ಟೆಲಿಕಾಂ ವಲಯದಲ್ಲಿ (Telecom Companies) ಪ್ರಬಲ ಪೈಪೋಟಿಯನ್ನು ನೀಡಲು ಹಲವಾರು ಕಂಪೆನಿಗಳಿವೆ. ಈ ಕಂಪೆನಿಗಳು ತನ್ನ ಗ್ರಾಹಕರನ್ನು ಇನ್ನಷ್ಟು ಹೆಚ್ಚಿಸುವ ಕಾರಣದಿಂದ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಸದ್ಯ ಟೆಲಿಕಾಂ ವಲಯದಲ್ಲಿ ಎರಡನೇ ಸ್ಥಾನದಲ್ಲಿರುವ ಏರ್ಟೆಲ್ ತನ್ನ ಪ್ರಬಲ ಸ್ಪರ್ಧಿಯಾಗಿರುವ ಜಿಯೋ ಕಂಪೆನಿಯನ್ನು (Jio Company) ಹಿಂದಿಕ್ಕುವ ಕಾರಣದಿಂದ ಗ್ರಾಹಕರನ್ನು ಸೆಲೆಯುವ ಕಾರಣಕ್ಕಾಗಿ ಹೊಸ ರೀಚಾರ್ಜ್ ಪ್ಲ್ಯಾನ್ (Recharge Plans) ಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ಈ ಟೆಲಿಕಾಂ ಕಂಪೆನಿಗಳು ತನ್ನ ರೀಚಾರ್ಜ್ ಪ್ಲ್ಯಾನ್ ಜೊತೆಗೆ ಒಟಿಟಿ ಪ್ಲಾಟ್ಫಾರ್ಮ್ಗಳ ಉಚಿತ ಚಂದಾದಾರಿಕೆ ಸೌಲಭ್ಯವನ್ನೂ ನೀಡುತ್ತಿದೆ. ಏರ್ಟೆಲ್ (Airtel) ಇದೀಗ ಬಿಡುಗಡೆ ಮಾಡಿರುವ ಪ್ರೀಪೇಯ್ಡ್ ಪ್ಲ್ಯಾನ್ನಲ್ಲಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆ ಉಚಿತವಾಗಿ ಸಿಗುತ್ತದೆ.
ಏರ್ಟೆಲ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಇಷ್ಟು ದಿಗಳಲ್ಲಿ ಕೆಲವೇ ದಿನಗಳಲ್ಲಿ ಮಾತ್ರ ಓಟಿಟಿ ಪ್ಲಾಟ್ಫಾರ್ಮ್ಗಳು ಉಚಿತವಾಗಿ ಸಿಗುತ್ತಿದ್ದವು. ಆದರೆ ಇನ್ಮುಂದೆ ಬಹುತೇಕ ಏರ್ಟೆಲ್ನ ಎಲ್ಲಾ ಪ್ರೀಪೇಯ್ಡ್ ಪ್ಲ್ಯಾನ್ಗಳಲ್ಲೂ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿ ಉಚಿತವಾಗಿ ಲಭ್ಯವಾಗುತ್ತದೆ. ಹಾಗಿದ್ರೆ ಆ ಪ್ಲ್ಯಾನ್ಗಳು ಯಾವುದೆಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಏರ್ಟೆಲ್ನ 399 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್
ಏರ್ಟೆಲ್ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮಾಡುವ ಪ್ರಯೋಜನಗಳ ಜೊತೆಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆಯನ್ನು 3 ತಿಂಗಳವರೆಗೆ ಉಚಿತವಾಗಿ ಪಡೆಯಬಹುದಾಗಿದೆ.
ಏರ್ಟೆಲ್ನ 499 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್
ಏರ್ಟೆಲ್ನ ಈ ಪ್ಲ್ಯಾನ್ನಲ್ಲಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೊಬೈಲ್ಗೆ 3 ತಿಂಗಳ ಉಚಿತ ಚಂದಾದಾರಿಕೆಯನ್ನು ಸೌಲಭ್ಯವನ್ನು ಪಡೆಯಬಹುದಾಗಿದೆ. ಇನ್ನು ಈ ಪ್ಲ್ಯಾನ್ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ದೈನಂದಿನ 3ಜಿಬಿ ಡೇಟಾ ಹಾಗೂ ಅನ್ಲಿಮಿಟೆಡ್ ಉಚಿತವಾಗಿ ಕಾಲ್ ಮಾಡುವ ಸೌಲಭ್ಯ ದೊರೆಯುತ್ತದೆ.
ಏರ್ಟೆಲ್ನ 719 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್ಟೆಲ್ನ ಈ ಪ್ಲ್ಯಾನ್ನಲ್ಲಿ ಗ್ರಾಹಕರಿಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೊಬೈಲ್ಗೆ 3 ತಿಂಗಳ ಉಚಿತ ಚಂದಾದಾರಿಕೆ ಸೌಲಭ್ಯ ದೊರೆಯುತ್ತದೆ. ಇದಲ್ಲದೆ ಈ ಯೋಜನೆಯ ಮೂಲಕ ದೈನಂದಿನ ಅನ್ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ 1.5 ಜಿಬಿ ದೈನಂದಿನ ಡೇಟಾವನ್ನು ಬಳಸಬಹುದಾಗಿದೆ. ಇನ್ನು ಈ ಯೋಜನೆಯು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
ಏರ್ಟೆಲ್ನ 779 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್
ಏರ್ಟೆಲ್ನ 779 ರೂಪಾಯಿಯ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಈ ಯೋಜನೆಯಲ್ಲಿ ಮೂರು ತಿಂಗಳ ಅವಧಿಯ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೊಬೈಲ್ ಉಚಿತ ಚಂದಾದಾರಿಕೆ ಸೌಲಭ್ಯ ದೊರೆಯಲಿದೆ. ಇದಲ್ಲದೆ ದೈನಂದಿನ 1.5ಜಿಬಿ ಡೇಟಾ ಸೌಲಭ್ಯ, ಅನ್ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ ದಿನಕ್ಕೆ 100 ಎಸ್ಎಮ್ಎಸ್ ಅನ್ನು ಉಚಿತವಾಗಿ ಮಾಡಬಹುದಾಗಿದೆ.
ಏರ್ಟೆಲ್ನ 839 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಈ ಪ್ರಿಪೇಯ್ಡ್ ಪ್ಲ್ಯಾನ್ನಲ್ಲಿ ಕೂಡ ಮೂರು ತಿಂಗಳ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅಪ್ಲಿಕೇಶನ್ನ ಉಚಿತ ಚಂದಾದಾರಿಕೆ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ದೈನಂದಿನ 100 ಎಸ್ಎಮ್ಎಸ್ ಮತ್ತು 2 ಜಿಬಿ ಡೇಟಾ ಪ್ರಯೋಜನ ದೊರೆಯಲಿದೆ. ಇನ್ನು ಏರ್ಟೆಲ್ನ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಇದನ್ನೂ ಓದಿ: ಒಂದೇ ಕಂಪೆನಿಯಿಂದ ಎರಡು ಮಾನಿಟರ್ಗಳ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
ಏರ್ಟೆಲ್ನ 999 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್ಟೆಲ್ನ ಈ 999 ರೂಪಾಯಿ ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ನೀವು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅನ್ನು 3 ತಿಂಗಳವರೆಗೆ ಉಚಿತವಾಗಿ ಮೊಬೈಲ್ನಲ್ಲಿ ಬಳಕೆ ಮಾಡಬಹುದಾಗಿದೆ. ಅಲ್ಲದೆ ದೈನಂದಿನ 2.5ಜಿಬಿ ಡೇಟಾ ಪ್ರಯೋಜನ ಸಹ ಸಿಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ