ್ಮೆ ಹಾಗೆ ಇಟ್ಟುಕೊಳ್ಳಲು ಮರೆತರೆ ಇನ್ನೊಂದು ರೀತಿಯಲ್ಲಿ ನೀವು ಇವುಗಳನ್ನು ಜೋಪಾನ ಮಾಡಿಕೊಂಡು ನಿಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳಬಹುದು.


    ಕೇಂದ್ರ ಸಚಿವೆ ಬಜೆಟ್ ನಲ್ಲಿ ಡಿಜಿಲಾಕರ್ ಬಗ್ಗೆ ಏನ್ ಹೇಳಿದ್ರು?


    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 2023 ರ ಬಜೆಟ್ ಯೋಜನೆಯಲ್ಲಿ ಡಿಜಿಲಾಕರ್ ಬಗ್ಗೆ ಮಾತನಾಡಿದ್ದು ನಮಗೆಲ್ಲಾ ಗೊತ್ತೇ ಇದೆ. ಈ ಅಪ್ಲಿಕೇಶನ್ ಬಹಳ ಮುಖ್ಯ. ಏಕೆಂದರೆ ನೀವು ಈ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ಫೋನ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ, ಅದರಲ್ಲಿ ನಿಮ್ಮ ಪ್ರಮುಖ ದಾಖಲೆಗಳ ಹಾರ್ಡ್ ಕಾಪಿಯನ್ನು ನೀವು ಇಟ್ಟುಕೊಳ್ಳುವ ಅಗತ್ಯವಿಲ್ಲ.


    ಇದನ್ನೂ ಓದಿ: ಅಪಾಯಕಾರಿ ಆ್ಯಪ್‌ಗಳ ಮೇಲೆ ಗೂಗಲ್ ಹದ್ದಿನಕಣ್ಣು, 12 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಡಿಲೀಟ್!


    ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಇತರ ಯಾವುದೇ ಡಾಕ್ಯುಮೆಂಟ್ ಅನ್ನು ನಿಮ್ಮ ಮೊಬೈಲ್ ಫೋನ್ ನಲ್ಲಿ ಡೌನ್ಲೋಡ್ ಮಾಡಬಹುದು. ಇದು ಶೇಕಡಾ 100 ರಷ್ಟು ಮಾನ್ಯವಾಗಿದೆ ಮತ್ತು ಈ ದಾಖಲೆಗಳನ್ನು ಸ್ವೀಕರಿಸುವುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.


    ಈ ಅಪ್ಲಿಕೇಶನ್ ಪಾಸ್​ವರ್ಡ್​ ಅನ್ನು ಡಿಜಿಟಲ್ ರೂಪದಲ್ಲಿ ರಕ್ಷಿಸಲಾಗಿದೆ ಮತ್ತು ಆದ್ದರಿಂದ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆಧಾರ್ ಕಾರ್ಡ್, ಪ್ಯಾನ್ ಮತ್ತು ಡ್ರೈವಿಂಗ್ ಲೈಸೆನ್ಸ್ ಕೆಲವೊಮ್ಮೆ ಹರಿದು ಹೋಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ, ಇದು ಸಾಕಷ್ಟು ಉಪಯುಕ್ತತೆಯನ್ನು ಹೊಂದಿದೆ. ಈ ದಾಖಲೆಗಳನ್ನು ಸುರಕ್ಷಿತವಾಗಿಡಲು ಏನು ಮಾಡಬೇಕು ಎಂಬುದು ಇಲ್ಲಿದೆ ನೋಡಿ.


    ಡಿಜಿಲಾಕರ್ ಖಾತೆಯನ್ನು ಹೇಗೆ ರಚಿಸುವುದು?


    ಡಿಜಿಲಾಕರ್ ವೆಬ್ಸೈಟ್ ಗೆ ಹೋಗಿ ಮತ್ತು ಸೈನ್ಅಪ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಲ್ಲಿ ಹಾಕಿ. ನಿಮ್ಮ ಪಾಸ್​ವರ್ಡ್ ಹೊಂದಿಸಿ ಮತ್ತು ನಿಮ್ಮ ಖಾತೆಯನ್ನು ರಚಿಸಿ. ಇದಕ್ಕಾಗಿ ನಿಮ್ಮ ಫೋನ್ ಸಂಖ್ಯೆಯನ್ನು ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಬೇಕು. ಡಿಜಿಲಾಕರ್ ನಲ್ಲಿ ಆಧಾರ್ ಕಾರ್ಡ್ ಸೇವ್ ಮಾಡುವುದು ಹೇಗೆ? ಅಂತೀರಾ.. ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


    ಆಧಾರ್ ಕಾರ್ಡ್​ ಮತ್ತು ಪ್ಯಾನ್​ ಕಾರ್ಡ್​


    ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ಹಾಕಿರಿ ಮತ್ತು ಆಧಾರ್ ಲಿಂಕ್ ಮಾಡಿದ ಫೋನ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಈಗ ನೀವು ನಿಮ್ಮ ಖಾತೆಯ ಡಿಜಿಟಲ್ ನಕಲನ್ನು ಪ್ರವೇಶಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು.


    ಡ್ರೈವಿಂಗ್ ಲೈಸೆನ್ಸ್ ಮತ್ತು ಪ್ಯಾನ್ ಕಾರ್ಡ್ ಗಳನ್ನು ಡಿಜಿಲಾಕರ್‌ಗೆ ಲಿಂಕ್ ಮಾಡುವುದು ಹೇಗೆ?


    ಇದಕ್ಕಾಗಿ, ಅಪ್ಲೋಡ್ ಮತ್ತು ಸಂಬಂಧಿತ ಡಾಕ್ಯುಮೆಂಟ್ ಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ನಿಮ್ಮ ದಾಖಲೆಗಳ ಫೋಟೋವನ್ನು ತೆಗೆದುಕೊಂಡು ನೇರವಾಗಿ ಅಪ್​​ಲೋಡ್​ ಮಾಡಬಹುದು. ನಿಮ್ಮ ಜನನ ಪ್ರಮಾಣ ಪತ್ರವನ್ನು ನೀವು ಡಿಜಿಲಾಕರ್ ನಲ್ಲಿ ಅಪ್​​ಲೋಡ್​ ಮಾಡಬಹುದು. ಅದೇ ಪ್ರಕ್ರಿಯೆಯನ್ನು ಬಳಸಿಕೊಂಡು ನೀವು ಅಂಕಪಟ್ಟಿ ಮತ್ತು ಪಾಸ್‌ಪೋರ್ಟ್ ಅನ್ನು ಸಹ ಸೇರಿಸಬಹುದು. ಆದಾಗ್ಯೂ, ವಿದೇಶಕ್ಕೆ ಪ್ರಯಾಣಿಸುವಾಗ, ನೀವು ಮೂಲ ಪಾಸ್‌ಪೋರ್ಟ್ ಅನ್ನು ಒಯ್ಯಬೇಕಾಗುತ್ತದೆ.




    ಡಿಜಿಲಾಕರ್ ಬಳಕೆದಾರರಿಗೆ ಸರ್ಕಾರಿ ಸಂಸ್ಥೆಗಳೊಂದಿಗೆ ದಾಖಲೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಕ್ಕಾಗಿ, ಉಳಿಸಿದ ದಾಖಲೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಡಾಕ್ಯುಮೆಂಟ್ ಅನ್ನು ನೀವು ಕಳುಹಿಸಲು ಬಯಸುವ ಫೋನ್ ಸಂಖ್ಯೆ ಅಥವಾ ಇ-ಮೇಲ್ ಐಡಿಯನ್ನು ಅಲ್ಲಿ ಟೈಪ್ ಮಾಡಿ ನಂತರ ‘ಸೆಂಡ್’ ಲಿಂಕ್ ಮೇಲೆ ಕ್ಲಿಕ್ ಮಾಡಿ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು