HOME » NEWS » Tech » DIGITAL WILL HELPS YOU TO GET RID OF MANY CONTRADICTIONS AND LOOPHOLES WHILE GOING THROUGH THE PROCESS STG HG

Digital Will: ವಿಲ್​ ಮಾಡಿಸಲು ವಕೀಲರಿಗೆ ಹಣ ಪಾವತಿಸಬೇಕಿಲ್ಲ, ಆನ್‌ಲೈನ್‌ನಲ್ಲಿ ಕೆಲವೇ ಕ್ಲಿಕ್ಸ್​​ ಸಾಕು!

ಆನ್‌ಲೈನ್‌ನಲ್ಲಿ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ವಿಲ್ ಬರೆಯಬಹುದು. ಈ ಸಮಯದಲ್ಲಿ ಉಂಟಾಗುವ ಲೋಪದೋಷಗಳನ್ನು ಕೂಡ ಗುರುತಿಸಿ ಸರಿ ಮಾಡಬಹುದು. ಇದಕ್ಕೆ ಡಿಜಿಟಲ್ ನಿಮಗೆ ಸಹಾಯ ಮಾಡುತ್ತದೆ. ವಕೀಲರ ನೆರವಿಲ್ಲದೇ ವಿಲ್​ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಬಹುದು.

news18-kannada
Updated:June 24, 2021, 5:57 PM IST
Digital Will: ವಿಲ್​ ಮಾಡಿಸಲು ವಕೀಲರಿಗೆ ಹಣ ಪಾವತಿಸಬೇಕಿಲ್ಲ, ಆನ್‌ಲೈನ್‌ನಲ್ಲಿ ಕೆಲವೇ ಕ್ಲಿಕ್ಸ್​​ ಸಾಕು!
ಪ್ರಾತಿನಿಧಿಕ ಚಿತ್ರ
 • Share this:

ನಿಮ್ಮ ಸಂಪತ್ತನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಹಲವಾರು ಮಾರ್ಗಗಳಿವೆ. ಅದರಲ್ಲಿ ವಿಲ್ ಅಥವಾ ಉಯಿಲು ಬರೆಯುವುದು ಒಂದು. ಮೊದಲೆಲ್ಲಾ ವಕೀಲರ ನೆರವಿನಿಂದ ವಿಲ್ ಬರೆಸುವ ಪರಿಪಾಠವಿತ್ತು, ಈಗಲೂ ಇದೆ. ಆದರೆ ಈ ನಿಟ್ಟಿನಲ್ಲಿ ಸ್ವಲ್ಪ ಡಿಜಿಟಲೀಕರಣ ಬದಲಾವಣೆಗಳನ್ನು ತರುತ್ತಿದೆ. ಈಗ ಡಿಜಿಟಲ್ ವಿಲ್​ಗಳು ಕೂಡ ಪ್ರಸಿದ್ಧಿ ಪಡೆದುಕೊಳ್ಳುತ್ತಿವೆ. ಸಾಮಾನ್ಯವಾಗಿ ಡಿಜಿಟಲ್ ವಿಲ್ ಅನ್ನು ಇ-ವಿಲ್ ಎಂದು ಕರೆಯಲಾಗುತ್ತದೆ. ಇದು ಆನ್‌ಲೈನ್ ವಿಲ್ ಆಗಿದ್ದು, ಸರಿಯಾದ ಮತ್ತು ಸುರಕ್ಷಿತ ರೀತಿಯಲ್ಲಿ ರಚಿಸುವ ಕ್ರಿಯೆಯಾಗಿದೆ. ಇದು ನಿಮ್ಮ ಸ್ವತ್ತುಗಳು, ಹಣಕಾಸು ಹೂಡಿಕೆಗಳ ಬಗ್ಗೆ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸುತ್ತದೆ. ಜೊತೆಗೆ ನಿಮ್ಮ ಆಸ್ತಿ, ಹಣ ಮತ್ತು ಇತರ ಸ್ವತ್ತುಗಳನ್ನು ನೀವು ಸತ್ತ ನಂತರ ಯಾರಿಗೆ ನೀಡಲು ಬಯಸುತ್ತೀರಿ ಅವರಿಗೆ ಮಾಹಿತಿ ಒದಗಿಸುತ್ತದೆ.


30 ನಿಮಿಷದಲ್ಲಿ ವಿಲ್ ಬರೆಯಬಹುದುಆನ್‌ಲೈನ್‌ನಲ್ಲಿ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ವಿಲ್ ಬರೆಯಬಹುದು. ಈ ಸಮಯದಲ್ಲಿ ಉಂಟಾಗುವ ಲೋಪದೋಷಗಳನ್ನು ಕೂಡ ಗುರುತಿಸಿ ಸರಿ ಮಾಡಬಹುದು. ಇದಕ್ಕೆ ಡಿಜಿಟಲ್ ನಿಮಗೆ ಸಹಾಯ ಮಾಡುತ್ತದೆ. ವಕೀಲರ ನೆರವಿಲ್ಲದೇ ವಿಲ್​ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಬಹುದು. ಇದೆಲ್ಲವೂ ಕೂಡ ನಿಖರವಾಗಿರುತ್ತದೆ.


ಇ- ವಿಲ್​ಗಳನ್ನು ಮಾಡುವ ಹಂತಗಳು
 • ವಿವಿಧ ಡಿಜಿಟಲ್ ಸೇವೆಗಳಿಗೆ ಅನುಗಣವಾಗಿ ವಿಲ್ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಹಲವಾರು ಮಾರ್ಗಗಳಿವೆ.
  ವೆಬ್‌ಸೈಟ್‌ನಲ್ಲಿ, ಲಾಗಿನ್ ಐಡಿಯನ್ನು ನೋಂದಾಯಿಸಿ ಮತ್ತು ರಚಿಸಿ.
 • ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ (3,000 ರಿಂದ 5,000 ರೂ.) ಶುಲ್ಕವನ್ನು ಪಾವತಿಸಬಹುದು.

 • ಈ ಕೆಳಗಿನ ವರ್ಗಗಳಿಂದ ಆರಿಸಿಕೊಳ್ಳಿ: ಲಿಂಗ, ಧರ್ಮ, ನಿವಾಸ ಸ್ಥಿತಿ, ಉದ್ಯೋಗ ಮತ್ತು ರಾಷ್ಟ್ರೀಯತೆ (ಭಾರತೀಯ / ಎನ್‌ಆರ್‌ಐ) ಇವೆಲ್ಲವೂ ಪರಿಗಣಿಸಬೇಕಾದ ಅಂಶಗಳಾಗಿವೆ.

 • ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮಾಹಿತಿ ಮತ್ತು ನಿಮ್ಮ ಎಲ್ಲಾ ಸ್ವತ್ತುಗಳ ಮಾಹಿತಿ ಭರ್ತಿ ಮಾಡಿ.

 • ನಿಮ್ಮ ಉತ್ತರಾಧಿಕಾರಿಗಳಿಗೆ ನೀವು ಬಿಡಲು ಬಯಸುವ ಸ್ವತ್ತುಗಳ ವಿವರಗಳನ್ನು ಭರ್ತಿ ಮಾಡಿ.

 • ಸಬ್​ಮಿಟ್​​ ಬಟನ್ ಕ್ಲಿಕ್ ಮಾಡುವ ಮೂಲಕ ಇ-ವಿಲ್ ಅನ್ನು ಸಲ್ಲಿಸಿ ಅಥವಾ ಇ-ವಿಲ್ ಜನರೇಟ್ ಮಾಡಿ.

 • ಅರ್ಹ ವಕೀಲರಿಂದ ವಿಲ್​ನ ಕರಡು ಮಾಡಲು ಅರ್ಹ ಡಿಜಿಟಲ್ ವಿಲ್ ಸೇವಾ ಪೂರೈಕೆದಾರರು ನೀಡುತ್ತಾರೆ.

 • ನಕಲು ಕರಡು ನಿಮಗೆ ಕಳುಹಿಸಲಾಗುವುದು.

 • ಅದನ್ನು ಪರೀಕ್ಷಿಸಿ ಮತ್ತು ಅಗತ್ಯವಾದ ಯಾವುದೇ ಬದಲಾವಣೆಗಳನ್ನು ಮಾಡಿ.

 • ವಿಲ್​​ನ ಅಂತಿಮ ಕರಡನ್ನು ನಿಮಗೆ ಇ ಮೇಲ್ ಮೂಲಕ ಕಳುಹಿಸಲಾಗುವುದು. ವಿಲ್​ನ ಕಾಯಂಪ್ರತಿಗಳ ಸಹಿಗೆ ಅಗತ್ಯವಾದ ಮಾರ್ಗಸೂಚಿಗಳ ಕುರಿತ ಮಾಹಿತಿಯೊಂದಿಗೆ ನಿಮ್ಮ ಮನೆಗೆ ಕಳಹಿಸಲಾಗುತ್ತದೆ.

 • ನಿಮ್ಮ ವಿಲ್​​​ನ ಮಾನ್ಯತೆಯನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಸಹಿ ಮಾಡಿ


ಇ - ವಿಲ್​ನ ಪ್ರಯೋಜನಗಳು
 • ಇ- ವಿಲ್​​ ರಚಿಸುವ ಪ್ರಕ್ರಿಯೆಯು ಸರಳ, ಅವಲಂಬನೆಯ ಅಗತ್ಯವಿಲ್ಲ ಮತ್ತು ಹೊಂದಿಕೊಳ್ಳಬಲ್ಲದು.

 • ಇದು ಸಮಯವನ್ನು ಕಾಪಾಡುತ್ತದೆ, ಭದ್ರತೆ ಹೆಚ್ಚಿರುತ್ತದೆ ಮತ್ತು ಡೇಟಾವನ್ನು ಖಾಸಗಿಯಾಗಿರಿಸುತ್ತದೆ.

 • ವೃತ್ತಿಪರ ವಕೀಲರು ಇ-ವಿಲ್ ಸಿದ್ಧಪಡಿಸುತ್ತಾರೆ.

 • ನಿಮ್ಮ ಎಲ್ಲಾ ಆಸ್ತಿ ಮಾಹಿತಿಯನ್ನು ಸಂಘಟಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

 • ಸಂಪತ್ತಿನ ಹಂಚಿಕೆಯನ್ನು ಭದ್ರಪಡಿಸುವ ಸರಳ ವಿಧಾನ.

 • ಸೇವೆ ಸಮಂಜಸವಾದ ವೆಚ್ಚದಲ್ಲಿ ಲಭ್ಯವಿದೆ.

 • ಇ-ವೆಬ್‌ಸೈಟ್ ವಿಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ.


ಏನು ಮಾಡಬೇಕು ? ಏನು ಮಾಡಬಾರದು?
 • ವಿಲ್​​ ಬರೆಯುವ ವ್ಯಕ್ತಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ನಿರ್ಧಾರ ತೆಗೆದುಕೊಳ್ಳುವಂತಹ ಉತ್ತಮ ಮನಸ್ಥಿತಿಯಲ್ಲಿರಬೇಕು.

 • ವಿಲ್​ನಲ್ಲಿ ವಂಶಸ್ಥರ ಹೆಸರುಗಳನ್ನು ನಿಖರವಾಗಿ ಬರೆಯಬೇಕು.

 • ಔಪಚಾರಿಕ ವಿಲ್​ಗೆ ಸಹಿ ಹಾಕುವಾಗ ಕನಿಷ್ಠ ಇಬ್ಬರು ವಯಸ್ಕರು ಹಾಜರಿರಬೇಕು.

 • ಆಸ್ತಿ, ಎಫ್‌ಡಿಗಳು, ಸೆಕ್ಯುರಿಟೀಸ್, ಬಾಂಡ್‌ಗಳು, ಬ್ಯಾಂಕ್ ಖಾತೆಗಳು, ವಿಮೆ ಮತ್ತು ಇತರ ಡಿಜಿಟಲ್ ಸ್ವತ್ತುಗಳಂತಹ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳ ಮಾಹಿತಿ ಮತ್ತು ದಾಖಲೆ ಆನ್‌ಲೈನ್ ನಲ್ಲಿ ದಾಖಲಿಸಿ ಸಂರಕ್ಷಿಸಲಾಗುತ್ತದೆ.

 • ಅಗತ್ಯಬಿದ್ದರೆ, ಯಾವುದೇ ಸಮಯದಲ್ಲೂ ವಿಲ್ ಅನ್ನು ಹಿಂಪಡೆಯಬಹುದು, ರದ್ದು ಮಾಡಬಹುದು. ಆದ್ದರಿಂದ ತಮ್ಮ ಬಳಿ ವಿಲ್​ನ ಒಂದು ದಾಖಲೆಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ.

 • ಆಸ್ತಿ ವಿವರಗಳು ಅಧಿಕೃತವಾಗಿರಬೇಕು.


ಇ - ವಿಲ್ ಸೇವಾ ಪೂರೈಕೆದಾರರು
 • ಆನ್‌ಲೈನ್‌ನಲ್ಲಿ ವಿಲ್ ಮಾಡಲು ನಿಮಗೆ ಸಹಾಯ ಮಾಡಲು ಹಲವಾರು ಸೇವೆಗಳು ಲಭ್ಯವಿದೆ.

 • ಈಜಿವಿಲ್ ಅನ್ನು ಎನ್ಎಸ್​ಡಿಎಲ್ ಮತ್ತು ವಾರ್ಮಂಡ್ ಟ್ರಸ್ಟಿಗಳು ಪ್ರಾರಂಭಿಸಿದ್ದಾರೆ.

 • ಐಸಿಐಸಿಐ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ (ಎನ್ಆರ್​ಐ ಗ್ರಾಹಕರಿಗೆ ಸೇವೆಗಳನ್ನು ಒದಗಿಸುತ್ತದೆ).

 • ಈ ಹಣಕಾಸು ಸಂಸ್ಥೆಗಳು ಎನ್‌ಎಸ್‌ಡಿಎಲ್‌ನೊಂದಿಗೆ ಪಾಲುದಾರಿಕೆ ಹೊಂದಿವೆ. Willjini.com ಜೊತೆಗೆ

 • ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಇದೆ.

 • ಎಸ್‌ಬಿಐ ಕ್ಯಾಪ್ ಟ್ರಸ್ಟಿ ಕಂಪನಿ.


First published: June 24, 2021, 5:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories