• Home
 • »
 • News
 • »
 • tech
 • »
 • Meta Issue: ಮೆಟಾದಿಂದ ವಜಾಗೊಂಡ ಭಾರತೀಯ ಉದ್ಯೋಗಿಗಳಿಗೆ ಆಪತ್ತು! ಅವರ ಮಕ್ಕಳಿಗೂ ಇಲ್ವಾ ಭವಿಷ್ಯ?

Meta Issue: ಮೆಟಾದಿಂದ ವಜಾಗೊಂಡ ಭಾರತೀಯ ಉದ್ಯೋಗಿಗಳಿಗೆ ಆಪತ್ತು! ಅವರ ಮಕ್ಕಳಿಗೂ ಇಲ್ವಾ ಭವಿಷ್ಯ?

ಮೆಟಾ

ಮೆಟಾ

"ಯುಎಸ್‌ನಲ್ಲಿ ನನ್ನ ಸಾಮರ್ಥ್ಯಗಳ ಆಧಾರದ ಮೇಲೆ ಹೇಗೆ ಬೇಕಾದರೂ ಬದುಕುವ ಛಲ ನನ್ನಲ್ಲಿದೆ, ಆದರೆ ಮುಖ್ಯವಾಗಿ ನನಗೆ ಇಲ್ಲಿ ಉದ್ಯೋಗ ದೊರೆಯಬೇಕು. ಹಾಗಾಗಿ ಆ ಪ್ರಯತ್ನದಲ್ಲಿ ನಾನಿದ್ದು ನಿಮ್ಮೆಲ್ಲರ ಸಹಾಯದ ಅಗತ್ಯವಿದೆ" ಹೀಗಂತ ನೋವು ತೋಡಿಕೊಂಡಿದ್ದು ಯಾರು?

 • Share this:

  ಮೆಟಾದಿಂದ (Meta) ವಜಾಗೊಂಡಿರುವ 11000 ಉದ್ಯೋಗಿಗಳಲ್ಲಿ ಒಬ್ಬರಾದ ಯುಎಸ್‌ನಲ್ಲಿ (US) ವಾಸವಾಗಿರುವ ಭಾರತೀಯ (Indian) ವ್ಯಕ್ತಿಯೊಬ್ಬರು ಕಂಪೆನಿಗೆ (Company) ಸೇರಿದ ಒಂಬತ್ತು ತಿಂಗಳ ನಂತರ ವಜಾಗೊಂಡಿದ್ದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ (Social Media) ತಮ್ಮ ದುಃಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ತಮ್ಮ ವಜಾಗೊಂಡ ವಿವರವನ್ನು ಹಂಚಿಕೊಂಡಿರುವ ಮೆಟಾದಲ್ಲಿ ತಾಂತ್ರಿಕ (Technical) ತಂಡದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜು ಕದಮ್ ಒಂಬತ್ತು ತಿಂಗಳ ಹಿಂದೆಯಷ್ಟೇ ಸಂಸ್ಥೆಗೆ ಸೇರಿದ್ದರು ಹಾಗೂ ಎಲ್ಲಾ ತ್ರೈಮಾಸಿಕಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದರು ಹಾಗಾಗಿ ತಾನು ವಜಾಗೊಳ್ಳುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂಬುದಾಗಿ ಹಂಚಿಕೊಂಡಿದ್ದಾರೆ.


  ಇದೆಲ್ಲಾ ಮೆಟಾದವರು ಭಾರತೀಯರನ್ನು ವಜಾ ಮಾಡಿದಕ್ಕಾಗಿ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಇದರ ಬಗ್ಗೆ ಆಬಿಪ್ರಾಯವನ್ನು ಹಂಚಿಕೊಂಡಿದ್ದಾರೆ.


  ಮಕ್ಕಳ ಭವಿಷ್ಯದ ಮೇಲೆ ಕುತ್ತು


  ನನ್ನ ನಿರೀಕ್ಷೆಯೆಲ್ಲಾ ತಲೆಕೆಳಗಾಗಿ ನಾನು ಕೂಡ ವಜಾಗೊಂಡ ಉದ್ಯೋಗಿಗಳಲ್ಲಿ ಒಬ್ಬನಾಗಬೇಕಾಯಿತು ಎಂದ  ರಾಜು, ಯುಎಸ್‌ನಿಂದ ತೆರಳಬೇಕಾದ ಸಮಯ ಆರಂಭಗೊಂಡಿದೆ ನನಗೆ ಇನ್ನೊಂದು ಉದ್ಯೋಗ ಸಿಗದಿದ್ದರೆ ಕುಟುಂಬ ಸಮೇತರಾಗಿ ಯುಎಸ್ ಬಿಟ್ಟು ಬರಬೇಕಾದ ಅನಿವಾರ್ಯತೆ ಬರಲಿದೆ ಎಂದು ಹೇಳಿಕೊಂಡಿದ್ದಾರೆ.


  ಇದನ್ನೂ ಒದಿ: ದೇಶದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯ 5ಜಿ ಮೊಬೈಲ್‌ ಬಿಡುಗಡೆ!


  ತಮ್ಮ ಮಕ್ಕಳಾದ ಅರ್ಜುನ್ ಹಾಗೂ ಯಶ್ ಅವರ ಚಿತ್ರಗಳನ್ನು ಸೋಷಿಯಲ್‌ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮಕ್ಕಳು ಯುಎಸ್‌ನ ಪ್ರಜೆಗಳಾಗಿದ್ದು, ಇಲ್ಲಿಂದ ತೆರಳುವುದು ಅವರ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.


  Dismissed by Meta Indian employees face danger abroad Why is there no future for children
  ಮೆಟಾ


  ಉದ್ಯೋಗಕ್ಕಾಗಿ ಕಾಯುತ್ತಿರುವ ಮೆಟಾ ಉದ್ಯೋಗಿ


  ತಮ್ಮ ಪೋಸ್ಟ್ ಮೂಲಕ ಕದಮ್ ಅವರು ಮೆಟಾದ ಸಹೋದ್ಯೋಗಿಗಳು ಹಾಗೂ ಅವರ ಸಂಪರ್ಕಗಳನ್ನು ನೆರವಿಗಾಗಿ ಯಾಚಿಸಿದ್ದು, ಲಿಂಕ್ಡ್‌ಇನ್ ಸಮುದಾಯದಲ್ಲಿ ಕೆಲಸ ದೊರಕಿಸಿಕೊಡಲು ನೆರವಾಗುವಂತೆ ವಿನಂತಿಸಿಕೊಂಡಿದ್ದಾರೆ. ಯುಎಸ್‌ನಲ್ಲಿ 16 ವರ್ಷಗಳಿಂದ ವಾಸವಾಗಿರುವ ಕದಮ್ ಅವರು ಈ ರೀತಿಯ ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಿದ್ದೇನೆ ಆದರೆ ಎಂದಿಗೂ ಕೆಲಸವನ್ನು ಕಳೆದುಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.


  ಯುಎಸ್‌ನಲ್ಲಿ ನನ್ನ ಸಾಮರ್ಥ್ಯಗಳ ಆಧಾರದ ಮೇಲೆ ಹೇಗೆ ಬೇಕಾದರೂ ಬದುಕುವ ಛಲ ನನ್ನಲ್ಲಿದೆ, ಆದರೆ ಮುಖ್ಯವಾಗಿ ನನಗೆ ಇಲ್ಲಿ ಉದ್ಯೋಗ ದೊರೆಯಬೇಕು. ಹಾಗಾಗಿ ಆ ಪ್ರಯತ್ನದಲ್ಲಿ ನಾನಿದ್ದು ನಿಮ್ಮೆಲ್ಲರ ಸಹಾಯದ ಅಗತ್ಯವಿದೆ ಎಂದು ತಿಳಿಸಿದ್ದಾರೆ.


  ರಾಜು ಕದಮ್‌ಗೆ ಸಾಂತ್ವಾನ ಹೇಳಿದ ಬಳಕೆದಾರರು


  ರಾಜು ಕದಮ್ ಅವರಿಗೆ ಧೈರ್ಯಗಳನ್ನು ನೀಡುವ ಅದೆಷ್ಟೋ ಕಮೆಂಟ್‌ಗಳನ್ನು ಅವರ ಇನ್‌ಬಾಕ್ಸ್‌ನಲ್ಲಿ ಕಾಣಬಹುದಾಗಿದೆ. ನೀವು ಉತ್ತಮ ಉದ್ಯೋಗವನ್ನು ಹೊಂದಿದವರು ಹಾಗಾಗಿ ನಿಮ್ಮನ್ನು ಒಳ್ಳಯ ಉದ್ಯೋಗ ಹುಡುಕಿಕೊಂಡು ಬರಲಿದೆ ಎಂದು ಕಮೆಂಟ್‌ ಮಾಡಿದ್ದಾರೆ.


  ಫೇಸ್‌ಬುಕ್‌ ಮೆಟಾ


  ಇನ್ನೊಬ್ಬ ಬಳಕೆದಾರರು ಕೂಡ ರಾಜು ಕದಮ್‌ಗೆ ಧೈರ್ಯದ ಮಾತುಗಳನ್ನು ಹೇಳಿದ್ದು, ನಿಮ್ಮ ವಜಾಗೊಳಿಸುವಿಕೆಯ ಸುದ್ದಿ ಅತ್ಯಂತ ನೋವಿನದ್ದಾಗಿದೆ ಇದು ನಿಜಕ್ಕೂ ಕಷ್ಟದ ಸಮಯ ಹಾಗಾಗಿ ನೀವು ಧೈರ್ಯವಾಗಿರಬೇಕು. ಕೆಲವೊಂದು  ವೆಬ್‌ಸೈಟ್‌ಗಳ ಬಗ್ಗೆ ಈ ಬಳಕೆದಾರರು ಮಾಹಿತಿ ನೀಡಿದ್ದು, ಉತ್ತಮ ಉದ್ಯೋಗ ಅವಕಾಶಗಳ ಬಗ್ಗೆ ರಾಜು ಕದಮ್‌ಗೆ ಮಾಹಿತಿ ನೀಡಿದ್ದಾರೆ. ಯಾವುದಾದರೂ ಅವಕಾಶಗಳು ದೊರೆತಲ್ಲಿ ನಾನು ನಿಮಗೆ ತಿಳಿಸುತ್ತೇನೆ ಎಂದು ಬಳಕೆದಾರರು ಕಮೆಂಟ್‌ನಲ್ಲಿ ತಿಳಿಸಿದ್ದಾರೆ.


  ವಜಾಗೊಳಿಸುವಿಕೆಯಿಂದ ಕಂಗಾಲಾಗಿರುವ ಭಾರತೀಯರು


  ಈ ನಡುವೆ ಮೆಟಾದಿಂದ ವಜಾಗೊಂಡ ಏಕೈಕ ಭಾರತೀಯ ರಾಜು ಕದಮ್ ಮಾತ್ರವಲ್ಲದೆ, ಹಿಮಾಂಶು ಎಂಬುವವರೂ ಮೆಟಾಗೆ ಸೇರಿದ ಬರೇ ಎರಡು ದಿನದಲ್ಲಿ ಸಂಸ್ಥೆಯಿಂದ ವಜಾಗೊಂಡಿದ್ದಾರೆ. ಹಿಮಾಂಶು ಮೆಟಾದ ಉದ್ಯೋಗ ಅವಕಾಶಕ್ಕಾಗಿ ಭಾರತದಿಂದ ಕೆನಡಾಗೆ ಸ್ಥಳಾಂತರಗೊಂಡಿದ್ದರು.


  ಸಂಸ್ಥೆಯ ಗಳಿಕೆಯು ನಿರಾಶಾದಾಯಕವಾಗಿದ್ದು, ಆದಾಯ ಕುಸಿತದಿಂದ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕಂಪನಿಯು 11,000 ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಫೇಸ್‌ಬುಕ್ ಮಾಲಿಕ ಮಾರ್ಕ್ ಜುಕರ್‌ಬರ್ಗ್ ಈ ಹಿಂದೆ ಪ್ರಕಟಿಸಿದ್ದರು.

  Published by:Harshith AS
  First published: