• Home
  • »
  • News
  • »
  • tech
  • »
  • Deepavali Offer: ವೊಡಾಫೋನ್ ಐಡಿಯಾ ಬಳಕೆದಾರರಿಗೆ ದೀಪಾವಳಿ ಫ್ರೀ ಡೇಟಾ ಗಿಫ್ಟ್!

Deepavali Offer: ವೊಡಾಫೋನ್ ಐಡಿಯಾ ಬಳಕೆದಾರರಿಗೆ ದೀಪಾವಳಿ ಫ್ರೀ ಡೇಟಾ ಗಿಫ್ಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೀಪಾವಳಿ ಪ್ರಯುಕ್ತ ವೊಡಫೋನ್ ಬಳಕೆದಾರರಿಗೆ ಗುಡ್​ನ್ಯೂಸ್ ಸಿಕ್ಕಿದೆ. ಗ್ರಾಹಕರಿಗಾಗಿ ಕಂಪನಿಯು ಫ್ರೀ ಡೇಟಾ ಘೋಷಿಸಿದೆ.

  • Share this:

    ಭಾರತದ (India) ಮೂರನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ವೊಡಾಫೋನ್ ಐಡಿಯಾ ತನ್ನ ಬಳಕೆದಾರರಿಗೆ ದೀಪಾವಳಿ ಹಬ್ಬದ ವಿಶೇಷ ಕೊಡುಗೆಯನ್ನು  (Deepavali Special Offer) ನೀಡುವುದಾಗಿ ಘೋಷಿಸಿದೆ. ವೊಡಾಫೋನ್ ಐಡಿಯಾದ ಕೆಲವು ಪ್ರೀಪೇಡ್ ಪ್ಲ್ಯಾನ್ (Prepaid plan) ನಲ್ಲಿ 75GB ವರೆಗೂ ಉಚಿತ  (Free) ಹೆಚ್ಚುವರಿ ಬೋನಸ್ ಡೇಟಾವನ್ನು (Bonus Data ) ನೀಡುದಾಗಿ ತಿಳಿಸಿದೆ. ವೊಡಾಫೋನ್ ಐಡಿಯಾದ (Vodafone) ವೆಬ್‌ಸೈಟ್‌ನಲ್ಲಿ (Website) ಈ ಆಫರ್  (Offer) ಬಗ್ಗೆ ಮಾಹಿತಿಯನ್ನು (Information) ನೀಡಿದ್ದಾರೆ. 2022ರ ದೀಪಾವಳಿ ಹಬ್ಬದ ವಿಶೇಷವಾಗಿ ಇದೇ ಅಕ್ಟೋಬರ್ 18 ರಿಂದ ಅಕ್ಟೋಬರ್ 31, 2022 ರವರೆ ತನ್ನ ಬಳಕೆದಾರರು  ಕೆಲವು ಆಯ್ದ ಪ್ರಿಪೇಯ್ಡ್ ಪ್ಲ್ಯಾನ್  ರೀಚಾರ್ಜ್‌ (Recharge) ಮೇಲೆ ಬೋನಸ್ ಅಥವಾ ಹೆಚ್ಚುವರಿ ಡೇಟಾವನ್ನು ಪಡೆಯಬಹುದು ಎಂದು ವೊಡಾಫೋನ್ ಐಡಿಯಾ ಸಂಸ್ಥೆ ತಿಳಿಸಿದೆ.


    ವೊಡಾಫೋನ್ ಐಡಿಯಾದ ವೆಬ್‌ಸೈಟ್‌ನಲ್ಲಿ ಈ ಕೊಡುಗೆಯ ಕುರಿತು ಮಾಹಿತಿಯನ್ನು ನೀಡಿದ್ದಾರೆ. ವೊಡಾಫೋನ್ ಐಡಿಯಾದ ಕೆಲವು ಪ್ರೀಪೇಡ್ ಪ್ಲ್ಯಾನ್​ಗಳಲ್ಲಿ 75GB ವರೆಗೂ ಉಚಿತ ಹೆಚ್ಚುವರಿ ಬೋನಸ್ ಡೇಟಾವನ್ನು ನೀಡಲಾಗಿದೆ. ದೀಪಾವಳಿ ಕೊಡುಗೆಯ ಪ್ರಯುಕ್ತ ಕೆಲವು ಆಯ್ದ ಪ್ರೀಪೇಡ್ ಪ್ಲ್ಯಾನ್ ಗಳಲ್ಲಿ  ಈ ಕೊಡುಗೆಯನ್ನು ಪಡೆಯಬಹುದು ಎಂದು ಕಂಪೆನಿ ತಿಳಿಸಿದ್ದು, ಆ ಮೂರು ಪ್ರೀಪೇಡ್ ಪ್ಲ್ಯಾನ್ ಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.


    Deepavali Offer 75 GB free data for Vodafone Idea users
    ಸಾಂದರ್ಭಿಕ ಚಿತ್ರ


    1449 ರೂಪಾಯಿಯ ಪ್ಲ್ಯಾನ್ ಹೇಗಿದೆ ಗೊತ್ತಾ?


    2022ರ ದೀಪಾವಳಿ ಹಬ್ಬದ ವಿಶೇಷ ಬೋನಸ್ ಡೇಟಾ ಹೊಂದಿರುವ ವೊಡಾಫೋನ್ ಐಡಿಯಾದ ಮೊದಲ ಪ್ಲ್ಯಾನ್ 1449 ರೂ. ಬೆಲೆಯ ಪ್ರೀಪೇಡ್ ಪ್ಲ್ಯಾನ್  ಆಗಿದೆ. 1449 ರೂ. ಬೆಲೆಯ ಈ ಪ್ಲ್ಯಾನ್ 180 ದಿನಗಳ ವ್ಯಾಲಿಡಿಟಿಯಲ್ಲಿ ಅನ್ಲಿಮಿಟೆಡ್ ಧ್ವನಿ ಕರೆಗಳು, 1.5GB ದೈನಂದಿನ ಡೇಟಾ, 100 SMS/ದಿನ ಗಳನ್ನು ನೀಡುತ್ತದೆ. ಇದೀಗ ದೀಪಾವಳಿ ಹಬ್ಬದ ಕೊಡುಗೆಯಾಗಿ ಬಳಕೆದಾರರು 50GB ಹೆಚ್ಚುವರಿ/ಬೋನಸ್ ಡೇಟಾವನ್ನು ಪಡೆಯಬಹುದು. ಜೊತೆಗೆ ಈ ಪ್ಲ್ಯಾನ್ ನಲ್ಲಿ  Vi Movies & TV VIP ಜೊತೆಗೆ ಎಲ್ಲಾ Vi Hero ಪ್ರಯೋಜನಗಳು ಸಹ ದೊರೆಯುತ್ತವೆ.


    ಇದನ್ನೂ ಓದಿ: Smart Phone: ರಕ್ತ ಕೊಟ್ಟು ಮೊಬೈಲ್ ಖರೀದಿಸಲು ಬಂದ ಬಾಲಕಿ! ಸಿಕ್ತಾ ಸ್ಮಾರ್ಟ್ ಫೋನ್?


    2899 ರೂಪಾಯಿಯ ಬಂಪರ್ ಪ್ಲ್ಯಾನ್


    ವೊಡಾಫೋನ್ ಐಡಿಯಾದ ಜನಪ್ರಿಯ ವಾರ್ಷಿಕ ಪ್ರೀಪೇಡ್ ಪ್ಲ್ಯಾನ್ ಆಗಿರುವ 2899 ರೂ. ಬೆಲೆಯ ಯೋಜನೆಯಲ್ಲೂ 2022ರ ದೀಪಾವಳಿ ಹಬ್ಬದ ವಿಶೇಷ ಬೋನಸ್ ಡೇಟಾವನ್ನು ನೀಡಲಾಗಿದೆ. 2899 ರೂ.ಬೆಲೆಯ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯಲ್ಲಿ ಅನ್ಲಿಮಿಟೆಡ್ ವಾಯ್ಸ್​ ಕಾಲ್, 1.5GB ದೈನಂದಿನ ಡೇಟಾ, 100 SMS/ದಿನ ಗಳನ್ನು ಒದಗಿಸುತ್ತದೆ. ಇದೀಗ ದೀಪಾವಳಿ ಹಬ್ಬದ ಕೊಡುಗೆಯಾಗಿ ಬಳಕೆದಾರರು 75GB ಹೆಚ್ಚುವರಿ/ಬೋನಸ್ ಡೇಟಾವನ್ನು ಪಡೆಯಬಹುದು. ಈ ಯೋಜನೆ ಕೂಡ Vi Movies & TV VIP ಜೊತೆಗೆ ಎಲ್ಲಾ Vi Hero ಪ್ರಯೋಜನೆಗಳನ್ನು ನೀಡುತ್ತದೆ.


    3099 ರೂಪಾಯಿಯ ಬಿಗ್ ಪ್ಲ್ಯಾನ್


    ವೊಡಾಫೋನ್ ಐಡಿಯಾದ 3099 ರೂ. ಬೆಲೆಯ ಪ್ಲ್ಯಾನ್​​ನಲ್ಲೂ ಸಹ 2022ರ ದೀಪಾವಳಿ ಹಬ್ಬದ ವಿಶೇಷ ಬೋನಸ್ ಡೇಟಾವನ್ನು ನೀಡಲಾಗಿದೆ. 3099 ರೂ. ಬೆಲೆಯ ಈ ಪ್ಲ್ಯಾನ್​ 365 ದಿನಗಳ ವ್ಯಾಲಿಡಿಟಿಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲ್, 2GB ದೈನಂದಿನ ಡೇಟಾ, 100 SMS/ದಿನ ಗಳನ್ನು ನೀಡುತ್ತದೆ.


    ಇದೀಗ ದೀಪಾವಳಿ ಹಬ್ಬದ ಕೊಡುಗೆಯಾಗಿ ಬಳಕೆದಾರರು 75GB ಹೆಚ್ಚುವರಿ/ಬೋನಸ್ ಡೇಟಾವನ್ನು ಪಡೆಯಬಹುದು. ಈ ಯೋಜನೆಯಲ್ಲಿ Vi Movies & TV VIP ಜೊತೆಗೆ ಎಲ್ಲಾ Vi Hero ಪ್ರಯೋಜನಗಳ ಜೊತೆಗೆ ಒಂದು ವರ್ಷದ Disney+ Hotstar ಮೊಬೈಲ್ ಸಬ್​​ಸ್ಕ್ರಿಪ್ಶನ್ ಕೂಡ ಸಿಗಲಿದೆ.


    ಇದನ್ನೂ ಓದಿ: Google ಸಂಸ್ಥೆಗೆ ಬಿತ್ತು ಬರೋಬ್ಬರಿ 1337 ಕೋಟಿ ರೂಪಾಯಿ ದಂಡ! ಇಂಟರ್‌ನೆಟ್‌ ದೈತ್ಯ ಕಂಪನಿ ಮಾಡಿದ ತಪ್ಪೇನು?


    2022ರ ದೀಪಾವಳಿ ಹಬ್ಬದ ವಿಶೇಷವಾಗಿ ಈ ಮೂರು ಪ್ರಿಪೇಯ್ಡ್ ಯೋಜನೆಗಳು ಪ್ರಸ್ತುತ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಹೆಚ್ಚಿನ ಬೋನಸ್ ಡೇಟಾವನ್ನು ನೀಡುತ್ತಿವೆ. ಆದರೆ, ಈ ಕೊಡುಗೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ 31, 2022 ರವರೆ ಮಾತ್ರ ಲಭ್ಯವಿದೆ.

    Published by:Harshith AS
    First published: