ಸ್ಮಾರ್ಟ್​ಫೋನ್​ನಲ್ಲಿ ಮಾಲ್​ವೇರ್​ ಹಾವಳಿ; ನಿಮ್ಮ ಫೋನ್​ನಲ್ಲಿ ಈ ಆ್ಯಪ್​​ಗಳಿವೆಯೇ ಪರೀಕ್ಷಿಸಿ​

ಈ ಆ್ಯಪ್​ಗಳು ರಹಸ್ಯವಾಗಿ ಜಾಹೀರಾತು ವೆಬ್​ಸೈಟ್​​ಗಳೊಂದಿಗೆ ಸಂವಹನ ಆರಂಭಿಸಲು ಪ್ರಚೋದನೆ ನೀಡುತ್ತದೆ.

news18-kannada
Updated:September 9, 2019, 4:01 PM IST
ಸ್ಮಾರ್ಟ್​ಫೋನ್​ನಲ್ಲಿ ಮಾಲ್​ವೇರ್​ ಹಾವಳಿ; ನಿಮ್ಮ ಫೋನ್​ನಲ್ಲಿ ಈ ಆ್ಯಪ್​​ಗಳಿವೆಯೇ ಪರೀಕ್ಷಿಸಿ​
ಸಾಂದರ್ಭಿಕ ಚಿತ್ರ
  • Share this:
ಆನ್​ಲೈನ್​ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಂಚಕರ ಹಾವಳಿಗಳು ಹೆಚ್ಚಾಗುತ್ತಿದೆ. ಸ್ಮಾರ್ಟ್​​ಫೋನ್​ ಆ್ಯಪ್​ಗಳಲ್ಲಿ ಮಾಲ್​ವೇರ್​ ಅನ್ನು ಬಿಡುವ ಮೂಲಕ ಬಳಕೆದಾರರನ ಮಾಹಿತಿಯನ್ನು ಎಗೆರಿಸುತ್ತಿವೆ. ಈ ಕುರಿತಂತೆ ಸೈಬರ್​ ಸುರಕ್ಷತಾ ಕಂಪೆನಿ ಮುನ್ನೆಚ್ಚರಿಕೆಯನ್ನು ವಹಿಸಿ ಆನೇಕ ಹ್ಯಾಕರ್​ ಮತ್ತು ಮಾಲ್​ವೇರ್​ ಜಾಲವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ. ಇದೀಗ, ಆ್ಯಂಡ್ರಾಯ್ಡ್​ ಆ್ಯಪ್​ನಲ್ಲಿ ಹೊಸದಾದ ಮಾಲ್​ವೇರ್​ವೊಂದು ಪತ್ತೆಯಾಗಿದ್ದು, ಸುಮಾರು​ 24 ಆ್ಯಂಡ್ರಾಯ್ಡ್​ ಆ್ಯಪ್​ನಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿಸಿದೆ.

ಗೂಗಲ್​ ಪ್ಲೇಸ್ಟೋರ್​ನಲ್ಲಿರುವ 24 ಆ್ಯಪ್​ನಲ್ಲಿ ಒಂದೇ ತರಹದ ಮಾಲ್​ವೇರ್​ ಪತ್ತೆಯಾಗಿದೆ. ಈ ಕುರಿತಂತೆ ಸೈಬರ್​ ಸುರಕ್ಷತಾ ಸಂಸ್ಥೆ ಸ್ಮಾರ್ಟ್​ಫೋನ್​ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದು, ಅವುಗಳ ಬಳಕೆ ಮಾಡದಂತೆ ಹೇಳಿದೆ.

ಗೂಗಲ್​ ಪ್ಲೇ ಸೋರ್​ನಲ್ಲಿ ನಕಲಿ ಆ್ಯಪ್​ಗಳು ಕಂಡು ಬರುತ್ತಲೇ ಇರುತ್ತದೆ. ಇವುಗಳು ಬಳಕೆದಾರನಿಗೆ ತಿಳಿಯದೆ ಖಾಸಗಿ ಮಾಹಿತಿಯನ್ನು ಎಗರಿಸುತ್ತಿರುತ್ತದೆ. ಆದರೆ, ಇದೀಗ ಪತ್ತೆಯಾಗಿರುವ ಮಾಲ್​ವೇರ್​ ‘ಜೋಕರ್‘​ ಹೆಸರಿನಲ್ಲಿದ್ದು, ಪ್ಲೇ ಸ್ಟೋರ್​ನಲ್ಲಿರುವ ಹೊರ ಟ್ರೋಜನ್​ ವೈರಸ್​ಗಳಾಗಿ ಕಂಡುಬಂದಿದೆ.

ಈ ಆ್ಯಪ್​ಗಳು ರಹಸ್ಯವಾಗಿ ಜಾಹೀರಾತು ವೆಬ್​ಸೈಟ್​​ಗಳೊಂದಿಗೆ ಸಂವಹನ ಆರಂಭಿಸಲು ಪ್ರಚೋದನೆ ನೀಡುತ್ತದೆ. ಭಾದೆಗೀಡಾದ ಸ್ಮಾರ್ಟ್​​ಫೋನ್​ನಲ್ಲಿರುವ ಸಂದೇಶವನ್ನು ಕದಿಯುತ್ತದೆ. ಜೊತೆಗೆ ಕ್ವಾಂಟ್ಯಾಕ್ಟ್​​​ ನಂಬರ್​ ಸೇರಿದಂತೆ ಖಾಸಗಿ ಮಾಹಿತಿಯನ್ನು ಎಗರಿಸುತ್ತಿದೆ ಎಂದು ಹೇಳಿದೆ.

ಇನ್ನೂ ಮಾಲ್​ವೇರ್​ ಹೊಂದಿದ 24 ಆ್ಯಪ್​ಗಳ ಹೆಸರನ್ನು ಬಿಡುಗಡೆಗೊಳಿಸಿದೆ. ಸ್ಮಾರ್ಟ್​ಫೋನ್​ನಲ್ಲಿ ಈ ಆ್ಯಪ್​ಗಳು ಇದ್ದರೆ, ಅವುಗಳನ್ನು ಅನ್​ಇನ್​​ಸ್ಟಾಲ್​ ಮಾಡಿ ಎಂದು ಎಚ್ಚರಿಕೆ  ಮಾಹಿತಿಯನ್ನು ನೀಡಿದೆ.

 24 ಆ್ಯಪ್​​ಗಳ ಹೆಸರು:

1. Beach Camera 4.22. Mini Camera 1.0.2
3. Certain Wallpaper 1.02
4. Reward Clean 1.1.6
5. Age Face 1.1.2
6. Altar Message 1.5
7. Soby Camera 1.0.1
8. Declare Message 10.02
9. Display Camera 1.02
10. Rapid Face Scanner 10.02
11. Leaf Face Scanner 1.0.3
12. Board Picture editing 1.1.2
13. Cute Camera 1.04
14. Dazzele Wallpaper 1.0.1
15. Spark Wallpaper 1.1.11
16. Climate SMS 3.5
17. Great VPN 2.0
18. Humour Camera 1.1.5
19. Print Plant Scan 1.03
20. Advocate Wallpaper 1.1.9
21. Ruddy SMS Mod
22. Ignite Clean 7.3
23. Antivirus Security - Security Scan, App Lock 1.1.2
24. Collate Face Scanner 1.1.2
First published: September 9, 2019, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading