• Home
  • »
  • News
  • »
  • tech
  • »
  • Apple: 140 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಕದ್ದಿದ್ದಾರಂತೆ ಆ್ಯಪಲ್ ಮಾಜಿ ಉದ್ಯೋಗಿ!

Apple: 140 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಕದ್ದಿದ್ದಾರಂತೆ ಆ್ಯಪಲ್ ಮಾಜಿ ಉದ್ಯೋಗಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯ ಮೂಲದ ಆ್ಯಪಲ್ ನ ಮಾಜಿ ಉದ್ಯೋಗಿಯೊಬ್ಬರು ಕ್ಯುಪರ್ಟಿನೊ ಮೂಲದ ಕಂಪನಿಗೆ 20 ಮಿಲಿಯನ್ ಡಾಲರ್ ಗೂ ಹೆಚ್ಚು ವಂಚನೆ ಮಾಡಿದ್ದಾಗಿ ತಿಳಿದುಬಂದಿದೆ.

  • Share this:

ಕೆಲವೊಬ್ಬರು ತಾವು ದುಡಿಯುವ ಕಂಪನಿಗೆ (Campany) ತುಂಬಾನೇ ನಿಯತ್ತಾಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಇನ್ನು ಕೆಲವರು ಕೆಲಸ ಮಾಡುತ್ತಿರುವ ಕಂಪನಿಯಲ್ಲಿಯೇ ಹಣ (Money) ಹೊಡೆದುಕೊಂಡು ಮೋಸ ಮಾಡುತ್ತಾರೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ. ವ್ಯಕ್ತಿಯೊಬ್ಬ (Person) ಕೆಲಸ (Work) ಮಾಡುತ್ತಿದ್ದ ಕಂಪನಿಗೆ ವಂಚಿಸಿ ಕೋಟಿಗಟ್ಟಲೆ ಹಣವನ್ನು ದೋಚಿಕೊಂಡಿದ್ದಾರೆ.


ಭಾರತೀಯ ಮೂಲದ ಆ್ಯಪಲ್ ನ ಮಾಜಿ ಉದ್ಯೋಗಿಯೊಬ್ಬರು ಕ್ಯುಪರ್ಟಿನೊ ಮೂಲದ ಕಂಪನಿಗೆ 20 ಮಿಲಿಯನ್ ಡಾಲರ್ ಗೂ ಹೆಚ್ಚು ವಂಚನೆ ಮಾಡಿದ್ದಾಗಿ ತಿಳಿದುಬಂದಿದೆ. ಕಳೆದ 10 ವರ್ಷಗಳಿಂದ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಧೀರೇಂದ್ರ ಪ್ರಸಾದ್, ತಮ್ಮ ಉದ್ಯೋಗದಾತನಿಗೆ ವಂಚಿಸಿದ ಆರೋಪದ ಮೇಲೆ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.


ಪ್ರಸಾದ್ ಕೋಟಿಗಟ್ಟಲೆ ಹಣ ಕೊಳ್ಳೆ ಹೊಡೆದಿದ್ದು ಹೇಗೆ?


ಪ್ರಸಾದ್ ಕಿಕ್‌ಬ್ಯಾಕ್ ತೆಗೆದುಕೊಳ್ಳುವುದು, ಇನ್ವಾಯ್ಸ್ ಗಳನ್ನು ಹೆಚ್ಚಿಸುವುದು, ಬಿಡಿಭಾಗಗಳನ್ನು ಕದಿಯುವುದು ಮತ್ತು ಆ್ಯಪಲ್ ಕಂಪನಿಯು ಎಂದಿಗೂ ಸ್ವೀಕರಿಸದ ವಸ್ತುಗಳಿಗೆ ಪಾವತಿಸುವಂತೆ ಮಾಡುವಂತಹ ವಿಭಿನ್ನ ತಂತ್ರಗಳನ್ನು ಮಾಡುವ ಮೂಲಕ ಭಾರಿ ಮೊತ್ತದ ಹಣವನ್ನು ಕೊಳ್ಳೆ ಹೊಡೆದಿದ್ದಾರೆ.


ಕಂಪನಿಯನ್ನು ವಂಚಿಸಿದವರು ಅವರೊಬ್ಬರೆ ಅಲ್ಲ ಎಂದು ಹೇಳಲಾಗುತ್ತಿದೆ. ಪ್ರಸಾದ್ ಅವರೊಂದಿಗೆ ಇನ್ನೂ ಇಬ್ಬರು ಈ ಕೆಲಸದಲ್ಲಿ ಭಾಗಿಯಾಗಿದ್ದಾರೆ ಅಂತ ಹೇಳಲಾಗುತ್ತಿದೆ. ಅವರು ಸಹ ಈ ಆ್ಯಪಲ್ ಕಂಪನಿಯಿಂದ ಹಣವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಪ್ರಸಾದ್ ಅವರೊಟ್ಟಿಗೆ ಕೈ ಮಿಲಾಯಿಸಿದ್ದಾರೆ.


ಪ್ರಸಾದ್ 2008 ರಿಂದ 2018 ರವರೆಗೆ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡಿದ್ದಾರಂತೆ!


2008 ರಿಂದ 2018 ರವರೆಗೆ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು "ಆ್ಯಪಲ್ ಗ್ಲೋಬಲ್ ಸರ್ವೀಸ್ ಸಪ್ಲೈ ಚೈನ್ ನಲ್ಲಿ ಖರೀದಿದಾರನಾಗಿ ಆ ಸಮಯದಲ್ಲಿ ಹೆಚ್ಚಿನ ಸಮಯ ಕಾರ್ಯ ನಿರ್ವಹಿಸಿದ್ದೇನೆ" ಎಂದು 52 ವರ್ಷದ ಪ್ರಸಾದ್ ಲಿಖಿತ ಮನವಿ ಒಪ್ಪಂದದಲ್ಲಿ ಬಹಿರಂಗಪಡಿಸಿದ್ದಾರೆ.


ಆ್ಯಪಲ್ ನಿಂದ ಬಿಡಿಭಾಗಗಳು ಮತ್ತು ಸೇವೆಗಳನ್ನು ಖರೀದಿಸುವುದು ಪ್ರಸಾದ್ ಅವರ ಕೆಲಸವಾಗಿತ್ತು. ಕಿಕ್‌ಬ್ಯಾಕ್ ಗಳನ್ನು ತೆಗೆದುಕೊಳ್ಳುವ ಮೂಲಕ ಇನ್ವಾಯ್ಸ್ ಗಳನ್ನು ಹೆಚ್ಚಿಸುವ ಮೂಲಕ ಬಿಡಿಭಾಗಗಳನ್ನು ಕದಿಯುವ ಮೂಲಕ ಮತ್ತು ಆ್ಯಪಲ್ ಎಂದಿಗೂ ಸ್ವೀಕರಿಸದ ವಸ್ತುಗಳಿಗೆ ಪಾವತಿಸುವಂತೆ ಮಾಡುವ ಮೂಲಕ 2011 ರಲ್ಲಿ ಅವರು ಕಂಪನಿಗೆ ಮೋಸ ಮಾಡಲು ಪ್ರಾರಂಭಿಸಿ 2018 ರವರೆಗೆ ಹಾಗೆಯೇ ಮುಂದುವರಿಸಿದ್ದಾಗಿ ಅವರು ಹೇಳಿದ್ದಾರೆ. ಅದೇ ವರ್ಷದಲ್ಲಿ, ಆ್ಯಪಲ್ ಸುಮಾರು 17 ಮಿಲಿಯನ್ ಡಾಲರ್ ಗಳನ್ನು ಕಳೆದುಕೊಂಡಿತು.


ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಫೇಕ್‌ ನಂಬರ್ ಪತ್ತೆ ಮಾಡುವುದು ತುಂಬಾ ಸುಲಭ ಕಣ್ರೀ!


ಆ್ಯಪಲ್ ನ 17 ಮಿಲಿಯನ್ ಡಾಲರ್ ಗಳನ್ನು ದೋಚುವಲ್ಲಿ ಧೀರೇಂದ್ರ ಅವರ ಕೈವಾಡ ಮಾತ್ರ ಅಲ್ಲದೆ ರಾಬರ್ಟ್ ಗ್ಯಾರಿ ಹ್ಯಾನ್ಸೆನ್ ಮತ್ತು ಡಾನ್ ಎಂ. ಬೇಕರ್ ಎಂಬ ಇಬ್ಬರು ವ್ಯಕ್ತಿಗಳು ಸಹ ಇದರಲ್ಲಿ ಶಾಮಿಲಾಗಿದ್ದರು. ಆ್ಯಪಲ್ ನ ದಾಸ್ತಾನುಗಳಿಂದ ಮದರ್ ಬೋರ್ಡ್ ಗಳನ್ನು ಡಾನ್ ಎಂ ಬೇಕರ್ ಅವರ ಸಿಟ್ರೆಂಡ್ಸ್ ಕಂಪನಿಗೆ ಕಳುಹಿಸಿದ್ದಾಗಿ ಪ್ರಸಾದ್ ಬಹಿರಂಗಪಡಿಸಿದರು.


ಹೇಗೆಲ್ಲಾ ಪ್ಲ್ಯಾನ್ ಮಾಡಿ ದೊಚ್ಚಿದ್ದಾರೆ ನೋಡಿ ಆ್ಯಪಲ್ ಕಂಪನಿಯನ್ನ..


ಅವರು ಆ್ಯಪಲ್​ಗೆ ನಕಲಿ ಬಿಲ್ ಗಳನ್ನು ಪಾವತಿಸುವಂತೆ ಮಾಡಿದರು. ಬೇಕರ್ ಮತ್ತು ಅವರು ನಂತರ ನಕಲಿ ಬಿಲ್ ಗಳನ್ನು ಒದಗಿಸುವ ಮೂಲಕ ಅವರು ಉತ್ಪಾದಿಸಿದ ಹೆಚ್ಚುವರಿ ಹಣವನ್ನು ವಿಭಜಿಸಿದರು. ಅಷ್ಟೇ ಅಲ್ಲ, ಪ್ರಸಾದ್ ಆ್ಯಪಲ್ ಪ್ಯಾಕೇಜಿಂಗ್ ನಿಂದ ಬಿಡಿಭಾಗಗಳನ್ನು ತೆಗೆದು, ಅವುಗಳನ್ನು ಹೊಸ ಪೆಟ್ಟಿಗೆಗಳಲ್ಲಿ ಇರಿಸಿ ಆ್ಯಪಲ್ ನ ಗೋದಾಮಿಗೆ ಕಳುಹಿಸಿದರು.


ಇದನ್ನೂ ಓದಿ: ಜಿಮೇಲ್ ಸ್ಟೋರೆಜ್ ಫುಲ್‌ ಆಗಿದೆಯಾ! ಸುಲಭವಾಗಿ ಹೀಗೆ ಕ್ಲಿಯರ್ ಮಾಡಿ


ಇಷ್ಟೇ ಅಲ್ಲದೆ ಇವರು ಹೆನ್ಸೆನ್ ಜೊತೆಗೆ ಸೇರಿ ತೆರಿಗೆ ವಂಚನೆಯಲ್ಲಿಯೂ ತೊಡಗಿದ್ದರು. ಇದು 2018 ರಲ್ಲೂ ಹಾಗೆಯೇ ಮುಂದುವರೆದವು ಮತ್ತು ಅಂತಿಮವಾಗಿ ಆ್ಯಪಲ್ ಗೆ 17 ಮಿಲಿಯನ್ ಗಿಂತಲೂ ಹೆಚ್ಚು ನಷ್ಟಕ್ಕೆ ಕಾರಣವಾಯಿತು ಎಂದು ಪ್ರಸಾದ್ ಒಪ್ಪಿಕೊಂಡಿದ್ದಾರೆ ಎಂದು ಪ್ರಾಸಿಕ್ಯೂಟರ್ ಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಯುಎಸ್ ಸರ್ಕಾರವು ಪ್ರಸಾದ್ ಅವರಿಂದ 5 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅವರ ಶಿಕ್ಷೆಯ ವಿಚಾರಣೆಯನ್ನು ಮಾರ್ಚ್ 14 ಕ್ಕೆ ನಿಗದಿಪಡಿಸಲಾಗಿದೆ.

First published: