• Home
  • »
  • News
  • »
  • tech
  • »
  • Digital India: ಭಾರತದಲ್ಲಿ ಕೇವಲ 31% ಮಹಿಳೆಯರ ಬಳಿಯಷ್ಟೇ ಇದೆ ಮೊಬೈಲ್ ಫೋನ್​!

Digital India: ಭಾರತದಲ್ಲಿ ಕೇವಲ 31% ಮಹಿಳೆಯರ ಬಳಿಯಷ್ಟೇ ಇದೆ ಮೊಬೈಲ್ ಫೋನ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಕ್ಸ್‌ಫ್ಯಾಮ್ ಸೋಮವಾರ ಪ್ರಕಟಿಸಿದ ವರದಿಯಲ್ಲಿ ಭಾರತದಲ್ಲಿ 32 ಪ್ರತಿಶತಕ್ಕಿಂತ ಕಡಿಮೆ ಮಹಿಳೆಯರು ಮೊಬೈಲ್ ಫೋನ್ ಹೊಂದಿದ್ದಾರೆ ಎಂಬುದಾಗಿ ತಿಳಿಸಿದೆ. 60% ಪುರುಷರಿಗೆ ಹೋಲಿಸಿದರೆ ಅರ್ಧದಷ್ಟು ಮಹಿಳೆಯರಲ್ಲಿ ಮಾತ್ರ ಫೋನ್‌ಗಳಿವೆ ಎಂದು ವರದಿ ತಿಳಿಸಿದೆ.

  • Trending Desk
  • 3-MIN READ
  • Last Updated :
  • Share this:

ಮೊಬೈಲ್(Mobile)‌ ಅಂತೂ ಈಗ ಎಲ್ಲರ ಬಳಿ ಇರುವಂತ ಸಾಧನ. ವಯಸ್ಸಿನ ಮಿತಿ ಇಲ್ಲದೇ ಈ ತಂತ್ರಜ್ಞಾನವನ್ನು(Technology) ಎಲ್ಲರೂ ಬಳಸುತ್ತಿದ್ದಾರೆ. ಮೊಬೈಲ್‌ ಇಲ್ಲದ ಮನೆ, ಮೊಬೈಲ್‌ ಇಲ್ಲದ ಮಂದಿ ಇಲ್ಲ ಎನ್ನುವಂತಾಗಿದೆ. ಕೊರೋನಾದಿಂದಾಗಿ(Corona) ಮಕ್ಕಳಿಗೆ ಮೊಬೈಲ್‌ನಲ್ಲೇ ಆನ್‌ಲೈನ್‌ ಕ್ಲಾಸ್(Online Class)‌, ಸರ್ಕಾರದ ಡಿಜಿಟಲ್‌ ಇಂಡಿಯಾ ಗುರಿ, ಜಾಲತಾಣಗಳ ಬಳಕೆ ಈ ಎಲ್ಲಾ ಪ್ರವೃತ್ತಿಗಳಿಂದ ಆಂಡ್ರಾಯ್ಡ್‌ ಫೋನ್‌ಗಳ(Android Phone) ಬಳಕೆ ಹೆಚ್ಚುತ್ತಿದೆಯಾದರೂ ಎಲ್ಲೋ ಒಂದು ಕಡೆ ಮಹಿಳೆಯರು ಮಾತ್ರ ಈ ಡಿಜಿಟಲ್‌ ಅಸಮಾನತೆಯನ್ನು ಎದುರಿಸುತ್ತಿದ್ದಾರೆ.


31% ಮಹಿಳೆಯರ ಬಳಿ ಇದೆ ಮೊಬೈಲ್‌ ಫೋನ್


ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಪ್ರತಿಶತ ಮೊಬೈಲ್‌ ಫೋನ್‌ ಹೊಂದಿದ್ದಾರೆ ಎಂದು ವರದಿಯೊಂದು ಹೇಳಿದೆ. ಆಕ್ಸ್‌ಫ್ಯಾಮ್ ಸೋಮವಾರ ಪ್ರಕಟಿಸಿದ ವರದಿಯಲ್ಲಿ ಭಾರತದಲ್ಲಿ 32 ಪ್ರತಿಶತಕ್ಕಿಂತ ಕಡಿಮೆ ಮಹಿಳೆಯರು ಮೊಬೈಲ್ ಫೋನ್ ಹೊಂದಿದ್ದಾರೆ ಎಂಬುದಾಗಿ ತಿಳಿಸಿದೆ. 60% ಪುರುಷರಿಗೆ ಹೋಲಿಸಿದರೆ ಅರ್ಧದಷ್ಟು ಮಹಿಳೆಯರಲ್ಲಿ ಮಾತ್ರ ಫೋನ್‌ಗಳಿವೆ ಎಂದು ವರದಿ ತಿಳಿಸಿದೆ.


ಅಧ್ಯಯನದ ಪ್ರಮುಖ ಅಂಶಗಳು


'ಇಂಡಿಯಾ ಅಸಮಾನತೆ ವರದಿ 2022: ಡಿಜಿಟಲ್ ಡಿವೈಡ್' 2021 ರ ಅಂತ್ಯದವರೆಗಿನ ಡೇಟಾವನ್ನು ಪುರುಷರು ಮತ್ತು ಮಹಿಳೆಯರ ನಡುವಿನ ಡಿಜಿಟಲ್ ಅಂತರವನ್ನು ಹೆಚ್ಚಿಸುವಲ್ಲಿ ಲಿಂಗ ಅಸಮಾನತೆಯ ಪಾತ್ರವನ್ನು ಒತ್ತಿಹೇಳುತ್ತದೆ.


ಜನವರಿ 2018 ರಿಂದ ಡಿಸೆಂಬರ್ 2021 ರವರೆಗೆ ನಡೆದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ (CMIE) ಸಮೀಕ್ಷೆಯ ಪ್ರಾಥಮಿಕ ಡೇಟಾವನ್ನು ವರದಿಯು ವಿಶ್ಲೇಷಿಸುತ್ತದೆ.


ಮಹಿಳೆಯರು ಪುರುಷರು ಬಳಸುವಷ್ಟು ದುಬಾರಿ ಫೋನ್‌ಗಳನ್ನು ಹೊಂದಿಲ್ಲ ಮತ್ತು ಹೆಚ್ಚಿನವರು ಕಡಿಮೆ ಬೆಲೆಯ ಹ್ಯಾಂಡ್‌ಸೆಟ್‌ಗಳನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.


ಹಾಗೆ ಮಹಿಳೆಯರು ಕರೆ ಮಾಡಲು ಮತ್ತು ಟೆಕ್ಸ್ಟ್‌ ಮೆಸೇಜ್‌ ಮಾಡಲು ಹೆಚ್ಚಿನದಾಗಿ ಫೋನ್‌ ಬಳಸುತ್ತಾರೆ ಎಂದು ಹೇಳಿದೆ. ಮತ್ತು ಮಹಿಳೆಯರು ಫೋನ್‌ಗಳಲ್ಲಿ ಡಿಜಿಟಲ್ ಸೇವೆಗಳನ್ನು ಸಹ ತುಂಬಾ ಕಡಿಮೆ ಬಳಸುತ್ತಾರೆ ಮತ್ತು ಎಲ್ಲೋ ಒಮ್ಮೆ ಇಂಟರ್‌ನೆಟ್‌ ಬಳಸುತ್ತಾರೆ ಎಂದು ವರದಿ ಗಮನಿಸಿದೆ.


ಇದನ್ನೂ ಓದಿ: Tech Tips: ಮೆಟಾವರ್ಸ್ ಕ್ರಿಯೇಷನ್‌ನ ಕೋರ್ಸ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ


ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ದತ್ತಾಂಶವನ್ನು ಉಲ್ಲೇಖಿಸಿ, ಆಕ್ಸ್‌ಫ್ಯಾಮ್ ವರದಿಯು ಪ್ರಪಂಚದ ಅರ್ಧದಷ್ಟು ಲಿಂಗ ಡಿಜಿಟಲ್ ವಿಭಜನೆಯನ್ನು ಭಾರತ ಹೊಂದಿದೆ ಎಂದು ಹೇಳಿದೆ. ದೇಶದಲ್ಲಿ ಎಲ್ಲಾ ಇಂಟರ್ನೆಟ್ ಬಳಕೆದಾರರಲ್ಲಿ ಮೂರನೇ ಒಂದು ಭಾಗ ಮಾತ್ರ ಮಹಿಳೆಯರು ಇದ್ದಾರೆ ಎಂದು ವರದಿ ಹೇಳಿದೆ.


ಆಕ್ಸ್‌ಫ್ಯಾಮ್ ಲಿಂಗದ ಸಾಮಾಜಿಕ ಮಾನದಂಡಗಳನ್ನು ಆಧರಿಸಿ­ ಪುರುಷರಿಗೆ ಹೋಲಿಸಿದರೆ ಮಹಿಳೆಯರು ತುಲನಾತ್ಮಕವಾಗಿ ಕಡಿಮೆ ಮಟ್ಟದ ಫೋನ್ ಬಳಕೆ ಮತ್ತು ಡಿಜಿಟಲ್ ಸೇವೆಗಳನ್ನು ಬಳಸುತ್ತಿದ್ದಾರೆ ಎಂದಿದೆ.


ಮಹಿಳೆಯೊಬ್ಬರು ಫೋನ್‌ ಹೊಂದುವುದು ಆ ಮನೆಯ ಪುರುಷರ ನಿರ್ಧಾರ ಕೂಡ ಆಗಿರುತ್ತದೆ ಎಂದು ಆಕ್ಸ್‌ಫ್ಯಾಮ್ ಹೇಳಿದೆ. ಜಗತ್ತು ಎಷ್ಟೇ ಮುಂದೆ ಸಾಗುತ್ತಿದ್ದರೂ ಇನ್ನೂ ಕೂಡ ಮಹಿಳೆಯರ ಮೇಲಿನ ನಿರ್ಬಂಧಗಳಿಗೆ ಬರವಿಲ್ಲ ಎನ್ನಬಹುದು.


ಮನೆಯ ಪುರುಷರನ್ನು ಕೇಳಿ ಫೋನ್‌ ಅಥವಾ ಇನ್ಯಾವುದೇ ವಸ್ತುವನ್ನು ಖರೀದಿಸುವ ಪ್ರವೃತ್ತಿ ಇನ್ನೂ ಕೂಡ ರೂಢಿಯಲ್ಲಿದೆ.


ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಇಂಟರ್ನೆಟ್ ಬಳಕೆ


ವರದಿಯಲ್ಲಿ ಪ್ರಸ್ತುತಪಡಿಸಲಾದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ 100 ಜನರಲ್ಲಿ ಕೇವಲ 57.29 ಇಂಟರ್ನೆಟ್ ಚಂದಾದಾರರಿದ್ದಾರೆ ಮತ್ತು ಆ ಸಂಖ್ಯೆಯು ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ.


ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ 100ಕ್ಕೆ 34 ಕ್ಕಿಂತ ಕಡಿಮೆ ಇಂಟರ್ನೆಟ್ ಚಂದಾದಾರರು ಇದ್ದರೆ, ನಗರ ಕೇಂದ್ರಗಳಲ್ಲಿ ಈ ಸಂಖ್ಯೆ ಸಾಕಷ್ಟು ಹೆಚ್ಚಿದೆ.


ಆಕ್ಸ್‌ಫ್ಯಾಮ್ ಇಂಡಿಯಾದ ಸಿಇಒ ಅಮಿತಾಭ್ ಬೆಹರ್, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಡಿಜಿಟಲ್ ವಿಭಜನೆಯಿಂದಾಗಿ ಭಾರತದ ಬೆಳೆಯುತ್ತಿರುವ ಅಸಮಾನತೆಯು ಹೆಚ್ಚುತ್ತಿದೆ.


ಇದನ್ನೂ ಓದಿ: OPPO A78 5G: ಇನ್ನು ಒಂದೇ ಒಂದು ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಫೋನ್


ಜಾತಿ, ಧರ್ಮ, ಲಿಂಗ, ವರ್ಗ ಮತ್ತು ಭೌಗೋಳಿಕ ಸ್ಥಳದ ಆಧಾರದ ಮೇಲೆ ಬೆಳೆಯುತ್ತಿರುವ ಅಸಮಾನತೆಯು ಡಿಜಿಟಲ್ ಜಾಗದಲ್ಲಿ ಪುನರಾವರ್ತನೆಯಾಗುತ್ತದೆ. ಅಸಮಾನತೆಯ ಈ ವಿಷವರ್ತುಲವನ್ನು ನಿಲ್ಲಿಸಬೇಕಾಗಿದೆ." ಎಂದಿದ್ದಾರೆ. 

Published by:Latha CG
First published: