Diwali 2021 Offers: ವಿವಿಧ ಕಂಪನಿ ಕಾರುಗಳ ಮೇಲೆ ಆಕರ್ಷಕ ದೀಪಾವಳಿ ಕೊಡುಗೆ.. ಇಷ್ಟೊಂದು ಕಡಿಮೆ ಬೆಲೆಗೆ ಎಂದಿಗೂ ಸಿಗದು!

ಮಾರುತಿ ಸುಜುಕಿ (Maruti Suzuki), ಹ್ಯುಂಡೈ ಮೋಟಾರ್ (Hyundai Motor), ಟಾಟಾ ಮೋಟಾರ್ಸ್ (Tata Motors), ಮಹೀಂದ್ರಾ & ಮಹೀಂದ್ರಾ (Mahindra & Mahindra), ಹೋಂಡಾ ಕಾರ್ಸ್ (Honda Cars) ಮತ್ತು ರೆನಾಲ್ಟ್ (Renault)‌ನಂತಹ ಕಂಪನಿಗಳು ವಿವಿಧ ಮಾದರಿಗಳ ಮೇಲೆ ರಿಯಾಯಿತಿಗಳು ಮತ್ತು ಇತರ ಪ್ರಯೋಜನಗಳನ್ನು ಒದಗಿಸುತ್ತಿವೆ. ಹಬ್ಬದ ಋತುವಿನಲ್ಲಿ ಕಾರನ್ನು ಖರೀದಿಸಲು ಯೋಜಿಸುವವರಿಗೆ ಬೆಸ್ಟ್​ ಆಫರ್​ ಒದಗಿಸುತ್ತಿದೆ.

Cars

Cars

 • Share this:
  ದೀಪಾವಳಿ (Diwali 2021) ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಹೀಗಿರಿವಾಗ ವಾಹನ ತಯಾರಕರು ತಮ್ಮ ಉತ್ಪನ್ನಗಳ ಮೇಲೆ ಭಾರಿ ಕೊಡುಗೆಗಳೊಂದಿಗೆ ಗ್ರಾಹಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಮಾರುತಿ ಸುಜುಕಿ (Maruti Suzuki), ಹ್ಯುಂಡೈ ಮೋಟಾರ್ (Hyundai Motor), ಟಾಟಾ ಮೋಟಾರ್ಸ್ (Tata Motors), ಮಹೀಂದ್ರಾ & ಮಹೀಂದ್ರಾ (Mahindra & Mahindra), ಹೋಂಡಾ ಕಾರ್ಸ್ (Honda Cars) ಮತ್ತು ರೆನಾಲ್ಟ್ (Renault)‌ನಂತಹ ಕಂಪನಿಗಳು ವಿವಿಧ ಮಾದರಿಗಳ ಮೇಲೆ ರಿಯಾಯಿತಿಗಳು ಮತ್ತು ಇತರ ಪ್ರಯೋಜನಗಳನ್ನು ಒದಗಿಸುತ್ತಿವೆ. ಹಬ್ಬದ ಋತುವಿನಲ್ಲಿ ಕಾರನ್ನು ಖರೀದಿಸಲು ಯೋಜಿಸುವವರಿಗೆ ಬೆಸ್ಟ್​ ಆಫರ್​ ಒದಗಿಸುತ್ತಿದೆ.

  ಮಾರುತಿ ಸುಜುಕಿ ಇಂಡಿಯಾ

  ಮಾರುತಿ ಸುಜುಕಿ ಸ್ವಿಫ್ಟ್, ಡಿಜೈರ್ ಮತ್ತು ವಿಟಾರಾ ಬ್ರೆಝಾ ವಾಹನಗಳು ಅತಿ ಹೆಚ್ಚು ಮಾರಾಟವಾದ ಮಾದರಿಗಳಾಗಿವೆ. ಹಬ್ಬದ ಋತುವಿನ ಕೊಡುಗೆಗಳು, ರಿಯಾಯಿತಿಗಳನ್ನು ನೀಡುತ್ತಿವೆ. ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ 24,500 ರೂ, ಡಿಜೈರ್‌ನಲ್ಲಿ 19,500 ರೂ ಮತ್ತು ವಿಟಾರಾ ಬ್ರೆಜ್ಜಾದಲ್ಲಿ 17,500 ರೂ ವರೆಗೆ ಪ್ರಯೋಜನಗಳನ್ನು ನೀಡುತ್ತಿದೆ.

  ಹುಂಡೈ ಮೋಟಾರ್ ಇಂಡಿಯಾ

  ಈ ಹಬ್ಬದ ಋತುವಿನಲ್ಲಿ, ಹುಂಡೈ ಹ್ಯುಂಡೈ ಐ20, ಹುಂಡೈ ಗ್ರಾಂಡ್ ಐ10 ನಿಯೋಸ್, ಹ್ಯುಂಡೈ ಸ್ಯಾಂಟ್ರೋ ಮತ್ತು ಹುಂಡೈ ಔರಾದಂತಹ ಮಾದರಿಗಳಲ್ಲಿ ವಿಶೇಷ ಕೊಡುಗೆಗಳನ್ನು ಒದಗಿಸುತ್ತಿದೆ. i20 ಕಾರಿನ ಮೇಲೆ 40,000 ರೂ, ನಿಯೋಸ್ 50,000 ರೂ, ಸ್ಯಾಂಟ್ರೋ ಕಾರಿನ ಮೇಲೆ 40,000 ರೂ ಮತ್ತು ಔರಾ 50,000 ರೂ ವರೆಗೆ ಪ್ರಯೋಜನಗಳನ್ನು ನೀಡುತ್ತಿದೆ

  ಟಾಟಾ ಮೋಟಾರ್ಸ್

  ಟಾಟಾ ಮೋಟಾರ್ಸ್ ಇತ್ತೀಚೆಗೆ ಸಾಕಷ್ಟು ಪ್ರಭಾವಶಾಲಿ ಮಾರಾಟ ಸಂಖ್ಯೆಯನ್ನು ಗಳಿಸುತ್ತಿದೆ. ಟಾಟಾ ನೆಕ್ಸಾನ್, ಟಾಟಾ ಟಿಯಾಗೊ, ಟಾಟಾ ಹ್ಯಾರಿಯರ್ ಮತ್ತು ಟಾಟಾ ಟಿಗೊರ್‌ನಂತಹ ಮಾದರಿಗಳಲ್ಲಿ ವಿಶೇಷ ಹಬ್ಬದ ಋತುವಿನ ಕೊಡುಗೆಗಳಿವೆ. ಗ್ರಾಹಕರು ನೆಕ್ಸಾನ್‌ ಮೇಲೆ 15,000 ರೂ, ಟಿಯಾಗೊ 25,000 ರೂ, ಹ್ಯಾರಿಯರ್‌ 40,000 ರೂ ಮತ್ತು ಟಿಗೋರ್‌ 25,000 ರೂ. ವರೆಗಿನ ಪ್ರಯೋಜನಗಳನ್ನು ಪಡೆಯಬಹುದು.

  Read Also: ಇನ್ಮುಂದೆ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ Helmet ಕಡ್ಡಾಯ: ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ!

  ಮಹೀಂದ್ರ & ಮಹೀಂದ್ರ

  ಮಹೀಂದ್ರ ಮಾದರಿಗಳಲ್ಲಿ ಕೊಡುಗೆಗಳನ್ನು ಹುಡುಕುತ್ತಿದ್ದರೆ, ಮಹೀಂದ್ರಾ ಸ್ಕಾರ್ಪಿಯೊ, ಮಹೀಂದ್ರಾ XUV300, ಮಹೀಂದ್ರಾ ಬೊಲೆರೊ ಮತ್ತು ಮಹೀಂದ್ರಾ ಅಲ್ಟುರಾಸ್ G4 ಆಸಕ್ತಿಯದಾಯಕ ಕೊಡುಗೆ ನೀಡುತ್ತಿದೆ. ಸ್ಕಾರ್ಪಿಯೋ ಹಬ್ಬದ ಋತುವಿನ ಕೊಡುಗೆಗಳು, ರಿಯಾಯಿತಿಗಳು ಮತ್ತು ಇತರ ಪ್ರಯೋಜನಗಳನ್ನು ಗಮನಿಸುವುದಾದರೆ ಸ್ಕಾರ್ಪಿಯೊ ಮೇಲೆ  32,177 ರೂ, XUV300 ಕಾರಿನ ಮೇಲೆ 47,348 ರೂ, ಬೊಲೆರೊ 21,450 ರೂ ಮತ್ತು ಅಲ್ಟುರಾಸ್ ಜಿ4 ಮೇಲೆ 86,667 ರೂ ವರೆಗೆ. ಪ್ರಯೋಜನ ಪಡೆಯಬಹುದಾಗಿದೆ.

  ಹೋಂಡಾ ಕಾರ್ಸ್ ಇಂಡಿಯಾ

  ಹೋಂಡಾ ತನ್ನ ಐದನೇ-ಜೆನ್ ಹೋಂಡಾ ಸಿಟಿ, ನಾಲ್ಕನೇ-ಜೆನ್ ಹೋಂಡಾ ಸಿಟಿ, ಹೋಂಡಾ ಅಮೇಜ್, ಹೋಂಡಾ ಡಬ್ಲ್ಯುಆರ್-ವಿ ಮತ್ತು ಹೋಂಡಾ ಜಾಝ್‌ಗಳಂತಹ ಕಾಋಇನ ಮೇಲೂ ಆಫರ್‌ ನೀಡಿದೆ. ನೀವು ಐದನೇ-ಜನರೇಶನ್​ ಸಿಟಿ ಕಾರಿನ ಮೇಲೆ.53,500 ರೂ, ನಾಲ್ಕನೇ-ಜೆನ್ ಸಿಟಿ ಮೇಲೆ 22,000 ರೂ, ಅಮೇಜ್‌ ಕಾರಿನ ಮೇಲೆ 18,000 ರೂ, ಡಬ್ಲ್ಯುಆರ್-ವಿ ಮೇಲೆ 40,100 ರೂ ಮತ್ತು ಜಾಝ್‌ ಮೇಲೆ .45,900 ರೂ ವರೆಗೆ ಪ್ರಯೋಜನಗಳನ್ನು ಪಡೆಯಬಹುದು.

  Read Also: Petrol and Diesel Price Today: ಸದ್ಯಕ್ಕೆ ಕಡಿಮೆಯಾಗಲ್ವಂತೆ ಪೆಟ್ರೋಲ್​- ಡೀಸೆಲ್​ ಬೆಲೆ: ಇಂದಿನ ದರ ವಿವರ ಇಲ್ಲಿದೆ

  ರೆನಾಲ್ಟ್

  ರೆನಾಲ್ಟ್ ಸಹ ಈ ಹಬ್ಬದ ಋತುವಿನಲ್ಲಿ ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಮತ್ತು ರೆನಾಲ್ಟ್ ಡಸ್ಟರ್‌ನಂತಹ ಕಾರಿನ ಮೇಲೆ ಪ್ರಮುಖ ಕೊಡುಗೆಗಳನ್ನು ನೀಡುತ್ತಿದೆ.  ರೆನಾಲ್ಟ್​ ಕ್ವಿಡ್ ಮೇಲೆ 40,000 ರೂ ವರೆಗೆ ಕೊಡುಗೆ ನೀಡಿದರೆ, ಟ್ರೈಬರ್ ಮೇಲೆ 60,000 ರೂ ಮತ್ತು ಡಸ್ಟರ್ ಕಾರಿನ ಮೇಲೆ 1.30 ಲಕ್ಷದವರೆಗೆ ಪ್ರಯೋಜನಗಳನ್ನು ಘೋಷಿಸಿದೆ.
  Published by:Harshith AS
  First published: