Jetpack ವಿನ್ಯಾಸದಿಂದ ಹಾರುವ ಬೈಕ್ ಅಭಿವೃದ್ಧಿ ಪಡಿಸಿದ ಡೇವಿಡ್ ಮೇಮನ್!

flying motorbike: ಸಿಡ್ನಿಯ ಮೇಮನ್ ಅವರು ತಮ್ಮ ಜೆಟ್ ಪ್ಯಾಕ್ ಮೂಲಕ ಹಾರಿದ ಸಾಧನೆಯನ್ನು 2015 ರಲ್ಲಿ ಮಾಡಿದ್ದರು. ತದನಂತರ ಅವರು ಮತ್ತೆ ತಮ್ಮ ಸಂಶೋಧನೆಯಲ್ಲಿ ತೊಡಗಿಕೊಂಡರು. 2018 ರಿಂದ ಅವರು ಒಂದು ಹೊಸ ರೀತಿಯ ಪ್ರಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅವರು ಹೇಳುವಂತೆ ಈ ಸಾಧನವು ಹೆಚ್ಚು ವಾಣಿಜ್ಯ ಮಟ್ಟದಲ್ಲಿ ಕಾರ್ಯಗತವಾಗುವ ಸಾಧ್ಯತೆ ಹೊಂದಿವೆ ಎನ್ನುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಡೇವಿಡ್ ಮೇಮನ್ (David Mayman) ಅವರು ತಮ್ಮ 12ನೇ ವಯಸ್ಸಿನಲ್ಲಿದ್ದಾಗಲೇ ಫೆನ್ಸ್ ಹಾಗೂ ಹುಲ್ಲುಗಳನ್ನು ಕೀಳುವ ಯಂತ್ರದ ಭಾಗಗಳನ್ನು ಬಳಸಿ ಹೆಲಿಕಾಪ್ಟರ್ (Helicopter) ಒಂದನ್ನು ನಿರ್ಮಿಸಲು ಶತಪ್ರಯತ್ನಪಟ್ಟಿದ್ದರು. ಇನ್ನು ಚಿಕ್ಕ ಹುಡುಗನಲ್ಲವೆ....ಅದು ಸಫಲವಾಗಲಿಲ್ಲ. ಆದಾಗ್ಯೂ ಅಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ತಂತ್ರಜ್ಞಾನದ ನಿಪುಣತೆ ಅವರು ಮುಂದೆ ದೊಡ್ಡದನ್ನು ಸಾಧಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತಷ್ಟೆ. ಅಂದುಕೊಂಡಂತೆ ಅವರು ದೊಡ್ಡವರಾದ ಮೇಲೆ ತಮ್ಮ ತಾಂತ್ರಿಕ ಪ್ರತಿಭೆಯ ಮೂಲಕ ಜೆಟ್ ಪ್ಯಾಕ್ (Jetpack) ಒಂದನ್ನು ನಿರ್ಮಿಸಿ ಸ್ಟ್ಯಾಚ್ಯು ಆಫ್ ಲಿಬರ್ಟಿ (Statue of Liberty) ಸುತ್ತ ರೌಂಡು ಹೊಡೆದು ತೋರಿಸಿಯೇ ಬಿಟ್ಟರು.

  ಸಿಡ್ನಿಯ ಮೇಮನ್ ಅವರು ತಮ್ಮ ಜೆಟ್ ಪ್ಯಾಕ್ ಮೂಲಕ ಹಾರಿದ ಸಾಧನೆಯನ್ನು 2015 ರಲ್ಲಿ ಮಾಡಿದ್ದರು. ತದನಂತರ ಅವರು ಮತ್ತೆ ತಮ್ಮ ಸಂಶೋಧನೆಯಲ್ಲಿ ತೊಡಗಿಕೊಂಡರು. 2018 ರಿಂದ ಅವರು ಒಂದು ಹೊಸ ರೀತಿಯ ಪ್ರಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅವರು ಹೇಳುವಂತೆ ಈ ಸಾಧನವು ಹೆಚ್ಚು ವಾಣಿಜ್ಯ ಮಟ್ಟದಲ್ಲಿ ಕಾರ್ಯಗತವಾಗುವ ಸಾಧ್ಯತೆ ಹೊಂದಿವೆ ಎನ್ನುತ್ತಾರೆ. ಮೇಮನ್ ಅವರು ಕೆಲಸ ಮಾಡುತ್ತಿರುವ ಹೊಸ ಸಾಧನಕ್ಕೆ ಸ್ಪೀಡರ್ ಎಂದು ಹೆಸರಿಟ್ಟಿದ್ದಾರೆ. ಅವರು ಹೇಳುವಂತೆ ಇದೊಂದು ಹಾರಾಡುವ ಬೈಕ್ ಆಗಿದೆ. ಅವರು ಸಂಶೋಧನೆ ನಡೆಸುತ್ತಿರುವ ಹಾರುವ ಯಂತ್ರಗಳಲ್ಲಿ ಸ್ಪೀಡರ್ ಸಹ ಒಂದು ಯೋಜನೆಯಾಗಿದೆಯಂತೆ. ಇದು ವರ್ಟಿಕಲ್ ಆಗಿ ಟೆಕ್ ಆಫ್ ಆಗಿ ಅತೀ ವೇಗದಲ್ಲಿ ಹಾರುತ್ತದೆ ಎಂದು ಮೇಮನ್ ಹೇಳುತ್ತಾರೆ. ಅಲ್ಲದೆ ಇದರ ವಿನ್ಯಾಸವು ಕಾಂಪ್ಯಾಕ್ಟ್ ಸಹ ಆಗಿದ್ದು ಸರಾಗವಾಗಿ ಎಲ್ಲೆಡೆ ತೆಗೆದುಕೊಂಡು ಹೋಗಬಹುದೆಂದು ಅವರು ಹೇಳುತ್ತಾರೆ.

  ಈಗಾಗಲೇ ವರ್ಟಿಕಲ್ ಆಗಿ ಮೇಲೇರಿ ಕೆಳಗೆ ಇಳಿಯುವ ತಂತ್ರಜ್ಞಾನವು ವಿಸ್ತೃತವಾಗುತ್ತಿದ್ದು ಇದರದ್ದೆ ಆದ ಕ್ಷೇತ್ರ ಹೆಚ್ಚಿನ ಮನ್ನಣೆಗಳಿಸುತ್ತಿದೆ. ಈ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ತಾಂತ್ರಿಕ ಇಂಜಿನಿಯರ್ ಗಳು ಕೆಲಸ ಮಾಡುತ್ತಿದ್ದು ಭವಿಷ್ಯದಲ್ಲಿ ಹೆಚ್ಚು ಮೌಲ್ಯಯುತ ಹಾಗೂ ವ್ಯಾಪ್ತಿಯಲ್ಲಿ ಲಭ್ಯವಾಗುವಂತಹ ವಾಯುಯಾನ ಸೌಲಭ್ಯಗಳ ಸೃಷ್ಟಿಯಾಗುವ ಬಗ್ಗೆ ವಿಶ್ವಾಸ ಹೊಂದಿದ್ದಾರೆ.  ಆದರೆ, ಮೇಮನ್ ಅವರ ಸಾಧನ ಹಾಗೂ ತಂತ್ರಜ್ಞಾನ ಮಾತ್ರ ವಿಭಿನ್ನವಾಗಿದೆ. ಅವರು ಸಾಮ್ಪ್ರದಾಯಿಕವಾಗಿ ಬಳಸಲಾಗುವ ವಿದ್ಯುತ್ ಅಥವಾ ಬ್ಯಾಟರಿಗಳನ್ನು ಬಳಸುತ್ತಿಲ್ಲ. ಬದಲಾಗಿ ಅವರ ಸ್ಪೀಡರ್ ವಿಮಾನಗಳಿಗೆ ಹಾಕಲಾಗುವ ಇಂಧನ ಬೇಕಾಗುವ ಜೆಟ್ ಇಂಜಿನ್ ಗಳನ್ನು ಹೊಂದಿದೆ. ತಾಂತ್ರಿಕತೆಯ ಮಟ್ಟದಲ್ಲಿ ಇದು ಸ್ವಲ್ಪ ಹಿನ್ನಡೇಯಾದರೂ ಮೇಮನ್ ಅವರು ಗ್ರಾಹಕರಿಗಾಗಿ ಲಿಕ್ವಿಡ್ ಫೂಯೆಲ್ ಅನ್ನು ಗಮನದಲ್ಲಿರಿಸಿಕೊಂಡಿದ್ದಾರೆ.

  ಆದರೆ ಕೆಲ ಸಂದರ್ಭಗಳಲ್ಲಿ ಹಾಗೂ ಮಿಲಿಟರಿ ಸೇವೆಗಳಲ್ಲಿ ಕೆಲವೊಮ್ಮೆ ಅತಿ ಬೇಗನೆ ಇಂತಿಷ್ಟು ಭಾರವನ್ನು ಸಾಗಿಸುವ ಸಂದರ್ಭಗಳಿದ್ದು ಅದಕ್ಕಾಗಿ ಚಿಕ್ಕದಾದ ಆದರೆ ಸಾಕಷ್ಟು ವೇಗದಲ್ಲಿ ಹಾರುಬಹುದಾದ ಸಾಧನಗಳ ಅವಶ್ಯಕತೆ ಸಮಯೋಚಿತವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಇಂತಿಷ್ಟು ಪೇಲೋಡ್ ಅನ್ನು ಹೊತ್ತೊಯ್ಯುವ ಜೆಟ್ ಇಂಜಿನ್ ಶಕ್ತಿಯುಳ್ಳ ಹಾರುವ ಯಂತ್ರಗಳು ಅತ್ಯಂತ ಸಹಾಯಕವಾಗಬಲ್ಲವು. ಏಕೆಂದರೆ ಇವು ಸಾಂಪ್ರದಾಯಿಕ ಬ್ಯಾಟರಿಗಳಿಗಿಂತ 20 ಪಟ್ಟು ಹೆಚ್ಚಿನ ಸಾಮರ್ಥ್ಯ ಹೊಂದಿರುತ್ತದೆ ಎನ್ನುತ್ತಾರೆ ಮೇಮನ್.  ಇದನ್ನೂ ಓದಿ: Activa Scooter​ಗೆ ಪರ್ಯಾಯ ಮಾದರಿ ಬಿಡುಗಡೆ ಮಾಡಿದ Honda: ನೂತನ ಸ್ಕೂಟರ್​ ಹೇಗಿದೆ ಗೊತ್ತಾ?

  ಯುಎಸ್ ನೇವಿಯೊಂದಿಗೆ ಕೆಲಸ ಮಾಡುವಾಗ ಜೆಟ್ ಪ್ಯಾಕ್ ಬಳಸಿ ಸ್ಪೀಡರ್ ಮಾಡುವ ಬಗ್ಗೆ ಐಡಿಯಾ ಹೊಳೆಯಿತೆನ್ನುವ ಮೇಮನ್ ಅದಕ್ಕಾಗಿ ತಕ್ಷಣ ಹಾರುವ ಇಳಿಯುವ ಚಿಕ್ಕದಾಗಿರುವ ಗುಣಲಕ್ಷಣಗಳನ್ನು ಹೊಂದಿರುವ ವಿವಿಧ ಬಗೆಯ ಉತ್ಪನ್ನಗಳನ್ನು ಮಾಡುವ ಅವಕಾಶವಿರುತ್ತದೆ ಹಾಗೂ ಅಂತಹ ಸಂದರ್ಭದಲ್ಲಿ ಸ್ಪೀಡರ್ ನಂತಹ ಉತ್ಪನ್ನ ನಿರ್ಮಾಣವಾಗಿ ಬಿಡುತ್ತದೆ ಎನ್ನುತ್ತಾರೆ. ಒಂದೊಮ್ಮೆ ಮಿಲಿಟರಿಗೆ 95ಕೆಜಿಗಳಷ್ಟು ಭಾರವನ್ನು ಸಾಗಿಸಬಲ್ಲ ಯಂತ್ರವೊಂದರ ಅವಶ್ಯಕತೆಯಿತ್ತು. ಈಗಾಗಲೇ ಚಾಲ್ತಿಯಲ್ಲಿದ್ದ ಜೆಟ್ ಪ್ಯಾಕ್ ಗಳು ಇಷ್ಟು ಭಾರ ಒಯ್ಯುವುದು ಸಾಧ್ಯವಿರಲಿಲ್ಲ, ಬದಲಾಗಿ ಇನ್ನೊಂದು ರೀತಿಯ ಯಂತ್ರದ ಅವಶ್ಯಕತೆಯಿತ್ತು. ಇದೇ ಸಂದರ್ಭದಲ್ಲಿ ಸ್ಪೀಡರ್ ಯೋಜನೆ ಅನುಷ್ಠಾನಕ್ಕೆ ಬಂದಿತು ಎಂದು ಮೇಮನ್ ವಿವರಿಸುತ್ತಾರೆ.  ಇದನ್ನೂ ಓದಿ: Emoji Using: ಎಮೋಜಿ ಹೆಚ್ಚಾಗಿ ಬಳಸುವವರ ಮನಸ್ಥಿತಿ ಎಂಥಾದ್ದು ಗೊತ್ತಾ?

  ಮೇಮನ್ ವಿವರಿಸುವಂತೆ ಸ್ಪೀಡರ್ ತಂತ್ರಾಂಶ ಸಮರ್ಥಿತ ಆಧುನಿಕ ತಂತ್ರಜ್ಞಾನ ಒಳಗೊಂಡಿದ್ದು ಬಹುಭಾಗ ತನ್ನ ಕಾರ್ಯಾಚರಣೆಯನ್ನು ಸ್ವತಃ ನಿರ್ವಹಿಸಲು ಶಕ್ತವಾಗಿದೆ ಎನ್ನುವ ಮೇಮನ್ ಇದಕ್ಕಾಗಿ ಪರವಾನಗಿ ಬೇಕಾಗಿರುವ ಅವಶ್ಯಕತೆಯಿಲ್ಲ ಎಂದು ಹೇಳುತ್ತಾರೆ. ಇದೊಂದು ರೀತಿಯ ಕೃತಕ ಬುದ್ಧಿಮತ್ತೆಯ ಯಂತ್ರವೆಂದೂ ಸಹ ಹೇಳಬಹುದೆಂಬುದು ಮೇಮನ್ ಅವರ ಅಭಿಪ್ರಾಯವಾಗಿದೆ. ಮುಂಬರುವ ದಿನಗಳಲ್ಲಿ ಸ್ಪೀಡರ್ ವಾಸ್ತವದಲ್ಲಿ ಕಾರ್ಗೋ ಹೊತ್ತೊಯ್ಯಬಹುದಾದ ಸಾಧನವಾಗಿ ಬಳಕೆಯಾಗಬಹುದಾದ ಸಾಧ್ಯತೆಯ ವಿಶ್ವಾಸವನ್ನು ವ್ಯಕ್ತಪಡಿಸುವ ಮೇಮನ್ ಇದನ್ನು ರಿಮೋಟ್ ಆಗಿ ಚಲಿಸುವಂತೆ ಮಾಡಬಹುದೆಂಬ ಆಸೆ ವ್ಯಕ್ತಪಡಿಸುತ್ತಾರೆ.
  Published by:Harshith AS
  First published: