• Home
  • »
  • News
  • »
  • tech
  • »
  • Smartphone Company: ಭಾರತದಲ್ಲಿ ಸ್ಮಾರ್ಟ್​ಫೋನ್​ ಉತ್ಪಾದನೆಯಲ್ಲಿ ಕುಸಿತ! ಇನ್ಮುಂದೆ ಈ ಮೊಬೈಲ್​​ಗಳು ಮಾರುಕಟ್ಟೆಗೆ ಬರಲ್ಲ.

Smartphone Company: ಭಾರತದಲ್ಲಿ ಸ್ಮಾರ್ಟ್​ಫೋನ್​ ಉತ್ಪಾದನೆಯಲ್ಲಿ ಕುಸಿತ! ಇನ್ಮುಂದೆ ಈ ಮೊಬೈಲ್​​ಗಳು ಮಾರುಕಟ್ಟೆಗೆ ಬರಲ್ಲ.

ಸ್ಮಾರ್ಟ್​​ಫೊನ್

ಸ್ಮಾರ್ಟ್​​ಫೊನ್

ಸ್ಮಾರ್ಟ್​​ಫೋನ್​​ನಲ್ಲಿ ಈ ರೀತಿ ಕುಸಿತವನ್ನು ಕಂಡದ್ದು ಬಹಳ ವಿಶೇಷ ಅಂತಾನೂ  ಹೇಳಬಹುದು. ಆದರೆ ಈ ಮೊಬೈಲ್​ ಗಳ ಉತ್ಪಅದನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದ್ದು ಇದಕ್ಕೆ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.

  • Share this:

    ಸ್ಮಾರ್ಟ್​​​ಫೋನ್ (Smartphone) ಇಲ್ಲದ ಮನೆಗಳೇ ಇಲ್ಲ ಎನ್ನಬಹುದು. ಎಷ್ಟೇ ಬಡತನ ಇದ್ದರೂ ಈಗ ಮೊಬೈಲ್ (Mobile) ಬಳಕೆ ಅತ್ಯಗತ್ಯವಾಗಿದೆ. ಹೀಗಾಗಿ ಒಂದೆಡೆ ಸ್ಮಾರ್ಟ್ ಫೋನ್ ಗಳ ಮಾರಾಟ (Sale) ಹೆಚ್ಚಾಗುತ್ತಿದೆ ಆದರೆ ಕಳೆದ 3 ವರ್ಷಗಳಿಗೆ ಹೋಲಿಸಿದರೆ ಸ್ಮಾರ್ಟ್​​​ಫೋನ್ ಗಳ ಉತ್ಪಾದನೆ ಮತ್ತು ಮಾರಾಟ ತುಂಬಾ ಕಡಿಮೆಯಾಗಿದೆ ಎಂದು ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್(IDC) ಸಂಸ್ಥೆ ವರದಿ ಮಾಡಿದೆ. ಈಗಿನ ಮೊಬೈಲ್ ತಂತ್ರಜ್ಞಾನ ದಿನದಿಮದ ದಿನಕ್ಕೆ ಹೊಸ ಹೊಸ ಸ್ಮಾರ್ಟ್​​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ಆದರೆ ಈಗ ರೀತಿಯ ಸಂದರ್ಭಗಳು ಬರಲು ಏನು ಕಾರಣ? ಎಂಬುದರ ಕುರಿತು ಇಲ್ಲಿ ತಿಳಿದುಕೊಳ್ಳೋಣ.


    ಸ್ಮಾರ್ಟ್​​ಫೋನ್​​ನಲ್ಲಿ ಈ ರೀತಿ ಕುಸಿತವನ್ನು ಕಂಡದ್ದು ಬಹಳ ವಿಶೇಷ ಅಂತಾನೂ  ಹೇಳಬಹುದು. ಆದರೆ ಈ ಮೊಬೈಲ್​ ಗಳ ಉತ್ಪಅದನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದ್ದು ಇದಕ್ಕೆ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.


    ಸ್ಮಾರ್ಟ್​​​ಫೋನ್ ಉತ್ಪಾದನೆ ಕಡಿಮೆಯಾಗಲು ಕಾರಣವೇನು?


    ಸ್ಮಾರ್ಟ್​​ಫೋನ್​ಗಳ ಮೇಲೆ ಬೇಡಿಕೆ ಕಡಿಮೆಯಾಗಿರುವುದು ಒಂದು ಮುಖ್ಯ ಕಾರಣ ಅಂತ ಹೇಳಬಹುದು. ಮೊಬೈಲ್​ನ ಬೆಲೆಯಲ್ಲಿ ಹೆಚ್ಚಳ, ಸ್ಮಾರ್ಟ್​​ಫೋನ್‌ಗಳ ಹೆಚ್ಚಿನ ವರ್ಷನ್​ಗಳ ಬಿಡುಗಡೆ ಇಂತಹ ವಿವಿಧ ಕಾರಣಗಳಿಂದ ಭಾರತದಲ್ಲಿ ಸ್ಮಾರ್ಟ್​​ಫೋನ್‌ ಮಾರಾಟದ ಮೇಲೆ ಬಹಳಷ್ಟು ಪರಿಣಾಮ ಬೀರಿವೆ.


    ಇದನ್ನೂ ಓದಿ: ಗ್ರಾಹಕರಿಗಾಗಿ ಏರ್ಟೆಲ್ ಬಿಡುಗಡೆ ಮಾಡುತ್ತಿದೆ 99 ರೂಪಾಯಿಯ ಡಾಟಾ ಪ್ಲ್ಯಾನ್!


    ಜುಲೈಯಿಂದ ಸೆಪ್ಟೆಂಬರ್ 2022 ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ 10 ಶೇಕಡಾ ಕುಸಿತವನ್ನು ಕಂಡಿದೆ. ಹಬ್ಬದ ದಿನಗಳು ಬಂದರೂ ಸ್ಮಾರ್ಟ್​​ಫೋನ್ ಮಾರಾಟ ಗಣನೀಯವಾಗಿ ಕುಸಿದಿದೆ. ಜುಲೈ ಮತ್ತು ಸೆಪ್ಟೆಂಬರ್ ನಡುವೆ ಕೇವಲ 43 ಮಿಲಿಯನ್ ಸ್ಮಾರ್ಟ್​​ಫೋನ್​​ಗಳನ್ನು ಉತ್ಪಾದಿಸಲಾಗಿದೆ ಎಮದು ವರದಿಯಲ್ಲಿ ತಿಳಿಸಿದ್ದಾರೆ.


    Decline in smartphone production in India These mobiles are no longer available in the market
    ಸಾಂದರ್ಭಿಕ ಚಿತ್ರ


    5ಜಿ ಸೇವೆ ಬಂದರೂ ಕುಸಿತ:


    ವಿಶೇಷವಾಗಿ 5G ಸೇವೆಯ ಮೂಲಕ ಮೊಬೈಲ್ ಉದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಪ್ರಯತ್ನವಾಗಿ ಇತ್ತೀಚೆಗೆ ಪರಿಚಯಿಸಲಾಯಿತು. ಇದರ ಆಧಾರದ ಮೇಲೆ, ಪ್ರಸ್ತುತ ಲಭ್ಯವಿರುವ ಎಲ್ಲಾ ಸ್ಮಾರ್ಟ್​​ಫೋನ್​ಗಳಲ್ಲೂ 5G ಸೇವೆಯನ್ನು ಪರಿವರ್ತಿಸುವ ರೀತಿಯಲ್ಲಿ ತಯಾರಿಸಲಾಗುತ್ತದೆ. ಆದರೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 5G ಸ್ಮಾರ್ಟ್‌ಫೋನ್‌ಗಳ ಒಟ್ಟಾರೆ ಪಾಲು ಶೇಕಡಾ 36% ರಷ್ಟಿತ್ತು ಮತ್ತು ಎರಡನೇ ತ್ರೈಮಾಸಿಕದಲ್ಲಿ 6 ಮಿಲಿಯನ್ ಯುನಿಟ್‌ಗಳಿಗೆ ಕುಸಿದಿದೆ ಎಂದು ಐಟಿಸಿಯ ಸಾಧನ ಸಂಶೋಧನೆಯ ಸಹಾಯಕ ಉಪಾಧ್ಯಕ್ಷ ನವಕಂದರ್ ಸಿಂಗ್ ಹೇಳಿದ್ದಾರೆ.


    2023ರಲ್ಲೂ ಮುಂದುವರಿಯಬಹುದಾ? ತಂತ್ರಜ್ಞರ ಪ್ರಶ್ನೆ:


    ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಇದೇ ಪರಿಸ್ಥಿತಿ ಮುಂಬರುವ 2023 ರಲ್ಲೂ ಮುಂದುವರಿಯುತ್ತದೆ, ಮತ್ತು 4G ಸ್ಮಾರ್ಟ್‌ಫೋನ್ ಬಳಕೆದಾರರು 5G ಸ್ಮಾರ್ಟ್‌ಫೋನ್‌ಗಳಿಗೆ ಪರಿವರ್ತನೆ ಮಾಡುವ ಬೆಳವಣಿಗೆಯನ್ನು ನೋಡಿಕೊಂಡು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಅಭಿವೃದ್ಧಿಯನ್ನು ನಿರ್ಧರಿಸಲಾಗುತ್ತದೆ ಎಂದು ವರದಿಯಾಗಿದೆ.


    Decline in smartphone production in India These mobiles are no longer available in the market
    ಸಾಂದರ್ಭಿಕ ಚಿತ್ರ


    ವಿವಿಧ ಸ್ಮಾರ್ಟ್​ಫೋನ್​ ಕಂಪನಿಗಳ ಪಾಲುದಾರಿಕೆ ವರದಿ:


    ಇತ್ತೀಚಿನ ವರದಿಯ ಪ್ರಕಾರ, Xiaomi ಈ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಮಾರುಕಟ್ಟೆಯಲ್ಲಿ 21.2% ಪಾಲನ್ನು ಹೊಂದಿದೆ, ಆದರೆ ಆಪಲ್ ಪ್ರೀಮಿಯಂ ವಿಭಾಗದಲ್ಲಿ 63% ಪಾಲನ್ನು ಹೊಂದಿದೆ. Xiaomi ತನ್ನ ಮುನ್ನಡೆಯನ್ನು ಉಳಿಸಿಕೊಂಡಿದ್ದರೂ, ಸೆಪ್ಟೆಂಬರ್ 2022 ತ್ರೈಮಾಸಿಕದಲ್ಲಿ ಮಾರಾಟಗಳು ಶೇಕಡಾ 18% ರಷ್ಟು ಕುಸಿದಿದೆ ಎಂದು ವರದಿ ಬಹಿರಂಗಪಡಿಸಿದೆ, ಶೇಕಡಾ 70% ಕ್ಕಿಂತ ಹೆಚ್ಚಿನ ಸ್ಮಾರ್ಟ್​​​ಫೋನ್​ಗಳು ಆನ್‌ಲೈನ್ ಮಾರಾಟವಾಗುತ್ತದೆ ಎಂದು ಹೇಳಿದ್ದಾರೆ.


    ಈರೀತಿಯ ಕುಸಿತಗಳು ಸ್ಮಾರ್ಟ್​​ಫೋನ್​ ಕಂಪನಿಗಳಿಗೆ ಬಹಳಷ್ಟು ನಷ್ಟವನ್ನು ತಂದಿದೆ ಎಮದು ಹೇಳಬಹುದು. ಇದರಿಂದ ಕಂಪನಿಗಳು ತನ್ನ ಮುಂದಿನ ವರ್ಷನ್​​ನಲ್ಲಿ ಉತ್ಪಾದಿಸುವ ಬ್ರಾಂಡ್​ಗಳನ್ನು ಯೋಚಿಸಿ ಉತ್ಪಾದನೆ ಮಾಡಬೇಕಿದೆ. ಕೆಲವೊಂದು ಬಳಕೆದಾರರು ತಮ್ಮ ಉದ್ದೇಶಗಳನ್ನು ಬದಲಾಯಿಸುವುದರಿಂದ ಈ ರೀತಿಯ ಸಮದರ್ಭಗಳು ಬರುತ್ತದೆ.

    Published by:Prajwal B
    First published: