HOME » NEWS » Tech » DISNEYS ONLINE STORE SHOPDISNEY IS COMING SOON TO INDIA HG

ಭಾರತದಲ್ಲಿ ಆನ್​ಲೈನ್​​ ಸ್ಟೋರ್​ ತೆರೆಯಲು ಮುಂದಾದ ಡಿಸ್ನಿ!

Disneys Online Store: ಡಿಸ್ನಿ ಸದ್ಯದಲ್ಲೇ ಈ ಆನ್​ಲೈನ್​ ಸ್ಟೋರ್​ ಅನ್ನು ತೆರೆಯಲು ಚಿಂತಿಸಿದೆ. ಇದರ ಮೂಲಕ ಮಾರ್ವೆಲ್​, ಪಿಕ್ಸರ್​, ಸ್ಟಾರ್​ ವಾರ್ಸ್​​ ಬ್ರಾಂಡ್​ಗಳನ್ನು ಮಾರಾಟ ಮಾಡಲಿದೆ ಎಂದು ಹೇಳಲಾಗುತ್ತಿದೆ.

news18-kannada
Updated:November 14, 2020, 3:19 PM IST
ಭಾರತದಲ್ಲಿ ಆನ್​ಲೈನ್​​ ಸ್ಟೋರ್​ ತೆರೆಯಲು ಮುಂದಾದ ಡಿಸ್ನಿ!
ಶಾಪ್​ ಡಿಸ್ನಿ
  • Share this:
ಆನ್​ಲೈನ್​ ಫ್ಲಾಟ್​ಫಾರ್ಮ್​ ಡಿಸ್ನಿ ಇಂಡಿಯಾ ಇದೀಗ ಆನ್​​ಲೈನ್​ ಸ್ಟೋರ್​ ತೆರೆಯಲು ಮುಂದಾಗಿದೆ. ಅದಕ್ಕಾಗಿ ShopDisney.in ಎಂಬ ವೆಬ್​ಸೈಟ್​ ಅನ್ನು ತೆರೆದಿದೆ. ಇದರ ಮೂಲಕ ಪ್ರಾಡೆಕ್ಟ್​ ಮಾರಲು ಡಿಸ್ನಿ ಮುಂದಾಗಿದೆ.

ಡಿಸ್ನಿ ಸದ್ಯದಲ್ಲೇ ಈ ಆನ್​ಲೈನ್​ ಸ್ಟೋರ್​ ಅನ್ನು ತೆರೆಯಲು ಚಿಂತಿಸಿದೆ. ಇದರ ಮೂಲಕ ಮಾರ್ವೆಲ್​, ಪಿಕ್ಸರ್​, ಸ್ಟಾರ್​ ವಾರ್ಸ್​​ ಬ್ರಾಂಡ್​ಗಳನ್ನು ಮಾರಾಟ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವೆಲ್ಲ ಪ್ರಾಡೆಕ್ಟ್​ಗಳನ್ನು ಮಾರುತ್ತದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ. ShopDisney.com ನಂತೆಯೇ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆಯೂ ಮಾಹಿತಿ ನೀಡಿಲ್ಲ.

ಇನ್ನು ಡಿಸ್ನಿ ಫ್ಲಾಟ್​​ಫಾರ್ಮ್​ನಲ್ಲಿ ಅಜಿಯೋ, ಅಮೆಜಾನ್​, ಬೇವಾಕೂಫ್​, ಫಸ್ಟ್​ಕ್ರೈ, ಲೈಫ್​ಸ್ಟೈಲ್​, ಮ್ಯಾಕ್ಸ್​​, ಪ್ಯಾಂಟಲೂನ್ಸ್​ ,ರಿಲಯನ್ಸ್​ ಡಿಜಿಟಲ್​ ವಸ್ತುಗಳನ್ನು ಮಾರಾಟ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಅಂತರಾಷ್ಟ್ರೀಯ ಡಿಸ್ನಿ ಶಾಪಿಂಗ್​ ಮಾರ್ಟ್​ನಲ್ಲಿ ಹಲವಾರು ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಜ್ಯುವೆಲರಿ, ಜಿಗ್ಸಾ, ಆಟಿಕೆ, ಆಭರಣ, ಉಡುಗೊರೆ, ಪ್ಲೇ ಸೆಟ್​, ರಿಮೋಟ್​ ಕಂಟ್ರೋಲ್​ ಕಾರು, ರೈಲು, ಸ್ನೋಗ್ಲೋಬ್​, ಕೈಗಡಿಯಾರಗಳನ್ನು ಮಾರಾಟ ಮಾಡುತ್ತಿದೆ.
Youtube Video

ShopDisney.in ಆನ್​ಲೈನ್​ ಸ್ಟೋರ್​ಗೆ ಭೇಟಿ ನೀಡಿದಾಗ ‘ಶೀಘ್ರದಲ್ಲೇ ಬರಲಿದೆ ‘ ಎಂದು ಕಾಣುತ್ತದೆ. ಆದರೆ ಯಾವಾಗ ಬರಲಿದೆ. ಬಗ್ಗೆ ಮಾಹಿತಿ ಹೊರಹಾಕಿಲ್ಲ.
Published by: Harshith AS
First published: November 14, 2020, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories