ಗೂಗಲ್ ಪ್ಲೇ ಸ್ಟೋರ್ (Google Play Store) ಸ್ಮಾರ್ಟ್ಫೋನ್ಗಳ (Smartphone) ಬಳಕೆದಾರರ ಸುರಕ್ಷತೆ ದೃಷ್ಠಿಯಿಂದ ದುರುದ್ದೇಶಪೂರಿತ ಅಪ್ಲಿಕೇಶನ್ (Application) ಅನ್ನು ನಿಷೇಧಿಸಿದೆ. ಗೂಗಲ್ ಪ್ಲೇ ಸ್ಟೋರ್ ಕೆಲವು ಆ್ಯಪ್ ಅನ್ನು ಬ್ಯಾನ್ (Ban) ಮಾಡಿದ್ದು, ಬಳಕೆದಾರರು ಆ ಆ್ಯಪ್ಗಳನ್ನು ಹೊಂದಿದ್ದರೆ ತಕ್ಷಣ ಡಿಲೀಟ್ (Delete) ಮಾಡುವಂತೆ ಹೇಳಿದೆ. ಇಲ್ಲವಾದಲ್ಲಿ ನಿಮ್ಮ ಗೌಪ್ಯ ಮಾಹಿತಿ, ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದೆ.
ನಿಮ್ಮ ಹಣವನ್ನು ಕದಿಯಬಹುದಾದ ಅತ್ಯಂತ ದುರುದ್ದೇಶಪೂರಿತ Android ಅಪ್ಲಿಕೇಶನ್ ಅನ್ನು ಇದೀಗ ಬಹಿರಂಗಪಡಿಸಲಾಗಿದೆ ಮತ್ತು ಗೂಗಲ್ ಪ್ಲೇ ಸ್ಟೋರ್ ಇದನ್ನು ನಿಷೇಧಿಸಿದೆ. '2FA Authenticator' ಎಂಬ Android ಅಪ್ಲಿಕೇಶನ್ ಅನ್ನು ಭದ್ರತಾ ತಜ್ಞರು ಕಂಡು ಹಿಡಿದಿದ್ದು, ಈ ಆ್ಯಪ್ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಆ್ಯಪ್ ಸ್ವತ: ಪ್ಲೇ ಸ್ಟೋರ್ ಗೆ ಬೆದರಿಕೆ ಒಡ್ಡಿದ್ದು, Google Play Store ನಿಂದ ಅಪ್ಲಿಕೇಶನ್ ಅನ್ನು ತಕ್ಷಣ ಬ್ಯಾನ್ ಮಾಡಲಾಗಿದೆ.
ಈ ನಿರ್ದಿಷ್ಟ ಅಪ್ಲಿಕೇಶನ್ ಬಹಳ ಜನಪ್ರಿಯವಾಗಿದೆ ಮತ್ತು 10,000ಕ್ಕೂ ಹೆಚ್ಚು ಬಾರಿ ಬಿಲ್ಟ್ ಮಾಡಲಾಗಿದೆ. ಇದನ್ನು ಪ್ಲೇ ಸ್ಟೋರ್ ತೆಗೆದು ಹಾಕಲಾಗಿದ್ದರೂ ಸಹ ಇದು ತಿಳಿಯದೆ ಡೌನ್ಲೋಡ್ ಮಾಡಿದವರ ಸ್ಮಾರ್ಟ್ಫೋನ್ಗಳಲ್ಲಿ ಅಸ್ತಿತ್ವದಲ್ಲಿದೆ.
ಆದ್ದರಿಂದ, ಈ ಅಪಾಯಕಾರಿ ಅಪ್ಲಿಕೇಶನ್ ಅನ್ನು ನೀವು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಂಡಿದ್ದರೆ ತಕ್ಷಣ ಆ್ಯಪ್ ಡಿಲೀಟ್ ಅಥವಾ ಅನ್ ಇನ್ಸ್ಟಾಲ್ ಮಾಡುವುದು ನಿಮಗೆ ಒಳ್ಳೆಯದು, ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.
ಡಿಲೀಟ್ ಮಾಡಿದ್ದಲ್ಲಿ ನೀವು ಸರಿಯಾದ ಅಪ್ಲಿಕೇಶನ್ ಅನ್ನು ಅಳಿಸಿದ್ದೀರಿ ಎಂದು ಮೊದಲು ಖಚಿತಪಡಿಸಿಕೊಳ್ಳಿ.
ಫ್ರೆಂಚ್ ಸೈಬರ್ ಸೆಕ್ಯುರಿಟಿ ಕಂಪನಿ ಪ್ರಡಿಯೊ, ಈ ಹೆಚ್ಚು ಡೌನ್ಲೋಡ್ ಮಾಡಲಾದ ಅಪ್ಲಿಕೇಶನ್ 2FA Authenticator ದುರುದ್ದೇಶಪೂರಿತವಾಗಿದೆ ಎಂದು ಕಂಡುಹಿಡಿದಿದ್ದು, ಡಿಲೀಟ್ ಮಾಡುವಂತೆ ಈ ತುರ್ತು ಎಚ್ಚರಿಕೆಯನ್ನು ನೀಡಿದೆ. ಈ ಆ್ಯಪ್ನಿಂದ ಬಳಕೆದಾರರಿಗೆ ತಿಳಿಯದಂತೆ ಸ್ಮಾರ್ಟ್ಫೋನ್ಗಳಿಗೆ ಮಾಲ್ವೇರ್ನಂತ ವೈರಸ್ ಅನ್ನು ಹರಡಿಸಿದೆ. ಮತ್ತೊಂದು ವಿಪರ್ಯಾಸವೆಂದರೆ ದುರುದ್ದೇಶಪೂರಿತ ಅಪ್ಲಿಕೇಶನ್ ಅನ್ನು ಸ್ಮಾರ್ಟ್ಫೋನ್ ಭದ್ರತಾ ಅಪ್ಲಿಕೇಶನ್ ಎಂದು ಸುಳ್ಳು ಪ್ರಚಾರ ಮಾಡಿ ಅಪ್ಲಿಕೇಶನ್ ಹಗರಣವನ್ನು ಮಾಡಿದೆ.
ಇದನ್ನು ಓದಿ: Instagramನಲ್ಲಿ ಪೋಸ್ಟ್ಗಳನ್ನು ಹೈಡ್ ಮಾಡೋದು ಗೊತ್ತಾ? ಗೊತ್ತಿಲ್ಲಾ ಅಂದ್ರೆ ಇಲ್ಲಿ ಕೇಳಿ
ಈ Android ಅಪ್ಲಿಕೇಶನ್ ಸ್ಕ್ಯಾಮ್ ಹೇಗೆ ಕೆಲಸ ಮಾಡಿದೆ
ಬಳಕೆದಾರರು ಇದನ್ನು 2-ಫ್ಯಾಕ್ಟರ್ ದೃಢೀಕರಣಕ್ಕಾಗಿ ಡೌನ್ಲೋಡ್ ಮಾಡುತ್ತಾರೆ. ಬಳಕೆದಾರರ ಹೆಸರಿನ ಜೊತೆಗೆ ಪಾಸ್ವರ್ಡ್ ಪಡೆದುಕೊಂಡು ಒಬ್ಬ ವ್ಯಕ್ತಿಯು ಪಾಸ್ವರ್ಡ್ ಮತ್ತು ಸೆಕೆಂಡರಿ ಗುರುತನ್ನು ಒದಗಿಸಬೇಕಾಗುತ್ತದೆ. ಈ ಮೂಲಕ ಆನ್ಲೈನ್ ಖಾತೆಗಳು, ಅಪ್ಲಿಕೇಶನ್ಗಳು ಮತ್ತು ಫೈಲ್ಗಳನ್ನು ಪ್ರವೇಶಿಸುತ್ತದೆ. ಅಪ್ಲಿಕೇಶನ್ Vultur ಎಂಬ ಹೆಸರಿನಲ್ಲಿ ರಚನೆಯಾಗುತ್ತದೆ. ಈ ಮೂಲಕ ಆನ್ಲೈನ್ ಖಾತೆಗಳು ಮತ್ತು ಸ್ಮಾರ್ಟ್ಫೋನ್ನಲ್ಲಿರುವ ಯಾವುದೇ ಹಣಕಾಸು ಸೇವೆಗಳು ಅಥವಾ ಅಪ್ಲಿಕೇಶನ್ಗಳನ್ನು ಹ್ಯಾಕ್ ಮಾಡಲು ಸುಲಭವಾಗುತ್ತದೆ.
ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಆದರೆ ಈಗ ಬ್ಯಾನ್ ಆಗಿದೆ. ನೀವು ಈ ಆ್ಯಪ್ ಹೊಂದಿದ್ದೀರಾ ಇಲ್ಲವಾ ಎಂದು ಚೆಕ್ ಮಾಡಲು "com.privacy.account.safetyapp"ಈ ಲಿಂಕ್ ಅನ್ನು ಟ್ಯಾಪ್ ಮಾಡುವ ಮೂಲಕ ನೋಡಬಹುದು.
ಇದನ್ನು ಓದಿ: Facebook: ಫೇಸ್ಬುಕ್ ಬೃಹತ್ ಮೊತ್ತದ ಮೌಲ್ಯದ ಕುಸಿತಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ
ಆ್ಯಪ್ ಡಿಲೀಟ್ ಮಾಡುವುದು ಹೇಗೆ?
ಹಂತ 1:
ಗೂಗಲ್ ಪ್ಲೇ ಸ್ಟೋರ್ ಸೆಟ್ಟಿಂಗ್ಗಳಿಗೆ ಹೋಗಿ.
ಹಂತ 2:
ಅಪ್ಲಿಕೇಶನ್ಗಳು' ವಿಭಾಗವನ್ನು ಹುಡುಕಲು ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ.
ಹಂತ 3:
ಅಪ್ಲಿಕೇಶನ್ ಸೆಟ್ಟಿಂಗ್' ವಿಭಾಗವನ್ನು ಟ್ಯಾಪ್ ಮಾಡಿ.
ಹಂತ 4:
ಇಲ್ಲಿ, ನಿಮ್ಮ ಅಪ್ಲಿಕೇಶನ್ಗಳ ಸಂಪೂರ್ಣ ಪಟ್ಟಿಯನ್ನು ನೀವು ಕಾಣಬಹುದು. ನಿಮ್ಮ ಅಪ್ಲಿಕೇಶನ್ನ ಹೆಸರನ್ನು ಹುಡುಕಲು ಸ್ಕ್ರಾಲ್ ಮಾಡಿ
ಹಂತ 5:
ಅಪ್ಲಿಕೇಶನ್ ಸಿಕ್ಕ ನಂತರ ದೀರ್ಘವಾಗಿ ಅದನ್ನು ಒತ್ತುವ ಮೂಲಕ ಅಥವಾ ಅಪ್ಲಿಕೇಶನ್ ಮೆನುವಿನಲ್ಲಿ ಹೋಗಿ ಟ್ಯಾಪ್ ಮಾಡುವ ಮೂಲಕ ಅನ್ ಇನ್ಸ್ಟಾಲ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ