• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Realme GT 3: 240W ವೇಗದ ಬ್ಯಾಟರಿ ಹೊಂದಿದ ಸ್ಮಾರ್ಟ್​​ಫೋನ್​ ರಿಲೀಸ್​ಗೆ ಡೇಟ್​ ಫಿಕ್ಸ್​! ಬೆಲೆ, ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ

Realme GT 3: 240W ವೇಗದ ಬ್ಯಾಟರಿ ಹೊಂದಿದ ಸ್ಮಾರ್ಟ್​​ಫೋನ್​ ರಿಲೀಸ್​ಗೆ ಡೇಟ್​ ಫಿಕ್ಸ್​! ಬೆಲೆ, ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ

ರಿಯಲ್​ಮಿ ಜಿಟಿ 3 ಸ್ಮಾರ್ಟ್​​ಫೋನ್

ರಿಯಲ್​ಮಿ ಜಿಟಿ 3 ಸ್ಮಾರ್ಟ್​​ಫೋನ್

Smartphone Release Date: ರಿಯಲ್​ಮಿ ಕಂಪೆನಿಯಿಂದ ಮುಂಬರುವ ಸ್ಮಾರ್ಟ್​​ಫೋನ್​ ಎಂದರೆ ಅದು ರಿಯಲ್​ಮಿ ಜಿಟಿ 3 ಸ್ಮಾರ್ಟ್​​ಫೋನ್​. ಈ ಸ್ಮಾರ್ಟ್​​ಫೋನ್​ ವಿಶೇಷವಾಗಿ ಬ್ಯಾಟರಿ ಫೀಚರ್ಸ್​ ಮೂಲಕವೇ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇದೀಗ ಈ ನಿರೀಕ್ಷಿತ ಸ್ಮಾರ್ಟ್​​ಫೋನ್​ನ ಬಿಡುಗಡೆ ದಿನಾಂಕ ಫಿಕ್ಸ್​ ಆಗಿದ್ದು, ಇದರ ಮಾಹಿತಿ ಈ ಲೇಖನದಲ್ಲಿದೆ.

ಮುಂದೆ ಓದಿ ...
  • Share this:

    ಸ್ಮಾರ್ಟ್​ಫೋನ್ (Smartphone)​ ವಲಯದಲ್ಲಿ ಹಲವಾರು ಮೊಬೈಲ್​ ಕಂಪೆನಿಗಳಿವೆ. ಜನಪ್ರಿಯ ಸ್ಮಾರ್ಟ್​​ಫೋನ್​ ಕಂಪೆನಿಗಳಲ್ಲಿ ರಿಯಲ್​ಮಿ ಕಂಪೆನಿ (Realme Company) ಸಹ ಒಂದು. ಈ ಕಂಪೆನಿ ಇದುವರೆಗೆ ಹಲವಾರು ಮೊಬೈಲ್​ಗಳನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿದೆ. ರಿಯಲ್​ಮಿ ಕಂಪೆನಿ ಇದುವರೆಗೆ ತನ್ನ ಬ್ರಾಂಡ್​ನ ಅಡಿಯಲ್ಲಿ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಹಲವಾರು ಮೊಬೈಲ್​ಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ ಈ ಕಂಪೆನಿ ಸ್ಮಾರ್ಟ್​​ಫೋನ್​ ಮಾತ್ರವಲ್ಲದೆ ಸ್ಮಾರ್ಟ್​​ ಗ್ಯಾಜೆಟ್ಸ್​ಗಳನ್ನು ಸಹ ಪರಿಚಯಿಸಿದೆ. ಈ ಹಿಂದೆ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ 240 ವ್ಯಾಟ್​ ವೇಗದ ಬ್ಯಾಟರಿ (240W Supervooc Battery) ಸಾಮರ್ಥ್ಯವನ್ನು ಹೊಂದಿರುವ ಮೊಬೈಲ್​ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದೇ ರೀತಿ ಇದೀಗ ಇದರ ರಿಲೀಸ್​ ಡೇಟ್ (Release Date)​ ಸಹ ನಿಗದಿಯಾಗಿದೆ.


    ರಿಯಲ್​ಮಿ ಕಂಪೆನಿಯಿಂದ ಮುಂಬರುವ ಸ್ಮಾರ್ಟ್​​ಫೋನ್​ ಎಂದರೆ ಅದು ರಿಯಲ್​ಮಿ ಜಿಟಿ 3 ಸ್ಮಾರ್ಟ್​​ಫೋನ್​. ಈ ಸ್ಮಾರ್ಟ್​​ಫೋನ್​ ವಿಶೇಷವಾಗಿ ಬ್ಯಾಟರಿ ಫೀಚರ್ಸ್​ ಮೂಲಕವೇ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇದೀಗ ಈ ನಿರೀಕ್ಷಿತ ಸ್ಮಾರ್ಟ್​​ಫೋನ್​ನ ಬಿಡುಗಡೆ ದಿನಾಂಕ ಫಿಕ್ಸ್​ ಆಗಿದ್ದು, ಇದರ ಮಾಹಿತಿ ಈ ಲೇಖನದಲ್ಲಿದೆ.


    ರಿಯಲ್​ಮಿ ಜಿಟಿ 3 ಸ್ಮಾರ್ಟ್​​ಫೋನ್​ ಯಾವಾಗ ರಿಲೀಸ್?


    ರಿಯಲ್‌ಮಿ ಜಿಟಿ 3 ಸ್ಮಾರ್ಟ್‌ಫೋನ್‌ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2023 ಈವೆಂಟ್‌ನಲ್ಲಿ ಅನಾವರಣಗೊಳ್ಳಲಿದೆ. ಇದನ್ನು ಭಾರತೀಯ ಕಾಲಮಾನ ಫೆಬ್ರವರಿ 28 ರ 4:00 PM ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಿಯಲ್‌ಮಿ ಕಂಪೆನಿ ಹೇಳಿದೆ. ಇದೇ ಸಮಯದಲ್ಲಿಯೇ ಈ ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ನೀಡಲಿದೆಯಾ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಬಹುದು ಎಮದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


    ಇದನ್ನೂ ಓದಿ: ನೋಕಿಯಾ ಎಕ್ಸ್​30 5ಜಿ ಸ್ಮಾರ್ಟ್​​ಫೋನ್ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?


    ರಿಯಲ್​ಮಿ ಜಿಟಿ 3 ಸ್ಮಾರ್ಟ್​​ಫೋನ್ ಡಿಸ್​​ಪ್ಲೇ ವಿನ್ಯಾಸ


    ರಿಯಲ್‌ಮಿ ಜಿಟಿ 3 ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಲಿದೆ ಎಂದು ವರದಿಯಾಗಿದೆ. ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆಯಿದೆ. ಹಾಗೆಯೇ ಈ ಡಿಸ್‌ಪ್ಲೇ ಸ್ಕ್ರೀನ್ ಟು ಬಾಡಿ ಅನುಪಾತ 87.79 % ಇರಲಿದೆ ಅನ್ನೊದು ಬಹಿರಂಗವಾಗಿದೆ. ಇನ್ನು ರಿಯಲ್​ಮಿ ಜಿಟಿ 3 ಸ್ಮಾರ್ಟ್​​ಫೋನ್​ನ ಡಿಸ್​ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಸ್ಕ್ರೀನ್‌ ಪ್ರೊಟೆಕ್ಷನ್‌ ಅನ್ನು ಆ್ಯಡ್ ಮಾಡಿದ್ದಾರೆ.


    ರಿಯಲ್​ಮಿ ಜಿಟಿ 3 ಸ್ಮಾರ್ಟ್​​ಫೋನ್


    ಕ್ಯಾಮೆರಾ ಸೆಟಪ್​


    ರಿಯಲ್‌ಮಿ ಜಿಟಿ 3 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಇನ್ನು ಈ ಸ್ಮಾರ್ಟ್​​ಫೋನ್​ನಲ್ಲಿ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್​ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಿರಬಹುದು ಎಂದು ಅಂದಾಜಿಸಲಾಗಿದೆ.


    ಪ್ರೊಸೆಸರ್ ಸಾಮರ್ಥ್ಯ


    ರಿಯಲ್‌ಮಿ ಜಿಟಿ 3 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 8100 ಎಸ್​ಓಸಿ ಪ್ರೊಸೆಸರ್‌ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್​ಫೋನ್ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​ ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ ಎಂದು ಹೇಳಲಾಗಿದೆ.ಇನ್ನು ಈ ಸ್ಮಾರ್ಟ್​ಫೋನ್​ ಮೆಮೊರಿ ಕಾರ್ಡ್​ ಸ್ಲಾಟ್​ ಹೊಂದಿರುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


    ಬ್ಯಾಟರಿ ಫೀಚರ್ಸ್


    ರಿಯಲ್‌ಮಿ ಜಿಟಿ 3 ಸ್ಮಾರ್ಟ್‌ಫೋನ್‌ 240W ವೇಗದ ಚಾರ್ಜಿಂಗ್‌ ಬೆಂಬಲಿಸುವ 4,500mAh ಸಾಮರ್ಥ್ಯ ಬ್ಯಾಟರಿ ಬ್ಯಾಕಪ್‌ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್​ ಸಿ ಪೋರ್ಟ್‌ ಅನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.




    ಇನ್ನು ಈ ಸ್ಮಾರ್ಟ್​ಫೋನ್​ನ ಬೆಲೆ ಮತ್ತು ಲಭ್ಯತೆ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಇದೇ ಫೆಬ್ರವರಿ 28ರಂದು ಜಾಗತಿಕವಾಗಿ ಬಿಡುಗಡೆಯಾಗುವುದು ಖಚಿತವಾಗಿದೆ. ಆದರೆ ಭಾರತದಲ್ಲಿ ಯಾವಾಗ ಬಿಡುಗಡೆಯಾಗಬಹುದು ಎಂದು ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

    Published by:Prajwal B
    First published: