ಟ್ರೂಕಾಲರ್ ಬಳಕೆದಾರರೇ ಎಚ್ಚರ: ನಿಮ್ಮ ಆ್ಯಪ್ ಮೇಲೂ ಬಿದ್ದಿದೆ ಸೈಬರ್ ಕಳ್ಳರ ಕಣ್ಣು..!

ಈ ಹಿಂದೆ ಕೂಡ cyble ಆನ್​ಲೈನ್ ಡೇಟಾ ಸೋರಿಕೆ ಬಗ್ಗೆ ವರದಿ ಮಾಡಿತ್ತು. ಸೈಬರ್ ಕಳ್ಳರು ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ಆನ್​ಲೈನ್ ಕಳ್ಳತನ, ಹಗರಣಗಳು ಸೇರಿದಂತೆ ವಿವಿಧ ರೀತಿಯ ಅಪರಾಧಗಳನ್ನು ಮಾಡುತ್ತಿದ್ದಾರೆ ಎಂದು ಎಚ್ಚರಿಸಿತ್ತು.

news18-kannada
Updated:May 27, 2020, 2:58 PM IST
ಟ್ರೂಕಾಲರ್ ಬಳಕೆದಾರರೇ ಎಚ್ಚರ: ನಿಮ್ಮ ಆ್ಯಪ್ ಮೇಲೂ ಬಿದ್ದಿದೆ ಸೈಬರ್ ಕಳ್ಳರ ಕಣ್ಣು..!
truecaller
  • Share this:
ಜನಪ್ರಿಯ ಕಾಲರ್ ಐಡಿ ಅಪ್ಲಿಕೇಶನ್‌ ಟ್ರೂಕಾಲರ್ (Truecaller) ಡೇಟಾ ಸೋರಿಕೆಯಾಗಿದೆ ಎಂದು ಆನ್​ಲೈನ್ ಗುಪ್ತಚರ ಸಂಸ್ಥೆ ಸೈಬಲ್ ವರದಿ ಮಾಡಿದೆ. ಸೈಬಲ್ ವರದಿ ಪ್ರಕಾರ 4.75 ಕೋಟಿ ಭಾರತೀಯ ಬಳಕೆದಾರರ Truecaller ವೈಯುಕ್ತಿಕ ಮಾಹಿತಿಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಇದಕ್ಕೆ 1000 ಡಾಲರ್ ದರ ನಿಗದಿಪಡಿಸಲಾಗಿದೆ. ಅಂದರೆ ಹ್ಯಾಕರುಗಳು ಕೇವಲ 75,000 ರೂ.ನಲ್ಲಿ 4.75 ಕೋಟಿ ಭಾರತೀಯ ಟ್ರೂಕಾಲರ್ ಬಳಕೆದಾರರ ಡೇಟಾವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ನಮ್ಮ ಸಂಶೋಧಕರು 4.75 ಕೋಟಿ ಭಾರತೀಯರ Truecaller ಡೇಟಾವನ್ನು ಹ್ಯಾಕರುಗಳು ಮಾರಾಟ ಮಾಡಲು ಮುಂದಾಗಿರುವುದನ್ನು ನಮ್ಮ ರಿಸರ್ಚ್ ತಂಡ ಪತ್ತೆ ಹಚ್ಚಿದ್ದಾರೆ ಎಂದು ಸೈಬಲ್ ತನ್ನ ಬ್ಲಾಗ್ ಪೋಸ್ಟ್​ನಲ್ಲಿ ಬರೆದುಕೊಂಡಿದೆ. ಈ ಡೇಟಾವನ್ನು 2019 ರಲ್ಲಿ ಸಂಗ್ರಹಿಸಲಾಗಿದ್ದು, ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಸೈಬರ್ ಕಳ್ಳರು ಅಗ್ಗವಾಗಿ ಮಾರಾಟ ಮಾಡುತ್ತಿರುವುದು ನಮಗೆ ಅಚ್ಚರಿ ಉಂಟು ಮಾಡಿದೆ ಎಂದು ವರದಿಯಲ್ಲಿ ತಿಳಿಸಿದೆ.

ಭಾರತೀಯ ಬಳಕೆದಾರರ ಈ Truecaller ಡೇಟಾದಲ್ಲಿ ಬಳಕೆದಾರರ ಫೋನ್ ನಂಬರ್​ಗಳು, ಲಿಂಗ, ನಗರ, ಮೊಬೈಲ್ ನೆಟ್‌ವರ್ಕ್, ಫೇಸ್‌ಬುಕ್ ಐಡಿ ಸೇರಿದಂತೆ ಹಲವು ಮಾಹಿತಿಯನ್ನು ಒಳಗೊಂಡಿವೆ. ಈ ಡೇಟಾ ಸೋರಿಕೆಯಿಂದಾಗಿ ಭಾರತೀಯ ಬಳಕೆದಾರರು ಸ್ಪ್ಯಾಮ್, ಸ್ಕ್ಯಾಮ್ ಅಥವಾ ಯಾವುದೇ ರೀತಿಯ ಸೈಬರ್ ಅಪರಾಧಗಳಂತಹ ಘಟನೆಗಳನ್ನು ಎದುರಿಸುತ್ತಿದ್ದಾರಾ ಎಂಬುದನ್ನು ಎಂದು ಸೈಬಲ್ ಸಂಶೋಧಕರು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದ ಕೂಡಲೇ ನಮ್ಮ ಬ್ಲಾಗ್​ನಲ್ಲಿ ಅಪ್​ಡೇಟ್ ಮಾಡಲಾಗುವುದು ಎಂದು cyble ತಿಳಿಸಿದೆ.

ಈ ಸೈಬಲ್ ವರದಿ ಬೆನ್ನಲ್ಲೇ ಈ ಸುದ್ದಿಯನ್ನು ಟ್ರೂಕಾಲರ್ ವಕ್ತಾರರು ತಳ್ಳಿ ಹಾಕಿದ್ದು, ಯಾವುದೇ ರೀತಿಯ ಡೇಟಾ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಎಲ್ಲಾ ಬಳಕೆದಾರರ ಮಾಹಿತಿಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನಾವು ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಸೇವೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಹಾಗೆಯೇ ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆಯ ಮೇಲೆ ನಿರಂತರವಾಗಿ ನಿಗಾ ಇಡುತ್ತೇವೆ ಎಂದು ಟ್ರೂಕಾಲರ್ ವಕ್ತಾರರು ತಿಳಿಸಿದ್ದಾರೆ.

ಈ ಹಿಂದೆ ಕೂಡ cyble ಆನ್​ಲೈನ್ ಡೇಟಾ ಸೋರಿಕೆ ಬಗ್ಗೆ ವರದಿ ಮಾಡಿತ್ತು. ಸೈಬರ್ ಕಳ್ಳರು ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ಆನ್​ಲೈನ್ ಕಳ್ಳತನ, ಹಗರಣಗಳು ಸೇರಿದಂತೆ ವಿವಿಧ ರೀತಿಯ ಅಪರಾಧಗಳನ್ನು ಮಾಡುತ್ತಿದ್ದಾರೆ ಎಂದು ಎಚ್ಚರಿಸಿತ್ತು. ಇದಕ್ಕಾಗಿ ಹ್ಯಾಕರುಗಳು ಜಾಬ್​ ಸೈಟ್​ವೊಂದರಿಂದ 2.9 ಕೋಟಿ ಭಾರತೀಯ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕಲೆಹಾಕಿದೆ ಎಂದು ತಿಳಿಸಿತ್ತು. ಇದೀಗ Truecaller ಬಳಕೆದಾರರ ಮಾಹಿತಿ ಕೂಡ ಸೋರಿಕೆಯಾಗಿದ್ದು, ಎಚ್ಚರವಹಿಸುವಂತೆ ಸೂಚಿಸಿದೆ.
First published: May 27, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading