Google Chrome: ಗೂಗಲ್ ಕ್ರೋಮ್ ಬ್ರೌಸರ್ ಮೂಲಕ ನಿಮ್ಮ ಪಾಸ್‌ವರ್ಡ್ ರಕ್ಷಿಸಿದ್ದೀರಾ? ಹಾಗಿದ್ರೆ ಈ ಸ್ಟೋರಿ ಓದಿ

ಮಾಹಿತಿ ತಂತ್ರಜ್ಞಾನದ ತಜ್ಞರು ಬ್ರೌಸರ್‌ಗಳಲ್ಲಿ ಖಾತೆಗಳ ವಿವರ ಮತ್ತು ಪಾಸ್‌ವರ್ಡ್‌ಗಳನ್ನು ರಕ್ಷಿಸಿಡದಂತೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಗೂಗಲ್(Google) ಹಾಗೂ ಮೈಕ್ರೋಸಾಫ್ಟ್‌ ಎಡ್ಜ್ (Microsoft Edge) ಬಳಕೆದಾರರು ಒಂದು ವೇಳೆ ಈ ಬ್ರೌಸರ್‌ಗಳಲ್ಲಿ ತಮ್ಮ ಪಾಸ್‌ವರ್ಡ್‌ಗಳನ್ನು ರಕ್ಷಿಸಿದ್ದರೆ ಅವರು ಈ ಕೂಡಲೇ ತುರ್ತು ಕ್ರಮವೊಂದನ್ನು ಕೈಗೊಳ್ಳಲೇಬೇಕಿದೆ!! ಕೋವಿಡ್-19 (Covid) ಸಾಂಕ್ರಾಮಿಕ ಕಾಲಘಟ್ಟದಲ್ಲಿ ಜನರು ಕೆಲಸ ನಿರ್ವಹಿಸಲು, ಆಟವಾಡಲು ಹಾಗೂ ಪರಸ್ಪರ ಸಂಪರ್ಕದಲ್ಲಿರಲು ಅಂತರ್ಜಾಲವನ್ನು ಅವಲಂಬಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೇ ಹೊತ್ತಿನಲ್ಲಿ ಸೈಬರ್(Cyber crime) ಅಪರಾಧಿಗಳೂ ಕೂಡಾ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಈ ಅವಧಿಯಲ್ಲಿ ಬಳಕೆದಾರರ ದತ್ತಾಂಶ, ಮಾಹಿತಿ, ಖಾತೆಗಳು ಹಾಗೂ ಪಾಸ್‌ವರ್ಡ್‌(Password) ಇತ್ಯಾದಿಗಳನ್ನು ಸೈಬರ್ ಅಪರಾಧಿಗಳು ಕದಿಯುವ ಪ್ರಕರಣಗಳು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಳಗೊಂಡಿವೆ. ಇದರೊಂದಿಗೆ ಈಗ ಮತ್ತೊಂದು ಹೊಸ ಬಗೆಯ ಸೈಬರ್ ಅಪರಾಧ (Cyber Crime) ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ವರದಿಗಳಿವೆ.

ಪಾಸ್‌ವರ್ಡ್‌ಗಳಿಗೆ ಕನ್ನ

ಈ ಪ್ರವೃತ್ತಿಯು ತೀವ್ರ ಪ್ರಮಾಣದ ಆತಂಕಕ್ಕೆ ಕಾರಣವಾಗಿದ್ದು, ಕಳವಿಗಾಗಿ ಬಳಸಲಾಗುತ್ತಿರುವ ಕುತಂತ್ರಾಂಶ ನಿಮ್ಮ ಗ್ಯಾಡ್ಜೆಟ್‌ಗಳನ್ನು ಸೋಂಕಿಗೆ ಗುರಿಪಡಿಸಿ, ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯಿಂದ ಮೊದಲ್ಗೊಂಡು ಸ್ವಯಂಚಾಲಿತ ಲಾಗಿನ್ ಮಾಹಿತಿಯವರೆಗೆ ಕನ್ನ ಹಾಕಲಿದೆ. ಹೌದು! ನೀವು ಓದುತ್ತಿರುವುದು ಸರಿಯಿದೆ. ನಿಮ್ಮ ಬ್ರೌಸರ್‌ಗಳಲ್ಲಿ ರಕ್ಷಿಸಿಟ್ಟಿರುವ ಸ್ವಯಂಚಾಲಿತ ಲಾಗಿನ್ ಪಾಸ್‌ವರ್ಡ್‌ಗಳಿಗೆ ಈ ಮಾಲ್‌ವೇರ್ ನೇರವಾಗಿ ಕನ್ನ ಹಾಕಲಿದೆ. ಇದರರ್ಥ ಗೂಗಲ್ ಹಾಗೂ ಸಾಫ್ಟ್‌ ಎಡ್ಜ್ ಬಳಕೆದಾರರು ಗಾಬರಿಗೊಳ್ಳಲು ಕಾರಣವಿದೆ ಮತ್ತವರು ತುರ್ತಾಗಿ ಈ ಕುರಿತು ಕಾರ್ಯೋನ್ಮುಖವಾಗಲೇಬೇಕಿದೆ.

ಇದನ್ನೂ ಓದಿ: Google Meet: ಗೂಗಲ್ ಮೀಟ್‌ನಲ್ಲಿ ವಿಡಿಯೋ ಕರೆ ರೆಕಾರ್ಡ್ ಮಾಡಬೇಕೇ..? ಈ ಹಂತಗಳನ್ನು ಫಾಲೋ ಮಾಡಿ

ಬಳಕೆದಾರರಿಗೆ ಎಚ್ಚರಿಕೆ

ಹಲವಾರು ಖಾತೆಗಳು ಹಾಗೂ ಪಾಸ್‌ವರ್ಡ್‌ಗಳನ್ನು ಹೊಂದಿರುವುದರಿಂದ ಅವೆಲ್ಲವನ್ನೂ ನೆನಪಿಟ್ಟುಕೊಳ್ಳುವುದು ಕಷ್ಟವಾಗಿ ಬಳಕೆದಾರರು ಮತ್ತೆ ಮತ್ತೆ ಲಾಗಿನ್ ಆಗಲು ಗೂಗಲ್ ಕ್ರೋಮ್ ಹಾಗೂ ಮೈಕ್ರೋಸಾಫ್ಟ್‌ ಎಡ್ಜ್ ಬ್ರೌಸರ್ ವೈಶಿಷ್ಟ್ಯವಾದ ಸ್ವಯಂಚಾಲಿತ ಲಾಗಿನ್ ಪಾಸ್‌ವರ್ಡ್ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಹೀಗಿದ್ದೂ ಇದು ಕೂಡಾ ದತ್ತಾಂಶ ಕದಿಯಲು ಸೈಬರ್ ಕ್ರಿಮಿನಲ್‌ಗಳನ್ನು ಪ್ರೇರೇಪಿಸುತ್ತಿದ್ದು, ಹೀಗೆ ಕಳುವಾದ ದತ್ತಾಂಶಗಳು ದುರ್ಬಳಕೆಯಾಗುವ ಸಾಧ್ಯತೆ ಇದೆ. ಇತ್ತೀಚಿಗೆ 2021ರಲ್ಲಿ 4,41,000 ಖಾತೆಗಳನ್ನು ಕನ್ನಗಳವು ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಪತ್ತೆ ಮಾಡುತ್ತಿರುವ Haveibeenpwned.com ಅಂತರ್ಜಾಲ ತಾಣದಲ್ಲಿ ಕನ್ನಗಳವಿಗೆ ಒಳಗಾಗಿರುವ ಖಾತೆಗಳ ವಿವರವನ್ನು ಹಂಚಿಕೊಳ್ಳಲಾಗಿದೆ. ಈ ಅಂತರ್ಜಾಲ ತಾಣವು ದತ್ತಾಂಶಕ್ಕೆ ಚ್ಯುತಿ ಬಂದಿರುವ ಬಳಕೆದಾರರ ಇ-ಮೇಲ್ ವಿಳಾಸಗಳನ್ನು ಪರಿಶೀಲಿಸುತ್ತಿದ್ದು, ದತ್ತಾಂಶ ಚ್ಯುತಿಗೊಳಗಾಗಿರುವ ಬಳಕೆದಾರರಿಗೆ ಈ ಕುರಿತು ಎಚ್ಚರಿಕೆ ನೀಡುತ್ತಿದೆ.

ಪಾಸ್‌ವರ್ಡ್ ಬದಲಾಯಿಸಲೇಬೇಕು

ನೀವೇನಾದರೂ ನಿಮ್ಮ ದತ್ತಾಂಶ ಕನ್ನಗಳವಿಗೆ ಒಳಗಾಗಿದೆಯೆ ಎಂದು ತಿಳಿದುಕೊಳ್ಳಲು ಬಯಸುವುದಾದರೆ ನೀವು Haveibeenpwned.com ಅಂತರ್ಜಾಲ ತಾಣದ ನೆರವು ಪಡೆದುಕೊಳ್ಳಬಹುದಾಗಿದೆ. ಈ ಜಾಲ ತಾಣವು ಬೆಳೆಯುತ್ತಿರುವ ದತ್ತಾಂಶ ಸೋರಿಕೆ ಕುರಿತ ಮಾಹಿತಿಯನ್ನು ನಿಯಮಿತವಾಗಿ ನವೀಕರಿಸುತ್ತಲೇ ಇರುತ್ತದೆ. ನೀವು ನಮೂದಿಸುವ ಇ-ಮೇಲ್ ವಿಳಾಸವನ್ನು ಕೆಂಪು ಗೆರೆಯೊಂದಿಗೆ ತೋರಿಸಿದರೆ, ನಿಮ್ಮ ಇ-ಮೇಲ್ ಖಾತೆ ಹಾಗೂ ವಿಪಿಎನ್ ಒಳಗೊಂಡಂತೆ, ನಿಮ್ಮ ಕಂಪ್ಯೂಟರ್‌, ಮೊಬೈಲ್ ಫೋನ್, ಟ್ಯಾಬ್ ಇತ್ಯಾದಿಗಳಲ್ಲಿ ಬಳಸುತ್ತಿರುವ ಎಲ್ಲ ಖಾತೆಗಳು ಹಾಗೂ ಆ ಸಾಧನಗಳಲ್ಲಿನ ಎಲ್ಲ ವೈಯಕ್ತಿಕ ಖಾತೆಗಳ ಪಾಸ್‌ವರ್ಡ್ ಬದಲಾಯಿಸಲೇಬೇಕು. ಅದು ಬಿಟ್ಟು ಕೇವಲ ಹ್ಯಾಕರ್ ಕನ್ನಗಳವು ಮಾಡಿರುವ ಖಾತೆಯ ಪಾಸ್‌ವರ್ಡ್ ಮಾತ್ರ ಬದಲಾಯಿಸಿದರೆ ಸಾಕಾಗುವುದಿಲ್ಲ.

ಡಾರ್ಕ್ ವೆಬ್‌ನಲ್ಲಿ ಪತ್ತೆ

ಮಾಹಿತಿ ಕನ್ನಗಳವು ಮಾಡುವ ಕುತಂತ್ರಾಂಶಕ್ಕೆ RedLine ಎಂದು ಕರೆಯಲಾಗುತ್ತದೆ. ಈ ಕುತಂತ್ರಾಂಶವು ಕೊರೊನಾ ಲಾಕ್‌ಡೌನ್ ಹೇರುವ ಕೆಲವೇ ದಿನಗಳ ಮುನ್ನ ಮಾರ್ಚ್ 2020ರಲ್ಲಿ ಡಾರ್ಕ್ ವೆಬ್‌ನಲ್ಲಿ ಪತ್ತೆಯಾಗಿತ್ತು. ಈ ಕುತಂತ್ರಾಂಶವು ವಿವಿಧ ತಾಣಗಳಲ್ಲಿನ ಬಳಕೆದಾರರ ಖಾತೆ ವಿವರಗಳು ಹಾಗೂ ಪಾಸ್‌ವರ್ಡ್‌ಗಳಿಗೆ ಸುಲಭವಾಗಿ ಕನ್ನ ಹಾಕಲಿದ್ದು, ಕಂಪನಿಗಳ ವಿಪಿನ್ ವಿಳಾಸಕ್ಕೂ ಪ್ರವೇಶ ಪಡೆಯುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: Password: ಕ್ರೋಮ್, ವಿಂಡೋಸ್, ಐಫೋನ್‌ನಲ್ಲಿ ಪಿಡಿಎಫ್‌ನಿಂದ ಪಾಸ್‌ವರ್ಡ್ ತೆಗೆದುಹಾಕುವುದು ಹೇಗೆ ಗೊತ್ತಾ..?

ಈ ಕುತಂತ್ರಾಂಶವು ಈಗಾಗಲೇ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಮಾಹಿತಿ ತಂತ್ರಜ್ಞಾನದ ತಜ್ಞರು ಬ್ರೌಸರ್‌ಗಳಲ್ಲಿ ಖಾತೆಗಳ ವಿವರ ಮತ್ತು ಪಾಸ್‌ವರ್ಡ್‌ಗಳನ್ನು ರಕ್ಷಿಸಿಡದಂತೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಗೂಗಲ್ ಕಂಪನಿ ಕೂಡಾ ಜೋಕರ್ ಕುತಂತ್ರಾಂಶದ ಸೋಂಕಿಗೆ ಒಳಗಾಗಿರುವ ಗೂಗಲ್ ಪ್ಲೇಸ್ಟೋರ್ ಆ್ಯಪ್ ಕುರಿತು ಎಚ್ಚರದಿಂದಿರುವಂತೆ ಬಳಕೆದಾರರಿಗೆ ಸೂಚಿಸಿತ್ತು. ಕಂಪನಿಯು ತನ್ನ ಪ್ಲೇ ಸ್ಟೋರ್‌ನಿಂದಲೂ ಕೆಲವು ಆ್ಯಪ್‌ಗಳನ್ನು ತೆಗೆದು ಹಾಕಿತ್ತು.
Published by:vanithasanjevani vanithasanjevani
First published: