ಪಬ್​ಜಿಯಿಂದ ಪ್ರಾರಂಭವಾದ ಆಟ ಈಗ ಪ್ರಣಯದಾಟಕ್ಕೆ ಬಂದು ನಿಂತಿದೆ!

ಹೀಗೆ ಪಬ್​ಜಿ ಗೇಮ್​ ಜನಪ್ರಿಯತೆಯೊಂದಿಗೆ ಹಲವು ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗುತ್ತಿರುವುದು ಸುಳ್ಳಲ್ಲ. ಆದರೆ ಇದೇ ಮೊದಲ ಬಾರಿ ಪಬ್​ಜಿ ಗೇಮ್​ನಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

zahir | news18
Updated:February 14, 2019, 5:48 PM IST
ಪಬ್​ಜಿಯಿಂದ ಪ್ರಾರಂಭವಾದ ಆಟ ಈಗ ಪ್ರಣಯದಾಟಕ್ಕೆ ಬಂದು ನಿಂತಿದೆ!
@GamingDose
  • News18
  • Last Updated: February 14, 2019, 5:48 PM IST
  • Share this:
ಗೇಮ್​ ಲೋಕದ ಹೊಸ ಕ್ರೇಜ್​ ಪಬ್​ಜಿ. ಇದನ್ನು ಆಡುವುದು ಕೆಲವರಿಗೆ ಚಟವಾದರೆ ಮತ್ತೆ ಹಲವರಿಗೆ ಹೊಸ ರೀತಿಯ ಖಯಾಲಿ. ಇನ್ನು ಕೆಲವರು ಈ ಆಟದಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಈ ಗೇಮಿನ ಹುಚ್ಚಿನಿಂದ ಈಗಾಗಲೇ ಹಲವರು ವೈದ್ಯಕೀಯ ಪರೀಕ್ಷೆಗೂ ಒಳಗಾಗಿದ್ದಾರೆ. ಸರ್ಕಾರ ಕೂಡ ಇಂತಹ ಗೇಮ್​ಗಳಿಂದ ಯುವ ಸಮೂಹ ಮತ್ತು ಮಕ್ಕಳು ದೂರವಿರುವಂತೆ ಸೂಚಿಸಿದೆ. ಹೀಗೆ ಪಬ್​ಜಿ ಗೇಮ್​ ಜನಪ್ರಿಯತೆಯೊಂದಿಗೆ ಹಲವು ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗುತ್ತಿರುವುದು ಸುಳ್ಳಲ್ಲ. ಆದರೆ ಇದೇ ಮೊದಲ ಬಾರಿ ಪಬ್​ಜಿ ಗೇಮ್​ನಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ಈಜಿಪ್ಟ್​ನ ನೂರಾನ್​ ಹಿಶಾನ್ ಪಬ್​​ಜಿ ಮೂಲಕ ತನ್ನ ಸಂಗಾತಿಯನ್ನು ಕಂಡುಕೊಂಡಿದ್ದಾರೆ. ಕಳೆದ ಕೆಲ ತಿಂಗಳಿಂದ ಗೆಳೆಯನೊಂದಿಗೆ ಪಬ್​ಜಿ ಆಡುತ್ತಿದ್ದ ನೂರಾನ್​ಗೆ ತನ್ನ ಎದುರಾಳಿಯೊಡನೆ ಪ್ರೇಮಾಂಕುರವಾಗಿದೆಯಂತೆ. ಗೇಮ್​ ಎಂಬ ರಣರಂಗದಲ್ಲಿ ಸಿಕ್ಕಿದ ರಣಧೀರನನ್ನು ಈಗ ನೂರಾನ್ ಪ್ರೇಮಲೋಕಕ್ಕೆ ಕರೆದೊಯ್ದಿದ್ದಾಳೆ. ಅಲ್ಲದೆ ಫೆಬ್ರವರಿ 7 ರಂದು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ತಮ್ಮ ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ.


ನಮ್ಮಿಬ್ಬರ ಗೆಳೆತನ ಬ್ಯಾಟಲ್​ ಗ್ರೌಂಡ್​ ಗೇಮ್​ನಿಂದ ಪ್ರಾರಂಭವಾಯಿತು ಎಂದು ತಿಳಿಸಿರುವ ನೂರಾನ್, ಈಗ ಜೊತೆಯಾಗುತ್ತಿದ್ದೇವೆ ಎಂದು ಎಂಗೇಜ್ಮೆಂಟ್​ ದಿನ ಟ್ವೀಟ್​ಮಾಡಿದ್ದಾರೆ. ಈ ಒಂದು ಟ್ವೀಟ್​ಗೆ ಹಲವರು ಶುಭಕೋರಿ ಪ್ರತಿಕ್ರಿಯೆ ನೀಡಿದ್ದು, ಇನ್ನು ಕೆಲವರು ಪಬ್​ಜಿ ಗೇಮ್​ನಿಂದ ಕೇಳಿ ಬಂದ ಮೊದಲ ಸಿಹಿ ಸುದ್ದಿ ಎಂದು ಕಮೆಂಟಿಸಿದ್ದಾರೆ. ಒಟ್ಟಿನಲ್ಲಿ ಪಬ್​ಜಿ ಎಂಬ ಯುದ್ಧಭೂಮಿಯಲ್ಲೂ ಪ್ರೀತಿಯ ಒಯಸಿಸ್ ಚಿಮ್ಮಿಸಿ ನೂರಾನ್ ಮತ್ತು ಗೆಳೆಯ ಸಖತ್ ಸುದ್ದಿಯಾಗಿದ್ದಾರೆ.
ಪಬ್​ಜಿ ಲವರ್
First published:February 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ