Online Shopping Scams: ದೀಪಾವಳಿ ಸೇಲ್ಗೆ ಮುಗಿಬಿದ್ದು ಹಣ ಕಳ್ಕೋಬೇಡಿ…ಎಚ್ಚರ!
Online Shoping: ದೀಪಾವಳಿ ಮಾರಾಟದ ಸಮಯದಲ್ಲಿ ಖರೀದಿದಾರರು ಆನ್ಲೈನ್ ಶಾಪಿಂಗ್ ಹಗರಣಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಆನ್ಲೈನ್ ಶಾಪಿಂಗ್ ಮಾಡುವಾಗ ಈ ಟಾಪ್ 10 ಸಲಹೆಗಳನ್ನು ಅನುಸರಿಸಿ.
ದೀಪಾವಳಿ ಹಬ್ಬದ ಸಡಗರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಹೀಗಿರುವಾಗ ಹಲವು ಆನ್ಲೈನ್ ಶಾಪಿಂಗ್ (Online Shoping) ಫ್ಲಾಟ್ಫಾರ್ಮ್ಗಳು ಹಬ್ಬದ ಸಲುವಾಗಿ ಕೆಲವು ವಸ್ತುಗಳ ಮೇಲೆ ಆಕರ್ಷಕ ಆಫರ್ ಜೊತೆಗೆ ಕೊಡುಗೆ ನೀಡುತ್ತಿದೆ. ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅಮೆಜಾನ್ (Amazon) , ಫ್ಲಿಪ್ಕಾರ್ಟ್ (Flipkart), ಶಾಪ್ಕ್ಲೂಸ್ (shopclues) ಮತ್ತು ಇತರ ಇ-ಕಾಮರ್ಸ್ ಸೈಟ್ಗಳು ಕೆಲವು ಭವ್ಯವಾದ ಅವಕಾಶಗಳನ್ನು ಒದಗಿಸುತ್ತಿದೆ. ಮೊಬೈಲ್ಗಳು (Mobiles), ಟಿವಿಗಳು (Tv), ಲ್ಯಾಪ್ಟಾಪ್ಗಳು (Laptop), ಧರಿಸಬಹುದಾದ ವಸ್ತುಗಳು, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು, ಬಟ್ಟೆಗಳನ್ನು ಅನೇಕ ವೆಬ್ಸೈಟ್ಗಳು ಉಚಿತಗಳ ಜೊತೆಗೆ ಬೆಲೆಗಳಲ್ಲಿ ಭಾರಿ ಕಡಿತವನ್ನು ಘೋಷಿಸಿ ಮಾರುತ್ತಿದೆ. ಈ ಡೀಲ್ಗಳು ಅದ್ಭುತವಾಗಿದ್ದರೂ, ಆನ್ಲೈನ್ ಶಾಪಿಂಗ್ ಮಾಡುವ ಗ್ರಾಹಕರು ಎಚ್ಚರದಿಂದ ಖರೀದಿಸುವುದು ಒಳಿತು. ಅದರಲ್ಲೂ ಖರೀದಿದಾರರು ಬ್ಯಾಂಕ್ ಖಾತೆ ಮೂಲಕ ಎಲ್ಲಿ ಲಾಗ್ ಇನ್ ಮಾಡುತ್ತೇವೆ ಮತ್ತು ಹೇಗೆ ಪಾವತಿ ಮಾಡುತ್ತೇವೆ ಎಂಬುದರ ಬಗ್ಗೆ ಬಹಳ ಎಚ್ಚರಿಕೆ ಅಗತ್ಯ, ಕೆಲವೊಮ್ಮೆ ಸೈಬರ್ ಅಪರಾಧಿಗಳ ಮೂಲಕ ಹಣವನ್ನು ಕಳೆದುಕೊಳ್ಳುವ ಪ್ರಸಂಗ ಬರಬಹುದು.
ದೀಪಾವಳಿ ಹಬ್ಬದ ಸಡಗರದಲ್ಲಿರುವ ಅನೇಕರು ಕಡಿಮೆ ಬೆಲೆ, ಆಫರ್ಗಳನ್ನು ಕಂಡು ಮುಗಿಬೀಳುತ್ತಾರೆ. ಆದರೆ ಆನ್ಲೈನ್ ಶಾಪಿಂಗ್ ವೇಳೆ ಎಷ್ಟು ಜಾಗರೂಕರಾಗಿದ್ದರು ಅಷ್ಟೇ, ಹಾಗಾಗಿ ಶಾಪಿಂಗ್ ಮಾಡುವಾಗ ಹಣವನ್ನು ಹೇಗೆ ಕಳೆದುಕೊಳ್ಳದಂತೆ ಮತ್ತು ಜಾಗರೂಕರಾಗಿರುವಂತೆ ಇರಲು ಗ್ರಾಹಕರಿಗೆ ಕೆಲವು ಟಿಪ್ಸ್ ಇಲ್ಲಿ ನೀಡಲಾಗಿದೆ.
ಆನ್ಲೈನ್ ಶಾಪಿಂಗ್ ಮಾಡುವಾಗ ಸುರಕ್ಷಿತವಾಗಿರುವುದು ಹೇಗೆ - ಟಾಪ್ 10 ಸಲಹೆಗಳು
ದೀಪಾವಳಿ ಮಾರಾಟದ ಸಮಯದಲ್ಲಿ ಖರೀದಿದಾರರು ಆನ್ಲೈನ್ ಶಾಪಿಂಗ್ ಹಗರಣಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಆನ್ಲೈನ್ ಶಾಪಿಂಗ್ ಮಾಡುವಾಗ ಈ ಟಾಪ್ 10 ಸಲಹೆಗಳನ್ನು ಅನುಸರಿಸಿ.