• Home
  • »
  • News
  • »
  • tech
  • »
  • Dating Apps: ಟಿಂಡರ್, ಬಂಬಲ್‌ನಂತಹ ಡೇಟಿಂಗ್ ಆ್ಯಪ್‌ಗಳಲ್ಲಿ ಮಹಿಳೆಯರದ್ದೇ ಮೇಲುಗೈ

Dating Apps: ಟಿಂಡರ್, ಬಂಬಲ್‌ನಂತಹ ಡೇಟಿಂಗ್ ಆ್ಯಪ್‌ಗಳಲ್ಲಿ ಮಹಿಳೆಯರದ್ದೇ ಮೇಲುಗೈ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೋಲ್ಫ್ ಹರ್ಡ್ ಟಿಂಡರ್ ಅನ್ನು ತೊರೆದ ನಂತರ 2014 ರಲ್ಲಿ ಸ್ತ್ರೀವಾದಿ ಡೇಟಿಂಗ್ ಆ್ಯಪ್ ಆದ ಬಂಬಲ್ ಅನ್ನು ಆರಂಭಿಸಿದರು.

  • Share this:

ಇಂದಿನ ಕಾಲಮಾನದಲ್ಲಿ ಡೇಟಿಂಗ್ ಆ್ಯಪ್‌ಗಳು (Dating App) ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು ಇದರಲ್ಲಿ ಅರ್ಧದಷ್ಟು ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಈ ಕಾರಣಕ್ಕಾಗಿಯೇ (Reason) ಡೇಟಿಂಗ್ ಆ್ಯಪ್ ಸಂಸ್ಥೆಗಳು ಮಹಿಳೆಯರಿಗೆ ಉನ್ನತ ನಾಯಕತ್ವದ ಹುದ್ದೆಗಳನ್ನು ನೀಡಿವೆ. ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಹಾಗೂ ಪ್ರಭಾವಶಾಲಿ ಡೇಟಿಂಗ್ ಆ್ಯಪ್‌ಗಳಾದ ಟಿಂಡರ್ (Tinder) ಹಾಗೂ ಬಂಬಲ್ (Bumble) ಎರಡನ್ನೂ ಮಹಿಳೆಯೇ (Women) ಮುನ್ನಡೆಸುತ್ತಿದ್ದರು. ವಿಟ್ನಿ ವೋಲ್ಫ್ ಹರ್ಡ್ ಬಂಬಲ್‌ನಲ್ಲಿದ್ದರೆ, ರೆನೇಟ್ ನೈಬೋರ್ಗ್ ಟಿಂಡರ್ ಅನ್ನು ಮುನ್ನಡೆಸುತ್ತಿದ್ದರು.


ಇವರು ಈ ಡೇಟಿಂಗ್ ಆ್ಯಪ್‌ಗಳನ್ನು ನಡೆಸಲು ಎಷ್ಟು ಸಮರ್ಥರಿದ್ದರು ಎಂಬುದನ್ನು ಅವಲೋಕಿಸಲು ಗೂಗಲ್ ಇಮೇಜ್ ಹುಡುಕಾಟವನ್ನು ನಡೆಸಲಾಗಿದೆ. ಈ ನಾಯಕರುಗಳನ್ನು ಗೂಗಲ್ ಹುಡುಕಾಟ ಇಮೇಜ್ ಹೇಗೆ ಪ್ರತಿನಿಧಿಸುತ್ತದೆ ಎಂಬುದನ್ನು ಕಂಡುಕೊಳ್ಳಲಾಯಿತು. ಪ್ರತಿ CEO ಗಾಗಿ ಟಾಪ್ 100 ಫಲಿತಾಂಶಗಳನ್ನು ನೋಡಲಾಯಿತು.


ಬಂಬಲ್ ಸಂವೇದನೆ


ವಿಟ್ನಿ ವುಲ್ಫ್ ಹರ್ಡ್ ವಿಷಯದಲ್ಲಿ ಆಕೆಯ ಯವ್ವೌನ ಹಾಗೂ ಟಿಂಡರ್‌ನೊಂದಿಗೆ ಆಕೆ ಹೊಂದಿದ್ದ ಹಳೆಯ ಹಗರಣದ ಮೇಲೆ ಬೆಳಕು ಚೆಲ್ಲಲಾಗಿದೆ. ವೋಲ್ಫ್ ಹರ್ಡ್ ಟಿಂಡರ್ ಅನ್ನು ತೊರೆದ ನಂತರ 2014 ರಲ್ಲಿ ಸ್ತ್ರೀವಾದಿ ಡೇಟಿಂಗ್ ಆ್ಯಪ್ ಆದ ಬಂಬಲ್ ಅನ್ನು ಆರಂಭಿಸಿದರು. ಅತ್ಯಂತ ಕಿರಿಯ ಮಹಿಳಾ ಬಿಲಿಯನೇರ್ ಎಂಬ ಹೆಗ್ಗಳಿಕೆ ವಿಟ್ನಿಯದ್ದಾಗಿದೆ. ಅಂತೆಯೇ ಯುಎಸ್‌ನಲ್ಲಿ ಕಂಪನಿಯನ್ನು ಸಾರ್ವಜನಿಕವಾಗಿ ಸುಪರ್ದಿಗೆ ತಂದುಕೊಂಡ ಅತ್ಯಂತ ಕಿರಿಯ ಮಹಿಳಾ ಸಿಇಒ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.


ಇದನ್ನೂ ಓದಿ: ಮರೆತು ಹೋಯಿತೆ ಮೊಬೈಲ್ ಪಾಸ್‌ವರ್ಡ್? ಟೆನ್ಷನ್‌ ಬಿಡಿ, ಹುಡುಕುವ ಟಿಪ್ಸ್ ಇಲ್ಲಿದೆ ನೋಡಿ

ಇನ್ನು ಕೆಲವೊಂದು ಮಾಧ್ಯಮಗಳು ಅವರು ಮಾಡಿರುವ ಸಾಧನೆಗಳ ಕಡೆಗೆ ಲಕ್ಷ್ಯ ಕೊಡದೇ ಟಿಂಡರ್‌ನೊಂದಿಗೆ ಆಕೆ ಹೊಂದಿದ್ದ ವಿವಾದಗಳು ಹಾಗೂ ಲೈಂಗಿಕ ತಾರತ್ಯಮದ ಮೊಕದ್ದಮೆಯನ್ನು ಕೇಂದ್ರೀಕರಿಸಿವೆ. ಡೇಟಿಂಗ್ ಅಪ್ಲಿಕೇಶನ್ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿರುವ ಟೆಕ್ ಬ್ರದರ್ಸ್ ವಿರುದ್ಧ ಸ್ಪರ್ಧೆಗಿಳಿಯಲು ಸ್ತ್ರೀವಾದಿ ಕಾರ್ಯಸೂಚಿಯ ಭಾಗವಾಗಿ ಬಂಬಲ್ ಅನ್ನು ರೂಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.


ಟಿಂಡರ್‌ನ ರೆನೇಟ್ ನೈಬೋರ್ಗ್


ಫಾರ್ಚ್ಯೂನ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಲೇಖನವು ರೆನೇಟ್ ಅವರನ್ನು ಟಿಂಡರ್‌ನ ಸಾಮರ್ಥ್ಯಕ್ಕೆ ಅಂತಿಮ ಪುರಾವೆ ಎಂದು ಕರೆದಿದ್ದು ಆರೋಗ್ಯಕರ ಹಾಗೂ ಸಮಾಕಾಲೀನ ಸಂಬಂಧಕ್ಕೆ ರೆನೇಟ್ ಅವರ ಸಾಮರ್ಥ್ಯವೇ ಕಾರಣ ಎಂದು ವ್ಯಾಖ್ಯಾನಿಸಿದೆ. ರೆನೇಟ್ ಅವರ ಅಧಿಕಾರಾವಧಿಯಲ್ಲಿ ಟಿಂಡರ್ ವೈವಿಧ್ಯತೆಗಾಗಿ ಅತ್ಯುತ್ತಮ ಸಿಇಒ ಬಹುಮಾನವನ್ನು ಪಡೆದುಕೊಂಡಿತು ಹಾಗೂ ನವೀನ ಕಂಪನಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.


ಸಾಮಾಜಿಕ ಮಾಧ್ಯಮ ಪ್ರಾತಿನಿಧ್ಯಗಳು


ಸುದ್ದಿ ಮಾಧ್ಯಮದಲ್ಲಿ CEO ಗಳ ಸೀಮಿತ ಮತ್ತು ಸಮಸ್ಯೆಗಳ ಅಂಶಗಳಿಗೆ ಹೋಲಿಸಿದಾಗ, ಮಹಿಳೆಯರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಿಂಗ ಮತ್ತು ನಾಯಕತ್ವದ ಹೆಚ್ಚು ವೈವಿಧ್ಯಮಯ ಮತ್ತು ವೈಯಕ್ತಿಕಗೊಳಿಸಿದ ಕಲ್ಪನೆಗಳನ್ನು ಬಳಸಿಕೊಂಡಿದ್ದಾರೆ. ಸಾಮಾಜಿಕ ಖಾತೆಗಳಲ್ಲಿ ತಾನು ಬಂಬಲ್ ಸಿಇಒ ಎಂದು ವೋಲ್ಫ್ ಹರ್ಡ್ ಗುರುತನ್ನು ಪ್ರದರ್ಶಿಸಿಕೊಂಡಿದ್ದಾರೆ. ತನ್ನ ಸ್ತ್ರೀವಾದಿ ಧ್ಯೇಯಕ್ಕೆ ಕೇಂದ್ರವಾಗಿರುವ ಕಂಪನಿಯನ್ನು ನಡೆಸುವ ಪ್ರಮುಖ ವ್ಯಕ್ತಿಯಾಗಿ ತಮ್ಮ ಗುರುತನ್ನು ಇಲ್ಲಿ ಮುಖ್ಯವಾಗಿಸಿದ್ದಾರೆ.


ಇದನ್ನೂ ಓದಿ: ಸಾವಿನ ನಂತರ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಏನಾಗುತ್ತೆ? ಶಾಕ್​ ಆಗ್ತೀರಾ ನೋಡಿ

ಆಕೆ ತನ್ನನ್ನು ತಾನೇ ಒಂದು ಬ್ರ್ಯಾಂಡ್ ಎಂಬುದಾಗಿ ಗುರುತಿಸಿಕೊಂಡಿದ್ದಾರೆ. ಹಾಗೂ ಸ್ತ್ರೀವಾದಿ ಯೋಜನೆಯ ಮುಖ್ಯಭಾಗವಾಗಿ ಬಂಬಲ್ ಅನ್ನು ಪ್ರಸ್ತುತಪಡಿಸಿದ್ದಾರೆ.


ನೈಬೋರ್ಗ್ ತಮ್ಮ ನಾಯಕತ್ವ ಗುಣಗಳನ್ನು ಪ್ರಾಥಮಿಕವಾಗಿ ಟ್ವಿಟರ್ ಹಾಗೂ ಲಿಂಕ್ಡ್‌ಇನ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸ್ತುತಪಡಿಸಿದ್ದು ನಾಯಕತ್ವ, ಟೆಕ್ ಬ್ಲಾಗ್‌ಗಳು ಹಾಗೂ ಲಿಂಗ ವೈವಿಧ್ಯತೆಯ ಕುರಿತು ಸಕ್ರಿಯವಾಗಿ ಪೋಸ್ಟ್ ಮಾಡಿದ್ದಾರೆ. ಕಂಪನಿಯನ್ನು ಮುನ್ನಡೆಸುವ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದ್ದಾರೆ.


ಫ್ಯಾಶನ್ ಹಾಗೂ ಲೋಗೋ ಬಣ್ಣಗಳು


ಬಂಬಲ್ ತಿಳಿ ಹಳದಿ ಬಣ್ಣದ ಲೋಗೋವನ್ನು ಹೊಂದಿದ್ದು ವಿಟ್ನಿ ವೋಲ್ಫ್ ತಮ್ಮ ಪೋಸ್ಟ್‌ಗಳಲ್ಲಿ ಈ ಬಣ್ಣವನ್ನು ಹೆಚ್ಚಾಗಿ ಬಳಸುತ್ತಾರೆ. ಟಿಂಡರ್ ಕೆಂಪನೆಯ ಜ್ವಾಲೆಯ ಬಣ್ಣವನ್ನು ಹೊಂದಿದೆ. ತಾವು ಧರಿಸುವ ಉಡುಗೆಗಳಲ್ಲಿ ಕೂಡ ಹೆಚ್ಚಾಗಿ ಕೆಂಪು ಬಣ್ಣಕ್ಕೆ ಮಾನ್ಯತೆ ನೀಡಿದ್ದು, ಗಾಢವಾದ ಕೆಂಪನೆಯ ಲಿಪ್‌ಸ್ಟಿಕ್ ಅನ್ನು ಹಚ್ಚಿಕೊಳ್ಳುತ್ತಾರೆ.


ಕಾರ್ಪೊರೇಟ್ ಸಂಸ್ಕೃತಿ ಪುರುಷ ಪ್ರಧಾನವಾಗಿದೆ


ಟಿಂಡರ್‌ನಿಂದ ನೈಬೋರ್ಗ್‌ನ ನಿರ್ಗಮನದಿಂದ ಮಹಿಳೆಯರು ಸಿಇಒ ಆದ ಸಂದರ್ಭದಲ್ಲಿ ಕೂಡ ಟೆಕ್ ಉದ್ಯಮದಲ್ಲಿ ಉನ್ನತ ಮಟ್ಟದ ಕಾರ್ಯನಿರ್ವಾಹಕ ಸ್ಥಾನಗಳನ್ನು ನಿರ್ವಹಿಸುವುದು ಇನ್ನೂ ಕಷ್ಟಕರವಾಗಿದೆ ಎಂಬುದನ್ನು ಸೂಚಿಸುತ್ತದೆ. ಟೆಕ್ ಕ್ಷೇತ್ರದಲ್ಲಿ ಮಹಿಳೆಯರು ಯಾವ ರೀತಿಯ ಕೊಡುಗೆಯನ್ನು ನೀಡಿದ್ದಾರೆ ಹಾಗೂ ಯಾವ ರೀತಿಯ ತಪ್ಪುಗಳನ್ನು ಎಸಗಿದ್ದಾರೆ ಎಂಬುದನ್ನು ಮಾಧ್ಯಮಗಳು ಪ್ರಸಾರ ಮಾಡಿವೆ ಇದರಿಂದ ಮಹಿಳೆಯರ ಪ್ರಾಬಲ್ಯ ಕುಂಠಿತಗೊಳ್ಳುತ್ತಿದೆ.


First published: