HOME » NEWS » Tech » COVID 19 SECOND WAVE TOP UPCOMING CAR LAUNCHES DELAYED DUE TO PANDEMIC STG HG

COVID-19 ಎರಡನೇ ಅಲೆ ಎಫೆಕ್ಟ್: ಭಾರತದಲ್ಲಿ ಹಲವು ಪ್ರಮುಖ ಕಾರುಗಳ ಬಿಡುಗಡೆ ಮುಂದೂಡಿಕೆ

COVID-19: ಕೊರೊನಾ ಸೋಂಕು ಆರಂಭದಿಂದಲೂ ಆಟೋಮೊಬೈಲ್‌ ಕ್ಷೇತ್ರ ಅನೇಕ ಏಳುಬೀಳುಗಳನ್ನು ಕಂಡಿದೆ. ಈಗಲೂ ವೈರಸ್ ಉಲ್ಬಣದಿಂದಾಗಿ ಅನೇಕ ದೊಡ್ಡ ಲಾಂಛ್‌ಗಳು ಸಹ ವಿಳಂಬವಾಗಬೇಕಾಯಿತು. ಕೋವಿಡ್ - 19 ಪ್ರಕರಣದ ಉಲ್ಬಣದಿಂದಾಗಿ ಕೆಲವು ಪ್ರಮುಖ ಕಾರುಗಳ ಬಿಡುಗಡೆ ಮುಂದೂಡಲ್ಪಟ್ಟಿದ್ದು, ವಿವರ ಹೀಗಿದೆ ನೋಡಿ..

news18-kannada
Updated:May 7, 2021, 12:13 PM IST
COVID-19 ಎರಡನೇ ಅಲೆ ಎಫೆಕ್ಟ್: ಭಾರತದಲ್ಲಿ ಹಲವು ಪ್ರಮುಖ ಕಾರುಗಳ ಬಿಡುಗಡೆ ಮುಂದೂಡಿಕೆ
Hyundai Alcazar
  • Share this:
ಸಾಂಕ್ರಾಮಿಕ ರೋಗದ ಎರಡನೇ ಅಲೆ ಹಿನ್ನೆಲೆ ಭಾರತದಲ್ಲಿ ಕೋವಿಡ್ - 19 ಪ್ರಕರಣಗಳ ಹೆಚ್ಚಳವಾಗುತ್ತಲೇ ಇದೆ. ಇದರಿಂದಾಗಿ ದೇಶದ ಅನೇಕ ಭಾಗಗಳು ಭಾಗಶಃ ಅಥವಾ ಪೂರ್ಣ ಲಾಕ್‌ಡೌನ್‌ಗಳಲ್ಲಿ ಸಾಗುತ್ತಿರುವುದರಿಂದ, ವ್ಯಾಪಾರ ಪ್ರಪಂಚವು ಸಹ ತನ್ನ ಈ ವರ್ಷದ ಯೋಜನೆಗಳ ಬಗ್ಗೆ ತುಂಬಾ ಯೋಚಿಸುವಂತಾಗಿದೆ. ಕಾರು ತಯಾರಕರು ಸಹ ಕಾರ್ಯತಂತ್ರದ ಯೋಜನೆಗಳಲ್ಲಿ ಮುಳುಗಿದ್ದಾರೆ ಮತ್ತು ಮುಂಬರುವ ಹೊಸ ಕಾರುಗಳ ಬಿಡುಗಡೆಯಲ್ಲಿ ನಾವು ವಿಳಂಬವನ್ನು ಎದುರು ನೋಡಬೇಕಾಗಿದೆ. ಕೊರೊನಾ ಸೋಂಕು ಆರಂಭದಿಂದಲೂ ಆಟೋಮೊಬೈಲ್‌ ಕ್ಷೇತ್ರ ಅನೇಕ ಏಳುಬೀಳುಗಳನ್ನು ಕಂಡಿದೆ. ಈಗಲೂ ವೈರಸ್ ಉಲ್ಬಣದಿಂದಾಗಿ ಅನೇಕ ದೊಡ್ಡ ಲಾಂಛ್‌ಗಳು ಸಹ ವಿಳಂಬವಾಗಬೇಕಾಯಿತು. ಕೋವಿಡ್ - 19 ಪ್ರಕರಣದ ಉಲ್ಬಣದಿಂದಾಗಿ ಕೆಲವು ಪ್ರಮುಖ ಕಾರುಗಳ ಬಿಡುಗಡೆ ಮುಂದೂಡಲ್ಪಟ್ಟಿದ್ದು, ವಿವರ ಹೀಗಿದೆ ನೋಡಿ..

ಮಾರುತಿ ಸುಜುಕಿ ಸೆಲೆರಿಯೊ

ಹೊಸ ಮಾರುತಿ ಸುಜುಕಿ ಸೆಲೆರಿಯೊದ ಬಿಡುಗಡೆಯು ಕೊರೊನಾ ಸಾಂಕ್ರಾಮಿಕ ರೋಗದ ಎರಡನೆ ಅಲೆಯಿಂದಾಗಿ ವಿಳಂಬವಾಗಿದೆ. ಮಾರುತಿಯ ಹ್ಯಾಚ್‌ಬ್ಯಾಕ್‌ನ ಹೊಸ ಪರಿಷ್ಕೃತ ಆವೃತ್ತಿಯು ಮೇ 2021 ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಯಿತು. ಆದರೆ ಅದರ ಬಿಡುಗಡೆಯನ್ನು ಈಗ ಮುಂದೂಡಲಾಗಿದೆ ಮತ್ತು2021 ರ ಮಧ್ಯ ಭಾಗದಲ್ಲಿ ಈ ಕಾರು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

ಸ್ಕೋಡಾ ಆಕ್ಟೇವಿಯಾ

ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೇವಿಯಾ ಈಗ ಮಾರುಕಟ್ಟೆಯನ್ನು ಪ್ರವೇಶಿಸಲು ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಆಕ್ಟೇವಿಯಾ ತನ್ನ ಎಲ್ಲಾ ಹೊಸ ಪರಿಷ್ಕೃತ ಒಳಾಂಗಣ ಮತ್ತು ಬಾಹ್ಯ ಸ್ಟೈಲಿಂಗ್‌ನೊಂದಿಗೆ ಬರಲಿದೆ. ಏಪ್ರಿಲ್ 2021 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದ ಈ ಕಾರು ಈಗ ಮೇ 2021 ರ ಕೊನೆಯಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

ಹ್ಯುಂಡೈ ಅಲ್ಕಾಜರ್

ಹ್ಯುಂಡೈನ ಜನಪ್ರಿಯ ಎಸ್‌ಯುವಿ ಕ್ರೆಟಾ ನಿಮಗೆ ಗೊತ್ತಿದೆಯಲ್ಲ. ಇದೇ ರೀತಿ ಅಲ್ಕಾಜಾರ್ ಎಂಬ ಹೊಸ ಕಾರು ಹೆಚ್ಚುವರಿ ರೋ ಮತ್ತು ಉದ್ದವಾದ ವೀಲ್‌ಬೇಸ್‌ನೊಂದಿಗೆ ಬರುತ್ತದೆ (ಕ್ರೆಟಾಕ್ಕಿಂತ 150 ಮಿಮೀ ಹೆಚ್ಚು). ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಏಪ್ರಿಲ್ 29 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ ಕೋವಿಡ್ - ಪ್ರಕರಣ, ಲಾಕ್‌ಡೌನ್‌, ಸಂಚಾರ ನಿರ್ಬಂಧಗಳಿಂದಾಗಿ ಮೇ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಮರ್ಸಿಡಿಸ್ ಬೆನ್ಜ್ GLA

ಜರ್ಮನ್ ಕಾರು ತಯಾರಕ ಮರ್ಸಿಡಿಸ್ ತನ್ನ ಎರಡನೇ ತಲೆಮಾರಿನ ಬೆನ್ಜ್ GLA ಕಾರನ್ನು ಏಪ್ರಿಲ್ ಅಂತ್ಯದಲ್ಲಿ ಅಥವಾ ಮೇ 2021 ರ ಆರಂಭದಲ್ಲಿ ಭಾರತದಲ್ಲಿ ಪರಿಚಯಿಸಲು ನೋಡುತ್ತಿತ್ತು. ಆದರೆ ಕೋವಿಡ್ ಉಲ್ಬಣದಿಂದಾಗಿ ಕಾರು ಬಿಡುಗಡೆ ವಿಳಂಬವಾಗುವಂತೆ ಮಾಡಿದೆ. ಮರ್ಸಿಡಿಸ್ ಎಸ್‌ಯುವಿ ಶ್ರೇಣಿಯ ಪ್ರವೇಶ ಬಿಂದು, ಜಿಎಲ್‌ಎ ಬಹು ಎಂಜಿನ್ ರೂಪಾಂತರಗಳಲ್ಲಿ ಬರಲಿದೆ. 190 ಹೆಚ್‌ಪಿ, ಎಫ್‌ಡಬ್ಲ್ಯೂಡಿ ಮತ್ತು ಎಡಬ್ಲ್ಯೂಡಿ ಹೊಂದಿರುವ 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮತ್ತು 163 ಹೆಚ್‌ಪಿ ಶಕ್ತಿಯೊಂದಿಗೆ 1.3 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಕಾರ್ಯಕ್ಷಮತೆ ಆಧಾರಿತ ಎಎಮ್‌ಜಿ ಜಿಎಲ್‌ಎ 35 4 ಮ್ಯಾಟಿಕ್ 306 ಹೆಚ್‌ಪಿ, 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ.

ಆಡಿ ಇ-ಟ್ರಾನ್

ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳಲು ಆಡಿ ಇ-ಟ್ರಾನ್ ಎದುರು ನೋಡುತ್ತಿದೆ. ಆಡಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರು 2021ರ ಮೇ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಬೇಕಿತ್ತು. ಆದರೆ ಮುಂದುವರಿದ ಸಾಂಕ್ರಾಮಿಕ ರೋಗದಿಂದಾಗಿ ಜೂನ್ 2021 ಕ್ಕೆ ಮುಂದೂಡಲ್ಪಟ್ಟಿದೆ. ಈ ಕಾರಿನ ಫೀಚರ್ಸ್‌ ಬಗ್ಗೆ ನೋಡುವುದಾದರೆ, ಇ-ಟ್ರಾನ್ 95 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ತನ್ನ ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಗೆ ಶಕ್ತಿ ನೀಡುತ್ತದೆ. ಮೋಟಾರುಗಳು ಒಟ್ಟು 408 ಹೆಚ್‌ಪಿ ಉತ್ಪಾದಿಸುತ್ತವೆ, ಮತ್ತು ಕಾರು 5.7 ಸೆಕೆಂಡುಗಳಲ್ಲಿ 0-100 ಕಿ.ಮೀ ಸ್ಪೀಡ್‌ ಮುಟ್ಟಬಹುದು ಎಂದು ಕಂಪನಿ ಹೇಳಿಕೊಂಡಿದೆ.
Youtube Video

ಒಟ್ಟಿನಲ್ಲಿ, ಈ ಮೇಲಿನ ಕಾರುಗಳಲ್ಲಿ ಯಾವುದಾದರೂ ಒಂದನ್ನು ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದರೆ, ಇನ್ನೂ ಹೆಚ್ಚಿನ ಸಮಯ ಈ ವಾಹನಗಳಿಗಾಗಿ ಕಾಯಬೇಕಾಗುತ್ತೆ.
First published: May 7, 2021, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories