• Home
 • »
 • News
 • »
 • tech
 • »
 • Whatsapp Update: ವಾಟ್ಸಪ್​ನಲ್ಲಿ ಇನ್ಮುಂದೆ ಡು ನಾಟ್​ ಡಿಸ್ಟರ್ಬ್ ಮೋಡ್ ಆನ್​ ಮಾಡ್ಬಹುದು!

Whatsapp Update: ವಾಟ್ಸಪ್​ನಲ್ಲಿ ಇನ್ಮುಂದೆ ಡು ನಾಟ್​ ಡಿಸ್ಟರ್ಬ್ ಮೋಡ್ ಆನ್​ ಮಾಡ್ಬಹುದು!

ವಾಟ್ಸಪ್ ಅಪ್ಡೇಟ್

ವಾಟ್ಸಪ್ ಅಪ್ಡೇಟ್

ಈ ಡು ನಾಟ್ ಡಿಸ್ಟರ್ಬ್ ಫೀಚರ್ಸ್ ವಾಟ್ಸಪ್​ನಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ ಫೀಚರ್ ಆಗಿದೆ. ಇದನ್ನು ಆನ್ ಮಾಡಿದರೆ ನಿಮ್ಮ ವಾಟ್ಸಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಬೇಕಾದರೆ ಈ ಕೆಳಗಿನ ಮಾಹಿತಿಯನ್ನು ಓದಿ.

 • Share this:

  ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ (WhatsApp) ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದೀಗ ವಾಟ್ಸಪ್​ನಲ್ಲಿ  'ಡು ನಾಟ್ ಡಿಸ್ಟರ್ಬ್' (Do Not Disturb) ಎಂಬ ಹೊಸ ನವೀಕರಣವನ್ನು ಬಿಡುಗಡೆ ಮಾಡುತ್ತಿದೆ. ಸಾಮಾನ್ಯವಾಗಿ ಬಳಕೆದಾರರು ತಮ್ಮ ಫೋನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಮೋಡ್ ಅನ್ನು ಆನ್ ಮಾಡಿದಾಗ, ಫೋನ್ ಕರೆಗಳು ಮತ್ತು ಎಸ್​ಎಮ್​ಎಸ್​ (SMS) ನಂತಹ ಎಲ್ಲಾ ಎಚ್ಚರಿಕೆಗಳನ್ನು ಮ್ಯೂಟ್ (Mute) ಮಾಡಲಾಗುತ್ತದೆ. ಕರೆಗಳು (Call) ಬಂದಾಗ ಯಾವುದೇ ವೈಬ್ರೇಶನ್​ಗಳು, ಸ್ಕ್ರೀನ್ ಆನ್ ಆಗುವುದಿಲ್ಲ. ಹಾಗಾಗಿ ಈ ಮೋಡ್‌ನಲ್ಲಿರುವಾಗ ಫೋನ್ ಕರೆ ಬರುತ್ತಿದೆ ಎಂದು ತಿಳಿಯುವುದು ಅಸಾಧ್ಯ. ಆದ್ದರಿಂದ ಇನ್ನು ಮುಂದೆ ಈ ಫೀಚರ್ (Feature) ನಿಮ್ಮ ವಾಟ್ಸಪ್ ಅಕೌಂಟ್​ನಲ್ಲೂ ಬರಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.


  ಈ ಡು ನಾಟ್ ಡಿಸ್ಟರ್ಬ್ ಫೀಚರ್ಸ್ ವಾಟ್ಸಪ್​ನಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ ಫೀಚರ್ ಆಗಿದೆ. ಇದನ್ನು ಆನ್ ಮಾಡಿದರೆ ನಿಮ್ಮ ವಾಟ್ಸಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಬೇಕಾದರೆ ಈ ಕೆಳಗಿನ ಮಾಹಿತಿಯನ್ನು ಓದಿ.


  ಇದರ ಉದ್ದೇಶವೇನು?


  'ಡು ನಾಟ್ ಡಿಸ್ಟರ್ಬ್' ಮೋಡ್‌ ಅನ್ನು ಗೂಗಲ್ ವಾಟ್ಸಾಪ್ ಟ್ರ್ಯಾಕರ್ WABetaInfo  ಮೂಲಕ ಕೆಲವು ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಬಹಿರಂಗಪಡಿಸಿದೆ. ಈ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ: 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳ ವಿವರ ಇಲ್ಲಿದೆ


  ಸ್ಕ್ರೀನ್‌ಶಾಟ್‌ನಲ್ಲಿ, ವಾಟ್ಸಾಪ್ ಕರೆಗಳ ಟ್ಯಾಬ್‌ನಲ್ಲಿನ ಕಾಲ್ ಲೀಸ್ಟ್​ನಲ್ಲಿ 'ಸೈಲೆನ್ಸ್ಡ್ ಬೈ ಡು ನಾಟ್ ಡಿಸ್ಟರ್ಬ್' ಎಂದು ಹೇಳುವ ಮಾಹಿತಿಯನ್ನು  ಟ್ಯಾಗ್‌ಲೈನ್ ಮೂಲಕ ನೀಡುತ್ತದೆ.


  Do not disturb mode can be added on WhatsApp!
  ವಾಟ್ಸಪ್ ಡು ನಾಟ್ ಡಿಸ್ಟರ್ಬ್ ಅಪ್ಡೇಟ್


  ಈ ಕಾರಣದಿಂದಾಗಿ, ವಾಟ್ಸಾಪ್‌ನಲ್ಲಿ ಡು ನಾಟ್ ಡಿಸ್ಟರ್ಬ್ ಮೋಡ್ ಆನ್ ಆಗಿರುವುದರಿಂದ ಇದರ ಮೂಲಕ ಕರೆಯನ್ನು ಸ್ವೀಕರಿಸಲು  ಸಾಧ್ಯವಾಗದಿದ್ದರೆ, ವಾಟ್ಸಾಪ್ ಟ್ಯಾಗ್‌ಲೈನ್‌ನೊಂದಿಗೆ ಕಾರಣವನ್ನು ಬಳಕೆದಾರರಿಗೆ ತಿಳಿಸುತ್ತದೆ. ಆದ್ದರಿಂದ ಬಳಕೆದಾರರು ಈ ಸೂಚನೆಗಳನ್ನು ಕರೆ ಮಾಡಿದ ವ್ಯಕ್ತಿಗೆ ತೋರಿಸಬಹುದು ಮತ್ತು ಅವರು ಕರೆಯನ್ನು ಏಕೆ ಎತ್ತಲು ಸಾಧ್ಯವಾಗಲಿಲ್ಲ ಎಂದು ಅವರಿಗೆ ತಿಳಿಸಬಹುದು.


  ಡು ನಾಟ್ ಡಿಸ್ಟರ್ಬ್ ಅನ್ನು ಹೇಗೆ ಸೆಟ್ ಮಾಡುವುದು?
  ಈ ವೈಶಿಷ್ಟ್ಯವು ನಿಮ್ಮ ಖಾತೆಗೆ ಲಭ್ಯವಿದೆಯೇ ಎಂದು ಕಂಡುಹಿಡಿಯುವುದು ಸುಲಭ. ಇದಕ್ಕಾಗಿ ನೀವು ನಿಮ್ಮ ಫೋನ್ ಸೆಟ್ಟಿಂಗ್‌ಗಳಲ್ಲಿ ಡು ನಾಟ್ ಡಿಸ್ಟರ್ಬ್ ಮೋಡ್ ಅನ್ನು ಆನ್ ಮಾಡಬೇಕು. ಸ್ವಲ್ಪ ಸಮಯದ ನಂತರ ನಿಮ್ಮ ವಾಟ್ಸಪ್​ಗೆ ಕರೆ ಮಾಡಲು ಫ್ರೆಂಡ್ ಬಳಿ ಹೇಳಿ. ಆದರೆ ಆ ಕಾಲ್​ ಅನ್ನು ರಿಸೀವ್ ಮಾಡ್ಬಾರ್ದು. ಸ್ವಲ್ಪ ಸಮಯದ ನಂತರ, ನಿಮ್ಮ ವಾಟ್ಸಪ್ ಅಪ್ಲಿಕೇಶನ್​ನ ಕಾಲ್ ಹಿಸ್ಟರಿಯಲ್ಲಿ ನಿಮ್ಮ ಸ್ನೇಹಿತರ ಕಾಲ್ ಲೀಸ್ಟ್​ನಲ್ಲಿ 'ಸೈಲೆನ್ಸ್​ಡ್ ಬೈ  ಡು ನಾಟ್ ಡಿಸ್ಟರ್ಬ್ ' ಎಂಬುದನ್ನು ನೀವು ನೋಡಿದರೆ ಈ ಫೀಚರ್ ನಿಮ್ಮ ವಾಟ್ಸಪ್​ನಲ್ಲಿ ಅಪ್ಡೇಟ್ ಆಗಿದೆ ಎಂದರ್ಥ.


  Do not disturb mode can be added on WhatsApp!
  ವಾಟ್ಸಪ್ ಡು ನಾಟ್ ಡಿಸ್ಟರ್ಬ್ ಅಪ್ಡೇಟ್


  ಈ ಫೀಚರ್ ಕರೆಯನ್ನು ನೀಡಿದ, ಸ್ವೀಕರಿಸಿದ ಬಳಕೆದಾರರಿಗೆ ಮಾತ್ರ ಬರುತ್ತದೆ. ನಿಮ್ಮ ಫೋನ್‌ನಲ್ಲಿ ಡು ನಾಟ್ ಡಿಸ್ಟರ್ಬ್ ಮೋಡ್ ಅನ್ನು ಇನೇಬಲ್ ಮಾಡುವ ಮೂಲಕ ಇತರ ವ್ಯಕ್ತಿಗೆ ಕರೆಯನ್ನು ಮಿಸ್ ಮಾಡಿದ್ದಾರೆ ಎಂದು ತಿಳಿಯದಂತೆ ಮಾಡಬಹುದು.


  ಯಾವೆ್ಲ್ಲಾ ವರ್ಷನ್​ನಲ್ಲಿ ಲಭ್ಯವಿದೆ?


  ಸದ್ಯಕ್ಕೆ ವಾಟ್ಸಪ್​​ನ ಈ ಫೀಚರ್  ಆಂಡ್ರಾಯ್ಡ್ 2, 22, 24, 17 ವರ್ಷನ್​ನಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ, ಆದ್ದರಿಂದ ಸಾಮಾನ್ಯ ಬಳಕೆದಾರರು ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಈ  ಫೀಚರ್ ವಾಟ್ಸಪ್​ನಲ್ಲಿ ಬಿಡುಗಡೆಯಾದ ಹೊಸ ಫೀಚರ್​ ಆಗಿದೆ. ಇತ್ತೀಚೆಗೆ ವಾಟ್ಸಪ್ ಬಹಳಷ್ಟು ಅಪ್ಡೇಟ್  ಅನ್ನು ಮಾಡುತ್ತಿದ್ದು ಅದ್ರಲ್ಲಿ ಇದೂ ಒಂದಾಗಿದೆ.

  First published: