• Home
  • »
  • News
  • »
  • tech
  • »
  • Google Photo: ಗೂಗಲ್‌ ಫೋಟೋದಿಂದ ನಿಮ್ಮ ಫೈಲ್‌ ಡಿಲೀಟ್‌ ಆಗಿದ್ಯಾ? ಹಾಗಿದ್ರೆ ಈ ಟಿಪ್ಸ್‌ ಬಳಸಿ ರೀಸ್ಟೋರ್‌ ಮಾಡಿ

Google Photo: ಗೂಗಲ್‌ ಫೋಟೋದಿಂದ ನಿಮ್ಮ ಫೈಲ್‌ ಡಿಲೀಟ್‌ ಆಗಿದ್ಯಾ? ಹಾಗಿದ್ರೆ ಈ ಟಿಪ್ಸ್‌ ಬಳಸಿ ರೀಸ್ಟೋರ್‌ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗೂಗಲ್‌ ಫೋಟೋಸ್‌ ಬಳಕೆದಾರರು ಆ್ಯಡ್ ಮಾಡುವ ಫೈಲ್‌ಗಳನ್ನು ಸ್ಥಳಗಳು, ಸಮಯ, ಹೀಗೆ ಡೀಟೇಲ್ಸ್‌ ಅನ್ನು ವರ್ಗೀಕರಿಸುತ್ತದೆ. ಅದೇ ರೀತಿ ನೀವು ಗೂಗಲ್‌ ಫೋಟೋದಲ್ಲಿ ನೀವು ಡಿಲೀಟ್‌ ಮಾಡಿದ ಫೋಟೋ ಅಥವಾ ವೀಡಿಯೋ 60 ದಿನಗಳ ಕಾಲ ಟ್ರ್ಯಾಶ್‌ ಫೈಲ್‌ನಲ್ಲಿ ಸೇವ್‌ ಅಗಿರುತ್ತದೆ. ಹಾಗೇ ಇದು ಡಿಲೀಟ್‌ ಆಗುವ ಮೊದಲೇ ರೀ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಆದರೆ ಇದು ಕಾರ್ಯನಿರ್ವಹಿಸಬೇಕಾದರೆ ಗೂಗಲ್‌ ಫೋಟೋದಲ್ಲಿ ʼಬ್ಯಾಕ್‌ಅಪ್‌ ಮತ್ತು ಸಿಂಕ್‌ʼ ಆಯ್ಕೆಯನ್ನು ಆನ್‌ ಮಾಡಬೇಕು. ಇನ್ನು ಈ ರೀತಿಯ ಟಿಪ್ಸ್‌ಗಳನ್ನು ಈ ಕೆಳಗೆ ನೀಡಲಾಗಿದೆ.

ಮುಂದೆ ಓದಿ ...
  • Share this:

    ಕೆಲವೊಂದು ಬಾರಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ (Smartphone) ಗ್ಯಾಲರಿ, (Gallery) ಗೂಗಲ್‌ ಫೋಟೋಸ್‌ನಲ್ಲಿರುವ (Google Photos) ಫೋಟೋ ಅಥವಾ ವೀಡಿಯೋಗಳೂ ಆಕಸ್ಮಿಕವಾಗಿ ಡಿಲೀಟ್‌ (Delete) ಅಗುತ್ತದೆ. ಆದರೆ ಈ ಡಿಲೀಟ್‌ ಆದ ಫೈಲ್‌ಗಳು ಕೆಲವು ದಿನಗಳವರೆಗೆ ಟ್ರ್ಯಾಶ್‌ ಫೋಲ್ಡರ್‌ನಲ್ಲಿ (Trash Folder) ಸೇವ್‌ ಅಗಿರುತ್ತದೆ. ವಿಶೇಷವಾಗಿ ಗೂಗಲ್‌ ಪಿಕ್ಸೆಲ್‌ ಫೋನ್‌ಗಳು ಮತ್ತು ಇತರ ಆಂಡ್ರಾಯ್ಡ್‌ (Android) ಬಳಕೆದಾರರು ನಿಮ್ಮ ಫೋಟೋ ಮತ್ತು ವೀಡಿಯೋಗಳನ್ನು ಬ್ಯಾಕಪ್‌ ಮಾಡಲು ಈ ಗೂಗಲ್‌ ಫೋಟೋ ಅಪ್ಲಿಕೇಶನ್‌ (Google Photo Application)  ಒಂದು ಉತ್ತಮ ಆಯ್ಕೆಯಾಗಿದೆ. ನಿಮ್ಮ ಫೋಟೋಗಳನ್ನುಇಲ್ಲಿ ಸೇರಿಸಬೇಕಾದರೆ ಯಾವುದೇ ಸಮಯದಲ್ಲಿ ನೀವು ಸೈನ್‌ ಇನ್‌ ಮಾಡಬಹುದು. ಆದ್ದರಿಂದ ಇದೊಂದು ಬಳಕೆದಾರರು ತಮ್ಮ ಫೋಟೋವನ್ನು ಸೇವ್‌ ಮಾಡಿ ಇಟ್ಟುಕೊಳ್ಳಲು ಇರುವ ಉತ್ತಮ ಪ್ಲಾಟ್‌ಫಾರ್ಮ್‌ ಆಗಿದೆ.


    ಇದಲ್ಲದೆ ಈ ಗೂಗಲ್‌ ಫೋಟೋಸ್‌ ಬಳಕೆದಾರರು ಆ್ಯಡ್ ಮಾಡುವ ಫೈಲ್‌ಗಳನ್ನು ಸ್ಥಳಗಳು, ಸಮಯ, ಹೀಗೆ ಡೀಟೇಲ್ಸ್‌ ಅನ್ನು ವರ್ಗೀಕರಿಸುತ್ತದೆ. ಅದೇ ರೀತಿ ನೀವು ಗೂಗಲ್‌ ಫೋಟೋದಲ್ಲಿ ನೀವು ಡಿಲೀಟ್‌ ಮಾಡಿದ ಫೋಟೋ ಅಥವಾ ವೀಡಿಯೋ 60 ದಿನಗಳ ಕಾಲ ಟ್ರ್ಯಾಶ್‌ ಫೈಲ್‌ನಲ್ಲಿ ಸೇವ್‌ ಅಗಿರುತ್ತದೆ. ಹಾಗೇ ಇದು ಡಿಲೀಟ್‌ ಆಗುವ ಮೊದಲೇ ರೀ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಆದರೆ ಇದು ಕಾರ್ಯನಿರ್ವಹಿಸಬೇಕಾದರೆ ಗೂಗಲ್‌ ಫೋಟೋದಲ್ಲಿ ʼಬ್ಯಾಕ್‌ಅಪ್‌ ಮತ್ತು ಸಿಂಕ್‌ʼ ಆಯ್ಕೆಯನ್ನು ಆನ್‌ ಮಾಡಬೇಕು.


    deleted-your-file-from-google-photos-if-so-restore-using-these-tips
    ಸಾಂದರ್ಭಿಕ ಚಿತ್ರ


    ಗೂಗಲ್ ಫೋಟೋಗಳಿಂದ ಅಳಿಸಲಾದ ಫೋಟೋಗಳು ಮತ್ತು ವೀಡಿಯೊಗಳನ್ನು ಮರುಪಡೆಯುವುದು ಹೇಗೆ‌


    ಬಳಕೆದಾರರು ತಮ್ಮ ಅಪ್ಲಿಕೇಶನ್‌ನಲ್ಲಿ ಡಿಲೀಟ್‌ ಮಾಡಿದ ಫೈಲ್‌ ಅನ್ನು ಮರುಪಡೀಬೇಕಾದರೆ ಟ್ರ್ಯಾಶ್‌ ಫೋಲ್ಡರ್‌ನಲ್ಲಿ ಹೋಗಿ ನೋಡ್ಬೇಕು. ಒಂದು ವೇಳೆ ಫೈಲ್‌ ಅಲ್ಲಿ ಇಲ್ಲದಿದ್ದರೆ ಬ್ಯಾಕಪ್‌ ಮಾಡಿಕೊಳ್ಳಲು ಅಗುವುದಿಲ್ಲ. ಮುಖ್ಯವಾಗಿ ಹೇಳುವುದಾದರೆ ಇಲ್ಲಿ ಟ್ರ್ಯಾಶ್‌ ಫೈಲ್‌ನಲ್ಲಿ ಸೇರಿಸಲಾದ ಫೈಲ್‌ ಅನ್ನು ಒಮ್ಮೆ ಡಿಲೀಟ್‌ ಮಾಡಿದರೆ ಮತ್ತೆ ಆ ಫೈಲ್‌ ಡೌನ್‌ಲೋಡ್‌ ಮಾಡಲಾಗುವುದಿಲ್ಲ. ಅದರೆ ಈಗಿನ ವರ್ಷನ್‌ನ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಕೇವಲ 30 ದಿನ ಮಾತ್ರ  ಟ್ರ್ಯಾಶ್‌ ಫೈಲ್‌ನಲ್ಲಿ ಸೇವ್‌ ಅಗಿರುತ್ತದೆ ಮತ್ತು ಅದನ್ನು ಮರುಪಡೆಯಬಹುದಾಗಿದೆ.


    ಇದನ್ನೂ ಓದಿ: ಅಕ್ಷರಶಃ ಕಸಕ್ಕೆ ಸಮ ಆಗಲಿವೆ 5.3 ಶತಕೋಟಿ ಸ್ಮಾರ್ಟ್‌ಫೋನ್‌ಗಳು!


    ಈ ಗೂಗಲ್‌ ಫೋಟೋನಲ್ಲಿ ಮರುಪಡೆಯಲು ಕೆಲವೊಂದು ಟಿಪ್ಸ್‌ ಇವೆ.




    • Android ಫೋನ್, Android ಟ್ಯಾಬ್ಲೆಟ್, iPhone ಅಥವಾ iPad ನಲ್ಲಿ ಫೋಟೋ ಅಥವಾ ವೀಡಿಯೊಗಳು ಡಿಲೀಟ್‌ ಆಗಿದ್ದನ್ನು ಮರುಪಡಿಯಲು ಮೊದಲು Google ಫೋಟೋಗಳ ಅಪ್ಲಿಕೇಶನ್ ಓಪನ್‌ ಮಾಡಬೇಕು.


    • ನಂತರ ಕೆಳಭಾಗದಲ್ಲಿ ಲೈಬ್ರರಿಯನ್ನು ಟ್ಯಾಪ್‌ ಮಾಡಿ ಟ್ರ್ಯಾಶ್‌ ಫೋಲ್ಡರ್‌ ಅನ್ನು ಸೆಲೆಕ್ಟ್‌ ಮಾಡ್ಬೇಕು.

    • ನೀವು ರೀಸ್ಟೋರ್ ಮಾಡಲು ಬಯಸುವ ಫೋಟೋ ಅಥವಾ ವೀಡಿಯೊವನ್ನು ಹುಡುಕಿ. ನಿಮಗೆ ಬೇಕಾದ ಫೈಲ್‌ ಅನ್ನು ಸೆಲೆಕ್ಟ್ ಮಾಡಿ. ‌‌

    • ನಂತರ ಕೆಳಭಾಗದಲ್ಲಿ ರೀಸ್ಟೋರ್‌ ಎಂಬ ಆಯ್ಕೆಯನ್ನು ಮಾಡಿ. ಆಗ ನಿಮ್ಮ ಫೋಟೋ ಮೊದಲೇ ಇದ್ದ ಫೈಲ್‌ಗೆ ಅಥವಾ ಗ್ಯಾಲರಿಯಲ್ಲಿ ಸೇವ್‌ ಅಗುತ್ತದೆ.


    ಇದನ್ನೂ ಓದಿ: ನಿಮ್ಮ ಆಂಡ್ರಾಯ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ ? ಈ ತಂತ್ರಗಳನ್ನೊಮ್ಮೆ ಬಳಸಿ


    ಈ ರೀತಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಮಾಡಲಾದ ಫೈಲ್‌ ಅನ್ನು ಸುಲಭವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ. ಇದೊಂದು ಉತ್ತಮ ಯೋಜನೆ ಅಗಿದ್ದು ಬಳಕೆದಾರರಿಗೆ ಬಹಳ ವೇಗವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ. ಈ ಗೂಗಲ್‌ ಫೋಟೋ ಅಪ್ಲಿಕೇಶನ್‌ನಲ್ಲಿ ಯಾವುದೇ ಫೈಲ್‌ಗಳು ಬೇಗನೆ ಡಿಲೀಟ್‌ ಆಗುವುದಿಲ್ಲ. ಆದ್ದರಿಂದ ಬಳಕೆದಾರರಿಗೆ ಡಾಟಾ ಸಂಗ್ರಹಿಸಿ ಇಟ್ಟುಕೊಳ್ಳಲು ಉತ್ತಮ ಸಾಧನ ಅಂತ ಹೇಳಬಹುದು.

    Published by:Harshith AS
    First published: