• Home
  • »
  • News
  • »
  • tech
  • »
  • Mobile Contact Recover: ನಿಮ್ಮ ಮೊಬೈಲ್​ನಲ್ಲಿದ್ದ ಕಾಂಟಾಕ್ಟ್​​ ಡೀಲಿಟ್ ಆಗಿದ್ಯಾ? ಹೀಗ್ ರಿಕವರಿ ಮಾಡಿಕೊಳ್ಳಿ!

Mobile Contact Recover: ನಿಮ್ಮ ಮೊಬೈಲ್​ನಲ್ಲಿದ್ದ ಕಾಂಟಾಕ್ಟ್​​ ಡೀಲಿಟ್ ಆಗಿದ್ಯಾ? ಹೀಗ್ ರಿಕವರಿ ಮಾಡಿಕೊಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಆದ ಕಾಂಟಾಕ್ಟ್‌ ಅನ್ನು ಈಗ ಸುಲಭದಲ್ಲಿ ರಿಕವರಿ ಮಾಡಿಕೊಳ್ಳಬಹುದು. ಗೂಗಲ್ ಅಕೌಂಟ್ ಮೂಲಕ ನಿಮ್ಮ ಬಳಿ ಡಿಲೀಟ್ ಆದ ಕಾಂಟಾಕ್ಟ್ ಅನ್ನು ತಕ್ಷಣವೇ ಪಡೆದುಕೊಳ್ಳಬಹುದು.

  • Share this:

    ಸ್ಮಾರ್ಟ್‌ಫೋನ್‌ನಲ್ಲಿ ಕಾಂಟಾಕ್ಟ್‌ (Smartphone Contacts) ಬಹಳ ಮುಖ್ಯವಾಗಿರುತ್ತದೆ. ನಮ್ಮ ಸ್ನೇಹಿತರ, ಫ್ಯಾಮಿಲಿಯವರ, ಜೊತೆಗೆ ನಮಗೆ ಅಗತ್ಯವಾದವರ ಕಾಂಟಾಕ್ಟ್‌ ಅನ್ನು ಸೇವ್‌ (Save) ಮಾಡಿರುತ್ತಾರೆ. ಆದರೆ ಕೆಲವೊಮ್ಮೆ ಹೊಸ ಫೋನ್‌ ಖರೀದಿಸಿದಾಗ, ಫೋನ್‌ ಕಳೆದುಹೋದಾಗ ಅಥವಾ ಹಾಳಾದಾಗ ನಿಮ್ಮ ಮೊಬೈಲ್‌ನಲ್ಲಿರುವ (Mobile) ಕಾಂಟಾಕ್ಟ್‌ ಡಿಲೀಟ್‌ (Delete)ಆಗುತ್ತೆ. ಆದರೆ ಇದನ್ನು ಕೆಲವೊಮ್ಮೆ ಮರುಪಡೆಯಲು (Recovery) ಸಾಧ್ಯವಾಗುವುದಿಲ್ಲ. ಯಾಕೆಂದರೆ ಕಾಂಟಾಕ್ಟ್‌ನಲ್ಲಿರುವ ಅಷ್ಟೂ ನಂಬರ್‌ಗಳನ್ನು ಮರುಪಡೆಯುವುದೆಂದರೆ ತುಂಬಾ ಕಷ್ಟದ ಕೆಲಸ. ಆದರೆ ಇದನ್ನು ಈಗ ಸುಲಭದಲ್ಲಿ ಮರುಪಡೆಯಬಹುದಾಗಿದೆ. ಕೇವಲ ನಿಮ್ಮ ಇ ಮೇಲ್‌ (E mail) ಹಾಕುವ ಮುಖಾಂತರ ನಿಮ್ಮಲ್ಲಿಇರುವ ನಂಬರ್‌ಗಳನ್ನು (Numbers) ಮರುಪಡೆಯಬಹುದಾಗಿದೆ.


    ಗೂಗಲ್ ಅಕೌಂಟ್ ಮೂಲಕ ನಿಮ್ಮ ಬಳಿ ಡಿಲೀಟ್ ಆದ ಕಾಂಟಾಕ್ಟ್ ಅನ್ನು ತಕ್ಷಣವೇ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಹೊಸ ಫೋನ್ ಖರೀದಿಸಿದರೆ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆದರೆ ಅಲ್ಲೂ ಸಿಗುತ್ತದೆ. ಇದರ ಮೂಲಕ ನಿಮ್ಮ ಕಾಂಟಾಕ್ಟ್ ಅನ್ನು ಇತರರೊಂದಿಗೆ ಶೇರ್ ಕೂಡ ಮಾಡಿಕೊಳ್ಳಬಹುದು.


    ಕೇವಲ ನಿಮ್ಮ ಇ ಮೇಲ್ ಐಡಿ ಹಾಕಿ ಲಾಗಿನ್ ಆಗಬೇಕು. ಎಲ್ಲವೂ ಅಲ್ಲಿ ನಿಮಗೆ ಸಿಗುತ್ತದೆ. ಮತ್ತು ಡಿಫಾಲ್ಟ್ ಸ್ಟೋರೇಜ್ ಇ ಮೇಲ್ ಇದ್ದರೆ, ಪ್ರತಿ ಕಾಂಟಾಕ್ಟ್ ಸೇರಿಸುತ್ತಾ ಹೋದಾಗಲೂ, ಅದು ಫೋನ್‌ನಲ್ಲಿ ಇ ಮೇಲ್‌ಗೆ (E- mail) ಸಿಂಕ್ ಆಗಿ ಅಪ್‌ಡೇಟ್ ಆಗುತ್ತದೆ.


    ಮೊಬೈಲ್‌ನ ಕಾಂಟಾಕ್ಟ್‌ ಅನ್ನು ಗೂಗಲ್‌ಗೆ ಹೇಗೆ ಆ್ಯಡ್ ಮಾಡುವುದು


    • ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ಗೂಗಲ್‌ ಕಾಂಟಾಕ್ಟ್ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿ.


    ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಜಾಹೀರಾತು ಬಾರದಂತೆ ಮಾಡ್ಬೇಕಾ? ಈ ಟ್ರಿಕ್ಸ್‌ ಬಳಸಿ ಆ್ಯಡ್ಸ್​ ಬ್ಲಾಕ್‌ ಮಾಡಿ!

    • ಅದರಲ್ಲಿ ಕಾಣಿಸುವ ಫಿಕ್ಸ್‌ ಮತ್ತು ಮ್ಯಾನೇಜ್‌ ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು.

    • ನಂತರ ಎಕ್ಸ್‌ಪೋರ್ಟ್‌ ಟು ಫೈಲ್‌ ಅನ್ನು ಕ್ಲಿಕ್‌ ಮಾಡಿ.

    • ನಂತರ ಕಾಂಟಾಕ್ಟ್‌ಗಳನ್ನು ಎಕ್ಸ್‌ಪೋರ್ಟ್‌ ಯಾವ ಅಕೌಂಟ್‌ಗೆ ಮಾಡ್ತೀರೆಂಬುದನ್ನು ಆಯ್ಕೆ ಮಾಡಿ.

    • ಅಂತಿಮವಾಗಿ Export to VCF File ಒತ್ತಿದರೆ ಆಯಿತು.


    ಆಟೊಮೆಟಿಕ್‌ ಆಗಿ ಬ್ಯಾಕಪ್‌ ಮಾಡಿಕೊಳ್ಳುವುದು ಹೇಗೆ:

    • ನಿಮ್ಮ ಸ್ಮಾರ್ಟ್‌ಫೋನ್‌ನ ಸಟ್ಟಿಂಗ್‌ ಆ್ಯಪ್‌ ಅನ್ನು ಓಪನ್‌ ಮಾಡಿ.

    • ನಂತರ ಸಿಸ್ಟಮ್‌ ಸೆಟ್ಟಿಂಗ್‌ ಅನ್ನು ಒತ್ತಿ.

    • ಬ್ಯಾಕಪ್‌ ಬಟನ್‌ ಟ್ಯಾಪ್‌ ಮಾಡಿ.

    • ಇಲ್ಲಿ ನೀವು ಗೂಗಲ್‌ ಡ್ರೈವ್‌ಗೆ ನಿಮಗೆ ಬೇಕಾದ ಹಾಗೆ ಎಕ್ಪೋರ್ಟ್‌ ಮಾಡಿಕೊಳ್ಳಬುಹುದು.


    ಡುಪ್ಲಿಕೇಟ್ ಕಾಂಟಾಕ್ಟ್​ ಡಿಲೀಟ್ ಮಾಡುವುದು ಹೇಗೆ?


    ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವಾರು ನಕಲಿ ನಂಬರ್‌ಗಳು ಆಟೊಮೆಟಿಕ್‌ ಆಗಿ ಆ್ಯಡ್ ಆಗಿರುತ್ತದೆ. ಆದರೆ ಈಗ ಅದನ್ನು ಸುಲಭವಾಗಿ ರಿಮೂವ್‌ ಮಾಡಬಹುದಾಗಿದೆ.. ಇದಕ್ಕಾಗಿ ಈಗ ಹಲವಾರು ಥರ್ಡ್‌ ಪಾರ್ಟಿ ಆ್ಯಪ್‌ಗಳಿವೆ. ಇದು ನಿಮ್ಮ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಇದನ್ನು ನೀವು ಡೌನ್‌ಲೋಡ್‌ ಮಾಡಿಕೊಂಡು ಸರಿಯಾದ ಕಾಂಟಾಕ್ಟ್‌ ಯಾವುದು? ಡುಪ್ಲಿಕೇಟ್‌ ಯಾವುದು ಎಂದು ತಿಳಿದು ಡಿಲೀಟ್‌ ಮಾಡಬಹುದಾಗಿದೆ.


    ಈ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹಲವಾರು ಆ್ಯಪ್‌ಗಳು ಸೇವೆಯನ್ನು ನಿರ್ವಹಿಸುತ್ತಿದೆ. ಇದರಿಂದ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಪತ್ತೆಹಚ್ಚಲು ತುಂಬಾ ಸಹಕಾರಿಯಾಗಿದೆ.


    ನಿಮ್ಮ ಕಾಂಟಾಕ್ಟ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಸಲುವಾಗಿ ಸಿಂಪಲ್ ಮರ್ಜ್ ಡುಪ್ಲಿಕೆಟ್ಸ್ (Simpler Merge Duplicates) ಎನ್ನುವ ಆ್ಯಪ್ ಒಂದನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನೀಡಿದ್ದಾರೆ. ಇದನ್ನುಸ್ಮಾರ್ಟ್‌ಫೋನಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಇದಾದ ಮೇಲೆ ಆ್ಯಪ್ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಕಾಂಟಾಕ್ಟ್ ಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ. 


    ಈ ರೀತಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಆದ, ಡುಬ್ಲಿಕೇಟ್‌ ಕಾಂಟಾಕ್ಟ್‌ ಅನ್ನು ಪತ್ತೆ ಹಚ್ಚಬಹುದಾಗಿದೆ.


    ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚಾಗಬೇಕೇ? ಹಾಗಿದ್ರೆ ನೀವು ಈ ಟ್ರಿಕ್ಸ್ ಫಾಲೋ ಮಾಡಿ!


    ಎಚ್ಚರವಹಿಸಿ: 


    ಕೆಲವೊಂದು ಥರ್ಡ್‌ ಪಾರ್ಟಿ ಆ್ಯಪ್‌ಗಳನ್ನು ಬಳಸುವ ಮುನ್ನ ನೋಡಿಕೊಳ್ಳಿ. ಈ ಆ್ಯಪ್‌ಗಳು ನಿಮ್ಮ ಡಾಟಾವನ್ನು ಕದಿಯುವ ಪ್ರಯತ್ನಗಳನ್ನು ಮಾಡುತ್ತದೆ.

    Published by:Harshith AS
    First published: