ಡಿಜಿಟಲ್ ಸಹಿ ಮಾಡೋದು ಹೇಗೆ? ಇಲ್ಲಿದೆ ಸುಲಭ ವಿಧಾನ
Digital Signatures: ಸ್ಕ್ಯಾನ್ ಮಾಡಿ ನಂತರ ಆ ದಾಖಲೆಯನ್ನು ವರ್ಡ್ ಪ್ರೊಸೆಸರ್ ಅಥವಾ ಇಮೇಜ್ ಎಡಿಟರ್ನಲ್ಲಿ ತೆಗೆದು ಬೇಕಾದ ಜಾಗಕ್ಕೆ ಪೇಸ್ಟ್ ಮಾಡಬಹುದಾಗಿದೆ.
news18-kannada Updated:November 29, 2020, 5:01 PM IST

ಡಿಜಿಟಲ್ ಸಹಿ
- News18 Kannada
- Last Updated: November 29, 2020, 5:01 PM IST

ಕೊರೋನಾದಿಂದಾಗಿ ಅನೇಕರು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ಎಲ್ಲಾ ಕೆಲಸವನ್ನು ಆನ್ಲೈನ್ ಮೂಲಕ ಮಾಡುತ್ತಿದ್ದಾರೆ. ಬ್ಯಾಂಕ್ ವಹಿವಾಟು, ಆಫೀಸ್ ಕೆಲಸಗಳನ್ನು ಮುಂತಾದವುಗಳನ್ನು ಮನೆಯಲ್ಲಿಯೇ ಕುಳಿತು ಮಾಡುತ್ತಿದ್ದಾರೆ. ಅದಕ್ಕೆ ಬೇಕಾದ ಸಹಿಯನ್ನು ಕೂಡ ಆನ್ಲೈನ್ ಮೂಲಕವೇ ಮಾಡುತ್ತಿದ್ದಾರೆ.

ಆನೇಕರಿಗೆ ಆನ್ಲೈನ್ ಮೂಲಕ ಸಹಿ ಮಾಡೋದು ಹೆಗೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲಿಗೆ ಬಿಳಿ ಹಾಳೆಯ ಮೇಲೆ ಸಹಿ ಮಾಡಬೇಕು. ನಂತರ ಅದನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ನಲ್ಲಿ ಸೇವ್ ಮಾಡಬೇಕು. ನಂತರ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲ್ ರೂಪಕ್ಕೆ ತರಬೇಕು.

ಸ್ಕ್ಯಾನ್ ಮಾಡಿ ನಂತರ ಆ ದಾಖಲೆಯನ್ನು ವರ್ಡ್ ಪ್ರೊಸೆಸರ್ ಅಥವಾ ಇಮೇಜ್ ಎಡಿಟರ್ನಲ್ಲಿ ತೆಗೆದು ಬೇಕಾದ ಜಾಗಕ್ಕೆ ಪೇಸ್ಟ್ ಮಾಡಬಹುದಾಗಿದೆ.

ಐಫೋನ್ ಮತ್ತು ಐಪ್ಯಾಡ್ಗಳಲ್ಲಿ ಡಿಜಿಟಲ್ ಸಹಿ ಮಾಡುವುದು ಹೇಗೆ?

ಇಮೇಲ್ ಕ್ಲೈಂಟ್ನಲ್ಲಿ ಮಾರ್ಕ್ಅಪ್ ಎಂಬ ವೈಶಿಷ್ಟ್ಯವಿದೆ. ಬಳಕೆದಾರರು ಇದರ ಮೂಲಕ ಇಮೇಲ್ ಕಳುಹಿಸುವ ವೇಳೆ ದಾಖಲೆಗೆ ಸಹಿ ಮಾಡಿ ಕಳುಹಿಸಬಹುದು.

ಪಿಡಿಎಫ್ ದಾಖಲೆಯನ್ನು ಇಮೇಲ್ ಮೂಲಕ ತೆರೆದು ನಂತರ ಮಾರ್ಕ್ಅಪ್ ಮತ್ತು ರಿಪ್ಲೈ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆ್ಯಪಲ್ ಪೆನ್ಸಿಲ್ ಹೊಂದಿರುವ ಐಪ್ಯಾಡ್ ಬಳಸಿದರೆ ಈ ಪ್ರಕ್ರಿಯೆ ಸುಲಭವಾಗಿ ಸಾಧ್ಯವಾಗುತ್ತದೆ.

ಇದಷ್ಟೇ ಅಲ್ಲದೆ ಹಲವಾರು ಆಯ್ಕೆಗಳಿಗೆ. ಅಡೋಬ್ ಅಟೋಮ್ಯಾಟಿಕ್ ಸಿಗ್ನೇಚರ್ ಕನ್ವರ್ಟರ್ ಬಳಸುವ ಮೂಲಕ ಹೆಸರನ್ನು ಟೈಪ್ ಮಾಡಿದರೆ ಸಾಕು ಅದು ಸಹಿಯಾಗಿ ಬದಲಾಯಿಸುತ್ತದೆ.

ಆ್ಯಂಡ್ರಾಯ್ಡ್ ಬಳಕೆದಾರರು ಕೂಡ ಸುಲಭವಾಗಿ ಡಿಜಿಟಲ್ ಸಹಿಯನ್ನು ಮಾಡಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಅದಕ್ಕೆಂದೇ ಸಾಕಷ್ಟು ಆ್ಯಪ್ಗಳಿವೆ.
