Yamaha: ಯಮಹಾ ಸ್ಕೂಟರ್​ಗಳ ಮೇಲೆ ಭರ್ಜರಿ ರಿಯಾಯಿತಿ​! 1 ಲಕ್ಷದವರೆಗೂ ಬಹುಮಾನ ಪಡೆಯುವ ಅವಕಾಶ!

Yamaha Offer: ಯಮಹಾ ಹೊಸದಾಗಿ ಬಿಡುಗಡೆಗೊಂಡ ಫಾಸಿನೋ 125 Fi ಹೈಬ್ರಿಡ್, ರೇ ZR 125 FI, ರೇ ZR ಸ್ಟ್ರೀಟ್ ರ್ಯಾಲಿ 125 FI, ಮತ್ತು ಹೈಬ್ರಿಡ್ ಅಲ್ಲದ ಫಾಸಿನೋ 125 Fi ಆವೃತ್ತಿಗಳ ಮೇಲೆ ಈ ಕೊಡುಗೆಯನ್ನು ನೀಡುತ್ತಿದೆ. ಸೆಪ್ಟೆಂಬರ್ 30 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು ಕಂಪನಿ ತಿಳಿಸಿದೆ.

Yamaha Fascino

Yamaha Fascino

  • Share this:
    Yamaha India: ಯಮಹಾ ತನ್ನ ಗ್ರಾಹಕರಿಗೆಂದೇ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಭಾರತದಲ್ಲಿ ಲಭ್ಯವಿರುವ ಯಮಹಾ ಸ್ಕೂಟರ್ ಮೇಲೆ ಆಕರ್ಷಕ ಕೊಡುಗೆ ನೀಡುತ್ತಿದೆ. ಆ ಮೂಲಕ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಮಾಡಿಕೊಡುತ್ತಿದೆ.

    ಅಂದಹಾಗೆಯೇ, ಯಮಹಾ ಹೊಸದಾಗಿ ಬಿಡುಗಡೆಗೊಂಡ ಫಾಸಿನೋ 125 Fi ಹೈಬ್ರಿಡ್, ರೇ ZR 125 FI, ರೇ ZR ಸ್ಟ್ರೀಟ್ ರ್ಯಾಲಿ 125 FI, ಮತ್ತು ಹೈಬ್ರಿಡ್ ಅಲ್ಲದ ಫಾಸಿನೋ 125 Fi ಆವೃತ್ತಿಗಳ ಮೇಲೆ ಈ ಕೊಡುಗೆಯನ್ನು ನೀಡುತ್ತಿದೆ. ಸೆಪ್ಟೆಂಬರ್ 30 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು ಕಂಪನಿ ತಿಳಿಸಿದೆ.

    ಫಾಸಿನೋ 125 Fi ಮತ್ತು ರೇ ZR​ 125 Fi (ಹೈಬ್ರಿಡ್ ಅಲ್ಲದ ಆವೃತ್ತಿಗಳು) ಖರೀದಿಯ ಮೇಲೆ 3,876 ರೂ ವಿಮಾ ಪ್ರಯೋಜನಗಳನ್ನು ನೀಡುತ್ತಿದೆ. ಅದರ ಜೊತೆಗೆ 999 ರೂ ಡೌನ್ ಪೇಮೆಂಟ್,  ಸ್ಕ್ರ್ಯಾಚ್ ಮತ್ತು 2,999 ಉಡುಗೊರೆಯೊಂದಿಗಿನ ವಿನ್ ಆಫರ್ ಗ್ರಾಹಕರಿಗೆ ಸಿಗಲಿದೆ.

    ಅಷ್ಟು ಮಾತ್ರವಲ್ಲದೆ, ಒಂದು ಲಕ್ಷ ರೂ ಬಂಪರ್ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ನೀಡುತ್ತಿದೆ. ತಮಿಳುನಾಡಿನಲ್ಲಿ ಕಂಪನಿಯು 3,876 ರೂ ಅಥವಾ 999 ರೂ ಡೌನ್ ಪೇಮೆಂಟ್ ಮತ್ತು 2,999 ರೂ ಉಡುಗೊರೆ ಭರವಸೆ ನೀಡಿದೆ. ಮತ್ತೊಂದೆಡೆ ಹೊಸ ಫಾಸಿನೋ 125 Fi ಹೈಬ್ರಿಡ್ ಖರೀದಿಯ ಮೇಲೆ 5,000 ರೂ ಕ್ಯಾಶ್‌ಬ್ಯಾಕ್ ಅಥವಾ 999ರೂ ಡೌನ್ ಪೇಮೆಂಟ್ ಅಥವಾ 6,000 ರೂ ವಿನಿಮಯ ಪ್ರಯೋಜನಗಳನ್ನು ನೀಡುತ್ತಿದೆ. 2,999 ರೂ (ಟಿಎನ್ ಹೊರತುಪಡಿಸಿ) ಮತ್ತು 1 ಲಕ್ಷ ಬಂಪರ್ ಬಹುಮಾನದ ಖಾತರಿಯ ಉಡುಗೊರೆಯೊಂದಿಗೆ ಸ್ಕ್ರಾಚ್ ಮತ್ತು ವಿನ್ ಆಫರ್ ಕೂಡ ಇದೆ.

    Read Also⇒ Miಗೆ ಗುಡ್‌ಬೈ ಹೇಳಿದ Xiaomi: ನೂತನ ಲೋಗೋ ಬ್ರ್ಯಾಂಡ್‌ ಘೋಷಣೆ

    ತಮಿಳುನಾಡು ಗ್ರಾಹಕರಿಗೆ 5,000 ರೂ ಕ್ಯಾಶ್‌ಬ್ಯಾಕ್ ಅಥವಾ 999 ರೂ ಡೌನ್ ಪೇಮೆಂಟ್ ಅಥವಾ ರೂ. 6,000 ವಿನಿಮಯ ಪ್ರಯೋಜನಗಳು  ಜೊತೆಗೆ 2,999 ರೂ ಖಾತರಿಯ ಉಡುಗೊರೆ ನೀಡುತ್ತಿದೆ.

    ಯಮಹಾ ಪ್ರಸ್ತುತ ಉತ್ಪನ್ನ ಪೋರ್ಟ್​ಪೊಲಿಯೊದಲ್ಲಿ YZF-R15 ಆವೃತ್ತಿ 3.0, MT-15, FZ 25, FZS 25, FZ-S FI, FZ FI, FZ-X, ಮತ್ತು UBS- ಸಕ್ರಿಯಗೊಳಿಸಿದ ಸ್ಕೂಟರ್‌ಗಳಾದ Fascino 125 FI ಹೈಬ್ರಿಡ್, Fascino 125 Fi, Ray ZR 125 Fi, ಮತ್ತು ಸ್ಟ್ರೀಟ್ ರ್ಯಾಲಿ 125 FI ಮೇಲೂ ಆಕರ್ಷಕ ಆಫರ್​ ನೀಡುತ್ತಿದೆ.
    Published by:Harshith AS
    First published: