Toyota cars: ಭರ್ಜರಿ ಆಫರ್​ ಹೊರಡಿಸಿದ ಟೊಯೊಟಾ ಸಂಸ್ಥೆ; ಡಿಸ್ಕೌಂಟ್​ ಬೆಲೆಗೆ ಪೆಟ್ರೋಲ್​, ಡೀಸೆಲ್​ ಕಾರುಗಳು

Toyota cars: ಈಗಾಗಲೇ ಕೆಲವು ಕಾರು ಕಂಪನಿಗಳು ಹಬ್ಬದ ಪ್ರಯುಕ್ತ ಗ್ರಾಹಕನ್ನು ಸೆಳೆಯುವ ಸಲುವಾಗಿ ಆಫರ್​ ಹೊರಡಿಸಿದೆ. ಅದರಂತೆ ಟೊಯೊಟಾ ಸಂಸ್ಥೆ ಕೆಲವು ಕಾರುಗಳನ್ನು ಆಫರ್​ ಬೆಲೆಗೆ ಮಾರುತ್ತಿದೆ. 

ಇನೊವಾ ಕ್ರಿಸ್ಟಾ

ಇನೊವಾ ಕ್ರಿಸ್ಟಾ

 • Share this:
  ದೀಪಾವಳಿ ಹಬ್ಬದ ಸಲುವಾಗಿ ಟೊಯೊಟಾ ಸಂಸ್ಥೆ ಕೆಲವು ಕಾರುಗಳ ಮೇಲೆ ಆಫರ್ ಹೊರಡಿಸಿದೆ. ಇನೋವಾ ಕ್ರಿಸ್ಟಾ, ಯಾರಿಸ್​, ಗ್ಲಾಂಜಾ ಮತ್ತು ಅರ್ಬನ್​​ ಕ್ರೂಶರ್​ ಕಾರಿನ ಮೇಲೆ ಡಿಸ್ಕೌಂಟ್​ ನೀಡಿದೆ. ಅಷ್ಟು ಮಾತ್ರವಲ್ಲದೆ, ಕ್ಯಾಶ್​ ಡಿಸ್ಕೌಂಟ್​, ಎಕ್ಸ್​ಚೇಂಜ್​ ಬೋನಸ್​, ಕಾರ್ಪೊರೇಟ್​ ಡಿಸ್ಕೌಂಟ್​ ನೀಡಿದೆ. ಈಗಾಗಲೇ ಕೆಲವು ಕಾರು ಕಂಪನಿಗಳು ಹಬ್ಬದ ಪ್ರಯುಕ್ತ ಗ್ರಾಹಕನ್ನು ಸೆಳೆಯುವ ಸಲುವಾಗಿ ಆಫರ್​ ಹೊರಡಿಸಿದೆ. ಅದರಂತೆ ಟೊಯೊಟಾ ಸಂಸ್ಥೆ ಕೆಲವು ಕಾರುಗಳನ್ನು ಆಫರ್​ ಬೆಲೆಗೆ ಮಾರುತ್ತಿದೆ. 

  ಟೊಯೊಟಾ ಗ್ಲಾಂಜಾ:

  ಟೊಯೊಟಾ ಗ್ಲಾಂಜಾ ಕಾರಿನ ಮೇಲೆ 30 ಸಾವಿರ ಬೆನಿಫಿಟ್​ ನೀಡಿದೆ, 15 ಸಾವಿರ ಕ್ಯಾರ್ಶ್ ಡಿಸ್ಕೌಂಟ್​ ಒದಗಿಸಿದೆ. ಈ ಕಾರು 1.2 ಲೀಟರ್​ ಪೆಟ್ರೋಲ್​​ ಎಂಉಜಿನ್​ ಹೊಂದಿದ್ದು, 82ಹೆಚ್​ಪಿ ಪವರ್​ ಮತ್ತು 113 ಟಾರ್ಕ್​ ಉತ್ಪಾದಿಸುತ್ತದೆ.

  ಟಯೊಟಾ ಅರ್ಬನ್​​ ಕ್ರೂಶರ್​:

  1.5 ಲೀಟರ್​ ಪೆಟ್ರೋಲ್​ ಎಂಜಿನ್​ ಹೊಂದಿರುವ ಈ ಕಾರು 103ಹೆಚ್​ಪಿ ಪವರ್​ ಮತ್ತು 138ಎನ್​ಎಮ್​​ ಟಾರ್ಕ್​ ಉತ್ಪಾದಿಸುತ್ತದೆ. ಅರ್ಬನ್​ ಕ್ರೂಶರ್​ ಕಾರಿನ ಮೇಲೆ 20 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡಿದೆ.

  ಟೊಯೊಟಾ ಯಾರಿಸ್​​:

  1.5 ಲೀಟರ್​ ಪೆಟ್ರೋಲ್​​ ಎಂಜಿನ್​ ಜೊತೆಗೆ 106ಹೆಚ್​ಪಿ ಪವರ್​ ಮತ್ತು 140ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. ದೀಪಾವಳಿ ಹಬ್ಬದ ಸಲುವಾಗಿ ಈ ಕಾರಿನ ಮೇಲೆ 60 ಸಾವಿರ ಬೆನಿಫಿಟ್​ ನೀಡಿದೆ. ಜೊತೆಗೆ 20 ಸಾವಿರ ಕ್ಯಾಶ್​ ಡಿಸ್ಕೌಂಟ್​ ನೀಡಿದೆ.

  ಇನೊವಾ ಕ್ರಿಸ್ಟಾ:

  ಇನೊವಾ ಕಾರು 2.4 ಲೀಟರ್​ ಡೀಸೆಲ್​ ಎಂಜಿನ್​ ಹೊಂದಿದೆ. ಹಬ್ಬದ ಪ್ರಯುಕ್ತ ಈ ಕಾರಿನ ಮೇಲೆ 55 ಸಾವಿರ ಬೆನಿಫಿಟ್​ ನೀಡುತ್ತಿದೆ. 30 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ.

  (ಹೆಚ್ಚಿನ ಮಾಹಿತಿ ಹಾಗೂ ಕಾರುಗಳ ಮೇಲಿನ ಆಫರ್​ಗಾಗಿ ಹತ್ತಿರ ಟೊಯೊಟಾ ಸಂಸ್ಥೆಯನ್ನು ಭೇಟಿ ನೀಡಿ ವಿಚಾರಿಸಿರಿ)
  Published by:Harshith AS
  First published: