• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Technology: ಹಿರಿಯರನ್ನು ಸ್ವತಂತ್ರರನ್ನಾಗಿಸುತ್ತೆ ಈ ಸ್ಪೆಷಲ್ ವಾಕರ್, ಆರೋಗ್ಯದ ಬಗ್ಗೆ ಕಾಳಜಿಯನ್ನೂ ವಹಿಸುತ್ತೆ!

Technology: ಹಿರಿಯರನ್ನು ಸ್ವತಂತ್ರರನ್ನಾಗಿಸುತ್ತೆ ಈ ಸ್ಪೆಷಲ್ ವಾಕರ್, ಆರೋಗ್ಯದ ಬಗ್ಗೆ ಕಾಳಜಿಯನ್ನೂ ವಹಿಸುತ್ತೆ!

ಹೊಸ ತಂತ್ರಜ್ಞಾನ

ಹೊಸ ತಂತ್ರಜ್ಞಾನ

ವಡೋದರಾದ ಶ್ರೇಯಾ ಠಕ್ಕರ್‌ ಎಂಬ ಇಂಡಸ್ಟ್ರಿಯಲ್‌ ಡಿಸೈನರ್‌ ಒಬ್ಬರು ವಯಸ್ಸಾದವರಿಗಾಗಿಯೇ ಹೊಸ ಬಗೆಯ ಸ್ಮಾರ್ಟ್‌ ಕೇನ್‌ ಹಾಗೂ ವಾಕರ್‌ಗಳನ್ನ ಅಭಿವೃದ್ಧಿ ಪಡಿಸಿದ್ದಾರೆ. ಈ ಹೊಸ ತಂತ್ರಜ್ಞಾನ ವಯಸ್ಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.

  • Share this:
  • published by :

ದಿನೇ ದಿನೇ ಬೆಳೆಯುತ್ತಿರುವ ತಂತ್ರಜ್ಞಾನ (Technology) ಯುಗದಲ್ಲಿ ನಮಗೆ ಅನುಕೂಲವಾಗುವಂಥ ಅನೇಕ ಸಾಧನಗಳು ಮಾರುಕಟ್ಟೆಗೆ ಬರುತ್ತಿವೆ. ಅನೇಕರಿಗೆ ಇಂಥ ಸಾಧನಗಳಿಂದ ಅನುಕೂಲವಾಗುತ್ತದೆ. ಅದರಲ್ಲೂ ಪ್ರಮುಖವಾಗಿ ವಯಸ್ಸಾದಂತೆ ಬೇರೆಯವರ ಮೇಲೆ ಅಲವಂಬಿತರಾಗಬೇಕಲ್ಲ ಎಂದು ಬೇಸರಿಸುವ ಹಿರಿಯರಿಗೆ ಈ ಹೊಸ ತಂತ್ರಜ್ಞಾನಗಳು ವರವಾಗಿವೆ. ಆದರೆ ಅದನ್ನು ಕಲಿತು ಬಳಸುವಂಥ ತಾಳ್ಮೆ (Patience) ಹಾಗೂ ಜಾಣ್ಮೆ ಇರಬೇಕು ಅಷ್ಟೇ. ವಡೋದರಾದ ಶ್ರೇಯಾ ಠಕ್ಕರ್‌ ಎಂಬ ಇಂಡಸ್ಟ್ರಿಯಲ್‌ ಡಿಸೈನರ್‌ ಒಬ್ಬರು ವಯಸ್ಸಾದವರಿಗಾಗಿಯೇ ಹೊಸ ಬಗೆಯ ಸ್ಮಾರ್ಟ್‌ ಕೇನ್‌ ಹಾಗೂ ವಾಕರ್‌ಗಳನ್ನ ಅಭಿವೃದ್ಧಿ ಪಡಿಸಿದ್ದಾರೆ. ಈ ಹೊಸ ತಂತ್ರಜ್ಞಾನ ವಯಸ್ಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.


ಅಷ್ಟಕ್ಕೂ 28 ವರ್ಷದ ಇಂಡಸ್ಟ್ರಿಯಲ್ ಡಿಸೈನರ್ ಮತ್ತು ಸಂಶೋಧಕಿ ಶ್ರೇಯಾ ಠಕ್ಕರ್‌ಗೆ ಸ್ಪೂರ್ತಿಯಾಗಿದ್ದು ಅವರ ತಾಯಿ ಹಿರಿಯರನ್ನು ನೋಡಿಕೊಳ್ಳುತ್ತಿದ್ದ ರೀತಿ. ಅವರು ವಡೋದರಾದಲ್ಲಿ ತನ್ನ ಅಜ್ಜಿಯರೊಂದಿಗೆ ಬೆಳೆದವರು. ಹಾಗಾಗಿ ವಯಸ್ಸಾದವರ ಆರೋಗ್ಯ ಮತ್ತು ಪರಿಣಾಮಗಳನ್ನು ಅವರು ನೇರವಾಗಿ ಗಮನಿಸಿದ್ದರು. "ನನ್ನ ತಾಯಿಯು ಅವರಿಗೆ ಸೇವೆ ಸಲ್ಲಿಸುತ್ತಿರುವುದನ್ನು ನೋಡಿರುವ ನನಗೆ ವೃದ್ಧರ ಆರೈಕೆಯಲ್ಲಿ ಸಹಾನುಭೂತಿ ಎಷ್ಟು ಮುಖ್ಯ ಎಂಬುದು ತಿಳಿಸಿದೆ" ಎಂಬುದಾಗಿ ಅವರು ಹೇಳುತ್ತಾರೆ.


ಹಿರಿಯರ ಜೀವನ ಗುಣಮಟ್ಟ ಸುಧಾರಿಸುವ ಉತ್ಸಾಹ


ಶ್ರೇಯಾ ಅವರು ಬೆಂಗಳೂರು, ಆರೊವಿಲ್ಲೆ ಮತ್ತು ಅಂತಿಮವಾಗಿ ಯುನೈಟೆಡ್ ಸ್ಟೇಟ್ಸ್‌ನ ಲಾಸ್ ಏಂಜಲೀಸ್‌ ನಲ್ಲಿ ವಿದ್ಯಾಭ್ಯಾಸ ಮಾಡಿದರು. ಅಲ್ಲಿ ಅವರು ಸೀನಿಯರ್‌ ಲಿವಿಂಗ್‌ ಫೆಸಿಲಿಟೀಸ್‌ಗಳಲ್ಲಿ ಸ್ವಯಂಸೇವಕರಾಗಿ, ಪ್ರತಿಷ್ಠಿತ ಆರ್ಟ್‌ಸೆಂಟರ್ ಕಾಲೇಜ್ ಆಫ್ ಡಿಸೈನ್‌ನಲ್ಲಿ ಕೈಗಾರಿಕಾ ಮತ್ತು ಪೀಠೋಪಕರಣ ವಿನ್ಯಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.


"ಲಾಸ್ ಏಂಜಲೀಸ್‌ನಲ್ಲಿರುವ ಸೀನಿಯರ್‌ ಲಿವಿಂಗ್‌ ಫೆಸಿಲಿಟೀಸ್‌ ನಲ್ಲಿ ನಾನು ಹಿರಿಯರ ಕಥೆಗಳನ್ನು ಕೇಳಲು, ಅವರ ಅನುಭವಗಳ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಉತ್ಸಾಹ ಹೊಂದಿದ್ದೆ. ಇದರಿಂದ ನನ್ನ ಉತ್ಸಾಹ ಮತ್ತು ನಮ್ಮ ವಯಸ್ಸಾದವರ ಜೀವನದ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿತು" ಎಂಬುದಾಗಿ ಅವರು ಹೇಳುತ್ತಾರೆ.


ವಯಸ್ಸಾಗುವುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ!


ಕೆಲವು ತಿಂಗಳುಗಳವರೆಗೆ ಲಾಸ್ ಏಂಜಲೀಸ್ ಮತ್ತು ಗ್ರ್ಯಾಂಡ್ ರಾಪಿಡ್ಸ್, ಮಿಶಿಗನ್‌ನಲ್ಲಿರುವ ಹಿರಿಯ ಕೇಂದ್ರ (ಎಲ್ಡರ್‌ ಸೆಂಟರ್)ಗಳಲ್ಲಿ ಸ್ವಯಂ ಸೇವಕರಾಗಿದ್ದು ಹಿರಿಯರನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಶ್ರೇಯಾಗೆ ಸಾಧ್ಯವಾಯಿತು.


ವಯಸ್ಸಾದ ಕಾರಣ ಕಷ್ಟಕರವಾದ ಸನ್ನಿವೇಶದಲ್ಲಿ ಅವರ ನಡವಳಿಕೆಯನ್ನು ಅವರು ಗಮನಿಸಿದರು. ಇದು ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಅಂಶಗಳನ್ನು ಒಳಗೊಂಡಂತೆ ವಯಸ್ಸಾದ ಸಂಕೀರ್ಣತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು.


ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, “2015 ಮತ್ತು 2050 ರ ನಡುವೆ, 60 ವರ್ಷಗಳಲ್ಲಿ ಪ್ರಪಂಚದ ಜನಸಂಖ್ಯೆಯ ಪ್ರಮಾಣವು ಸುಮಾರು 12% ರಿಂದ 22% ಕ್ಕೆ ದ್ವಿಗುಣಗೊಳ್ಳುತ್ತದೆ ಎನ್ನಲಾಗಿದೆ.


ಏಕೆಂದರೆ ಔಷಧ, ಪೋಷಣೆ, ಜೈವಿಕ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿನ ಪ್ರಗತಿಗಳು ಜನರು ದೀರ್ಘಾವಧಿಯವರೆಗೆ ಜೀವನವನ್ನು ಆನಂದಿಸಲು ಸಹಾಯ ಮಾಡುತ್ತಿವೆ.


ಹಾಗಾಗಿ ವಯಸ್ಸಾದ ಜನರು ತಮ್ಮ ಜೀವನವನ್ನು ಹೇಗೆ ಕಳೆಯುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ವಯಸ್ಕರನ್ನು ಅವರ ಕನಸುಗಳ ಬಗ್ಗೆ ಕೇಳಿದಾಗ, ಅವರಲ್ಲಿ ಹೆಚ್ಚಿನವರು ಸ್ವತಂತ್ರವಾಗಿ, ಸ್ವಾವಲಂಬನೆಯಿಂದ ಬದುಕಲು ಇಷ್ಟಪಡುತ್ತಾರೆ ಎಂಬುದಾಗಿ ಎಂದು ಶ್ರೇಯಾ ವಿವರಿಸುತ್ತಾರೆ.


ಇದನ್ನೂ ಓದಿ: ಬ್ಯಾಚುಲರ್ ಬಾಡಿಗೆದಾರರಿಗೆ ಓನರ್​ಗಳ ವಿಚಿತ್ರ ರೂಲ್ಸ್​, 10 ಗಂಟೆಯ ನಂತರ ಯಾರೂ ಬರುವ ಹಾಗಿಲ್ವಂತೆ


ಶ್ರೇಯಾ ಅವರ ಇಂಥ ವ್ಯಾಪಕ ಸಂಶೋಧನೆಯು ಜಿಪಿಎಸ್ ಟ್ರ್ಯಾಕಿಂಗ್, ಬಿಲ್ಟ್-ಇನ್ ರಕ್ತದೊತ್ತಡ ಮಾನಿಟರಿಂಗ್ ಜೊತೆಗೆ ಎಸ್‌ಒಎಸ್ ಅಲಾರಂಗಳನ್ನು ಹೊಂದಿರುವ ವಾಂಡರ್ ಆನ್ ಸ್ಮಾರ್ಟ್ ಕೇನ್ (ವಾಕರ್ ಆನ್ ಅಸಿಸ್ಟ್ 01) ಮತ್ತು ವಾಕರ್ (ವಾಕರ್ ಆನ್ ಅಸಿಸ್ಟ್ 02) ಅನ್ನು ಅಭಿವೃದ್ಧಿಪಡಿಸಲು ಕಾರಣವಾಯಿತು.


ಸ್ಮಾರ್ಟ್ ಕೇನ್ ಮತ್ತು ವಾಕರ್ ಪರಿಕಲ್ಪನೆ


“ವಯಸ್ಸಾದವರಿಗೆ ಪ್ರಮುಖವಾಗಿ ಬೆಳಗಿನ ದಿನಚರಿ, ಓಡಾಡಲು ಹಾಗೆಯೇ ಅಡಿಗೆ ಮಾಡುವಂಥ ಸಮಯದಲ್ಲಿ ಸಹಾಯ ಅಗತ್ಯವಿರುತ್ತದೆ. ಈ ಅಂಶವು ನನಗೆ ಮೊದಲ ಸ್ಮಾರ್ಟ್ ಕೇನ್ ಮತ್ತು ವಾಕರ್ ಪರಿಕಲ್ಪನೆ ಮಾಡಲು ಮತ್ತು ವಿನ್ಯಾಸಗೊಳಿಸಲು ಕಾರಣವಾಯಿತು" ಎಂದು ಶ್ರೇಯಾ ನೆನಪಿಸಿಕೊಳ್ಳುತ್ತಾರೆ.


"ಉತ್ಪನ್ನಗಳನ್ನು ಹೆಚ್ಚು ಆಕರ್ಷಕವಾಗಿ ಮಾಡುವ ಮೂಲಕ ವಯಸ್ಕರಿಗೆ ಸಹಾಯ ಮಾಡುವ ಸಾಧನವನ್ನು ರಚಿಸುವುದು ನನ್ನ ಉದ್ದೇಶವಾಗಿತ್ತು. ಆರೋಗ್ಯಕರ ಮತ್ತು ಆನಂದದಾಯಕ ಜೀವನ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾನು ಅವರನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾನು ವಾಂಡರ್ ಆನ್ ಸ್ಮಾರ್ಟ್‌ ಕೇನ್‌ ಮತ್ತು ವಾಕರ್ ಅನ್ನು ಅಭಿವೃದ್ಧಿಪಡಿಸಿದೆ" ಎನ್ನುತ್ತಾರೆ.


ಹಿರಿಯರಿಗೆ ಭದ್ರತೆಯ ಪ್ರಜ್ಞೆಯನ್ನು ನೀಡುವ, ಅವರಿಗೆ ಅಗತ್ಯವಿದ್ದಲ್ಲಿ ತಕ್ಷಣವೇ ನೆರವು ಪಡೆಯಲು ಮತ್ತು ದೈಹಿಕ ಬೆಂಬಲವನ್ನು ಒದಗಿಸುವಂತೆ 'ವಾಂಡರ್ ಆನ್' ಅಭಿವೃದ್ಧಿಪಡಿಸಲಾಗಿದೆ.


ಏನಿದು ಸ್ಮಾರ್ಟ್ ಕೇನ್?


ವಾಂಡರ್ ಆನ್ ಅಸಿಸ್ಟ್ 01 ಒಂದು "ಮರುರೂಪಿಸಿದ ಕೇನ್‌ “ ಆಗಿದ್ದು ಅದು ವಾಕಿಂಗ್ ಸಹಾಯವನ್ನು ಬಯಸುವವರಿಗೆ ಸೂಕ್ತವಾಗಿದೆ. ಸರಿಹೊಂದಿಸಬಹುದಾದ ಎತ್ತರ, ಪೆಡೋಮೀಟರ್ ಮತ್ತು ಆಘಾತ ತಡೆದುಕೊಳ್ಳುವ ವಿನ್ಯಾಸದೊಂದಿಗೆ ಇದನ್ನು ರಚಿಸಲಾಗಿದೆ. ಇದರಿಂದ ವಯಸ್ಕರು ಆರಾಮಾಗಿ ಚಲಿಸಬಹುದು.


ಅಲ್ಲದೇ ಇದು ರಕ್ತದೊತ್ತಡ, ತಾಪಮಾನ ಮತ್ತು ನಾಡಿಮಿಡಿತವನ್ನು ಸಹ ಟ್ರ್ಯಾಕ್ ಮಾಡುತ್ತದೆ. ಬಳಕೆದಾರರು ತಮಗೆ ಬೇಕಾದವರ ಜೊತೆಗೆ ಈ ಆರೋಗ್ಯ ಡೇಟಾವನ್ನು ಹಂಚಿಕೊಳ್ಳಲು ಅನುಮತಿಸುತ್ತದೆ.


ಒತ್ತಿದಾಗ, SOS ಬಟನ್ ಬೆಂಬಲ ಕೇಂದ್ರ ಮತ್ತು ನಾಮನಿರ್ದೇಶಿತ ಸಂಪರ್ಕಕ್ಕೆ ತುರ್ತು ಸಂಕೇತವನ್ನು ಕಳುಹಿಸುತ್ತದೆ. ಅವರ ಪ್ರಸ್ತುತ ಹೆಲ್ತ್‌ ಡೇಟಾ ಹಾಗೂ ಸ್ಥಳ ಬಗ್ಗೆ ವಿವರಿಸುತ್ತದೆ.
ಇದರೊಳಗಿರುವ ಪೆಡೋಮೀಟರ್ ಹಂತಗಳನ್ನು ಟ್ರ್ಯಾಕ್ ಮಾಡುತ್ತದೆ. ಅಲ್ಲದೇ ರಕ್ತದೊತ್ತಡ, ತಾಪಮಾನ ಮತ್ತು ನಾಡಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ವಾಂಡರ್ ಆನ್ ಸ್ಮಾರ್ಟ್ ಕೇನ್ ಹೈಟೆಕ್, ಆಲ್ ಇನ್ ಒನ್ ಸೇವೆ ಮತ್ತು ಆರೋಗ್ಯ ಸಾಧನವಾಗಿದೆ.


ಸ್ಮಾರ್ಟ್ ವಾಕರ್ ಹೇಗೆ ಕೆಲಸ ಮಾಡುತ್ತದೆ?


ಶ್ರೇಯಾ ಸಾಂಪ್ರದಾಯಿಕ ವಾಕರ್ ಅನ್ನು ಹೊಸ ಅಂಶಗಳೊಂದಿಗೆ ತಯಾರಿಸಲು ಬಯಸಿದ್ದರು. “ನಾನು ಹಿರಿಯರಿಗಾಗಿ ವಾಂಡರ್ ಆನ್ ಅಸಿಸ್ಟ್ 02 ವಾಕರ್ ಅನ್ನು ವಿನ್ಯಾಸಗೊಳಿಸಲು ಪ್ರಯತ್ನಿಸಿದೆ.


ಇದು ಸ್ಮಾರ್ಟ್ ಹೋಮ್ ಕನೆಕ್ಟಿವಿಟಿ, ನ್ಯಾವಿಗೇಷನ್ ಸಿಸ್ಟಮ್ ಮತ್ತು ಹ್ಯಾಂಡ್ ಗೆಸ್ಚರ್ ಡಿಟೆಕ್ಷನ್ ಅನ್ನು ಒಳಗೊಂಡಿರುವ ಮೊಬಿಲಿಟಿ ಸಾಧನವಾಗಿದೆ” ಎನ್ನುತ್ತಾರೆ.


ಚಕ್ರಗಳು ಮತ್ತು ಆಸನಗಳೊಂದಿಗೆ ನಾಜೂಕಾದ ವಾಕರ್ ಅನ್ನು ವಿನ್ಯಾಸಗೊಳಿಸಿದ್ದೇನೆ. ಅದು ಚಲಿಸಲು ಸಹಾಯ ಮಾಡುತ್ತದೆ. ಇದು ಬಾಗಿಲು ತೆರೆಯಲು, ದಿನಸಿ ಸಾಮಾನುಗಳನ್ನು ಸಾಗಿಸಲು, ಬಳಕೆದಾರರು ಪರಿಚಯವಿಲ್ಲದ ಸ್ಥಳಗಳಿಗೆ ಹೋದರೆ ಅಲ್ಲಿಂದ GPS ತಂತ್ರಜ್ಞಾನದೊಂದಿಗೆ ಮನೆಗೆ ಮಾಹಿತಿ ನೀಡಲು ಸಹಾಯ ಮಾಡುತ್ತದೆ" ಎಂಬುದಾಗಿ ಶ್ರೇಯಾ ವಿವರಿಸುತ್ತಾರೆ.


ಇದನ್ನೂ ಓದಿ: ಈ ಮಹಾನುಭಾವರು ಮಾತಾಡಿದ್ದು ಬರೋಬ್ಬರಿ 46 ಗಂಟೆ! ಇದು ಜಗತ್ತಿನ ಅತೀ ದೀರ್ಘ ಫೋನ್ ಕಾಲ್!


“ಬಳಕೆದಾರರು ಈ ಸಾಧನವನ್ನು ಬಳಸಿ ಕುಳಿತುಕೊಳ್ಳಬಹುದು ಅಥವಾ ನಿಲ್ಲಬಹುದು. ಆದ್ದರಿಂದ ಅವರು ಯಾವಾಗ ಏನು ಮಾಡಬೇಕೆಂದು ಆಯ್ಕೆ ಮಾಡಬಹುದು.


ಹೆಚ್ಚುವರಿ ವೈಶಿಷ್ಟ್ಯಗಳು ಎಂದರೆ ದಿನದ ಕೊನೆಯಲ್ಲಿ, ಬಳಕೆದಾರರು ತಮ್ಮ ಆರೋಗ್ಯದ ವಿವರಗಳು ಮತ್ತು ಹಂತದ ಎಣಿಕೆಯನ್ನು ಸಹ ಪರಿಶೀಲಿಸಬಹುದು. ಈ ಬಗ್ಗೆ ಮಾಹಿತಿಯನ್ನು ಅವರು ಬೇಕಾದವರ ಜೊತೆಗೆ ಹಂಚಿಕೊಳ್ಳಬಹುದು" ಎಂದು ಶ್ರೇಯಾ ವಿವರ ನೀಡುತ್ತಾರೆ.
"ನಾನು ವಯಸ್ಕರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲು ಬಯಸುತ್ತೇನೆ. ಹಾಗಾಗಿ ಬಳಕೆದಾರರು ತಮ್ಮ ಆರೋಗ್ಯದ ವಿವರಗಳನ್ನು ಮತ್ತು ಹಂತಗಳ ಸಂಖ್ಯೆಯನ್ನು ಪರಿಶೀಲಿಸಲು ಅನುಮತಿಸುವ ವೈಶಿಷ್ಟ್ಯಗಳನ್ನು ನಾನು ಸೇರಿಸಿದ್ದೇನೆ” ಎಂದು ಅವರು ಹೇಳುತ್ತಾರೆ.


ಮೂಲ ಮಾದರಿ ಇಟ್ಟುಕೊಂಡು ಶೀಘ್ರದಲ್ಲೇ ಉತ್ಪಾದನೆ


ಸದ್ಯ ಹೂಸ್ಟನ್ ಮೂಲದ ಆರ್ಕಿಟೆಕ್ಚರ್ ಕಂಪನಿಯಾದ ಪ್ಲಾನಿಂಗ್ ಡಿಸೈನ್ ರಿಸರ್ಚ್‌ನಲ್ಲಿ ಶ್ರೇಯಾ ವಿನ್ಯಾಸ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಆರೋಗ್ಯ ಸೌಲಭ್ಯಗಳಲ್ಲಿ ರೋಗಿಗಳು ಮತ್ತು ಸಂದರ್ಶಕರ ಅನುಭವಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.
"ನಾವು ಪ್ರಸ್ತುತ ಉತ್ಪನ್ನಗಳ ಮೂಲಮಾದರಿಯ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಶೀಘ್ರದಲ್ಲೇ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ. ಪ್ರಾಡಕ್ಟ್‌ ಮಾರ್ಕೆಟ್‌ ಫಿಟ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ನಾವು ಮೂಲಮಾದರಿಯನ್ನು ಬಳಸುತ್ತಿರುವ ಕೆಲವು ಹಿರಿಯರ ಸಹಾಯವನ್ನು ಪಡೆದಿದ್ದೇವೆ. ಇದು ವ್ಯಾಪಕವಾಗಿ ಲಭ್ಯವಾಗುವ ಮೊದಲು ವಿನ್ಯಾಸವನ್ನು ಇನ್ನಷ್ಟು ಪರಿಷ್ಕರಿಸಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ಅವರು ಹೇಳುತ್ತಾರೆ.
ಈಗಾಗಲೇ ಅಸ್ತಿತ್ವದಲ್ಲಿರುವ ವಾಕರ್‌ಗಳು ಮತ್ತು ಕೇನ್‌ಗಳಿಗೆ ಹೋಲಿಸಿದರೆ, ವಾಂಡರ್ ಆನ್ ಸಾಧನವು ಉನ್ನತ ಮೇಲ್ವಿಚಾರಣೆ ಮತ್ತು ಸಂವಹನ ಸೇವೆಗಳನ್ನು ನೀಡುತ್ತದೆ.


ಅಂದಹಾಗೆ, "ವಯಸ್ಸಾದ ಜನರಿಗೆ ಸ್ವಾಯತ್ತತೆ, ಸ್ವಾತಂತ್ರ್ಯ, ಚಲನಶೀಲತೆ ಮತ್ತು ಸಂಪರ್ಕವನ್ನು ಸಾಧಿಸಲು ಸಹಾಯ ಮಾಡುವುದು ನನ್ನ ಗುರಿಯಾಗಿದೆ. ಹಿರಿಯರ ಯೋಗಕ್ಷೇಮವನ್ನು ಸುಧಾರಿಸುವ ನಿರಂತರ ಪ್ರಯತ್ನವಾಗಲಿದೆ" ಎಂಬುದಾಗಿ ಶ್ರೇಯಾ ಠಕ್ಕರ್‌ ಹೇಳುತ್ತಾರೆ.

top videos
    First published: