Dangerous Apps: ಈ 35 ಆ್ಯಪ್​ಗಳು ತುಂಬಾ ಅಪಾಯಕಾರಿ! ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದರೆ ಕೂಡಲೇ ಡಿಲೀಟ್​ ಮಾಡಿ

35 ಜನಪ್ರಿಯ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಅಪಾಯಕಾರಿ ಮಾಲ್‌ವೇರ್ ಕಂಡುಬಂದಿರುವ ಬಗ್ಗೆ ತಿಳಿಸಿದೆ, ಗೂಗಲ್​​ ಇದನ್ನು ಸರಿಯಾಗಿ ಪರಿಶೀಲಿಸಿ ಡಿಲೀಟ್​ ಮಾಡುವಂತೆ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಹೇಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರು ಗೂಗಲ್​ ಪ್ಲೇ ಸ್ಟೋರ್​ (Google Play Store) ಮೊರೆ ಹೋಗಿ ಬೇಕಾದ ಆ್ಯಪ್​ಗಳನ್ನ ಡೌನ್​ಲೋಡ್​ ಮಾಡುತ್ತಾರೆ. ಗೂಗಲ್​​ ಪ್ಲೇ ಸ್ಟೋರ್​ನಲ್ಲಿ ಲೆಕ್ಕವಿಲ್ಲದಷ್ಟು ಆ್ಯಪ್ ಗಳಿದ್ದು, ಯಾವುದನ್ನು ಬೇಕಾದರೂ ಡೌನ್​ಲೋಡ್ (Download)​ ಮಾಡಬಹುದಾಗಿದೆ. ಆದರೆ ನಕಲಿ ಮತ್ತು ಮಾಲ್ವೇರ್​ (Malware) ತುಂಬಿದ ಆ್ಯಪ್​ಗಳು (Apps)​ ಕೂಡ ಗ್ಯೂಗಲ್​ ಪ್ಲೇ ಸ್ಟೋರ್​ನಲ್ಲಿ ಜಾಗ ಮಾಡಿಕೊಂಡಿದ್ದು, ಇದನ್ನು ಸರಿಯಾಗಿ ಪರಿಶೀಲಿಸಿ ಡೌನ್​ಲೋಡ್​ ಮಾಡಿಕೊಳ್ಳಬೇಕಿದೆ. ಅಂದಹಾಗೆಯೇ ಬಳಕೆದಾರರ ಸುರಕ್ಷತೆಯನ್ನು ಬಯಸುವ ಗೂಗಲ್​ ಪ್ಲೇ ಸ್ಟೋರ್​ ಇದೀಗ ಮಾಲ್ವೇರ್ ಒಳಗೊಂಡ 35 ಆ್ಯಪ್​ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಆ್ಯಪ್​ಗಳು ಸ್ಮಾರ್ಟ್​ಫೋನ್​ನಲ್ಲಿದ್ದರೆ (Smart Phones) ಕೂಡಲೇ ಡಿಲೀಟ್​ (Delete) ಮಾಡಿ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದೆ.

    ಸೈಬರ್ ಸೆಕ್ಯುರಿಟಿ ತಂತ್ರಜ್ಞಾನ ಕಂಪನಿ ಬಿಟ್‌ಡೆಫೆಂಡರ್ ಪ್ರಕಾರ, 35 ಜನಪ್ರಿಯ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಅಪಾಯಕಾರಿ ಮಾಲ್‌ವೇರ್ ಕಂಡುಬಂದಿರುವ ಬಗ್ಗೆ ತಿಳಿಸಿದೆ, ಗೂಗಲ್​​ ಇದನ್ನು ಸರಿಯಾಗಿ ಪರಿಶೀಲಿಸಿ ಡಿಲೀಟ್​ ಮಾಡುವಂತೆ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಹೇಳಿದೆ.

    ಸೈಬರ್ ಸೆಕ್ಯುರಿಟಿ ವರದಿಯ ಮಾಡಿದ ಪ್ರಕಾರ, ಬಳಕೆದಾರರು ಒಮ್ಮೆ ಅಪ್ಲಿಕೇಶನ್ ಅನ್ನು ಡೌನ್​ಲೋಡ್​​ ಮಾಡಿದರೆ, ಅದರ ಹೆಸರು ಬದಲಾಗುತ್ತದೆ ಮತ್ತು ಅಪ್ಲಿಕೇಶನ್ ಐಕಾನ್ ಮರೆಯಾಗುತ್ತದೆ. ಇಂತಹ ದುರುದ್ದೇಶಪೂರಿತ ಚಟುವಟಿಕೆಗಳ ಹಿಂದಿನ ಕಲ್ಪನೆಯು ಜಾಹೀರಾತುಗಳನ್ನು ಒದಗಿಸುವುದು ಮತ್ತು ಅವುಗಳ ಮೂಲಕ ಆದಾಯವನ್ನು ಗಳಿಸುವುದಾಗಿದೆ. ಡೆವಲಪರ್‌ಗಳು ತಮ್ಮದೇ ಆದ ಚೌಕಟ್ಟಿನ ಮೂಲಕ ಈ ಜಾಹೀರಾತುಗಳನ್ನು ಚಲಾಯಿಸುತ್ತಿದ್ದಾರೆ. ಇದು ಆಂಡ್ರಾಯ್ಡ್‌ನಿಂದ ಜಾರಿಗೊಳಿಸಲಾದ ರಕ್ಷಣೆಗಳನ್ನು ಬೈಪಾಸ್ ಮಾಡುತ್ತದೆ ಎಂದು ಹೇಳಿದೆ.

    ಇದನ್ನೂ ಓದಿ: Blinkit: ಬರೀ 10 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಪ್ರಿಂಟ್​ಔಟ್​​ ಡೆಲಿವರಿ ಮಾಡುತ್ತದೆ ಬ್ಲಿಂಕಿಟ್! ಇದು ಝೊಮ್ಯಾಟೋ ಮಾಲೀಕತ್ವದ ಕಂಪನಿ

    ಸೈಬರ್‌ ಸೆಕ್ಯುರಿಟಿ ಸಂಸ್ಥೆಯು ಕಂಡುಹಿಡಿದ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.

    Walls light - Wallpapers Pack
    Big Emoji - Keyboard
    Grad Wallpapers - 3D Backdrops
    Engine Wallpapers - Live & 3D
    Stock Wallpapers - 4K & HD
    EffectMania - Photo Editor
    Art Filter - Deep Photoeffect
    Fast Emoji Keyboard
    Create Sticker for Whatsapp
    Math Solver - Camera Helper
    Photopix Effects - Art Filter
    Led Theme - Colorful Keyboard
    Keyboard - Fun Emoji, Sticker
    Smart Wifi
    My GPS Location
    Image Warp Camera
    Art Girls Wallpaper HD
    Cat Simulator
    Smart QR Creator
    Colorize Old Photo
    GPS Location Finder
    Girls Art Wallpaper
    Smart QR Scanner
    GPS Location Maps
    Volume Control
    Secret Horoscope
    Smart GPS Location
    Animated Sticker Master
    Personality Charging Show
    Sleep Sounds
    QR Creator
    Media Volume Slider
    Secret Astrology
    Colorize Photos
    Phi 4K Wallpaper - Anime HD

    ಈಗ ಸ್ಮಾರ್ಟ್​ಫೋನಿನಲ್ಲಿ ಮೇಲಿನ ಪಟ್ಟಿಯಲ್ಲಿರುವ ಯಾವುದಾದರು ಅಪ್ಲಿಕೇಶನ್‌ ಇದೆಯಾ ಎಂದು ಪರಿಶೀಲಿಸಿ. ಯಾವುದಾದರು ಆ್ಯಪ್​ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದರೆ ಅವುಗಳನ್ನು ತಕ್ಷಣವೇ ಅಳಿಸಿ. ಈ ಅಪ್ಲಿಕೇಶನ್‌ಗಳು ತಮ್ಮ ಹೆಸರುಗಳು ಮತ್ತು ಐಕಾನ್‌ಗಳನ್ನು ಬದಲಾಯಿಸಿರುವ ಸಾಧ್ಯತೆಗಳಿದೆ.

    ಇದನ್ನೂ ಓದಿ: Flipkart TV Days Sale Offer​! ಭರ್ಜರಿ ರಿಯಾಯಿತಿ ಬೆಲೆಗೆ Mi ಸ್ಮಾರ್ಟ್​ಟಿವಿ ಖರೀದಿಸಿ

    ನಕಲಿ ಆ್ಯಪ್​ಗಳಿಂದ ಹೀಗೆ ತಪ್ಪಿಸಿಕೊಳ್ಳಿ

    -ಮೊದಲು ಡೆವಲಪರ್ ಹೆಸರನ್ನು ಪರಿಶೀಲಿಸಿ. ಬಳಿಕ ಮೂಲ ಡೆವಲಪರ್ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.

    -ಸ್ಮಾರ್ಟ್​ಫೋನಿಗೆ ಯಾವುದೇ ಅಪ್ಲಿಕೇಶನ್ ಅನ್ನು ಡೌನ್​ಲೋಡ್​​ ಮಡುವ ಮೊದಲು ವಿಮರ್ಶೆಗಳನ್ನು ಪರಿಶೀಲಿಸಿ.

    -ಆ್ಯಂಡ್ರಾಯ್ಡ್​ ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್ ಮೊರೆ ಹೋಗಿ ಸರಿಯಾದ ಅಪ್ಲಿಕೇಶನ್‌ಗಳನ್ನು ಮಾತ್ರ ಡೌನ್​ಲೋಡ್​ ಮಾಡಿ. ಲಿಂಕ್​ ಅಥವಾ ಥರ್ಡ್​ ಪಾರ್ಟಿ ಆ್ಯಪ್​ ಡೌನ್​ಲೋಡ್​ ಮಾಡಬೇಡಿ.

    -ನಿಮ್ಮ ಮೊಬೈಲ್ ಫೋನ್‌ನಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಮೊದಲು ಮೊದಲು ರೇಟಿಂಗ್ ಅನ್ನು ಪರಿಶೀಲಿಸಿ.
    Published by:Harshith AS
    First published: