• Home
 • »
 • News
 • »
 • tech
 • »
 • Twitter Updates: ಜನಪ್ರಿಯ ’ಕೂ’ ಆ್ಯಪ್​ನ ಟ್ವಿಟರ್​ ಅಕೌಂಟ್​ ಡಿಲೀಟ್​! ಕಾರಣ ಏನು ಗೊತ್ತಾ?

Twitter Updates: ಜನಪ್ರಿಯ ’ಕೂ’ ಆ್ಯಪ್​ನ ಟ್ವಿಟರ್​ ಅಕೌಂಟ್​ ಡಿಲೀಟ್​! ಕಾರಣ ಏನು ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೂ ಆ್ಯಪ್ ಕೂಡ ಟ್ವಿಟರ್​ನಂತೆಯೇ ಫೀಚರ್ಸ್​ ಅನ್ನು ಹೊಂದಿದ್ದು ಭಾರತೀಯ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಇದಾಗಿದೆ. ಆದರೆ ಇದು ತನ್ನ ಬಳಕೆದಾರರಿಗೆ ಆ್ಯಪ್​ನಿಂದ ಆದಂತಹ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಟ್ವಿಟರ್​ ಅಕೌಂಟ್​ ಅನ್ನು ಹೊಂದಿತ್ತು. ಆದರೆ ಕಾರಣವಿಲ್ಲದೆ ’ಕೂ’ ಆ್ಯಪ್​ನ ಟ್ವಿಟರ್​ ಖಾತೆಯನ್ನು ಕಾರಣವಿಲ್ಲದೆ ಡಿಲೀಟ್​ ಮಾಡಿದೆ ಎಂದು 'ಕೂ' ಸಹ ಸಂಸ್ಥಾಪಕಾರದ ಮಾಯಾಂಕ್ ಬಿದವಡ್ಕ ಅವರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
 • Share this:

  ಟ್ವಿಟರ್ (Twitter)​ ವಿಶ್ವದಲ್ಲೇ ಅತಿದೊಡ್ಡ ಮೈಕ್ರೋಬ್ಲಾಗಿಂಗ್ (Microblogging) ಸೋಶಿಯಲ್​ ಮೀಡಿಯಾ ಅಪ್ಲಿಕೇಶನ್ (Social Media Application) ಎಂದು ಹೇಳ್ಬಹುದು. ಆದರೆ ಟ್ವಿಟರ್​ನ (Twitter) ಕೆಲವು ಅಪ್ಡೇಟ್ಸ್​ಗಳಿಂದ ಈ ವರ್ಷ ಬಹಳಷ್ಟು ಟೀಕೆಗೆ ಒಳಗಾಗಿತ್ತು. ಆದರೆ ಎಲಾನ್​ ಮಸ್ಕ್ (Elon Musk)​ ಅವರು ಯಾವಾಗ ಈ ಟ್ವಿಟರ್​ ಬದಲಾವಣೆ ಬಗ್ಗೆ ನಿರ್ಧಾರ ಕೈಗೊಂಡರೋ ಅವತ್ತಿನಿಂದ ಟ್ವಿಟರ್ ಬಳಕೆದಾರರಿಗೂ ಗೊಂದಲಗಳು ಶುರುವಾಗಿದೆ. ಆದರೆ ಟ್ವಿಟರ್​ಗೆ  ಪ್ರತಿಸ್ಪರ್ಧಿಯಾಗಿದ್ದ ’ಕೂ’ ಅಪ್ಲಿಕೇಶನ್​. ತನ್ನ ಬಳಕೆದಾರರ ಸಮಸ್ಯೆಗಳಿಗೆ ಪರಿಹಅರ ನೀಡುವ ಸಲುವಾಗಿ ಟ್ವಿಟರ್​ ಅಕೌಂಟ್​ ಅನ್ನು ಕ್ರಿಯೇಟ್​ ಮಾಡಿತ್ತು. ಆದರೆ ಇದೀಗ ಏಕಾಏಕಿ ಟ್ವಿಟರ್​ನಿಂದ ಕೂ ಅಪ್ಲಿಕೇಶನ್​ನ ಅಕೌಂಟ್​ ಅನ್ನು ಡಿಲೀಟ್ ಮಾಡಿದ್ದಾರೆ.


  ಕೂ ಆ್ಯಪ್ ಕೂಡ ಟ್ವಿಟರ್​ನಂತೆಯೇ ಫೀಚರ್ಸ್​ ಅನ್ನು ಹೊಂದಿದ್ದು ಭಾರತೀಯ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಇದಾಗಿದೆ. ಆದರೆ ಇದು ತನ್ನ ಬಳಕೆದಾರರಿಗೆ ಆ್ಯಪ್​ನಿಂದ ಆದಂತಹ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಟ್ವಿಟರ್​ ಅಕೌಂಟ್​ ಅನ್ನು ಹೊಂದಿತ್ತು. ಆದರೆ ಕಾರಣವಿಲ್ಲದೆ ’ಕೂ’ ಆ್ಯಪ್​ನ ಟ್ವಿಟರ್​ ಖಾತೆಯನ್ನು ಕಾರಣವಿಲ್ಲದೆ ಡಿಲೀಟ್​ ಮಾಡಿದೆ ಎಂದು 'ಕೂ' ಸಹ ಸಂಸ್ಥಾಪಕಾರದ ಮಾಯಾಂಕ್ ಬಿದವಡ್ಕ ಅವರು ಆಕ್ರೋಷ ವ್ಯಕ್ತಪಡಿಸಿದ್ದಾರೆ.


  ಜನರ ಸ್ಪಂದನೆಗೆ ಟ್ವಿಟರ್​ ಅಕೌಂಟ್​


  ಕೂ ಆ್ಯಪ್​ ಟ್ವಿಟರ್​ಗೆ ಪ್ರತಿಸ್ಪರ್ಧಿ ಹೌದು. ಆದರೆ ಇದು ಟ್ವಿಟರ್​ನಂತೆಯೇ ಎಲ್ಲಾ ಫೀಚರ್ಸ್ ಅನ್ನು ಹೊಂದಿದೆ. ಅದರೆ ಕೆಲವೊಮ್ಮೆ ಬಳಕೆದಾರರು ಎರಡೂ ಅಕೌಂಟ್​ಗಳನ್ನು ಹೊಂದಿರುತ್ತಾರೆ. ಆ ಸಂದರ್ಭದಲ್ಲಿ ಕೆಲವರು ಬೇರೆ ಬೇರೆ ಸೋಶಿಯಲ್​ ಮೀಡಿಯಾಗಳಲ್ಲಿ ಆ್ಯಪ್​ನ ಸಮಸ್ಯೆ ಬಗ್ಗೆ ಹೇಳುತ್ತಾರೆ. ಈ ಕಾರಣಕ್ಕಾಗಿ ಕೂ ಆ್ಯಪ್​ ಟ್ವಿಟರ್​ನಲ್ಲಿಅಕೌಂಟ್​ ಕ್ರಿಯೇಟ್​ ಮಾಡಿತ್ತು. ಈ ಮೂಲಕ ಬಳಕೆದಾರರಿಗೆ ಯಾವುದೇ ತೊಂದರೆಯಾಗದಂತೆ ತಕ್ಷಣ ಪ್ರತಿಕ್ರಿಯೆ ನೀಡುತ್ತಿತ್ತು.


  ಇದನ್ನೂ ಓದಿ: ಭಾರತಕ್ಕೆ ಲಗ್ಗೆಯಿಡಲಿದೆ ಅತೀ ಕಡಿಮೆ ಬೆಲೆಯ ಮೊಟೊ 5ಜಿ ಮೊಬೈಲ್​! ಬೆಲೆ ನೋಡಿದ್ರೆ ಶಾಕ್ ಆಗ್ತೀರಾ!


  ವಿಶ್ವದಾದ್ಯಂತ ಪ್ರಸಿದ್ಧಿ ಪಡೆದ ’ಕೂ’ ಆ್ಯಪ್​


  ಕೂ ಸಂಸ್ಥೆ ಮೊದಲ ಬಾರಿಗೆ ಬೆಂಗಳುರಿನಲ್ಲಿ ಹುಟ್ಟಿತು. ಆದರೆ  ಈಗ ಈ ಆ್ಯಪ್ ದೇಶದಾದ್ಯಂತ ಜನಪ್ರಿಯತೆಯನ್ನು ಪಡೆದಿದೆ. ಈ ಅಪ್ಲಿಕೇಶನ್ ಮುಂದಿನ ದಿನಗಳಲ್ಲಿ ಟ್ವಿಟರ್​ಅನ್ನು ಹಿಂದಿಕ್ಕಿ ಮುನ್ನಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಭಾರತೀಯ ಬಹುಭಾಷಾ ಮೈಕ್ರೋಬ್ಲಾಗಿಂಗ್ ಮೀಡಿಯಾ ಆಗಿರುವ ’ಕೂ’ ಇತ್ತೀಚೆಗೆ ಬ್ರೆಜಿಲ್​ ದೇಶದಲ್ಲಿ ಆರಂಭವಾಯಿತು. ಇದು ಆರಂಭವಾದ ಕೇವಲ 48 ಗಂಟೆಗಳ ಒಳಗೆ 1 ಮಿಲಿಯನ್​ ಅಂದರೆ 10 ಲಕ್ಷದಷ್ಟು ಬಳಕೆದಾರರನ್ನು ಪಡೆದುಕೊಂಡಿದೆ ಎಂದು ಸಂಸ್ಥೆ ತನ್ ವರದಿಯಲ್ಲಿ ಹೇಳಿದೆ. ಈ ಬೆಳವಣಿಗೆ ಟ್ವಿಟರ್​ ನೋಡಿರಬಹುದು ಅದಕ್ಕೆ ಈ ನಿರ್ಧಾರ ಕೈಗೊಂಡಿದೆ ಎಂದು ಎನ್ನಲಾಗುತ್ತಿದೆ.


  11 ಭಾಷೆಗಳಲ್ಲಿ ಲಭ್ಯ


  ಟ್ವಿಟರ್​ನಂತೆಯೇ ಕಾರ್ಯನಿರ್ವಹಿಸುವಂತಹ ಭಾರತೀಯ ಮೈಕ್ರೋಬ್ಲಾಗಿಂಗ್​ ಜಾಲತಾಣ ’ಕೂ’ ಅಪ್ಲಿಕೇಶನ್ ಅನ್ನು ಎಪ್ರಿಲ್ 2020ರಲ್ಲಿ ರಾಧಾಕೃಷ್ಣ ಮತ್ತು ಮಾಯಾಂಕ್ ಬಿಡಾವಟ್ಕಾ ಅವರು ಅಭಿವೃದ್ಧಿಪಡಿಸಿದರು. ಇದು ಕನ್ನಡ, ಇಂಗ್ಲೀಷ್ ಹಿಂದಿ, ತೆಲುಗು, ಬಂಗಾಳಿ, ತಮಿಳು, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ, ಒರಿಯಾ, ಪೋರ್ಚುಗೀಸ್ ಮತ್ತು ಅಸ್ಸಾಮೀಸ್ ಸೇರಿದಂತೆಹೀಗೆ 11 ಸ್ಥಳೀಯ ಭಾಷೆಗಳಲ್ಲಿ ಬಳಕೆ ಮಾಡಬಹುದಾಗಿದೆ.


  ’ಕೂ’ ಅಪ್ಲಿಕೇಶನ್​ನಲ್ಲಿ 400 ಅಕ್ಷರಗಳ ಮಿತಿ


  ಟ್ವಿಟರ್​ನಂತೆಯೇ ಈ ಕೂ ಅಪ್ಲಿಕೇಶನ್​ನಲ್ಲಿ ಬಳಕೆದಾರರು ಯಾವುದೇ ಪೋಸ್ಟ್​ಗಳನ್ನು ಮಾಡಬೇಕಾದರೆ 400 ಅಕ್ಷರಗಳ ಮಿತಿಯೊಂದಿಗೆ ಟ್ವೀಟ್​ ಮಾಡಬಹುದಾಗಿದೆ. ಇದರೊಂದಿಗೆ ಕೂ ಆ್ಯಪ್‌ನಲ್ಲಿ ಬಳಕೆದಾರರು ಆಡಿಯೋ ಮೆಸೇಜ್​, ವಿಡಿಯೋ ಕಂಟೆಂಟ್, ಫೋಟೋಗಳು ಮತ್ತು ಲಿಂಕ್‌ಗಳನ್ನು ಸಹ ಶೇರ್ ಮಾಡಬಹುದು.


  ’ಕೂ’ ಅಪ್ಲಿಕೇಶನ್​ ಫುಲ್​ ಟ್ರೆಂಡಿಂಗ್​


  ಭಾರತದ ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸ್ವದೇಶಿ 'ಕೂ' ಅಪ್ಲಿಕೇಶನ್ ನಲ್ಲಿ ತಮ್ಮ ಖಾತೆಗಳನ್ನು ರಚಿಸಿರುವುದರಿಂದ 'ಕೂ' ಇತ್ತೀಚಿಗೆ ಬಹಳಷ್ಟು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು