ಡಿಶ್ಟಿವಿ ಸೆಟ್-ಟಾಪ್ ಬಾಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನ ಹೊತ್ತುತಂದಿದೆ. ಸೆಟ್-ಟಾಪ್ ಬಾಕ್ಸ್ ಹೊಂದಿದವರಿಗೆ ಹಂಗಾಮ ಪ್ಲೇ ಆ್ಯಪ್ ಅನ್ನು ಬಳಸುವ ಆಯ್ಕೆಯನ್ನು ನೀಡುತ್ತಿದೆ. ಡಿಟಿಎಚ್ ಸೇವೆ ಒದಗಿಸುವ ಡಿಶ್ಟಿವಿ ಇಂದು ಹಂಗಾಮ ಪ್ಲೇ ಜೊತೆಗೆ ಕೈಜೋಡಿಸಿಕೊಂಡಿರುವುದಾಗಿ ತಿಳಿಸಿದೆ. ಆ ಮೂಲಕ ಡಿಶ್ಟಿವಿ ಇಂಡಿಯಾ ಆ್ಯಂಡ್ರಾಯ್ಡ್ ಸೆಟ್-ಟಾಪ್ ಬಾಕ್ಸ್ ಬಳಕೆದಾರರಿಗೆ ಹಂಗಾಮ ಪ್ಲೇ ಬಳಸಲು ಅವಕಾಶ ನೀಡಿದೆ. ಬಳಕೆದಾರರಿಗೆ ಹೊಸ ಅನುಭವವನ್ನು ಒದಗಿಸುವ ಸಲುವಾಗಿ ಡಿಶ್ಟಿವಿ ಈ ಸೇವೆಯನ್ನು ನೀಡುತ್ತಿದೆ. ಪ್ರೀಮಿಯಂ, ಮಲ್ಟಿಲಿಂಗ್ವಲ್, ಮಲ್ಟಿ-ಜನರೇಶನ್ ಎಂಬ ಮೂರು ಆಯ್ಕೆಯಲ್ಲಿ ಹಂಗಾಮ ಪ್ಲೇ ಅನ್ನು ಬಳಸಬಹುದಾಗಿದೆ.
ಇನ್ನು ಹಂಗಾಮದಲ್ಲಿ 5 ಸಾವಿರ ಹಿಂದಿ, ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಯ ಸಿನಿಮಾಗಳಿವೆ. 1500 ಶಾರ್ಟ್ ಫಿಲ್ಮ್ಗಳಿವೆ. ಜೊತೆಗೆ ಮಕ್ಕಳ ಸಿನಿಮಾ ಇದರಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ