• Home
 • »
 • News
 • »
 • tech
 • »
 • Dish Tv OTT Offer: ಡಿಶ್​ ಟಿವಿ ಕಂಪನಿಯಿಂದ ಬರ್ತಿದೆ ಹೊಸ ಒಟಿಟಿ ಪ್ಲಾಟ್​ಫಾರ್ಮ್! ಕಡಿಮೆ ದುಡ್ಡಿಗೆ ಸಾಕಷ್ಟು ಸಿನಿಮಾಗಳು ಲಭ್ಯ!

Dish Tv OTT Offer: ಡಿಶ್​ ಟಿವಿ ಕಂಪನಿಯಿಂದ ಬರ್ತಿದೆ ಹೊಸ ಒಟಿಟಿ ಪ್ಲಾಟ್​ಫಾರ್ಮ್! ಕಡಿಮೆ ದುಡ್ಡಿಗೆ ಸಾಕಷ್ಟು ಸಿನಿಮಾಗಳು ಲಭ್ಯ!

ಡಿಶ್‌ ಟಿವಿ ವಾಚೊ ಒಟಿಟಿ ಪ್ಲಾನ್ಸ್

ಡಿಶ್‌ ಟಿವಿ ವಾಚೊ ಒಟಿಟಿ ಪ್ಲಾನ್ಸ್

ಇದು ಡಿಶ್‌ಟಿವಿ ಪರಿಚಯಿಸುತ್ತಿರುವ ಹೊಸ ಒಟಿಟಿ ಪ್ಲಾಟ್‌ಫಾರ್ಮ್‌ಗಳಾಗಿವೆ. ಡಿಶ್‌ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿ ಪರಿಚಯಿಸಿರುವ ಎಲ್ಲಾ ಹೊಸ ನಾಲ್ಕು ಒಟಿಟಿ ಬಂಡಲ್ ಯೋಜನೆಗಳ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

 • Share this:

  ‌ಪ್ರಸಿದ್ಧ ಡಿಟಿಹೆಚ್‌ (DTH) ಪ್ರೊವೈಡರ್‌ ಸಂಸ್ಥೆಯಾಗಿರುವ ಡಿಶ್‌ ಟಿವಿ (Dish TV) ತನ್ನದೇ ಆದ ಪ್ಲಾಟ್‌ಫಾರ್ಮ್‌ನಲ್ಲಿ (Platform) ಹೊಸದಾಗಿ ಒಟಿಟಿ (OTT) ಯೋಜನೆಗಳನ್ನು ಸ್ಥಾಪಿಸುವ ಪ್ಲಾನ್‌ (Plan) ಅನ್ನು ಮಾಡಿದೆ. ಇತ್ತೀಚಿಗೆ ಈ ದೂರದರ್ಶನಗಿಂತ (Television)  ಒಟಿಟಿ ಪ್ಲಾಟ್‌ಫಾರ್ಮ್‌ ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಆದ್ದರಿಂದ ಡಿಶ್‌ ಟಿವಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಡಿಸ್ನಿ + ಹಾಟ್‌ ಸ್ಟಾರ್‌ (Disney+Hotstar), ಝೀ 5 (Zee5) ಮತ್ತು ಲಯನ್ಸ್‌ಗೇಟ್‌ (Lionsgate) ಸೇರಿದಂತೆ ಹಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಗ್ರಾಹಕರಿಗೆ ಬಂಡಲ್‌ ಆಗಿ ನೀಡಲು ಮುಂದಾಗಿದೆ. ಇದರ ಜೊತೆಗೆ ಈ ಸಂಸ್ಥೆ ನಾಲ್ಕು ಹೊಸ ಒಟಿಟಿ ಯೋಜನೆಗಳನ್ನು ಪರಿಚಯಸಿದೆ. ಗ್ರಾಹಕರು ವಾಚೊ (Watcho) ಅಪ್ಲಿಕೇಶನ್ (Application) ಮೂಲಕ ಈ ಹೊಸ ನಾಲ್ಕು ಒಟಿಟಿ ಯೋಜನೆಗಳಿಗೆ ಚಂದಾದಾರರಾಗಬಹುದು ಎಂದು ಕಂಪೆನಿ ತಿಳಿಸಿದೆ.


  ಇದು ಡಿಶ್‌ಟಿವಿ ಪರಿಚಯಿಸುತ್ತಿರುವ ಹೊಸ ಒಟಿಟಿ ಪ್ಲಾಟ್‌ಫಾರ್ಮ್‌ಗಳಾಗಿವೆ. ಡಿಶ್‌ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿ ಪರಿಚಯಿಸಿರುವ ಎಲ್ಲಾ ಹೊಸ ನಾಲ್ಕು ಒಟಿಟಿ ಬಂಡಲ್ ಯೋಜನೆಗಳ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.


  ಡಿಶ್‌ ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿ ತರಲಾಗಿರುವ ಹೊಸ OTT ಯೋಜನೆಗಳು:


  49 ರೂಪಾಯಿಯ ಬೆಲೆಯ ವಾಚೊ ಮಿರ್ಚಿ ಪ್ಲಾನ್:


  ಡಿಶ್‌ ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿ ತರಲಾಗಿರುವ ಅತ್ಯಂತ ಅಗ್ಗದ ಒಟಿಟಿ ಬಂಡಲ್ ಯೋಜನೆಯೆಂದರೆ ಅದು ವಾಚೊ ಮಿರ್ಚಿ ಪ್ಲಾನ್ . ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದು ಕೇವಲ 49 ರೂಪಾಯಿ ಹಣ ಪಾವತಿ ಮಾಡಿ ಚಂದಾದಾರರು ಆಗುವ ಅವಕಾಶವನ್ನು ನೀಡಿದೆ.


  dish-tv-offers-ott-platform-for-customers-here-are-the-special-features-of-ott
  ಡಿಶ್‌ ಟಿವಿ ವಾಚೊ ಒಟಿಟಿ ಪ್ಲಾನ್ಸ್


  ಇದು ಡಿಶ್‌ ಟಿವಿ ಕಂಪೆನಿಯ ಸ್ವಂತ ವಾಚೊ ಅಪ್ಲಿಕೇಶನ್ ಹಂಗಾಮಾ ಪ್ಲೇ, ಎಪಿಕ್ ಆನ್, ಓಹೋ ಗುಜರಾತಿ ಮತ್ತು ಕ್ಲಿಕ್‌‌ ಎಂಬ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ವೀಕ್ಷಿಸಲು ಅನುಮತಿಸುತ್ತದೆ.


  ಇದನ್ನೂ ಓದಿ: ಪ್ರೈಮ್ ಮೆಂಬರ್‌ಶಿಪ್ ಬೆಲೆ ಕಡಿತಗೊಳಿಸಿದ ಅಮೆಜಾನ್! ಯಾರಿಗೆ ಸಿಗುತ್ತೆ ಗೊತ್ತಾ ಈ ಆಫರ್?


  99 ರೂಪಾಯಿಯ ವಾಚೊ ಮಸ್ತಿ ಪ್ಲಾನ್:‌


  ಯಾವುದಾದರು 99 ರೂಪಾಯಿಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಚಂದಾದಾರರಾಗಲು ಅನುಮತಿ ನೀಡುವುದಿಲ್ಲ. ಆದರೆ ಈ ಡಿಶ್‌ ಟಿವಿಯ ವಾಚೊ ಮಸ್ತಿ ಪ್ಲಾನ್‌ ಝೀ 5 ವನ್ನು ಕಡಿಮೆ ಬೆಲೆಗೆ ಸಬ್‌ಸ್ಕ್ರಿಪ್ಷನ್‌ ಮಾಡುವ ಯೋಜನೆ ನೀಡಿದೆ. ಇನ್ನು ಈ ಯೋಜನೆ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಝೀ 5, ವಾಚೊ, ಹೊಯ್ಚೊಯ್, ಹಂಗಾಮಾ ಪ್ಲೇ, ಎಪಿಕ್‌ ಆನ್‌, ಚೌಪಾಲ್, ಓಹೋ ಗುಜರಾತಿ ಮತ್ತು ಕ್ಲಿಕ್ ಇ ರೀತಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ವೀಕ್ಷಿಸಲು ಅನುಮತಿಸುತ್ತದೆ.


  199 ರೂಪಾಯಿಯ ವಾಚೊ ಧಮಾಲ್‌ ಪ್ಲಾನ್:


  10 ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಒಟಿಟಿ ಬಂಡಲ್ ಯೋಜನೆ ಇದಾಗಿದೆ. ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರ ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್, ಝೀ 5, ವಾಚೊ, ಲಯನ್ಸ್‌ಗೇಟ್ ಪ್ಲೇ, ಹೊಯ್ಚೊಯ್, ಹಂಗಾಮಾ ಪ್ಲೇ, ಎಪಿಕ್ ಆನ್, ಚೌಪಾಲ್, ಓಹೋ ಗುಜರಾತಿ ಮತ್ತು ಕ್ಲಿಕ್ ಪ್ಲಾಟ್‌ಫಾರ್ಮ್‌ಗಳ ವೀಕ್ಷಣೆಗೆ ಅನುಮತಿಸಲಿದೆ.


  dish-tv-offers-ott-platform-for-customers-here-are-the-special-features-of-ott
  ಡಿಶ್‌ ಟಿವಿ ವಾಚೊ ಒಟಿಟಿ ಪ್ಲಾನ್ಸ್


  299 ರೂಪಾಯಿಯ ವಾಚೊ ಮ್ಯಾಕ್ಸ್‌ ಪ್ಲಾನ್:


  ಡಿಶ್‌ ಟಿವಿ ತಂದಿರುವ ಅತ್ಯಂತ ದುಬಾರಿ ಒಟಿಟಿ ಬಂಡಲ್ ಯೋಜನೆ ಇದಾಗಿದೆ. ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಸೋನಿ ಲೈವ್, ಡಿಸ್ನಿ+ ಹಾಟ್‌ಸ್ಟಾರ್, ಝೀ5, ವಾಚೊ, ಲಯನ್ಸ್‌ಗೇಟ್ ಪ್ಲೇ, ಹೊಯ್ಚೊಯ್, ಹಂಗಾಮಾ ಪ್ಲೇ, ಎಪಿಕ್ ಆನ್, ಚೌಪಾಲ್, ಓಹೋ ಗುಜರಾತಿ ಮತ್ತು ಕ್ಲಿಕ್ ಪ್ಲಾಟ್‌ಫಾರ್ಮ್‌ಗಳ ವೀಕ್ಷಣೆಗೆ ಅನುಮತಿ ನೀಡುತ್ತದೆ.


  ವಿಶೇಷ ಫೀಚರ್:‌


  ಡಿಶ್‌ ಟಿವಿ ಕಂಪೆನಿ ಈ ಒಟಿಟಿ ಬಂಡಲ್ ಯೋಜನೆಯ ಜೊತೆಗೆ, ವಾಚೊ ಡಿಶ್‌ ಟಿವಿ, ಡಿ2ಹೆಚ್ ಮತ್ತು ಸಿಟಿ ಕೇಬಲ್ ಚಂದಾದಾರರಿಗೆ ಸೀಮಿತ ಅವಧಿಗೆ ವಿಶೇಷ ಆಫರ್‌ನ ಕೊಡುಗೆಯನ್ನು ಸಹ ಪ್ರಾರಂಭಿಸಿದೆ.


  ಇದನ್ನೂ ಓದಿ: ಜಸ್ಟ್‌ 5000 ರೂಪಾಯಿಗೆ ಸಿಗುತ್ತೆ ಒನ್‌ಪ್ಲಸ್‌ ಸ್ಮಾರ್ಟ್‌ವಾಚ್!


  ಈ ಕೊಡುಗೆಯ ಅಡಿಯಲ್ಲಿ ಬಳಕೆದಾರರು ಒಂದು ತಿಂಗಳವರೆಗೆ ಹೊಸ ಸೇವೆಯನ್ನು ಉಚಿತವಾಗಿ ಪಡೆಯಬಹುದು. ಹಾಗೆಯೇ, ಡಿಶ್‌ ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿರುವ ಕಂಟೆಂಟ್ ಅನ್ನು ಮೊಬೈಲ್‌, ಟ್ಯಾಬ್, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಯಲ್ಲಿಯೂ ಸಹ ವೀಕ್ಷಿಸಬಹುದು.

  Published by:ವಾಸುದೇವ್ ಎಂ
  First published: