• Home
  • »
  • News
  • »
  • tech
  • »
  • Just Dial: ನೈಸ್‌ಲೋಕಲ್‌ ವೆಬ್‌ಸೈಟ್‌ಗೆ ಬಿಸಿ ಮುಟ್ಟಿಸಿದ ಜಸ್ಟ್‌ ಡಯಲ್‌ ಕಂಪನಿ!

Just Dial: ನೈಸ್‌ಲೋಕಲ್‌ ವೆಬ್‌ಸೈಟ್‌ಗೆ ಬಿಸಿ ಮುಟ್ಟಿಸಿದ ಜಸ್ಟ್‌ ಡಯಲ್‌ ಕಂಪನಿ!

ಜಸ್ಟ್‌ ಡಯಲ್‌

ಜಸ್ಟ್‌ ಡಯಲ್‌

Nicelocal: ವೆಬ್‌ಸೈಟ್‌ ಅನ್ನು ತಡೆಹಿಡಿದು, ಅದರ ಎಲ್ಲ ಸೇವೆಗಳನ್ನು ಅಮಾನತು ಮಾಡುವಂತೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಟೆಲಿಕಮ್ಯೂನಿಕೇಶನ್ಸ್‌ ಇಲಾಖೆಗೆ ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್‌ ಆದೇಶ ಹೊರಡಿಸಿದ್ದಾರೆ.

  • Share this:

    ನವದೆಹಲಿ: ಲೋಕಲ್ ಸರ್ಚ್‌ ಸೊಲ್ಯುಶನ್ಸ್‌ ಪ್ರೈ. ಲಿ. ಮಾಲೀಕತ್ವದ ವೆಬ್‌ಸೈಟ್‌ www.nicelocal.in ವಿರುದ್ಧ ಜಸ್ಟ್‌ ಡಯಲ್ (Just dail) ಲಿಮಿಟೆಡ್‌ ಸಲ್ಲಿಸಿದ ಡೇಟಾ (Data) ಮತ್ತು ಸೋರ್ಸ್‌ ಕೋಡ್ ಕಳ್ಳತನದ ಪ್ರಕರಣದಲ್ಲಿ ನೈಸ್‌ಲೋಕಲ್‌ ವೆಬ್‌ಸೈಟ್‌ ತಡೆಹಿಡಿಯುವಂತೆ ದೆಹಲಿ ಹೈಕೋರ್ಟ್‌ (Delhi High Court) ಆದೇಶ ನೀಡಿದೆ.


    ವೆಬ್‌ಸೈಟ್‌ ಅನ್ನು ತಡೆಹಿಡಿದು, ಅದರ ಎಲ್ಲ ಸೇವೆಗಳನ್ನು ಅಮಾನತು ಮಾಡುವಂತೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಟೆಲಿಕಮ್ಯೂನಿಕೇಶನ್ಸ್‌ ಇಲಾಖೆಗೆ ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್‌ ಆದೇಶ ಹೊರಡಿಸಿದ್ದಾರೆ.


    ಇದನ್ನೂ ಓದಿ: Kia EV6: ಅಧಿಕ ಮೈಲೇಜ್​ ನೀಡುವ ಕಾರು ಪರಿಚಯಿಸಲಿರುವ ಕಿಯಾ! ಒಂದು ಬಾರಿ ಚಾರ್ಜ್​ ಮಾಡಿದ್ರೆ 528 KM ಚಲಿಸುತ್ತೆ!


    ಮಧ್ಯಂತರ ಆದೇಶ ನೀಡಿರುವ ಕೋರ್ಟ್‌, ಯಾವುದೇ ಸರಕು ಅಥವಾ ಸೇವೆಗಳ ಬಗ್ಗೆ ವೆಬ್‌ಸೈಟ್‌ ಜಾಹೀರಾತು ನೀಡುವಂತಿಲ್ಲ ಎಂದು ಆದೇಶಿಸಿದೆ. ಅಲ್ಲದೆ, ಈವರೆಗೆ ಗ್ರಾಹಕರಿಂದ ಸ್ವೀಕರಿಸಿದ ಪಾವತಿ ಸೇರಿದಂತೆ ಎಲ್ಲ ಡೇಟಾವನ್ನು ರಕ್ಷಿಸಿಡುವಂತೆಯೂ ಆದೇಶ ಮಾಡಿದೆ. ಇದರ ಜೊತೆಗೆ, nicelocal.in ಮತ್ತು ಅದರ ನಿರ್ದೇಶಕರ ವಿರುದ್ಧ ಸಲ್ಲಿಸಿದ ಎಫ್‌ಐಆರ್‌ ಕುರಿತಂತೆ ನೋಯ್ಡಾ ಪೊಲೀಸರಿಂದ ಸ್ಥಿತಿ ವರದಿಯನ್ನೂ ಹೈಕೋರ್ಟ್‌ ಕೇಳಿದೆ.


    ಇದನ್ನೂ ಓದಿ: MTNL: ಕೇವಲ 21 ರೂ.ಗೆ ಒಂದು ವರ್ಷದ ಪ್ರಯೋಜನ ಒದಗಿಸಿರುವ ಎಮ್​ಟಿಎನ್​ಎಲ್​!


    nicelocal.in ಎರಡು ಷೇರುದಾರರನ್ನು ಹೊಂದಿರುವಂತೆ ಕಂಡುಬಂದಿದೆ. ಒಬ್ಬರು ಸೈಪ್ರಸ್‌ನ ಮೂಲದವರಾಗಿದ್ದರೆ, ಇನ್ನೊಬ್ಬರು ರಷ್ಯಾ ಮೂಲದವರಾಗಿದ್ದಾರೆ. ದೆಹಲಿ ಮೂಲದ ನಿರ್ದೇಶಕರನ್ನೂ ಇದು ಹೊಂದಿದೆ. ಜಸ್ಟ್ ಡಯಲ್‌ ವೆಬ್‌ಸೈಟ್‌ನಿಂದ nicelocal.in ಡೇಟಾವನ್ನ ಬಳಸುತ್ತಿತ್ತು. ಇನ್ವಾಯ್ಸ್‌ಗಳನ್ನು ವಿತರಿಸದೇ ಆಟೋ ಡೆಬಿಟ್‌ ಸೇರಿದಂತೆ ಹಣ ಸಂಗ್ರಹಣೆ ಮಾಡುತ್ತಿತ್ತು. nicelocal.in ನಿಂದ ಮೋಸ ಹೋದ ಭಾರಿ ಸಂಖ್ಯೆಯ ಜನರಿದ್ದಾರೆ. ಹೀಗಾಗಿ, ಕೋರ್ಟ್‌ ಈ ಆದೇಶ ನೀಡಿದೆ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು