One Wheel Electric Scooter: ಮನೆಯಲ್ಲಿಯೇ ಒಂದು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಿದ ದೇಶೀಯ ವ್ಲಾಗರ್

Vlogger builds one wheel electric scooter: ಪ್ರಪಂಚದಾದ್ಯಂತ ಕೆಲವು ಕ್ರಿಯೇಟರ್‌ಗಳು ಮೋಟರಿಂಗ್ ಅನುಭವವನ್ನು ಮರುಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮತ್ತು ಕೇವಲ ಒಂದೇ ಚಕ್ರವುಳ್ಳ ಮೋಟಾರ್ ಬೈಕ್ ಮತ್ತು ಸ್ಕೂಟರ್‌ಗಳನ್ನು ಅವರು ತಯಾರಿಸಿದ್ದಾರೆ. ವಿದೇಶದವರ ವಿಷಯ ಹಾಗಿರಲಿ, ನಮ್ಮ ದೇಶದಲ್ಲೇ ಒಬ್ಬರು ಒಂದು ಚಕ್ರದ ಎಲೆಕ್ಟ್ರಿಕ್ ಸ್ಕೂಟರನ್ನು ತಯಾರಿಸಿದ್ದಾರೆ. ಅದನ್ನು ಅವರು ಹೇಗೆ ಸಿದ್ಧಪಡಿದರು..? ಇಲ್ಲಿದೆ ಮಾಹಿತಿ.

ಕ್ರಿಯೆಟಿವ್ ಸೈನ್ಸ್ ವ್ಲಾಗರ್

ಕ್ರಿಯೆಟಿವ್ ಸೈನ್ಸ್ ವ್ಲಾಗರ್

  • Share this:
    One wheel electric scooter: ನಾವು ವಾಹನದ ಬಗ್ಗೆ ಆಲೋಚಿಸಿದಾಗ, ಸಾಮಾನ್ಯವಾಗಿ ನಮ್ಮ ತಲೆಗೆ ಬರುವುದು 2 ಚಕ್ರಗಳನ್ನು ಹೊಂದಿರುವ, ಮೋಟರ್ ಸೈಕಲ್ (Motorcycle), ಸ್ಕೂಟರ್ (Scooter) ಅಥವಾ 4 ಚಕ್ರಗಳನ್ನು ಹೊಂದಿರುವ ಕಾರುಗಳು (Car). ಚಕ್ರಗಳು ವಾಹನದ ಅತ್ಯಂತ ಪ್ರಮುಖ ಭಾಗಗಳು, ಏಕೆಂದರೆ ಅವು ಸಮತೋಲನ ಕಾಪಾಡುತ್ತವೆ. ಆದರೆ ಒಂದು ಚಕ್ರದ ಸ್ಕೂಟರ್ ಇದೆಯಾ? ಖಂಡಿತಾ ಇದೆ. ಈಗ ಪ್ರಪಂಚದಾದ್ಯಂತ ಕೆಲವು ಕ್ರಿಯೇಟರ್‌ಗಳು ಮೋಟರಿಂಗ್ ಅನುಭವವನ್ನು ಮರುಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮತ್ತು ಕೇವಲ ಒಂದೇ ಚಕ್ರವುಳ್ಳ ಮೋಟಾರ್ ಬೈಕ್ ಮತ್ತು ಸ್ಕೂಟರ್‌ಗಳನ್ನು ಅವರು ತಯಾರಿಸಿದ್ದಾರೆ. ವಿದೇಶದವರ ವಿಷಯ ಹಾಗಿರಲಿ, ನಮ್ಮ ದೇಶದಲ್ಲೇ ಒಬ್ಬರು ಒಂದು ಚಕ್ರದ ಎಲೆಕ್ಟ್ರಿಕ್ ಸ್ಕೂಟರನ್ನು ತಯಾರಿಸಿದ್ದಾರೆ. ಅದನ್ನು ಅವರು ಹೇಗೆ ಸಿದ್ಧಪಡಿದರು..? ಇಲ್ಲಿದೆ ಮಾಹಿತಿ.

    ಪ್ರಾರಂಭದ ತಯಾರಿ ಹೀಗಿದೆ..

    ಆ ಕುರಿತ ವಿಡಿಯೋವನ್ನು ಕ್ರಿಯೆಟಿವ್ ಸೈನ್ಸ್ (Creative Science) , ಯೂಟ್ಯೂಬ್‍ನಲ್ಲಿ (Youtube) ಲಭ್ಯವಿದೆ. ಒಂದೇ ಚಕ್ರವುಳ್ಳ ಸ್ವಯಂ ಸಮತೋಲನದ ಆ ಸ್ಕೂಟರನ್ನು ತಯಾರಿಸಿದ್ದು ಹೇಗೆಂಬುದನ್ನು ವಿಡಿಯೋದಲ್ಲಿ ನೋಡಬಹುದು : ಆತ ಮೊದಲು ಕಾರ್ಡ್ ಬೋರ್ಡಿನಲ್ಲಿ ಸ್ಕೂಟರಿನ ಪ್ರಾಥಮಿಕ ಚಿತ್ರ ಮಾಡುತ್ತಾನೆ. ಆ ಮೂಲಕ ಅವನು ತಾನು ತಯಾರಿಸಲು ಬಯಸುತ್ತಿರುವ ಸ್ಕೂಟರ್‌ನ ಅಚ್ಚನ್ನು ಪಡೆಯುತ್ತಾನೆ. ತನ್ನ ಯೋಜನೆಯಲ್ಲಿ ಏನೇ ತಪ್ಪಾದರೂ, ಅದನ್ನು ಕಾರ್ಡ್‍ಬೋರ್ಡ್‍ನಲ್ಲಿ ತಿದ್ದುಪಡಿ ಮಾಡಬಹುದು, ಆದರೆ ಲೋಹದ ಹಾಳೆಗಳಲ್ಲಿ ಬದಲಾವಣೆ ಮಾಡುವುದು ಹೆಚ್ಚು ಕಷ್ಟಕರ. ಒಮ್ಮೆ ವಿನ್ಯಾಸ ಪೂರ್ಣಗೊಂಡ ಬಳಿಕ, ಅದನ್ನು ಲೋಹದ ಹಾಳೆಯಲ್ಲಿ ನಕಲು ಮಾಡುತ್ತಾನೆ. ಬಳಿಕ ಆ ಹಾಳೆಗಳನ್ನು ಕತ್ತರಿಸಿ, ಅದರ ಭಾಗಗಳನ್ನು ಒಟ್ಟಿಗೆ ಸೇರಿಸಿ, ಚಕ್ರಕ್ಕೆ ಕಮಾನು ಮಾಡಲು ಬೆಸುಗೆ ಹಾಕುತ್ತಾನೆ. ಈ ಸ್ಕೂಟರ್‌ನಲ್ಲಿ ವಿಶಾಲವಾದ ಚಕ್ರ ಬಳಸಲಾಗಿದ್ದು, ಅದರಲ್ಲಿ ಹಬ್ ಮೊಟಾರ್ ಇದೆ. ವಿಶಾಲಗಳು ಸಮತೋಲನ ಮಾಡಲು ಸುಲಭ ಎನ್ನುತ್ತಾರೆ ವ್ಲಾಗರ್.



    ಸೀಟನ್ನು ಕೂಡ ಲೋಹದ ಹಾಳೆಗಳಿಂದ ತಯಾರಿಸಲಾಗಿದ್ದು, ಸೀಟಿನ ಕೆಳಗೆ , ಸ್ಕೂಟರ್‌ಗೆ ಚಾಲನೆ ನೀಡುವ ಬ್ಯಾಟರಿ ಪ್ಯಾಕ್ ಇಡಲು ಜಾಗ ರೂಪಿಸಲಾಗಿದೆ. ಫೇರಿಂಗನ್ನು ಕೂಡ ಲೋಹದಿಂದಲೇ ಮಾಡಲಾಗಿದ್ದು, ಅದು ಹಳೆಯ ಸ್ಕೂಟರ್‌ಗಳನ್ನು ಹೋಲುವ ವಿನ್ಯಾಸ ಹೊಂದಿದೆ. ಹ್ಯಾಂಡಲ್‍ಬಾರ್ ಮತ್ತು ಹೆಡ್‍ಲ್ಯಾಂಪ್ ಘಟಕವನ್ನು ಸ್ಕೂಟರ್‌ನಿಂದಲೇ ತೆಗೆದುಕೊಳ್ಳಲಾಗಿದೆ. ಚಕ್ರ ಸರಿಪಡಿಸಲು ಲೋಹದಿಂದ ಬ್ರಾಕೆಟನ್ನು ತಯಾರಿಸಲಾಯಿತು ಮತ್ತು ಲೋಹದ ಪೈಪ್‍ನಿಂದ ಹ್ಯಾಂಡಲ್ ಬಾರನ್ನು ಹಿಡಿದಿಟ್ಟುಕೊಳ್ಳುವ ರಾಡ್ ಮಾಡಲಾಯಿತು.





    Read Also: Airbags in Bikes: ಬೈಕ್ ಗಳಲ್ಲೂ ಇನ್ಮೇಲೆ ಏರ್​​​ಬ್ಯಾಗ್, ಎಲ್ಲರ ಜೀವ ಅಮೂಲ್ಯ!

    ಸ್ವಯಂ ಬ್ಯಾಲೆನ್ಸರ್ ಸಂವೇದಕ ಅಳವಡಿಕೆ

    ಎಲ್ಲಾ ಕೆಲಸಗಳು ಮುಗಿದ ಬಳಿಕ, ಸ್ವಯಂ ಬ್ಯಾಲೆನ್ಸರ್ ಸಂವೇದಕವನ್ನು ಸ್ಕೂಟರ್‌ಗೆ ಸೇರಿಸಲಾಯಿತು. ವಾಸ್ತವದಲ್ಲಿ, ಈ ಸ್ಕೂಟರ್‌ನ ಸೃಷ್ಟಿಯಲ್ಲಿ ಬ್ಯಾಲೆನ್ಸರ್ ಅತ್ಯಂತ ಪ್ರಮುಖ ಭಾಗವಾಗಿದೆ. ಹೆಸರಿಗೆ ತಕ್ಕಂತೆ, ಸ್ಕೂಟರ್‌ಗೆ ಒಂದೇ ಚಕ್ರವಿದ್ದರೂ ನಿಲ್ಲಲು ಸಹಾಯ ಮಾಡುವುದು ಇದೇ ಭಾಗ. ಸೆನ್ಸಾರನ್ನು ಇನ್‍ಸ್ಟಾಲ್ ಮಾಡುವುದು ತುಂಬಾ ಅತ್ಯಗತ್ಯ, ಅದು ಆಚೆ ಈಚೆ ಚಲಿಸಬಾರದು, ಹಾಗಾದಲ್ಲಿ ಸ್ಕೂಟರಿನ ಒಟ್ಟಾರೆ ಮಾಪನಾಂಕ ನಿರ್ಣಯದ ಮೇಲೆ ಪರಿಣಾಮ ಬೀಳುತ್ತದೆ. ಚಕ್ರದ ತಂತಿಗಳನ್ನು ಸಂವೇದಕಕ್ಕೆ ಮತ್ತು ಸಂವೇದಕದ ತಂತಿಗಳ ಸೆಟ್ ಅನ್ನು ಥ್ರೋಟಲ್ ಕೇಬಲ್‍ಗೆ ಸಂಪರ್ಕ ನೀಡಲಾಗಿದೆ.



    Read Also: Maruti Suzuki Celerio: ಇಂದು ಮಾರುತಿ ಸುಜುಕಿ ಸೆಲೆರಿಯೊ ಮಾರುಕಟ್ಟೆಗೆ! ನೂತನ ಕಾರಿಗಾಗಿ ಕಾದು ಕುಳಿತ ವಾಹನ ಪ್ರಿಯರು

    ತಯಾರಾಯ್ತು ಒಂದು ಚಕ್ರದ ಎಲೆಕ್ಟ್ರಿಕ್​ ಸ್ಕೂಟರ್​

    ಅಂತಿಮವಾಗಿ ಸ್ಕೂಟರ್‌ಗೆ ಪೇಂಟ್ ಹಚ್ಚಲಾಯಿತು. ಸ್ಕೂಟರ್‌ನ ಸೃಷ್ಟಿ ಯಶಸ್ವಿ ಆಗಿದ್ದು, ಯಾವುದೇ ಸಮಸ್ಯೆ ಇಲ್ಲದೆ ರಸ್ತೆಯಲ್ಲಿ ಚಲಿಸುತ್ತಿದೆ. ಸ್ಕೂಟರ್‌ನಲ್ಲಿ ಅಳವಡಿಸಲಾದ ಸಂವೇದಕವು, ಸ್ಕೂಟರನ್ನು ಹಿಂದೆ ಅಥವಾ ಮುಂದೆ ವಾಲದಂತೆ ತಡೆಯುತ್ತದೆ. ವ್ಲಾಗರ್ ಯಾವುದೇ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸದೆ ಮನೆಯಲ್ಲಿಯೇ ಸ್ಕೂಟರ್ ತಯಾರಿಸಿರುವುದು ಈ ವಿಡಿಯೋದಲ್ಲಿ ಕಂಡು ಬರುವ ಉತ್ತಮ ಅಂಶ.
    Published by:Harshith AS
    First published: