4.2-5.0 ಲಕ್ಷಕ್ಕೆ ಡಾಟ್ಸನ್ ಗೋ ರೀಮಿಕ್ಸ್ ಕಾರು ಬಿಡುಗಡೆ


Updated:March 13, 2018, 7:27 PM IST
4.2-5.0 ಲಕ್ಷಕ್ಕೆ ಡಾಟ್ಸನ್ ಗೋ ರೀಮಿಕ್ಸ್ ಕಾರು ಬಿಡುಗಡೆ

Updated: March 13, 2018, 7:27 PM IST
- ನ್ಯೂಸ್18 ಕನ್ನಡ

ನವದೆಹಲಿ(ಮಾ. 13): ಹೊಸ ಫೀಚರ್​ಗಳು ಮತ್ತು ಒಳ ವಿನ್ಯಾಸದೊಂದಿಗೆ ಡಾಟ್ಸನ್ ಗೋ ರೀಮಿಕ್ಸ್ ಆವೃತ್ತಿಯ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ. Datsun GO ಮತ್ತು GO+ ಮಾಡೆಲ್​ನ ಕಾರುಗಳ ಬೆಲೆ 4.21 ಲಕ್ಷ ರೂ ಹಾಗೂ 4.99 ಲಕ್ಷ ರೂಪಾಯಿಗೆ ನಿಗದಿಯಾಗಿದೆ. ಈ ರೀಮಿಕ್ಸ್ ಆವೃತ್ತಿಯಲ್ಲಿ ಕಾರು ಹೊಸ ಕಳೆ ಪಡೆದುಕೊಂಡಿದೆ. ಹೊಸ ತಲೆಮಾರಿನ ವಿನ್ಯಾಸ ಶೈಲಿ ಹಾಗೂ ಜಪಾನೀ ತಂತ್ರಜ್ಱಆನವಿರುವ ಡಾಟ್ಸನ್ ಗೋ ರೀಮಿಕ್ಸ್ ಕಾರು ಭಾರತದ ಮಾರುಕಟ್ಟೆಯಲ್ಲಿ ಸಕ್ಸಸ್ ಕಾಣುವ ಆತ್ಮವಿಶ್ವಾಸ ಡಾಟ್ಸನ್ ಇಂಡಿಯಾ ಸಂಸ್ಥೆಗಿದೆ. ರಿಮೋಟ್ ಕೀಲೆಸ್ ಎಂಟ್ರಿ, ಹ್ಯಾಂಡ್ಸ್​-ಫ್ರೀ ಬ್ಲೂಟೂಥ್ ಆಡಿಯೋ, ಟ್ರೆಂಡಿ ಸೀಟ್ ಕವರ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಸೆಂಟ್ರಲ್ ಲಾಕಿಂಗ್ ಮೊದಲಾದ ವಿನೂತನ ಫೀಚರ್ಸ್ ಈ ಕಾರಿನಲ್ಲಿವೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ