• Home
 • »
 • News
 • »
 • tech
 • »
 • Google Apps: ಈ ಆ್ಯಪ್‌ಗಳು ನಿಮ್ಮ ಮೊಬೈಲ್‌ನಲ್ಲಿದ್ರೆ ಡೇಂಜರ್, ಹಂಗೇ ಬಿಟ್ರೆ ಬ್ಯಾಟರಿ ಆಗುತ್ತೆ ಬ್ಲಾಸ್ಟ್‌!

Google Apps: ಈ ಆ್ಯಪ್‌ಗಳು ನಿಮ್ಮ ಮೊಬೈಲ್‌ನಲ್ಲಿದ್ರೆ ಡೇಂಜರ್, ಹಂಗೇ ಬಿಟ್ರೆ ಬ್ಯಾಟರಿ ಆಗುತ್ತೆ ಬ್ಲಾಸ್ಟ್‌!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವುದೇ ಅಪ್ಲಿಕೇಶನ್‌ ಅನ್ನು ಬಳಸುವಾಗ, ಡೌನ್‌ಲೋಡ್‌ ಮಾಡುವಾಗ ಎಚ್ಚರವಹಿಸಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ರೀತಿಯ ಆ್ಯಪ್‌ಗಳಿದ್ದರೆ ಹಾಕ್‌ ಅಗುವುದು ನಿಜ.

 • Share this:

  ಗೂಗಲ್‌ (Google) ಇದೀಗ ದಿನದಿಂದ ದಿನಕ್ಕೆ ತನ್ನ ಕಾರ್ಯವೈಖರಿಯನ್ನು ಬದಲಾಯಿಸುತ್ತಿದೆ. ಏಕೆಂದರೆ ಸ್ಮಾರ್ಟ್‌ಫೋನ್‌ನ (Smartphone) ಮೇಲೆ ಆಗುತ್ತಿರುವ ವಂಚನೆಯಿಂದ ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿ ಗೂಗಲ್‌ ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ದಿನದಿಂದ ದಿನಕ್ಕೆ ಅಪ್ಡೇಟ್‌ (Update) ಮಾಡುತ್ತದೆ. ಹಾಗೆ ಗೂಗಲ್‌ ಪ್ಲೇ ಸ್ಟೋರಿಂದ ಕೆಲವು ಅಪ್ಲಿಕೇಶನ್‌ ಅನ್ನು ತೆಗೆದುಹಾಕಲು ನಿರ್ಧರಿಸಿದೆ. ಏಕೆಂದರೆ ಈ ಅಪ್ಲಿಕೇಶನ್‌ಗಳು (Applications) ತಮ್ಮ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ (Battery), ಇನ್ನಿತರ ಡಾಟಾವನ್ನು (Data) ವಂಚಿಸುತ್ತಿದೆ.


  ಮ್ಯಾಕ್‌ಅಫೀ ಅವರು ವರದಿ ನೀಡಿರುವ ಪ್ರಕಾರ ಹೊಸ ಕ್ಲಿಕರ್‌ ಆ್ಯಡ್‌ವೇರ್‌ ( Clicker Adware) ಅನೇಕ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಮೂಲಕ ಪ್ಲೇಸ್ಟೋರ್‌ಗೆ ಆಗಮಿಸಿದೆ. ಈ ಕ್ಲಿಕರ್‌ ಆ್ಯಡ್‌ವೇರ್‌ ಗಳು ನಿಮ್ಮ ಸ್ಮಾರ್ಟ್‌ಫೋನ್‌ನ ಡಾಟಾವನ್ನು ಹ್ಯಾಕರ್ಸ್‌ಗಳಿಗೆ ಸುಲಭವಾಗಿ ಕದಿಯಲು ಸಹಾಯಕವಾಗುವ ಸೈಟ್‌ ಅಗಿದೆ.


  ಇದಲ್ಲದೆ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನ ಬ್ಯಾಟರಿಯನ್ನು ಖಾಲಿಮಾಡುತ್ತದೆ. ಇದಕ್ಕಾಗಿ ಗೂಗಲ್‌ ಪ್ಲೇಸ್ಟೋರ್‌ನಿಂದ ಈ ಆ್ಯಪ್‌ಗಳನ್ನು ತೆಗೆದುಹಾಕಿದೆ.


  ಎಷ್ಟು ಆ್ಯಪ್‌ಗಳು ನಿಮ್ಮ ಬ್ಯಾಟರಿಯನ್ನು ಖಾಲಿಮಾಡುತ್ತದೆ


  ಆಂಡ್ರಾಯ್ಡ್‌ನ 16 ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿ ಬ್ಯಾಟರಿ ಹಾಳಾಗಲು ಕಾರಣವಾಗಿದೆ. ಅದಕ್ಕಾಗಿಯೇ ಈ ಆ್ಯಪ್‌ಗಳನ್ನು ಗೂಗಲ್‌ ಪ್ಲೇಸ್ಟೋರ್‌ನಿಂದ ತೆಗೆದು ಹಾಕಲು ನಿರ್ಧರಿಸಿದೆ.


  ಇದನ್ನೂ ಓದಿ: ನಿಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ ವಿಡಿಯೋ ಸಿನಿಮಾದಷ್ಟು ಸಖತ್ ಆಗಿರ್ಬೇಕಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್


  ಈ ಆ್ಯಪ್‌ಗಳು ಡಾಟಾವನ್ನು ಕೂಡ ಹ್ಯಾಕ್‌ ಮಾಡುತ್ತದೆ


  ಇದು ಟಾರ್ಚ್‌, QR ರೀಡರ್‌ಗಳು, ಎಡಿಟಿಂಗ್‌ ಆ್ಯಪ್‌ಗಳು ಈ ಎಲ್ಲದರ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಆದರೆ ಇದು ನಿಮ್ಮ ಡಾಟಾವನ್ನು ಕದಿಯುವಂತ ಆ್ಯಪ್‌ಗಳಾಗಿವೆ.


  Danger if these apps are on your mobile If left like that the battery will explode
  ಸಾಂದರ್ಭಿಕ ಚಿತ್ರ


  ಯಾವ ಆ್ಯಪ್‌ಗಳನ್ನು ಗೂಗಲ್‌ ರಿಮೂವ್‌ ಮಾಡಿದೆ


  •  ಬುಸನ್ ಬಸ್

  • ಜಾಯ್ಕೋಡ್

  • ಕರೆನ್ಸಿ ಪರಿವರ್ತಕ

  • ಹೈ-ಸ್ಪೀಡ್ ಕ್ಯಾಮೆರಾ

  • ಸ್ಮಾರ್ಟ್ ಟಾಸ್ಕ್ ಮ್ಯಾನೇಜರ್

  • ಫ್ಲ್ಯಾಶ್‌ಲೈಟ್+

  • ಕ್ವಿಕ್‌ ನೋಟ್‌

  • ಇನ್ಸ್ಟಾಗ್ರಾಮ್‌ ಸ್ಟೋರಿ ಡೌನ್‌ಲೋಡರ್

  • EZ ನೋಟ್ಸ್

  •  ಕೆ - ಡಿಕ್ಷನರಿ


  ಇದನ್ನೂ ಓದಿ: ಹುಷಾರ್, ನಿಮ್ಮ ಡಿಜಿಟಲ್‌ ಅಕೌಂಟ್‌ ಹ್ಯಾಕ್‌ ಆಗುತ್ತೆ! ಸೈಬರ್‌ ಚೋರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ


  ಈ ಮೇಲಿನ ಅಪ್ಲಿಕೇಶನ್‌ಗಳನ್ನು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ರಿಮೂವ್‌ ಮಾಡಿದ್ದಾರೆ.. ಇದಕ್ಕಾಗಿ ಇನ್ನುಮುಂದೆ ನಿಮ್ಮ ಮೊಬೈಲ್‌ನಲ್ಲಿಇಂತಹ ಅಪ್ಲಿಕೇಶನ್‌ಗಳು ಇರುವುದಿಲ್ಲ. ನಿಮ್ಮ ಆಂಡ್ರಾಯ್ಡ್‌ನ ಡಾಟಾಗಳನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದೆ.


  ಈ ರೀತಿ ಮಾಡಿ ನಿಮ್ಮ ಅಕೌಂಟ್‌ ಸೇಫ್‌ ಮಾಡಬಹುದು


  ಮಾಲ್‌ವೇರ್‌ಗಳ ಹೊರತಾಗಿ, ನಿರಂತರವಾಗಿ ಜಾಹೀರಾದುತುಗಳನ್ನು ತೋರಿಸುವುದರ ಮೂಲಕ ಹಣವನ್ನು ಗಳಿಸುವ ಅನೇಕ ಅಪ್ಲಿಕೇಶನ್‌ಗಳಿವೆ. ಹಾಗಾಗಿ Android ಫೋನ್‌ ಬಳಸುವವರು ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದ್ದು, ಸುರಕ್ಷಿತವಾಗಿರಲು ಮೊದಲ ಅದ್ಯತೆ ನೀಡಬೇಕಿದೆ.


  Danger if these apps are on your mobile If left like that the battery will explode
  ಸಾಂದರ್ಭಿಕ ಚಿತ್ರ


  ಫೋನ್‌ನೊಂದಿಗೆ ಬರುವ ಬ್ಲೋಟ್‌ವೇರ್‌ಗಳು ಕೆಲವೊಮ್ಮೆ ಸ್ಥಳಾವಕಾಶ ಮತ್ತು ಸ್ಥಿರತೆಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಸಾಧ್ಯವಾದಷ್ಟು ಈ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ. ಕೆಲವು ಅಪ್ಲಿಕೇಶನ್‌ಗಳು ನಿಮ್ಮ ಡೇಟಾವನ್ನು ಸಂಗ್ರಹಿಸಬಹುದು ಮತ್ತು ನಿಮ್ಮ ಫೋನ್‌ನಲ್ಲಿ ಜಾಹೀರಾತುಗಳನ್ನು ತೋರಿಸಬಹುದು.


  ಇದನ್ನೂ ಓದಿ: ರಿಲಯನ್ಸ್ ಜಿಯೋದಿಂದ ರಾಜಸ್ಥಾನದಲ್ಲಿ 5G ಸೇವೆಗಳ ಪ್ರಾರಂಭ


  ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು ನಿರಂತರವಾಗಿ ಪರಿಶೀಲಿಸುತ್ತಿರಿ. ಅನೇಕ ಮಾಲ್ವೇರ್ ಅಥವಾ ಸ್ಪೈವೇರ್ ಐಕಾನ್ ಇಲ್ಲದೆ ಅಸ್ತಿತ್ವದಲ್ಲಿದೆ. ಈ ಆ್ಯಪ್ ಗಳನ್ನು ತಕ್ಷಣ ಡಿಲೀಟ್ ಮಾಡಿ. ನಿಮ್ಮ Google ಖಾತೆಯ ಪಾಸ್‌ವರ್ಡ್ ಅನ್ನು ನಿರಂತರವಾಗಿ ನವೀಕರಿಸಲಾಗುತ್ತಿದೆ. ಇದರೊಂದಿಗೆ, ಗೌಪ್ಯತೆ ಉಲ್ಲಂಘನೆಯ ನಂತರವೂ ನಿಮ್ಮ ಖಾತೆಯು ಸುರಕ್ಷಿತವಾಗಿರುತ್ತದೆ.


  ಆದ್ದರಿಂದ ಯಾವುದೇ ಅಪ್ಲಿಕೇಶನ್‌ ಅನ್ನು ಬಳಸುವಾಗ, ಡೌನ್‌ಲೋಡ್‌ ಮಾಡುವಾಗ ಎಚ್ಚರವಹಿಸಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ರೀತಿಯ ಆ್ಯಪ್‌ಗಳಿದ್ದರೆ ಹಾಕ್‌ ಅಗುವುದು ನಿಜ.

  Published by:Harshith AS
  First published: