Apple Company: ಇದೊಂದೇ ಕಾರಣಕ್ಕೆ ಆ್ಯಪಲ್ ನ ಮಷಿನ್ ಲರ್ನಿಂಗ್ ನಿರ್ದೇಶಕ ಕೆಲಸ ತೊರೆಯಲು ಕಾರಣವಾಗಿದ್ದು!

Apple: ಆ್ಯಪಲ್ ಕಂಪನಿಯ ಮಷಿನ್ ಲರ್ನಿಂಗ್ ನಿರ್ದೇಶಕ ಇಯಾನ್ ಗುಡ್ ಫೆಲೋ ಕೂಡ ಅದೇ ರೀತಿ ಭಾವಿಸಿದ್ದಾರೆ ನೋಡಿ. ಅವರು ಕಚೇರಿಗೆ ಮರಳಲು ಕೇಳಿದ ನಂತರ ಅವರು ಆ್ಯಪಲ್ ನಲ್ಲಿರುವ ತಮ್ಮ ಕೆಲಸವನ್ನು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.

 ಆ್ಯಪಲ್ ಕಂಪನಿ

ಆ್ಯಪಲ್ ಕಂಪನಿ

  • Share this:
ಎರಡು ವರ್ಷಗಳ ಹಿಂದೆ ಬೆಳಿಗ್ಗೆ (Morning) ಆಯ್ತು ಎಂದರೆ ಗಂಡಸರು ತಮ್ಮ ಕೆಲಸಕ್ಕೆ ಎಂದು ಕಚೇರಿಗೆ ತೆರಳುತ್ತಿದ್ದರು, ಮಕ್ಕಳು (Children) ಬ್ಯಾಗ್ (Bag) ಹಾಕಿಕೊಂಡು ಊಟದ ಬುತ್ತಿಯನು ಕೈಯಲ್ಲಿ ಹಿಡಿದುಕೊಂಡು ಶಾಲೆಗೆ (School) ಹೋಗುತ್ತಿದ್ದರು. ಆದರೆ ಮಾರ್ಚ್ 2020 ರಿಂದ ಏನೆಲ್ಲಾ ಸಾಮಾನ್ಯವಾಗಿ ನಡೆದುಕೊಂಡು ಹೋಗುತ್ತಿತ್ತೋ, ಅದೆಲ್ಲವೂ ಬದಲಾಯ್ತು ನೋಡಿ. ಹೌದು ಕೋವಿಡ್-19 (Covide-19) ಸಾಂಕ್ರಾಮಿಕ ರೋಗವು ಭಾರತಕ್ಕೆ (India) ಪ್ರವೇಶ ಮಾಡಿದ್ದೆ ತಡ ಅನಿರೀಕ್ಷಿತವಾದ ಲಾಕ್‌ಡೌನ್ (Lockdown) ಅನ್ನು ಜಾರಿಗೆ ತರಲಾಯಿತು. ಈ ಮುಂಚೆ ಮನೆಯಲ್ಲಿ ಕುಳಿತು ಕಚೇರಿಯ ಕೆಲಸವನ್ನು (Work From Home) ಮಾಡಬಹುದು ಎಂಬ ಮಾತು ಕೇಳಿದ್ದರು ಮತ್ತು ಕೆಲವರು ಅನಾರೋಗ್ಯದ ಕಾರಣ ಆಗಾಗ್ಗೆ ಮಾಡಿರಬಹುದು. ಆದರೆ, ಅವೆಲ್ಲವೂ ಈ ಸಮಯದಲ್ಲಿ ಅಕ್ಷರಶಃ ಸಾಕಾರಾವಾಯಿತು.

ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ವರ್ಕ್ ಫ್ರಮ್ ಹೋಂ
ಎರಡು ವರ್ಷಗಳ ಕಾಲ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಎಲ್ಲಾ ಲೋಕ ರೂಢಿಗಳು ಬದಲಾದವು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಂಪನಿಗಳಿಗೆ ಮತ್ತು ಕಚೇರಿಗೆ ಹೋಗಿ ಕೆಲಸ ಮಾಡುವವರು ಮನೆಯಲ್ಲಿಯೇ ಕುಳಿತು ಕೆಲಸ ಮಾಡುವಂತೆ ಆಯಿತು ಮತ್ತು ಈಗ ಎರಡು ವರ್ಷಗಳ ನಂತರ ಮತ್ತೆ ಆಫೀಸಿಗೆ ಬಂದು ಕುಳಿತು ಕೆಲಸ ಮಾಡಿ ಎಂದರೆ ಬಹುತೇಕರಿಗೆ ರವಿವಾರದ ರಜೆ ಮುಗಿಸಿ ಸೋಮವಾರ ಬೆಳಿಗ್ಗೆ ಶಾಲೆಗೆ ಬರುವ ಅನುಭವ ಆಗುತ್ತಿದೆ ನೋಡಿ.

ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿನ ಇಳಿಕೆಯು ಎರಡು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಕಚೇರಿಗಳನ್ನು ಮತ್ತೆ ತೆರೆಯಲು ಕಾರಣವಾಯಿತು. ಬಹಳಷ್ಟು ಜನರು ಮತ್ತೆ ಕಚೇರಿಯಿಂದ ಕೆಲಸ ಮಾಡಲು ಉತ್ಸುಕರಾಗಿದ್ದರೆ, ಉಳಿದ ಅರ್ಧದಷ್ಟು ಜನರು ಕಚೇರಿಯಿಂದ ಕೆಲಸ ಮಾಡುವ ಆಲೋಚನೆಯನ್ನು ವಿರೋಧಿಸುತ್ತಿದ್ದಾರೆ. ಏಕೆಂದರೆ ಅದು ಉತ್ಪಾದಕತೆಗೆ ಅಡ್ಡಿಪಡಿಸುತ್ತದೆ, ನಮ್ಯತೆಯನ್ನು ತೆಗೆದು ಹಾಕುತ್ತದೆ ಮತ್ತು ಪ್ರಯಾಣ ಸೇರಿದಂತೆ ಇತರ ವಿಷಯಗಳಿಗೆ ಹೆಚ್ಚಿನ ಸಮಯವನ್ನು ವ್ಯಯಿಸುತ್ತದೆ ಎಂದು ಅವರು ಭಾವಿಸುತ್ತಾರೆ.

ಓದನ್ನೂ ಓದಿ:  IPhone 14 Max: ಆ್ಯಪಲ್ ಐಫೋನ್ 14 ಮ್ಯಾಕ್ಸ್ ಈ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆಯಂತೆ!

ಕೆಲಸ ತೊರೆದ ಆ್ಯಪಲ್ ನ ಮಷಿನ್ ಲರ್ನಿಂಗ್ ನಿರ್ದೇಶಕ
ಆ್ಯಪಲ್ ಕಂಪನಿಯ ಮಷಿನ್ ಲರ್ನಿಂಗ್ ನಿರ್ದೇಶಕ ಇಯಾನ್ ಗುಡ್ ಫೆಲೋ ಕೂಡ ಅದೇ ರೀತಿ ಭಾವಿಸಿದ್ದಾರೆ ನೋಡಿ. ಅವರು ಕಚೇರಿಗೆ ಮರಳಲು ಕೇಳಿದ ನಂತರ ಅವರು ಆ್ಯಪಲ್ ನಲ್ಲಿರುವ ತಮ್ಮ ಕೆಲಸವನ್ನು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ದಿ ವರ್ಜ್ ನ ಜೋ ಸ್ಕಿಫರ್ ಪ್ರಕಾರ, ಇಯಾನ್ ತನ್ನ ತಂಡದ ಸದಸ್ಯರಿಗೆ ಕಂಪನಿಯನ್ನು ತೊರೆಯುವ ತನ್ನ ನಿರ್ಧಾರದ ಬಗ್ಗೆ ಈಗಾಗಲೇ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆ್ಯಪಲ್ ನ ಮಷಿನ್ ಲರ್ನಿಂಗ್ ನಿರ್ದೇಶಕ ಇಯಾನ್ ಗುಡ್ ಫೆಲೋ ಅವರು ಕೆಲಸಕ್ಕೆಂದು ಮತ್ತೆ ಆಫೀಸಿಗೆ ಮರಳುವ ಹೊಸ ನೀತಿಯ ಕಾರಣದಿಂದಾಗಿ ಕಂಪನಿಯನ್ನು ತೊರೆಯುತ್ತಿದ್ದಾರೆ ಎಂದು ಜೋ ಟ್ವೀಟ್ ಮಾಡಿದ್ದಾರೆ. ಸಿಬ್ಬಂದಿಗೆ ಬರೆದ ಟಿಪ್ಪಣಿಯಲ್ಲಿ, "ಹೆಚ್ಚಿನ ಫ್ಲೆಕ್ಸಿಬಿಲಿಟಿ ನನ್ನ ತಂಡಕ್ಕೆ ಅತ್ಯುತ್ತಮ ನೀತಿಯಾಗಿದೆ ಎಂದು ನಾನು ಬಲವಾಗಿ ನಂಬುತ್ತೇನೆ" ಎಂದು ಅವರು ಹೇಳಿದರು. ಕಂಪನಿಯನ್ನು ತೊರೆಯುವ ಇಯಾನ್ ಅವರ ನಿರ್ಧಾರವು ಆ್ಯಪಲ್ ನ ಹೈಬ್ರಿಡ್ ಕೆಲಸದ ನೀತಿಯಿಂದ ಪ್ರಭಾವಿತವಾಗಿತ್ತು ಎಂದು ಹೇಳಲಾಗುತ್ತಿದೆ.

ಆ್ಯಪಲ್ ನ ಹೊಸ ನಡೆ ಅಸಮಾಧಾನ ಉಂಟು ಮಾಡಿದೆ
ಹೊಸ ಕೆಲಸದ ನೀತಿಯು ಉದ್ಯೋಗಿಗಳು ಏಪ್ರಿಲ್ 11 ರೊಳಗೆ ವಾರಕ್ಕೆ ಕನಿಷ್ಠ ಒಂದು ದಿನ, ಮೇ 2 ರೊಳಗೆ ವಾರಕ್ಕೆ ಕನಿಷ್ಠ ಎರಡು ದಿನಗಳು ಮತ್ತು ಮೇ 23 ರೊಳಗೆ ವಾರಕ್ಕೆ ಕನಿಷ್ಠ ಮೂರು ದಿನಗಳು ಆಫೀಸಿನಲ್ಲಿ ಬಂದು ಕುಳಿತುಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿತ್ತು. ಈಗ ಮೇ 23 ರಿಂದ ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿ ಬರುವಂತೆ ಆ್ಯಪಲ್ ತನ್ನ ಉದ್ಯೋಗಿಗಳಿಗೆ ಈಗಾಗಲೇ ಸೂಚಿಸಿದೆ. ಆದಾಗ್ಯೂ, ಕೆಲವು ಉದ್ಯೋಗಿಗಳು ಆ್ಯಪಲ್ ನ ಹೊಸ ನಡೆಯಿಂದ ಸಂತೋಷಗೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಓದನ್ನೂ ಓದಿ:  Smart Phone: ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್‌ಫೋನ್ ಖರೀದಿಸೋ ಯೋಚನೆ ಇದ್ಯಾ? ಇದು ನಿಮಗೆ ಸೂಟ್ ಆಗುತ್ತೆ 

ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಆ್ಯಪಲ್ ಸಿಇಒ ಟಿಮ್ ಕುಕ್ ಅವರಿಗೆ ಇ-ಮೇಲ್ ಮೂಲಕ ಪತ್ರ ಬರೆದಿದ್ದು, ಕಚೇರಿಗೆ ಮರಳುವ ದುಷ್ಪರಿಣಾಮಗಳನ್ನು ಅದರಲ್ಲಿ ಉಲ್ಲೇಖಿಸಿದ್ದಾರೆ. ಈ ನಿರ್ಧಾರವನ್ನು ನಾವ್ಯಾರೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ಈ ನಿರ್ಧಾರವನ್ನು ಅನೇಕರು ಒಪ್ಪುವುದೇ ಇಲ್ಲ" ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
Published by:Ashwini Prabhu
First published: