• Home
  • »
  • News
  • »
  • tech
  • »
  • QR CODE: ನಿಮ್ಮ ಮೊಬೈಲ್‌ ನಂಬರ್‌ಗೂ QR ಕೋಡ್​ ರಚಿಸಬಹುದು! ಅದು ಹೇಗೆ ಅಂತ ಗೊತ್ತಾ?

QR CODE: ನಿಮ್ಮ ಮೊಬೈಲ್‌ ನಂಬರ್‌ಗೂ QR ಕೋಡ್​ ರಚಿಸಬಹುದು! ಅದು ಹೇಗೆ ಅಂತ ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿಗೆ QR CODE ಬಳಕೆ ಹೆಚ್ಚಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಆದರೆ ನಾವು ನಮ್ಮ ಮೊಬೈಲ್ ನಂಬರ್‌ ಅನ್ನೂ ಕೂಡ QR CODE ಮಾದರಿಯಾಗಿ ಪರಿರ್ವತಿಸಬಹುದು ಎನ್ನುವುದು ನಿಮಗೆ ಗೊತ್ತೇ? ಅದು ಹೇಗೆ ಅನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ...

  • Share this:

    ಇತ್ತೀಚಿಗೆ QR CODE ಬಳಕೆ ಹೆಚ್ಚಾಗುತ್ತಿರುವುದನ್ನು ನೀವು ಗಮನಿಸಿರಬಹುದು. ನಾವು ಪ್ರಸ್ತುತ QR ಕೋಡ್‌ಗಳ ಬಳಕೆ ಪೇಮೆಂಟ್ (Payment) ಮಾಡಲು, ಲೋಕೇಶನ್‌/ ವಿಳಾಸಗಾಗಿಯೂ QR ಕೋಡ್ ಬಳಕೆ, ಮಾಹಿತಿಗಳ (Information) ಲಿಂಕ್‌ಗಳು, (Link) ವಿಸಿಟಿಂಗ್ ಕಾರ್ಡ್‌ಗಳು (Visiting Card)ಸೇರಿದಂತೆ ಬಹುತೇಕ ಕಡೆಗಳಲ್ಲಿ ಈಗ QR ಕೋಡ್ ಬಳಕೆ ಅಧಿಕ ಹಾಗೂ ಸಾಮಾನ್ಯ ಎಂಬಂತಾಗಿದೆ. ಅದೇ ರೀತಿ ಮೊಬೈಲ್‌ ನಂಬರ್‌ಗೂ (Mobile number) QR ಕೋಡ್ ರಚಿಸಿಕೊಳ್ಳಬಹುದಾಗಿದೆ (Create). ಅರೇ ಅದು ಹೇಗೆ ಅಂತ ಕೇಳ್ತಾ ಇದೀರಾ. ಒಂದೆ ಒಂದು ನಿಮಿಷದಲ್ಲಿ ನೀವು ಈ QR CODE ಅನ್ನು ರಚಿಸುವಂತಹ ಟ್ರಿಕ್ಸ್​ನ ಹೇಳಿಕೊಡುತ್ತಿನಿ ಓದಿ...


    ಹೌದು, ಪೇಮೆಂಟ್‌ ವಿಳಾಸ ಗಳಂತೆ ನಿಮ್ಮ ಮೊಬೈಲ್‌ ನಂಬರ್‌ಗೂ QR ಕೋಡ್ ರಚಿಸಿಬಹುದಾಗಿದೆ. QR ಕೋಡ್‌ನಲ್ಲಿ ಬಳಕೆದಾರರಿಗೆ ಮಾಹಿತಿಯು ನೇರವಾಗಿ ಕಾಣಿಸುವುದಿಲ್ಲ ಮತ್ತು ಕೋಡ್ ರೂಪದಲ್ಲಿ ಇರುತ್ತದೆ. ಕ್ಯಾಮೆರಾ ಮೂಲಕ QR ಕೋಡ್ ಸ್ಕ್ಯಾನ್‌ ಮಾಡಿದಾಗ, ಮಾಹಿತಿ ತೆರೆದುಕೊಳ್ಳುತ್ತದೆ. ಹೀಗಾಗಿ ಕೋಡ್‌ಗಳು ಮಾಹಿತಿಯ ಸಂಕ್ಷಿಪ್ತ ರೂಪ ಅಥವಾ ಡಿಜಿಟಲ್ ರೂಪ ಎನ್ನಬಹುದುದಾಗಿದೆ. ಇದನ್ನು ಸ್ಮಾರ್ಟ್ ಫೋನ್ ಬಳಕೆ ಮಾಡುವವರಿಗೆ ಈ ಒಂದು QR CODE ಬಳಸಲು ಸಾದ್ಯವಾಗುತ್ತದೆ.


    ಎರಡು ರೀತಿಯ QR CODE ಗಳಿವೆ


    ವೆಬ್‌ನಲ್ಲಿ ಒಂದು ಸೆಟ್ ಸ್ಥಳಕ್ಕೆ ಲಿಂಕ್ ಮಾಡುವಂತಹವುಗಳು (ಸ್ಥಿರ) ಸ್ಟಿಲ್ QR ಕೋಡ್ ಎಂದು ಕರೆಯಲಾಗುತ್ತದೆ ಮತ್ತು ಗ್ರಾಹಕರು ನವೀಕರಿಸಬಹುದಾದ ವೆಬ್ ಸ್ಥಳಕ್ಕೆ ಡೈನಾಮಿಕ್ QR ಕೋಡ್ ಎಂದು ಕರೆಯಲಾಗುತ್ತದೆ. ಇನ್ನು QR ಕೋಡ್ ಗಳನ್ನು ರಚಿಸಲು ಆ್ಯಪ್‌ಗಳು ಲಭ್ಯವಿವೆ. ಹಾಗಾದರೇ QR ಕೋಡ್ ರಚಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.


    ಸಾಂಕೇತಿಕ ಚಿತ್ರ


    ಗೂಗಲ್‌ ಕ್ರೋಮ್‌ನಲ್ಲಿ QR ಕೋಡ್‌ ರಚಿಸಬಹುದು


    ಉಚಿತವಾಗಿ QR  ರಚಿಸಲು ಗೂಗಲ್‌ ಕ್ರೋಮ್‌ನಲ್ಲಿ QR generator ಆಯ್ಕೆ ಇದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡರಲ್ಲೂ ಕ್ರೋಮ್‌ ನಲ್ಲಿ ಶೇರ್‌ ಸಿಸ್ಟಮ್‌ನಲ್ಲಿ ನಿರ್ಮಿಸಲಾಗಿದೆ. ಹಾಗೆಯೇ ಕ್ರೋಮ್‌ ಪ್ರತಿಯೊಂದು ಡೆಸ್ಕ್‌ಟಾಪ್ ಆವೃತ್ತಿಯಲ್ಲಿಯೂ ಸಹ ಲಭ್ಯವಿದೆ. ಹೀ್ಗಿರುವಾಗ ಗೂಗಲ್ ಕ್ರೋಮ್​ನಲ್ಲಿ ನೀವು QR CODE ರಚಿಸಬಹುದಾಗಿದೆ.


    ಇದನ್ನೂ ಓದಿ:  WhatsApp: ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೇಟ್‌ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್


    QR ಕೋಡ್ ಮಂಕಿ ಸಾಫ್ಟ್‌ವೇರ್​ನಲ್ಲಿ ಮಾಡಬಹುದಾಗಿದೆ.


    QR ಕೋಡ್ ಮಂಕಿ QR ಕೋಡ್ ಮಂಕಿ ಸಾಫ್ಟ್‌ವೇರ್ ಉಚಿತವಾಗಿದೆ. ಈ ವೆಬ್‌ಸೈಟ್‌ನಿಂದ ಬಳಕೆದಾರರು ಬಯಸಿದರೆ QR ಕೋಡ್ ಅನ್ನು ತಕ್ಷಣವೇ ರಚಿಸಬಹುದು ಮತ್ತು ಡೌನ್‌ಲೋಡ್ ಸಹ ಮಾಡಬಹುದು. Qr-code-generator.com ನಂತೆ, ಪಾವತಿಸಿದ ಯೋಜನೆಗಳೊಂದಿಗೆ, ಡೈನಾಮಿಕ್ QR ಕೋಡ್‌ಗಳನ್ನು ಸಹ ರಚಿಸಬಹುದಾಗಿದೆ.


    QR ಕೋಡ್ ಜನರೇಟರ್ ಸಾಫ್ಟ್‌ವೇರ್


    ಪ್ರಮುಖ QR ಕೋಡ್‌ ಜನರೇಟರ್‌ಗಳಲ್ಲಿ ಇದು ಸಹ ಒಂದಾಗಿದೆ. QR ಕೋಡ್ ಬಾರ್‌ಕೋಡ್‌ನ ಎರಡು ಆಯಾಮದ ಆವೃತ್ತಿಯಾಗಿದ್ದು, ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ಪಿಕ್ಸೆಲ್ ಮಾದರಿಗಳಿಂದ ಮಾಡಲ್ಪಟ್ಟಿದೆ. ನೀವು URL, vCard, ಇಮೇಲ್, SMS, ಟ್ವಿಟರ್, WiFi ಮತ್ತು ಬಿಟ್‌ಕಾಯಿನ್‌ ನಿಂದ ಆಯ್ಕೆ ಮಾಡಬಹುದು.


    ಇದನ್ನೂ ಓದಿ: Gmail: ಜಿಮೇಲ್ ಸ್ಟೋರೆಜ್ ಫುಲ್‌ ಆಗಿದೆಯಾ! ಸುಲಭವಾಗಿ ಹೀಗೆ ಕ್ಲಿಯರ್ ಮಾಡಿ


    Wix QR ಕೋಡ್ ಜನರೇಟರ್‌


    ಈ QR ಕೋಡ್ ಜನರೇಟರ್‌ನೊಂದಿಗೆ ನಿಮ್ಮ ಸ್ವಂತ ಕಸ್ಟಮ್, ಉತ್ತಮ ಗುಣಮಟ್ಟದ QR ಕೋಡ್‌ಗಳನ್ನು ರಚಿಸಿಬಹುಸು. ಬಳಕೆದಾರರು ನಿಮ್ಮ ಮುದ್ರಿತ ಅಥವಾ ಡಿಜಿಟಲ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಮಾರಾಟವನ್ನು ಹೆಚ್ಚಿಸಲು QR ಕೋಡ್‌ಗಳನ್ನು ಬಳಸಿ. QR (ಕ್ವಿಕ್ ರೆಸ್ಪಾನ್ಸ್) ಕೋಡ್ ಒಂದು ರೀತಿಯ ಬಾರ್‌ಕೋಡ್ ಆಗಿದೆ. ಇದು QR ಕೋಡ್ ಸ್ಕ್ಯಾನರ್ ಮೂಲಕ ಓದಬಹುದಾದ ಮಾಹಿತಿಯನ್ನು ಹೊಂದಿದೆ.


    ಇಂತಹ ಅನೇಕ ಆ್ಯಪ್​ಗಳಲ್ಲಿ ನೀವು QR CODE ರಚಿಸಬಹುದಾಗಿದೆ. ನೀವೂ ಒಮ್ಮೆ ಟ್ರೈ ಮಾಡಿಬಹುದು

    Published by:Harshith AS
    First published: