Dish Tv: ಕೇವಲ 19 ರೂ.ಗೆ ಬೊಂಬಾಟ್​ ಆಫರ್​ ನೀಡಿ ಗ್ರಾಹಕರ ಗಮನ ಸೆಳೆದ ಡಿಶ್​ ಟಿವಿ!

Ind Vs Pak match Live: ಸ್ಟಾರ್​ ಸ್ಪೋರ್ಟ್ (Star Sports)​ ಮೂಲಕ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಉಪಯೋಗವಾಗಲೆಂದು 19 ರೂ.ವಿನ ಪ್ಯಾಕ್​ ಘೋಷಿಸಿದೆ. ಅಂದಹಾಗೆಯೇ 19 ರೂ.ವಿನ 2 ಚಾನೆಲ್​​ ಪ್ಯಾಂಕ್​ ಅನ್ನು ಘೋಷಿಸಿದೆ. ಅದರಲ್ಲಿ  ಸ್ಟಾರ್​​​ ಸ್ಪೋರ್ಟ್​​ 1 ಮತ್ತು ಸ್ಟಾರ್​​ ಸ್ಪೋರ್ಟ್​​ 1 ಎಚ್​ಡಿ ಸೇರಿದೆ.

Dish Tv

Dish Tv

  • Share this:
    T20 Worldcup​ 2021 ಆರಂಭಗೊಂಡಿದ್ದು, ಕ್ರಿಕೆ ಟ್​ ಪ್ರೇಮಿಗಳು ಟಿವಿ ಎದುರು ಹಾಜರಿರುವಂತೆ ಮಾಡಿದೆ. ಅದರಂತೆ ಇದೇ 24 ರಂದು ಇಂಡಿಯಾ ಮತ್ತು ಪಾಕ್​ (Ind vs Pak) ನಡುವೆ ಕಾದಾಟ ನಡೆಲಿದೆ. ಹಾಗಾಗಿ ಈ ಪಂದ್ಯವನ್ನು ವೀಕ್ಷಿಸಲು ಭಾರತೀಯರು ಕಾದು ಕುಳಿತಿದ್ದಾರೆ. ಹೀಗಿರುವಾಗ DTH ಪೂರೈಕೆದಾರ ಡಿಸ್​ಟಿವಿ (Dish Tv)  ತನ್ನ ಬಳಕೆದಾರರ ಅತ್ಯುತ್ತಮ ಚಾನೆಲ್​ ಪ್ಯಾಕ್​ ಒದಗಿಸುತ್ತಿದೆ. ಗ್ರಾಹಕರಿಗೆಂದೇ ಎರಡು ಚಾನೆಲ್ ಪ್ಯಾಕ್​ಗಳನ್ನು ನೀಡುತ್ತಿದೆ. ನೂತನ ಚಾನೆಲ್​ ಪ್ಯಾಕ್​ ರೀಚಾರ್ಜ್ (Reacharge)​ ಮಾಡುವ ಮೂಲಕ ಕೇವಲ 19 ರೂಗಳಷ್ಟು ಕಡಿಮೆ ಹಣವನ್ನು ಪಾವತಿ ಮಾಡುವ ಮೂಲಕ ಕ್ರಿಕೆಟ್ (Cricket)​ ಪಂದ್ಯವನ್ನು ಲೈವ್​ (Live)ಆಗಿ ವೀಕ್ಷಿಸಬಹುದಾಗಿದೆ.

    ಸ್ಟಾರ್​ ಸ್ಪೋರ್ಟ್ (Star Sports)​ ಮೂಲಕ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಉಪಯೋಗವಾಗಲೆಂದು 19 ರೂ.ವಿನ ಪ್ಯಾಕ್​ ಘೋಷಿಸಿದೆ. ಅಂದಹಾಗೆಯೇ 19 ರೂ.ವಿನ 2 ಚಾನೆಲ್​​ ಪ್ಯಾಂಕ್​ ಅನ್ನು ಘೋಷಿಸಿದೆ. ಅದರಲ್ಲಿ  ಸ್ಟಾರ್​​​ ಸ್ಪೋರ್ಟ್​​ 1 ಮತ್ತು ಸ್ಟಾರ್​​ ಸ್ಪೋರ್ಟ್​​ 1 ಎಚ್​ಡಿ ಸೇರಿದೆ.

    ಕ್ರಿಕೇಟ್​ ವೀಕ್ಷಿಸಬೇಕೆಂದು ಎಂದುಕೊಂಡಿರುವವರು ಮತ್ತು ಜಟಾಪಟಿ ಪಂದ್ಯವನ್ನು ಡಿಶ್​ಟಿವಿ ಮೂಲಕ ನೋಡಬೇಕೆನ್ನುವವರು ನೋಂದಾಯಿತ ಮೊಬೈಲ್​​ ಸಂಖ್ಯೆಯಿಂದ 181003157019ಗೆ ಮಿಸ್ಟ್​ ಕಾಲ್​ ನೀಡುವ ಮೂಲಕ ಚಂದಾದಾರರಾಗಬಹುದು. ಅಂತೆಯೇ ಹಿಂದಿ ಸ್ಟಾರ್​ ಸ್ಪೋರ್ಟ್​​​ 1 ಮತ್ತು ಸ್ಟಾರ್ಟ್​ ಸ್ಟೋರ್ಟ್ಸ್​​ 1 ಎಚ್​ಡಿ ಚಾನೆಲ್​ಗೆ ನೋಂದಾಯಿತ ಸಂಖ್ಯೆಯಿಂದ 18003157018 ಮೂಲಕ ಮಿಸ್ಟ್​ಕಾಲ್​ ನೀಡಿ ಪ್ಯಾಕ್ ಅಳವಡಿಸಿಕೊಳ್ಳಬಹುದಾಗಿದೆ.

    ಗ್ರಾಹಕರು ಡಿಶ್​ಟಿವಿ, ವುಬ್​ಸೈಟ್​, ಮೊಬೈಲ್​ ಅಪ್ಲಿಕೇಶನ್​ ಅಥವಾ ನೋಂದಾಯಿತ ಮೊಬೈಲ್​ ಸಂಖ್ಯೆ ಮೂಲಕ ಚಾನೆಲ್​ ಪ್ಯಾಕ್​ ಅಳವಡಿಸಿಕೊಳ್ಳಬಹುದಾಗಿದೆ.

    ಆದರೆ 19 ರೂ.ವಿನ ಡಿಸ್​ಟಿವಿ ಚಾನೆಲ್​ ಪ್ಯಾಕ್​ ಜಿಎಸ್​ಟಿ ಹೊರತುಪಡಿಸುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ಇನ್ನು ರೆಕಾರ್ಡಿಂಗ್​ ವೈಶಿಷ್ಟ್ಯಯ ಡಿ-700 ಎಚ್​ಡಿ ಮಾದರಿಯಲ್ಲಿ ಸಿಗುತ್ತದೆ.

    Read Also: Google Chrome: ಗೂಗಲ್​ ಕ್ರೋಮ್​ನಲ್ಲಿ ಪೋರ್ನ್​ ವಿಡಿಯೋ ವೀಕ್ಷಿಸುತ್ತೀರಾ? ಹಾಗಿದ್ರೆ ಈ ಸ್ಟೋರಿ ಓದಿ..

    ಮೊದಲೇ ಹೇಳಿದಂತೆ ಆನ್​ಲೈನ್​ ಮೂಲಕ ಡಿಶ್​ಟಿವಿ ಪರಿಚಯಸಿದ ಹೊಸ ಯೋಚನೆಯನ್ನು ಅಳವಡಿಸಬಹುದಾಗಿದೆ. ಅದಕ್ಕಾಗಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಮತ್ತು ವಿಸಿ ಬಳಸಿ ಲಾಗಿನ್​ ಆಗಬೇಕು, ಬೇಕಾಗಿರುವ ಪ್ಯಾಕ್​ ಅನ್ನು ಆ್ಯಡ್​ ಆನ್​ ಮಾಡುವ ಆವಕಾಶ ಸಿಗುತ್ತದೆ. ರೀಚಾರ್ಜ್​ ಮಾಡಿದ ಕೆಲವೇ ಹೊತ್ತಿನಲ್ಲಿ  ಚಾನೆಲ್​ ಸಕ್ರಿಯವಾಗುತ್ತದೆ.

    ಟಿ20 ವಲ್ಡ್​ ಕಪ್​ 2021 ಪಂದ್ಯವನ್ನು ವೀಕ್ಷಿಸಲು ಮತ್ತು ಅದರಲ್ಲೂ ಭಾರತ ತಂಡ ಎದುರಿಸುವ ಪಂದ್ಯವನ್ನು ನೋಡಲು ಅನೇಕ ಡಿಶ್​ ಕಂಪನಿಗಳು ಮತ್ತು ಟೆಲಿಕಾಂ ಕಂಪನಿಗಳು ರೀಚಾರ್ಜ್​ ಆಫರ್​ ಅನ್ನು ನೀಡಿದೆ. ಅದರಂತೆ ಜಿಯೋ ಕೂಡ ತನ್ನ ಬಳಕೆದಾರರಿಗೆ ಉಚಿತ ಪ್ರಯೋಜನದ ಜೊತೆಗೆ ಕ್ರಿಕೆಟ್​ ವೀಕ್ಷಿಸುವ ಅವಕಾಶ ಮಾಡಿಕೊಟ್ಟಿದೆ. ಈಗಾಗಲೇ ಅನೇಕರು ಯೋಜನೆಯನ್ನು ಬಳಸಿಕೊಂಡು ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.

    Read Also: Jio: ಹೀಗೆ ಮಾಡಿದರೆ Ind Vs Pak ಪಂದ್ಯವನ್ನು ಲೈವ್ ವೀಕ್ಷಿಸಬಹುದು!

    ಕೊಹ್ಲಿ ನಾಯತ್ವದ ಟೀಂ ಇಂಡಿಯಾ ನಿನ್ನ ಇಂಗ್ಲೆಂಡ್​ ತಂಡವನ್ನು ಎದುರಿಸಿ ಭರ್ಜರಿ ಜಯ ಕಂಡಿತು. ಇನ್ನು ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಡುವಿನ ಜಟಾಪಟಿ  24 ನಡೆಯಲಿದೆ. ಮಾತ್ರವಲ್ಲದೆ ಈ ಪಂದ್ಯ ಭಾರೀ ಕುತೂಹಲದಿಂದ ಕೂಡಿದೆ.
    Published by:Harshith AS
    First published: