HOME » NEWS » Tech » DEPRESSION THIS APP COULD SOON SENSE IF YOURE DEPRESSED BY LISTENING TO JUST YOUR VOICE STG HG

Depression: ನಿಮ್ಮ ಧ್ವನಿ ಕೇಳಿದ್ರೆ ಸಾಕು ನೀವು ಖಿನ್ನತೆಗೆ ಒಳಗಾಗಿದ್ದೀರ ಎಂದು ಹೇಳುತ್ತದೆ ಈ ಆ್ಯಪ್..!

Mental Health: ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್​​ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಕರೋಲ್ ಎಸ್ಪಿ-ವಿಲ್ಸನ್ ಅವರು ಈ ಸಂಶೋಧನೆಗೆ ಮುಂದಾಗಿದ್ದಾರೆ. ಅಕೌಸ್ಟಿಕಲ್ ಸೊಸೈಟಿ ಆಫ್ ಅಮೆರಿಕದ 180 ನೇ ಸಭೆಯಲ್ಲಿ ಈ ಹೇಳಿಕೆ ನೀಡಲಾಗಿದ್ದು, ಜೂನ್​ 8 ರಿಂದ ಜೂನ್ 10 ರವರೆಗೆ ಈ ಸಭೆ ನಡೆದಿದೆ.

news18-kannada
Updated:June 11, 2021, 5:42 PM IST
Depression: ನಿಮ್ಮ ಧ್ವನಿ ಕೇಳಿದ್ರೆ ಸಾಕು ನೀವು ಖಿನ್ನತೆಗೆ ಒಳಗಾಗಿದ್ದೀರ ಎಂದು ಹೇಳುತ್ತದೆ ಈ ಆ್ಯಪ್..!
Photo: Google
  • Share this:

ಮೊದಲು ಖಿನ್ನತೆ ನಿಧಾನವಾಗಿ ಹೆಜ್ಜೆಗಳನ್ನು ಇಡಲು ಆರಂಭಿಸಿತ್ತು. ಈಗ ಕೊರೊನಾ ನಂತರ ಖಿನ್ನತೆ ಕೂಡ ದೈತ್ಯಾಕಾರವನ್ನು ಪಡೆದುಕೊಳ್ಳುತ್ತಿದೆ. ಮನುಕುಲ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಮಾನಸಿಕ ತುಮುಲವನ್ನು ಅನುಭವಿಸುತ್ತಿದೆ. ಈ ಖಿನ್ನತೆಯೂ ಟ್ರಿಕ್ಕಿಯಾಗಿದ್ದು, ಖಿನ್ನತೆಗೆ ಒಳಗಾಗಿದ್ದರೂ ಅದನ್ನು ಗುರುತಿಸಲು ವ್ಯಕ್ತಿಗಳು ಸೋಲುತ್ತಾರೆ. ಆದರೆ ತಂತ್ರಜ್ಞಾನ ಮುಂದುವರೆದಂತೆ ಮನುಷ್ಯ ಚಂದ್ರನ ಅಂಗಳಕ್ಕೆ ಹೋಗಿದ್ದಷ್ಟೇ ಅಲ್ಲ, ಈಗ ಮನಸ್ಸಿನ ಅಂಗಳಕ್ಕೂ ಕಾಲಿಡುವಷ್ಟು ಸಬಲನಾಗಿದ್ದಾನೆ.ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​​) ಸ್ಮಾರ್ಟ್​​ಫೋನ್ ಆ್ಯಪ್​ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಈ ಆ್ಯಪ್​ ಬಹಳ ವಿಶೇಷತೆಯಿಂದ ಕೂಡಿದ್ದು, ಒಬ್ಬ ವ್ಯಕ್ತಿಯು ಖಿನ್ನತೆಗೆ ಒಳಗಾಗಿದ್ದಾನೆಯೇ ಇಲ್ಲವೇ ಎನ್ನುವುದನ್ನು ಪತ್ತೆ ಹಚ್ಚುತ್ತದೆ.


ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್​​ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಕರೋಲ್ ಎಸ್ಪಿ-ವಿಲ್ಸನ್ ಅವರು ಈ ಸಂಶೋಧನೆಗೆ ಮುಂದಾಗಿದ್ದಾರೆ. ಅಕೌಸ್ಟಿಕಲ್ ಸೊಸೈಟಿ ಆಫ್ ಅಮೆರಿಕದ 180 ನೇ ಸಭೆಯಲ್ಲಿ ಈ ಹೇಳಿಕೆ ನೀಡಲಾಗಿದ್ದು, ಜೂನ್​ 8 ರಿಂದ ಜೂನ್ 10 ರವರೆಗೆ ಈ ಸಭೆ ನಡೆದಿದೆ.ಮಾತಿನ ಸನ್ನೆಗಳ ಸಿಂಕ್ರೊನೈಸೇಶನ್‌ನಲ್ಲಿ ವ್ಯಕ್ತಿಯ ಮಾನಸಿಕ ಆರೋಗ್ಯವು ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ವರ್ಚುವಲ್ ಈವೆಂಟ್‌ನಲ್ಲಿ ಉಪನ್ಯಾಸಕರು ಚರ್ಚಿಸಿದರು. ಪ್ರಸ್ತುತ ಅದರ ಆರಂಭಿಕ ಹಂತದಲ್ಲಿರುವ ಆ್ಯಪ್​​ ರೋಗಿಗಳ ವೈದ್ಯರ ಶಿಫಾರಸುಗಳ ಆಧಾರದ ಮೇಲೆ ತನ್ನ ಸಹಾಯ ಹಸ್ತ ಚಾಚಲಿದೆ.


ಎಐ ಚಾಲಿತ ಅಪ್ಲಿಕೇಶನ್ ಜನರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ನಿಗಾ ಇಡಲು ಮತ್ತು ಖಿನ್ನತೆಯ ಸೂಚನೆಗಳನ್ನು ಬೆಳೆಸಿಕೊಂಡರೆ ಅವರನ್ನು ಎಚ್ಚರಿಸಲು ಸಹಾಯ ಮಾಡುತ್ತದೆ. ರೋಗಿಗಳ ದುಃಖದ ಸ್ಥಿತಿ ಗಮನಿಸಲು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುವ ಹಂತಕ್ಕೆ ರೋಗಿಗಳು ತಲುಪಿರುವರೇ ಎಂದು ಗುರುತಿಸುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯರಿಗೆ ಎಚ್ಚರಿಕೆ ನೀಡುವುದು ಮುಖ್ಯ ಎಂದು ಪ್ರೊಫೆಸರ್ ಎಸ್ಪಿ-ವಿಲ್ಸನ್ ಹೇಳುತ್ತಾರೆ.


ಹಿಂದಿನ ವಾರದಲ್ಲಿ ಬಳಕೆದಾರರ ಮನಸ್ಥಿತಿ ಮತ್ತು ಭಾವನಾತ್ಮಕ ಯೋಗಕ್ಷೇಮದ ಬಗ್ಗೆ ಕೆಲವು ಸರಳ ಪ್ರಶ್ನೆಗಳನ್ನು ಈ ಆ್ಯಪ್​​ ಕೇಳುತ್ತದೆ ಮತ್ತು ದಾಖಲಿಸುತ್ತದೆ. ರೋಗಿಗಳು ತಮ್ಮ ಮಾತುಗಳನ್ನು ರೆಕಾರ್ಡ್ ಮಾಡಲು ಕೇಳುತ್ತದೆ. ಈ ಸಂದರ್ಭದಲ್ಲಿ ಅವರ ಧ್ವನಿಯ ಏರಿಳಿತ, ಪ್ರತಿಕ್ರಿಯೆಗಳನ್ನು ಮೌಖಿಕವಾಗಿ ದಾಖಲಿಸುವ ಕಾರ್ಯ ನಡೆಯುತ್ತದೆ.


ರೋಗಿಗಳು ಯಾವುದೇ ಆತಂಕವಿಲ್ಲದೇ ನೆಮ್ಮದಿಯಾಗಿ ವಿಡಿಯೋದಲ್ಲಿ ಉತ್ತರಿಸಿದರೆ ಅದು ಅವರ ಸುಧಾರಣೆಯಾಗಿರುತ್ತದೆ. ಆತಂಕದಲ್ಲಿದ್ದರೆ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುತ್ತದೆ. ಅಲ್ಲದೇ ವಿಡಿಯೋದಲ್ಲಿ ಆತ್ಮಹತ್ಯೆಯಂತಹ ಭಾವನಾತ್ಮಕ ಬದಲಾವಣೆಗಳನ್ನು ಗಮನಿಸಲು ಹೆಚ್ಚಿನ ಸಂಶೋಧನೆಗೆ ಅನುವು ಮಾಡಿಕೊಡಬಹುದು ಎಂದು ಹೇಳಲಾಗುತ್ತಿದೆ.


ಡೈಲಿ ಮೇಲ್​ಗೆ ನೀಡಿದ ಸಂದರ್ಶನದಲ್ಲಿ, ಪ್ರೊಫೆಸರ್ ಎಸ್ಪಿ-ವಿಲ್ಸನ್ ಹಲವಾರು ಅಂಶಗಳನ್ನು ಹಂಚಿಕೊಂಡಿದ್ದಾರೆ. ಅಭಿವ್ಯಕ್ತಿಯ ಸಮನ್ವಯ, ಭಾಷೆ ಮತ್ತು ಖಿನ್ನತೆಯ ಆಳವನ್ನು ಗುರುತಿಸಲು ಮುಖಚರ್ಯೆಯನ್ನು ಗಮನಿಸಲಾಗುತ್ತದೆ.

ಇದನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗುವುದು: ಸೌಮ್ಯ, ಮಧ್ಯಮ, ತೀವ್ರ ಮತ್ತು ಅತ್ಯಂತ ತೀವ್ರ ಎನ್ನುವ ಹಂತದಲ್ಲಿ ರೋಗಿಯ ಸ್ಥಿತಿಯನ್ನು ಗುರುತಿಸಬಹುದು. ಈ ಹಂತದಲ್ಲಿ ಆ್ಯಪ್​​ ಗಮನಾರ್ಹ ಬದಲಾವಣೆ ಗಮನಿಸಿದರೆ ರೋಗಿಗಳನ್ನು ನೋಡಿಕೊಳ್ಳುವವರಿಗೆ, ರೋಗಿಗಳಿಗೆ ಮತ್ತು ಥೆರಪಿಸ್ಟ್​​​ಗಳಿಗೆ ತಿಳಿಸಲಾಗುವುದು.


ಸದ್ಯ, ಅಪ್ಲಿಕೇಶನ್ ಇನ್ನೂ ಪೂರ್ಣವಾಗಿಲ್ಲ. ಆದರೂ ಪ್ರೊಫೆಸರ್ ಎಸ್ಪಿ-ವಿಲ್ಸನ್ ಸಿಮ್ಯುಲೇಶನ್‌ಗಳು ಮತ್ತು ಕ್ಲಿನಿಕಲ್ ಪ್ರಯೋಗಗಳು ಇನ್ನಷ್ಟು ತಿಳಿದುಕೊಳ್ಳಲು ನೆರವಾಗುತ್ತದೆ ಎಂದಿದ್ದಾರೆ. ಒಂದು ವೇಳೆ ಈ ಆ್ಯಪ್ ಶೀಘ್ರವೇ ಬಂದರೆ ಖಿನ್ನತೆ ಅಥವಾ ಎಂಡಿಡಿಯಿಂದ ಬಳಲುತ್ತಿರುವ ಅನೇಕ ಜನರ ಜೀವಗಳನ್ನು ಉಳಿಸಲು ದಾರಿ ದೀಪವಾಗುತ್ತದೆ.


First published: June 11, 2021, 5:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories