TVS Festive offers: ಈಗ ಖರೀದಿಸಿ ನಂತರ ಪಾವತಿಸಿ; Ntorq 125 ಸ್ಕೂಟರ್​ ಮೇಲೆ ಕ್ಯಾಶ್​ಬ್ಯಾಕ್​ ಆಫರ್​

BS6 TVS Ntorq 125: ಟಿವಿಎಸ್​ ಮೋಟಾರ್​ ಕಂಪನಿ ‘ಈಗ ಖರೀದಿಸಿ ನಂತರ ಪಾವತಿಸಿ’ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಐಸಿಐಸಿಐ ಮತ್ತು ಬ್ಯಾಂಕ್​ ಆಫರ್​ ಬರೋಡಾ ಕ್ರೆಡಿಟ್​ ಅಥವಾ ಡೆಬಿಟ್​ ಕಾರ್ಡ್​ ಬಳಸಿ ಖರೀದಿಸಿದರೆ ಶೇ.5ರಷ್ಟು ಕ್ಯಾಶ್​ಬ್ಯಾಕ್​ ಆಫರ್​ ನೀಡುತ್ತಿದೆ.

ಟಿವಿಎಸ್​ ಎನ್​ಟಾರ್ಕ್​125

ಟಿವಿಎಸ್​ ಎನ್​ಟಾರ್ಕ್​125

  • Share this:
    ದೀಪಾವಳಿ ಹಬ್ಬದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಹಬ್ಬದ ಪ್ರಯುಕ್ತ ಅನೇಕ ಕಂಪನಿಗಳು ಗ್ರಾಹಕರಿಗಾಗಿ ಸ್ಪೆಷಲ್​ ಆಫರ್​ ನೀಡುವ ಮೂಲಕ ತಮ್ಮತ್ತ ಸೆಳೆದುಕೊಳ್ಳುತ್ತಿವೆ. ಅದರಂತೆ ಇದೀಗ ಟಿವಿಎಸ್​ ಮೋಟಾರ್​ ಕಂಪನಿ ಎನ್​ಟಾರ್ಕ್​ 125 ಸ್ಕೂಟರ್​ ಮೇಲೆ ಆಕರ್ಷಕ ಡಿಸ್ಕೌಂಟ್​ ಹೊರಡಿಸಿದ್ದು, ಕಡಿಮೆ ಬೆಲೆಗೆ ಖರೀದಿಸುವಂತೆ ಅವಕಾಶವನ್ನು ಮಾಡಿಕೊಟ್ಟಿದೆ.

    ಟಿವಿಎಸ್​ ಮೋಟಾರ್​ ಕಂಪನಿ ‘ಈಗ ಖರೀದಿಸಿ ನಂತರ ಪಾವತಿಸಿ’ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಐಸಿಐಸಿಐ ಮತ್ತು ಬ್ಯಾಂಕ್​ ಆಫರ್​ ಬರೋಡಾ ಕ್ರೆಡಿಟ್​ ಅಥವಾ ಡೆಬಿಟ್​ ಕಾರ್ಡ್​ ಬಳಸಿ ಖರೀದಿಸಿದರೆ ಶೇ.5ರಷ್ಟು ಕ್ಯಾಶ್​ಬ್ಯಾಕ್​ ಆಫರ್​ ನೀಡುತ್ತಿದೆ.

    ಜೊತೆಗೆ ಕಂಪನಿ ತಿಂಗಳಿಗೆ 2,100 ರೂ.ವಿನ ಇಎಮ್​ಐ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಮೊದಲು ಮೂರು ತಿಂಗಳು ಶೇ.50ರಷ್ಟು ಇಎಮ್​ಐ ಆಯ್ಕೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.

    ಟಿವಿಎಸ್​ ಎನ್​ಟಾರ್ಕ್​125 ಸ್ಕೂಟರ್​ ಬೆಲೆ 68,885 ರೂ ಆಗಿದೆ. ಡ್ರಮ್​ ಬ್ರೇಕ್​ ಒರಿಯಂಟೆಡ್​ ಮತ್ತು ಡಿಸ್ಕ್​ ಟ್ರಿಮ್​ ಹೊಂದಿರುವ ಸ್ಕೂಟರ್​ 72,885 ರೂ.ಗೆ ಸಿಗಲಿದೆ. ಇತ್ತೀಚೆಗೆ ಕಂಪನಿ ಸೂಪರ್​​ ಸ್ಕ್ಯಾಡ್​​ ಎಡಿಷನ್​ನಲ್ಲಿ ಎನ್​ಟಾರ್ಕ್​ 125 ಸ್ಕೂಟರ್​ ಪರಿಚಯಿಸಿದೆ. ಇದರ ಬೆಲೆ 77,865 ರೂ ಆಗಿದೆ.
    Published by:Harshith AS
    First published: