ಇತ್ತೀಚೆಗೆ ಪಬ್ಜಿ ಗೇಮ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ದಕ್ಷಿಣ ಕೊರಿಯಾದ ಈ ಗೇಮ್ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿತ್ತಲ್ಲದೆ, ಅಧಿಕ ಬಳಕೆದಾರರನ್ನು ಹೊಂದಿತ್ತು. ಆದರೆ ಪಬ್ಜಿ ಗೇಮಿಂಗ್ ಸಂಸ್ಥೆ ಚೀನಾದೊಂದಿಗೆ ಷೇರು ಹೊಂದಿತ್ತು ಎಂಬ ಕಾರಣಕ್ಕೆ ಬ್ಯಾನ್ ಮಾಡಲಾಯಿತು. ಭಾರತದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು. ವಯಸ್ಕರು ಕೂಡ ಪಬ್ ಗೇಮ್ ಪ್ರಿಯರಾಗಿದ್ದರು. ಅಷ್ಟೇ ಏಕೆ ಟೀಂ ಇಂಡಿಯಾದ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ಮಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್ ಕೂಡ ಬಿಡುವಿನ ವೇಳೆ ಪಬ್ಜಿ ಆಡುತ್ತಿದ್ದರು.
ಪಬ್ಜಿ ಬ್ಯಾನ್ ಆದ ನಂತರ ಭಾರತ FAU-G ಹೆಸರಿನ ಗೇಮ್ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಅದರ ಜೊತೆಗೆ ಹಲವಾರು ಕಂಪನಿಗಳು ಹೊಸ ಆ್ಯಕ್ಷನ್ ಗೇಮ್ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದೀಗ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪಬ್ಜಿ ನಿಷೇಧಗೊಂಡ ನಂತರ ಭಾರತ ಮೂಲಕ ಹೊಸ ಗೇಮ್ವೊಂದನ್ನು ಆಡುತ್ತಿದ್ದಾರೆ.
ಮಾಸ್ಕ್ಗನ್- ಶೂಟಿಂಗ್ ಗೇಮ್ ಅನ್ನು ಹಾರ್ದಿಕ್ ಪಾಂಡ್ಯ ಆಡುತ್ತಿದ್ದಾರೆ. ಅಷ್ಟು ಮಾತ್ರವಲ್ಲ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಜೊತೆಗೆ ಗೂಗಲ್ ಪ್ಲೇ ಸ್ಟೋರ್ನಿಂದ ಮಾಸ್ಕ್ಗನ್ ಗೇಮ್ ಡೌನ್ಲೋಡ್ ಮಾಡಿ ಆಟವಾಡಿ ಎಂದು ಬರೆದಿದ್ದಾರೆ.
ಮಾಸ್ಕ್ಗನ್: ಮಲ್ಟಿಪ್ಲೇಯರ್ ಫಸ್ಟ್ ಪರ್ಸನ್ ಶೂಟರ್ ಗೇಮ್ ಇದಾಗಿದೆ. ಸದ್ಯ ಈ ಗೇಮ್ ಭಾರತದಲ್ಲಿ ಜನಪ್ರಿಯತೆ ಕಾಣುತ್ತಿದ್ದು, ಗೂಗಲ್ ಪ್ಲೇ ಸ್ಟೋರ್ನಲ್ಲಿ 4.2 ರೇಟಿಂಗ್ ಪಡೆದಿದೆ. ಆ್ಯಪ್ ಸ್ಟೋರ್ನಲ್ಲಿ 4.6 ರೇಟಿಂಗ್ ಪಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ